ಅರಿಯದ ಮಂದಮತಿಗಳು

 ➖ ಕೆಲವು ಮಠಾಧೀಶರು, ಕೆಲವು ಸಂಘಟನೆಗಳ ಮುಖಂಡರು, ಹಾಗೂ ಕೆಲವು ಅರಿಯದ ಮಂದಮತಿಗಳ ಮುಂದೆ ಹೀರೋ (ನಾಯಕ ) ಆಗಲಿಕ್ಕೆ ಹೋಗಿ ವಚನಾಂಕಿತ ವಿಷಯವನ್ನು *ನೆಪ* ಮಾಡಿ ಇಡೀ ಲಿಂಗಾಯತ ಸಮುದಾಯದ *ಬಲಿಷ್ಠ* ಸಂಘಟನೆಯಾಗಿದ್ದ ರಾಷ್ಟ್ರೀಯ ಬಸವದಳವನ್ನು ಒಡೆದ *ಅಪಕೀರ್ತಿ* ಧನ್ನೂರ್ ಅವರಿಗೆ ಸಲ್ಲುತ್ತದೆ. 

ಒಂದು ವೇಳೆ ರಾ. ಬ.ದಳ ಸಂಘಟನೆ ಒಡೆಯದಿದ್ದರೆ ಲಿಂಗಾಯತ ಧರ್ಮದ ಮೇಲೆ *ದಾಳಿ* ಮಾಡುತ್ತಿರುವ *ವಚನದರ್ಶನ* ಪುಸ್ತಕದ ವಿರುದ್ಧ ದೊಡ್ಡ ಹೋರಾಟಗಳು ನಡೆಯುತ್ತಿತ್ತು.

 ಗುರುಬಸವಣ್ಣನವರ ಬಗ್ಗೆ ಅವಮಾನ ಮಾಡಿ ಅವರ *ಲಿಂಗೈಕ್ಯದ* ಬಗ್ಗೆ ತಪ್ಪು ಸಂದೇಶ ನೀಡಿರುವ ಶಾಸಕ *ಯತ್ನಾಳ್* ವಿರುದ್ಧ ಪ್ರಭಲ ಹೋರಾಟ ಪ್ರತಿಭಟನೆ ಈ ಸಂಘಟನೆ ವತಿಯಿಂದ ನಡೆಯುತ್ತಿತ್ತು. 

ಹಾಗೂ ಲಿಂಗಾಯತ ಧರ್ಮ *ಸಂವಿಧಾನಿಕ ಮಾನ್ಯತೆ* ಸಲುವಾಗಿ ಇಲ್ಲಿಯವರೆಗೆ ಅನೇಕ *ರ್ಯಾಲಿಗಳು* ಈ ಸಂಘಟನೆಯ ಮುಂದಾಳತ್ವದಲ್ಲಿ ನಡೆಯುತ್ತಿದ್ದವು.

ಇಂತಹ ಸಂಸ್ಥೆ ಹಾಗೂ ಸಂಘಟನೆಯನ್ನು ಒಡೆದಿರುವ ಮನೆಹಾಳು ಕೆಲಸವನ್ನು "ಬಸವಕಾರ್ಯ" ಎಂದು ಹೇಳಿಕೊಳ್ಳುತ್ತಿರುವುದು ನಿಮ್ಮ *ಅಜ್ಞಾನದ ಪರಮಾವಧಿ* ಯನ್ನು ಎತ್ತಿ ತೋರಿಸುತ್ತದೆ. 

ನಮ್ಮ ಬಸವ ಧರ್ಮಪೀಠದ ಪೀಠಾಧ್ಯಕ್ಷರು ಹಾಗು ಕೆಲವು ಜಂಗಮೂರ್ತಿಗಳು ಕೂಡ ಇಂಥವರ *ಒತ್ತಡಕ್ಕೆ* ಹಾಗೂ *ಆಮಿಷಕ್ಕೆ* ಬಲಿಯಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ತಮ್ಮ ಗುರುಗಳ *ಆದೇಶಕ್ಕೆ* ವಿರುದ್ಧವಾಗಿ ಹೋಗಿ ತಮ್ಮ ಮನೆಯನ್ನು ತಾವೇ ಹಾಳು ಮಾಡಿಕೊಂಡರು. 

ಹೊರಗಿನಿಂದ ಸಂಸ್ಥೆಯ ಒಳಗೆ ಬಂದವರು ಪೂಜ್ಯ ಮಾತಾಜಿ ಅವರಿಗೆ *ನಂಬಿಕೆ ದ್ರೋಹ* ಮಾಡಿದರು. ಇನ್ನು ಒಳಗಡೆ ಇದ್ದವರು ಹೊರಗಿನವರ ಕೈಗೊಂಬೆಗಳಾಗಿ ಪೂಜ್ಯ ಮಾತಾಜಿ ಅವರಿಗೆ *ಗುರುದ್ರೋಹ* ಮಾಡಿದರು ಎಂದು ಇತಿಹಾಸದಲ್ಲಿ ಇದು ದಾಖಲಾಗಲಿದೆ.

 ಪೂಜ್ಯ ಮಾತೆಮಹಾದೇವಿಯವರು *ಕಾಲಜ್ಞಾನ ವಚನ* ದ ಪ್ರಕಾರ ಬಸವಾದಿ ಶರಣರ ಸಂಕಲ್ಪಗಳನ್ನು ಈಡೇರಿಸಲು ಬಂದವರು ಎಂಬ ಜ್ಞಾನ ಇಲ್ಲದೆ ಈ ರೀತಿ ತಪ್ಪುಗಳನ್ನು ಮಾಡಿ *ಬಸವ ಸಂಕಲ್ಪ* ಕ್ಕೆ ವಿರುದ್ಧವಾಗಿ ನಡೆಯುತ್ತಿದ್ದಾರೆ.

ನಮ್ಮ ಅಜ್ಞಾನದ ಕಾರಣದಿಂದ ಮಹಾತ್ಮರ ಸಂಕಲ್ಪಗಳಿಗೆ ವಿರೋಧ ಮಾಡಿ ಕೆಟ್ಟ ಮೇಲೆ ಬುದ್ಧಿ ಬರುವುದಕ್ಕಿಂತ ಮೊದಲೇ ಎಚ್ಚರಗೊಳ್ಳುವುದು ಉತ್ತಮ.. 🙏


ಶರಣು ಶರಣಾರ್ಥಿ

~ ಸಿದ್ಧವೀರ ಸಂಗಮದ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…