ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ

 *ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ.!!*

ಸೂಕ್ತ ನಿರ್ಧಾರ ತೆಗೆದುಕೊಳ್ಳಿ ಎಂದು ಲಿಂ. ಮಾತಾಜಿ ಯವರು ಹೇಳಿರಬಹುದು. ಕೂಡಲ ಸಂಗಮದೇವಾ ಹೇಳುವವರಿಗೆ ಆತ್ಮೀಯವಾಗಿ ಕಾಣಬೇಕು ಇಂಬಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆಯೇ ಹೊರತು ಲಿಂಗದೇವ ವಚನಾಂಕಿತ ಹೇಳುವವರನ್ನು ಮಠದಿಂದ ಹೊರ ಹಾಕಿ ಎನ್ನುವ ನಿರ್ಧಾರ ತೆಗೆದುಕೊಳ್ಳಿ ಅಂತ ಹೇಳಿದ್ದಾರಾ? 

*ರಾಷ್ಟ್ರೀಯ ಬಸವದಳಗಳು ಕಷ್ಟ ಪಟ್ಟು ಕಟ್ಟಿರುವ ಬಸವ ಮಂಟಪಗಳಲ್ಲಿ ಲಿಂಗದೇವ ಹೇಳಬೇಡಿ ಅಂತ ನಿರ್ಧಾರ ತೆಗೆದುಕೊಳ್ಳಲಿಕ್ಕೆ ಹೇಳಿದ್ದಾರಾ?*

 ಹೊಸದಾಗಿ ಸಂಘಟನೆ ಮಾಡುವಾಗ ಕೂಡಲ ಸಂಗಮದೇವಾ ಬಳಸಿ ಎಂದು ಹೇಳಿರಬಹುದೇ ಹೊರತು ಈಗಾಗಲೇ ಲಿಂಗದೇವ ನಿಷ್ಠೆ ಗಟ್ಟಿಗೊಂಡು ರಾಷ್ಟ್ರೀಯ ಬಸವದಳ ಇರುವ ಊರುಗಳಲ್ಲೇ ಹೊಸ ರಾಷ್ಟ್ರೀಯ ಬಸವ ದಳ ಉದ್ಘಾಟನೆ ಮಾಡುವ ನಿರ್ಧಾರ ತೆಗೆದುಕೊಳ್ಳಲು ಹೇಳಿದ್ದಾರಾ?  

*ಬೇರೆಯವರ ಮಠಕ್ಕೆ ನಾವು ಹೋದರೂ ಕೂಡಲ ಸಂಗಮದೇವ  ಹೇಳಲು ಹೇಳುತ್ತಾರೆ. ಸಂತೋಷದಿಂದಲೇ ಹೇಳಿದ್ದೇವೆ. ಅವರು ನಮ್ಮ ಮಠಕ್ಕೆ ಬಂದಾಗಲೂ ಕೂಡಲ ಸಂಗಮದೇವ ಎಂದೇ ಹೇಳುತ್ತಾರೆ. ಅವರನ್ನು ಆತ್ಮೀಯತೆಯಿಂದ ಕಂಡಿದ್ದೇವೆ. ರಾಷ್ಟ್ರೀಯ ಬಸವದಳದ ಸದಸ್ಯರಲ್ಲದವರಿಗೇ ಲಿಂಗದೇವ ಎಂದೇ ಹೇಳಬೇಕು ಎಂದು ಎಂದಾದರೂ ಒತ್ತಡ ಹೇರಿದ್ದೀವಾ? ಲಿಂಗದೇವನ ಹಿಂದೆ ಗಟ್ಟಿಯಾಗಿ ನಿಂತು ಕೂಡಲ ಸಂಗಮದೇವನನ್ನು ಇಂಬಿಟ್ಟುಕೊಳ್ಳಲಿಕ್ಕೆ ಆಗುವುದಿಲ್ಲವೇ..?*

ನೀವು ಲಿಂಗದೇವ ಹೇಳುವುದನ್ನು ಬಿಟ್ಟರೆ ಮಾತ್ರ ನಿಮ್ಮ ಜೊತೆ ಬರುತ್ತೇವೆ ಎನ್ನುವವರ ಸಂಗ ನಿಮಗೇಕೆ? ಕೋಟಿ ಕೋಟಿ ಕಾಣಿಕೆ ಕೊಟ್ಟು ನಿಮ್ಮ ಅನಧಿಕೃತ ವೆಚ್ಚಗಳ ಬಗ್ಗೆ ದುಂದು ವೆಚ್ಚಗಳ ಬಗ್ಗೆ, ಧರ್ಮದ ಆಸ್ತಿ ಬೇಕಾದ ಆತ್ಮೀಯ ಶಿಷ್ಯರಿಗೆ ಯಾರಿಗೂ ಗೊತ್ತಿರದ ಹಾಗೆ ಬರೆದುಕೊಟ್ಟರೂ ತಮಗೆ ಏನೊಂದು ಪ್ರಶ್ನೆ ಮಾಡದೆ, ತಮ್ಮ ಅವಗುಣಗಳನ್ನು ನೋಡದೆ ಗುರುವಾಗಿ ಸ್ವೀಕರಿಸಿದ ಅಸಂಖ್ಯಾತ ಶರಣ ಬಳಗ ತಮ್ಮೊಂದಿಗಿದ್ದರೂ ಬೇರೆ ಬಾವಿಯ ತೋಡಿ ಉಪ್ಪನೀರನುಂಬುವ ವಿಧಿ ತಮಗೇಕೆ? 

*ಎಳೆಹೋಟೆ ಶಿಕ್ಷೆ ಕೊಟ್ಟು ರಕ್ತ ಹರಿದ ಹೋಳಿ ಮುಣ್ಣಿಮೆಯ ಹೋಳಿ ಆಡುವ, ತನ್ನ ಧರ್ಮದ ಆಚರಣೆಯ ಬಗ್ಗೆ ಅರಿವಿಲ್ಲದ,  ಅಯ್ಯಾ, ನಿಮ್ಮ ಶರಣರ ನಿಲವ

ಸ್ವರ್ಗ ಮತ್ರ್ಯ ಪಾತಾಳದೊಳಗೆ ಬಲ್ಲವರಿಲ್ಲವಯ್ಯಾ, ಅಘಟಿತ ಘಟಿತರು, ಅಖಂಡಿತ ಮಹಿಮರು, ನಿಜದಲ್ಲಿ ನಿರ್ಲೇಪ ಭಾವಕರಾದ ಶರಣರ ನಿಲವನರಿಯದ ವ್ಯಕ್ತಿಗೆ ರಾಷ್ಟ್ರೀಯ ಅಧ್ಯಕ್ಷ ಮಾಡುವಂತೆ ಮಾತಾಜಿಯವರ ಮೇಲೆ   ಒತ್ತಡ ಹಾಕಿ ಮಾಡಿಸಿರುವುದು ಸೂಕ್ತ ನಿರ್ಧಾರವೇ? ಹಲವು ಮಠ ಒಡೆದು ಬಂದು ರಾಷ್ಟ್ರೀಯ ಬಸವದಳ ಒಡೆಯತ್ತಿರುವುದು ಸೂಕ್ತ ಸಮಯದ ಸೂಕ್ತ ನಿರ್ಧಾರವೇ?*

*ಶರಣರ ಕಾಣಿಕೆಯ ಹಣ ಪೋಲಿಸರಿಗೆ ಕೊಟ್ಟು ಶರಣರನ್ನು ಪೂಜ್ಯರನ್ನು ಅಹೋರಾತ್ರಿಯಲ್ಲಿ ಪೋಲಿಸರಿಗೆ ಹೇಳಿ ಮಹಾಮನೆಯಿಂದ ಹೊರಹಾಕಿಸುವುದು ಸೂಕ್ತ ನಿರ್ಧಾರವೇ..?ಆ ಅಹೋ ರಾತ್ರಿ ಸೂಕ್ತ ಸಮಯವೇ..?*

ಕೂಡಲ ಸಂಗಮದಲ್ಲಿಯೇ ಬರುವ ಆದಾಯದಿಂದ ವರ್ಷಕ್ಕೊಂದು ಸಭಾ ಮಂಟಪ ವರ್ಷಕ್ಕೊಂದು ೧೧೩-114-115 ಅಡಿ ಮೂರ್ತಿ ಕಟ್ಟಬಹುದು. ಅಲ್ಲಿ ಬರುವ ಆದಾಯಗಳಿಂದ ವೈಯಕ್ತಿಕ ಆಸ್ತಿ ಖರೀದಿಸಿ, ಮಾತಾಜಿ ಕನಸಲ್ಲಿ ಬಂದು ಕಾಣಿಕೆ ಕೇಳು ಎಂದು ಸುಳ್ಳು ಹೇಳಿ ಶರಣರಿಂದ ಬಲವಂತವಾಗಿ ಹಣ ಕಿತ್ತುಕೊಳ್ಳಲು ನಿರ್ಧಾರ ತೆಗೆದುಕೊಳ್ಳಲು ಹೇಳಿದ್ದಾರಾ? 

*ಬೇಡಲಾಗದು ಜಂಗಮ  ಬೇಡಿಸಿಕೊಳ್ಳಲಾಗದು ಭಕ್ತನು* ಎನ್ನುವ ತತ್ವದ ಮೇಲೆ ನಡೆಯುತ್ತಿದ್ದ ಬಸವ ಧರ್ಮ ಪೀಠ ಈಗ ಭಕ್ತರಿಗೆ ಮಾನಸಿಕ ಹಿಂಸೆ ಕೊಟ್ಟು ಕಾಣಿಕೆ ಕಿತ್ತುಕೊಳ್ಳಲು ಹೇಳಿದ್ದಾರಾ? ಮಾತಾಜಿ ಕಾಣಿಕೆ ಕೊಡಿ ಎಂದು ಕಾಣಿಕೆ ಕೊಡುವವರ ಕನಸಿನಲ್ಲಿ ಬರದೆ ಕಾಣಿಕೇ ಕೇಳುವವರ ಕನಸಿನಲ್ಲಿ ಮಾತ್ರ ಬರುತ್ತೇನೆ ಎಂದು ತಮಗೇನಾದರೂ  ಕಿವಿಯಲ್ಲಿ ಹೇಳಿದ್ದಾರಾ? ಜಗತ್ತನ್ನೇ ಬೆಳಗಿದ ಪೀಠಕ್ಕೆ ಕತ್ತಲಿನ ಹೊದಿಕೆ ಹೊಚ್ಚುತ್ತಿದ್ದೀರಲ್ಲಾ ಇದು ಸೂಕ್ತ ನಿರ್ಧಾರವೇ... ದಯವಿಟ್ಟು  ಉತ್ತರಿಸಿ ಪೂಜ್ಯ ಸಿದ್ಧರಾಮೇಶ್ವರ ಸ್ವಾಮೀಜಿಯವರೇ... ಭಕ್ತರ ನೋವು ಲಿಂಗದ ನೋವು ಎಂದು ಅರಿಯದೇ ಹೋದಿರಾ..! ಭಕ್ತರ ನೋವಿಗೆ ನಿಮಗೆ ತಕ್ಕುದ ಮಾಡುವ ನಮ್ಮ ಗುರು ಬಸವ ಪ್ರಿಯ ಲಿಂಗದೇವ.

*-ಸಚ್ಚಿದಾನಂದ ಪ್ರಭು ಚಟ್ನಳ್ಳಿ*

ಕಾಮೆಂಟ್‌ಗಳು

  1. ಕನಸಲ್ಲಿ ಬಸವಣ್ಣನವರು ಬಂದಿ ವಚನದ ಅಂಕಿತನಾಮ ಕೂಡಲಸಂಗಮದೇವಾ ತೆಗದು ಲಿಂಗದೇವ ಮಾಡೀ ಅಂತ ಬಸವಣ್ಣನವರು ಬಂದಿ ಹೇಳಿದ್ದಾರೆ ಅಂದರೆ ನಂಬಿದೀರಿ, ಮಾತಾಜಿ ಲಿಂಗೈಕ್ಯ ಆಗದ ಮೋದಲು ಗಂಗಮಾತಾಜೀ ಅವರ ಹತ್ತಿರ ಸುಕ್ತ ಸಮಯದಲ್ಲಿ ಸುಕ್ತ ನಿರ್ದಾರ ತೆಗೆದುಕೊಳ್ಳಿ ಹೇಳಿದರೆ ನೀವು ಆ ಮಾತು ನಂಬುದಿಲಾ

    ಪ್ರತ್ಯುತ್ತರಅಳಿಸಿ
  2. ಹಾಗೆ ಹೇಳಿರುವುದ್ದಕೆ ಸಾಧ್ಯವಿಲ್ಲ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…