ಕಣ್ಣೇರಿ ಮಠದ ವೈದಿಕ ಅದೃಷ್ಟ ಕಾಡಸಿದ್ದೇಶ್ವರ ಸ್ವಾಮಿಗೆ ತಕ್ಕ ಉತ್ತರ ನಿಡಿದ ರಾಷ್ಟ್ರಿಯ ಬಸವದಳ

 ಕಣ್ಣೇರಿ ಮಠದ ವೈದಿಕ ಅದೃಷ್ಟ ಕಾಡಸಿದ್ದೇಶ್ವರ ಸ್ವಾಮಿಯ ಹೆಳಿಕೆಗಳನ್ನು ಕೇಳಿ



ಈ ಕಣ್ಣೇರಿ ಮಠದ ವೈದಿಕ ಅದೃಷ್ಟ ಕಾಡಸಿದ್ದೇಶ್ವರ ಸ್ವಾಮಿ ದೃಶ್ಯ ಮಾಧ್ಯಮದಲ್ಲಿ ಕುಳಿತು ಬಸವಣ್ಣನವರ ಕುರಿತು ಸಮಾಜಕ್ಕೆ ತಿರುಚಿ ಸಂದೇಶ ನೀಡಿ, ಬಸವತತ್ವ ಲಿಂಗಾಯತ ಮಠದ ಸ್ವಾಮಿಗಳಗೆ, ಬಸವತತ್ವ ಆಚರಿಸುವವರಿಗೆ ಹಾಗೂ ಬಸವಾಭಿಮಾನಿಗಳಿಗೆ ಅವಮಾನಕರ ಮಾತುಗಳನ್ನಾಡಿರುವ ಬಗ್ಗೆ ಬಸವಾಭಿಮಾನಿಗಳು, 



ವೀರೇಶ್  ಗಂಗಾವತಿ, ರಾಜ್ಯ ಅಧ್ಯಕ್ಷರು ಗಣಚಾರ ದಳ ಕರ್ನಾಟಕ, ರಾ ಬ ದಳ.

ತಕ್ಕ ಉತ್ತರ ನಿಡಿದ್ದಾರೆ.




ಅನುಭಾವಿಗಳು ಭಹಿರಂಗವಾಗಿ ಈತನನ್ನು ಕರೆದು ತಕ್ಕ ಉತ್ತರ ನೀಡಿ ಈ ಸ್ವಾಮಿಗೆ ಬಸವತತ್ವದ ಪಾಠ ಹೇಳುವಂತೆ ಈ ಮೂಲಕ ಈತನಿಗೆ ಬಸವತತ್ವ ಅರಿವು ಮುಡಿಸಬೇಕೆಂದು ಮತ್ತು ಲಿಂಗಾಯತ ಬಸವತತ್ವ ಸ್ವಾಮಿಗಳಗೆ ಕ್ಷಮೆ ಕೇಳುವವರೆಗೆ ಈತನ ವಿರುಧ್ಧ ಹೋರಾಟಗಳು ಜರುಗಬೇಕೆಂದು ಆಶೀಸುತ್ತಾ ತಿಳಿಪಡಿಸುತ್ತೇವೆ.


ಪೂಜ್ಯ ಶ್ರೀ ಸದ್ಗುರು ಸತ್ತಾದೇವಿ  ಮಾತಾಜಿ ಬಸವ ಮಂಟಪ ಬೀದರ್. ತಕ್ಕ ಉತ್ತರ..

ಬಸವ ತತ್ವದ ಗಂಧವೇ ಗೊತ್ತಿಲ್ಲದ ಹಿಂದುತ್ವದ ತಾಲಿಬಾನ್ ಕುಂಕುಮದ ಮೂರ್ತಿ ಕನ್ನೇರಿ ಮಠದ ಸ್ವಾಮೀಗೆ ಎಚ್ಚರಿಕೆ 

ತಾನು ಹೇಗಿರುವನೋ ಹಾಗೇ ಎಲ್ಲರೂ ಇರುವರು ಎನ್ನುವುದು ಸಹಜ ಮಾನವನ ಕೀಳು ಮಟ್ಟದ ಲಕ್ಷಣ.  ಹಾಗೆಯೇ  ಕನ್ನೈರಿ ಮಠದ ಶ್ರೀಗಳು ಸುವರ್ಣ ನ್ಯೂಸ್ ಡಿಬೇಟ್ ಒಂದರಲ್ಲಿ ಬಸವ ತತ್ವದವರನ್ನು ತಾಲಿಬಾನಿಗಳಿಗೆ ಹೋಲಿಸಿ ಮಾತನಾಡಿದ್ದಾರೆ.ದೃಷ್ಟಿಯಂತೆ ಸೃಷ್ಟಿ.ಎಂಬಂತೆ ಕನ್ನೇರಿ ಮಠದ ಸ್ವಾಮೀಜಿಗಳೇ ತಾಲಿಬಾನ್ ಇರುವುದರಿಂದ ಲಿಂಗಾಯತರನ್ನು ತಾಲಿಬಾನಿಗಳೆಂದು ಮಾತನಾಡಿದ್ದಾರೆ. ಪೂಜ್ಯರೇ ತಮ್ಮ ಹೇಳಿಕೆ ಅಕ್ಷಮ್ಯ ಅಪರಾಧ.ಆ ಮಾತು  ನಿಮಗೆ ಹೋಲಿಕೆಯಾಗುತ್ತದೆ.ಲಿಂಗಾಯತರಿಗಲ್ಲ.ಬಸವ ತತ್ವದವರಿಗಲ್ಲ.                            ಲಿಂಗಾಯತರು ತಾಲಿಬಾನಿಗಳಲ್ಲ.ತಾಳಿಕೊಳ್ಳುವವರು ಲಿಂಗಾಯತರು.ಒಂದು  ವೇಳೆ ತಾಳಿಮೆಗೆಟ್ಟರೆ ಹುಚ್ಚು ನಾಯಿಯಂತೆ ಮನ ಬಂದಂತೆ ವದರುವ ನಿಮ್ಮಂಥವರನ್ನು ತಳಿಸುತ್ತಾರೆ ಎಚ್ಚರ.                                 ಈ ನಿಮ್ಮ  ಹೇಳಿಕೆಯಿಂದ ಬಸವ ತತ್ವದವರು ಸಿಡಿದೇಳುವ ಮುನ್ನ  ಎಚ್ಚರಗೊಳ್ಳಿ.ಇಂತಹ ಹೇಳಿಕೆಯಿಂದ ಬಸವ ತತ್ವದವರು ವಿಚಲಿತರಾಗುವುದಿಲ್ಲ.ಇನ್ನಷ್ಟು ಗಟ್ಟಿಗೊಳ್ಳುತ್ತಾರೆ.ಬಸವ ತತ್ವ ಸರ್ವರನ್ನೂ ಗೌರವಿಸುವ ಮತ್ತು ಇಂಬಿಟ್ಟುಕೊಳ್ಳುವ  ತತ್ವ.                              ಬಸವ ತತ್ವದವರು ಬೇರೆ ಬೇರೆ ಸಮಾಜದವರನ್ನು  ಒಬ್ಬರನ್ನಾದರು ಗುರುಗಳನ್ನು ಮಾಡಿದ್ದಾರಾ?ಎಂಬ ಪ್ರಶ್ನೆ ಮಾಡಿದ್ದೀರಿ. ನಿಮಗೆ ಬೇರೆ ಬೇರೆ ಸಮಾಜದವರು ಅನೇಕ ಜನ ಗುರುಗಳಾಗಿರುವುದನ್ನು ಸಾಕ್ಷಿ  ಕೊಡುತ್ತೇವೆ.                         ನಮ್ಮ  ಮಠದ ಬಗ್ಗೆ ಕೇಳಲು ನಿಮಗೇನು ಹಕ್ಕಿದೆ ಎಂದು ಭಕ್ತರಿಗೆ ಪ್ರಶ್ನೆ ಮಾಡಿದ್ದೀರಿ.                      ಏ ಸ್ವಾಮಿ ಮಠಗಳಿಗೆ,ಗುರುಗಳಿಗೆ,ಆಧಾರ ಭಕ್ತರೇ.ಭಕ್ತರನ್ನು ಬಿಟ್ಟರೆ ನಿನಗೆ ಯಾರು ಸ್ವಾಮಿ ಎನ್ನುವರು?ಗುರು ಲಿಂಗ ಜಂಗಮಕ್ಕೆ ಆಧಾರ ಭಕ್ತ ಎಂಬ ಗುರು ಬಸವ ವಾಣಿಯನ್ನು ಓದಿಲ್ಲವೆ ಸ್ವಾಮೀ?                        "ಗೂಗೆ ಕಣ್ಣು ಕಾಣಲರಿಯದೆ ರವಿಯ ಬೈಯುವಂತೆ" ಬಸವತತ್ವದ ತಿರುಳನ್ನರಿಯದ ಬಸವ ತತ್ವದವರ ಬಗ್ಗೆ ಹಗುರವಾಗಿ ಮಾತನಾಡುವೆಯಾ?ಇಡೀ ಜಗತ್ತೇ ಬಸವಮಯವಾಗಿರುವುದು ನಿನಗೆ ಹೊಟ್ಟೆಯಲ್ಲಿ  ಕಿಚ್ಚಿನ ಬೆಂಕಿ ಹತ್ತಿ ದಗದಗನೇ  ಉರಿಯುತ್ತಿದೆಯಾ? 

 ಬಸವಣ್ಣನವರ ತತ್ವದ ಬಗ್ಗೆ ಹಗುರವಾಗಿ ಮಾತನಾಡುವ ಬಸವ ತತ್ವದ ಬಗ್ಗೆ ತಾತ್ಸಾರ ಭಾವನೆ ಹೊಂದಿರುವ  ಶ್ರೀಗಳೇ ಬಸವ ತತ್ವದ ಆಧಾರದ ಮೇಲಿರುವ ಕಾಡಸಿದ್ಧೇಶ್ವರ ಮವನ್ನು ತೊರೆದು ಹೋಗಿ.

ಇಲ್ಲಿಯವರೆಗೂ ಕನ್ನೇರಿ ಮಠ,ಕನ್ನೇ ಮಠದ ಗುರುಗಳೆಂದರೆ ಜನಗಳಿಗೆ ಬೆಲೆಯಿತ್ತು.ವಿನಾಶ ಕಾಲ ಸಮೀಪಿಸುತಿದ್ದಂತೆ ಮನುಷ್ಯನಿಗೆ ವಿಪರೀತ ಬುದ್ದಿ ಬೆಳೆಯುತ್ತಂತೆ.ವಿಪರೀತ ಬುದ್ದಿಯನ್ನು ಉಪಯೋಗಿಸಿದವರು ವಿನಾಶವಾಗುವುದು ಖಂಡಿತ.ಆದ್ದರಿಂದ ಕನ್ನೇರಿ ಮಠದ ಸ್ವಾಮೀಜಿಯವರೇ ನಿಮಗೆ ನಿಜವಾದ ಜ್ಞಾನವಿದ್ದರೆ' ನೀವು ನಿಜ ಜ್ಞಾನಿಗಳೇ ಆಗಿದ್ದರೆ ಕೂಡಲೇ ನಿಮ್ಮ ಮಾತನ್ನು ಹಿಂಪಡೆದು  ಕ್ಷಮೆ ಕೇಳಬೇಕು.ಇಲ್ಲವಾದಲ್ಲಿ ಬಸವ ತತ್ವ ಶರಣರು ನಿಮ್ಮ ವಿರುದ್ಧ ಸಿಡಿದೇಳುವುದು ಖಂಡಿತ.ಹೋಗಿ ಹೋಗಿ ಸುತ್ತಿಕೊಂಡು ಬಸವಣ್ಣನವರ ಬಗ್ಗೆ,ಬಸವ ತತ್ವದವರ ಬಗ್ಗೆ,ಲಿಂಗಾಯತರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡುತ್ತಿದ್ದೀರಲ್ಲಾ ಬಹುಶಃ ನಿಮಗೆ ಮಾಡಲಿಕ್ಕೆ ಕೆಲಸ ಇಲ್ವಾ?ಅಥವಾ ಲಿಂಗಾಯತರ ತಾಳ್ಮೆಯನ್ನು ಪರಿಕ್ಷೆ ಮಾಡ್ತಾ ಇದ್ದೀರಾ? ಲಿಂಗಾಯತರ ತಾಳ್ಮೆ ಪರಿಕ್ಷೆ ಮಾಡಬೇಡಿ ಪೂಜ್ಯರೆ ನಿಮಗೆ ಎಚ್ಚರ.

ಶರಣು ಶರಣಾರ್ಥಿ


ಕಾಮೆಂಟ್‌ಗಳು

  1. ನಾಲಾಯಕ್ ಸ್ವಾಮಿಗೆ ಬಸವಾಭಿಮಾನಿಗಳು ತಕ್ಕ ಪಾಠ ಕಲಿಸಬೇಕು ಇಲ್ಲವಾದರೆ ಹಿಂತ ಸ್ವಾಮೀಜಿ ಅನೇಕರು ಬಾಯಿ ಬಿಡುವರು ಶರಣು ಶರಣಾರ್ಥಿ

    ಪ್ರತ್ಯುತ್ತರಅಳಿಸಿ
  2. ಮೂಲತಃ ಧರ್ಮಕ್ಕಾಗಿ ದುಡಿಯುವ ಸ್ವಾಮೀಜಿ ಅಂತ ಅಲ್ಲವೇ ಅಲ್ಲ ಆತ ಪೇಮೆಂಟ್ ಗಿರಾಕಿ ಸ್ವಾಮೀಜಿ ವೇಷ ಹಾಕಿ ದ್ದಾನೆ ಪಕ್ಕ ಆರ್ ಎಸ್ ಎಸ್ ಹೇಳಿದ ಹಾಗೆ ಕೇಳುವ ಲಪಂಗ

    ಪ್ರತ್ಯುತ್ತರಅಳಿಸಿ
  3. ಕನೇರಿ‌ಮಠದ ಸ್ವಾಮೀಜಿ ಅವರೊಂದಿಗೆ ಬಸವಣ್ಣನ ಅನುಯಾಯಿಗಳು ನಡೆಸಿದ ಚರ್ಚೆಯ ಕುರಿತ ವಾಸ್ತವ ಚಿತ್ರಣ.
    _------_-

    ಕನೇರಿಮಠದ ಸ್ವಾಮೀಜಿಯವರ ಜತೆ ಚರ್ಚೆಗೆ ಸಂಪರ್ಕಕ್ಕೆ ಯತ್ನಿಸಿದರು ಸಿಗಲಿಲ್ಲ ಎಂಬುದೇ ಸತ್ಯಕ್ಕೆ ದೂರವಾಗಿದೆ.
    ಬಸವ ಅನುಯಾಯಿಗಳು ಮಠಾಧೀಶರೊಬ್ಬರ ಮೂಲಕ ಕನೇರಿ ಸ್ವಾಮೀಜಿಯವರಿಗೆ ವಿಷಯ ತಿಳಿಸಿದ್ದು, ಚರ್ಚೆ ವೇಳೆ ಧಿಕ್ಕಾರ ಕೂಗುವಂತಿಲ್ಲ, ಘೇರಾವ್ ಹಾಕುವಂತಿಲ್ಲ, ಸ್ವಾಮೀಜಿಯವರ ಗೌರವಕ್ಕೆ ಧಕ್ಕೆ ತರುವಂತೆ ವರ್ತಿಸುವಂತಿಲ್ಲ ಎಂದು ಹೇಳಿದ್ದು, ಬಸವ ಅನುಯಾಯಿಗಳ‌ ಜತೆ ಚರ್ಚಿಸಿದ ಮಠಾಧೀಶರೇ ವಿನಃ ಕನೇರಿಮಠದ ಸ್ವಾಮೀಜಿಯವರಲ್ಲ.
    ತೋಟದಲ್ಲಿ ನಡೆದ ಚರ್ಚೆ ಆರಂಭಕ್ಕೆ ಬಸವ ಅನುಯಾಯಿಗಳೆಂದರೆ ಹಲವು‌ ಬಣಗಳಿವೆ ನೀವು ಯಾವ ಬಣದವರು, ನನ್ನ ಹೇಳಿಕೆಗೆ ನಿಮಗೆ ಯಾಕೆ ನೋವಾಗಿದೆ ಸ್ವಾಮೀಜಿ‌ ಪ್ರಶ್ನಿಸಿದರು.
    ನಾವು ಯಾವ ಬಣಕ್ಕೂ‌ ಸೇರಿದವರಲ್ಲ. ಬಸವಣ್ಣನ ಅನುಯಾಯಿಗಳು ಮಾತ್ರ ಎಂದರು. ವಾಸ್ತವಿಕವಾಗಿ ಬಂದವರಲ್ಲಿ‌ ಬಹುತೇಕರು ಬಸವ ಕೇಂದ್ರ, ಬಸವ ಸಮಿತಿ, ಬಸವ ಚಾರಿಟೇಬಲ್ ಟ್ರಸ್ಟ್, ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾಗಿದ್ದರೂ ನಾವು ಯಾವ ಬಣಕ್ಕೂ ಸೇರಿದವರಲ್ಲ ಎಂದೇ ಹುಸಿ‌ ನುಡಿದಿದ್ದಾರೆ.
    ಬಸವ ತತ್ವಗಳನ್ನು ನೀವು ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದ್ದೀರಿ, ಕಾಯಕ, ನಿತ್ಯ ದಾಸೋಹ ಮಾಡುತ್ತಿದ್ದಿರಾ ಎಂಬ ಸ್ವಾಮೀಜಿ ಪ್ರಶ್ನೆಗೆ ಕೆಲವು ನಮ್ಮ ಶಕ್ಯಾನುಸಾರ ಮಾಡುತ್ತೇವೆ ಎಂದರು. ನಿತ್ಯವೂ ಬೇರೆಯವರಿಗೆ ಪ್ರಸಾದ ಮಾಡಿಸುತ್ತೀರ ಎಂಬ ಪ್ರಶ್ನೆ ಬಹುತೇಕರು ಮೌನಕ್ಕೆ ಜಾರಿದರು.
    ಕುಂಕುಮ ಹಚ್ಚಬಾರದೆಂದು‌ ವಚನಗಳಲ್ಲಿ‌ ಇಲ್ಲ ಎಂದಿದ್ದೀರಿ ಒಂದು ವಚನದಲ್ಲಿ‌ಇದೆ ಎಂದಾಗ, ವಚನದ ಕಾಲ, ಸಂದರ್ಭ, ಸನ್ನಿವೇಶ ಏನೆಂದು‌ ಗಮನಿಸದೆ ಒಂದು‌ ವಚನ ವ್ಯಾಖ್ಯಾನಿಸುವುದು ಎಷ್ಟು ಸರಿ. ಬಸವಣ್ಣನವರ ವಚನಗಳಲ್ಲಿಯೇ ಕೆಲ ವೈರುದ್ಯ ಕಾಣುತ್ತವೆ ಹಾಗಂತ ಅದನ್ನು‌ಅದೇ ರೀತಿ ವ್ಯಾಖ್ಯಾನಿಸಲು‌ ಸಾಧ್ಯವೇ. ಒಂದು ವಚನದ ಸನ್ನಿವೇಶ ಇನ್ನೊಂದು ವಚನ ವೇಳೆಗೆ ಇರುವುದಿಲ್ಲ ಎಂದು ಸ್ವಾಮೀಜಿ‌ ಹೇಳಿದರು.
    ವೇದಗಳ ವಿಚಾರ ಪ್ರಸ್ತಾಪವಾದಾಗ ವೇದಗಳು ಸುಳ್ಳು ಎನ್ನುವ ನೀವು ವೇದಗಳ ಅಧ್ಯಯನ ಮಾಡಿದ್ದೀರಾ ಎಂದು ಸ್ವಾಮೀಜಿ ಪ್ರಶ್ನಿಸಿದರ.
    ನಾವು ವೇದಗಳನ್ನು ಅಧ್ಯಯನ ಮಾಡಿಲ್ಲ.ಬಸವಣ್ಣನವರು ಅವುಗಳ ಅಧ್ಯಯನ ಬೇಡ ಎಂದಿದ್ದಾರೆ‌ ಎಂದಾಗ ವೇದಗಳಲ್ಲಿ‌ಏನಿದೆ ಎಂದು‌ತಿಳಿಯದ ನೀವು ಹೇಗೆ ವೇದಗಳು‌ ಸುಳ್ಳು ಎಂದು‌ ಹೇಳುತ್ತೀರಿ. ಬಸವಣ್ಣನವರ ವಚನಗಳಲ್ಲೇ ವೇದಗಳ‌ ಉಲ್ಲೇಖ‌ ವಚಗಳು ನನ್ನ ಬಳಿ ಇವೆ ಎಂದು ಸ್ವಾಮೀಜಿ ನುಡಿದರು.
    ಕನೇರಿಯ ಶ್ರೀಮಠಕ್ಕೆ ಬನ್ನಿ‌ ಇಮ್ಮ ಕಡೆಯಿಂದ ಇನ್ನಷ್ಟು ಜಾಣರು, ತಿಳಿದವರಿದ್ದರೂ ಕರೆದುಕೊಂಡು‌ ಬನ್ನಿ‌ ಒಂದೆರಡು‌ ದಿನ‌ ಚರ್ಚೆ ಮಾಡೋಣ. ಮಾ.28ಕ್ಕೆ ಬನ್ನಿ ನಿಮಗೆ ವಾಸ್ತವ್ಯಕ್ಕೆ, ಪ್ರಸಾದಕ್ಕೆ ವ್ಯವಸ್ಥೆ ಮಾಡುತ್ತೇವೆ ಎಂದರು.
    ವಾಹನ ವ್ಯವಸ್ಥೆಯನ್ನೂ ಮಾಡುತ್ತೇವೆಂದು ಮತ್ತೊಬ್ಬ ಸ್ವಾಮೀಜಿ ಹೇಳಿದರು.
    ಬಂದವರಲ್ಲಿ ಒಬ್ಬರು, ಟಿವಿ ಯಲ್ಲಿ ನೀವು ಬಸವ ತಾಲಿಬಾನ್ ಗಳು, ಹುಚ್ಚ ನಾಯಿಗಳು‌ ಅಂದಿದ್ದೀರಿ, ತಾಲಿಬಾನ್ ಎಂದರೆ ಶಿರಚ್ಛೇದ ಮಾಡುವವರು, ಬಸವಾದಿ ಯಾವ ಶರಣರು ಯಾರ ಶಿರಚ್ಛೇದ ಮಾಡಿದ್ದಾರೆ ತೋರಿಸಿ ಎಂದಾಗ ಕನೇರಿ ಸ್ವಾಮೀಜಿ ಗಣಾಚಾರ ಎಂದರೆ ಏನರ್ಥ ಹೇಳಿ ಎಂದಾಗ ಎಲ್ಲರೂ ಮೌನವಾದರು.
    ಮತ್ತೊಬ್ಬರು ಬಸವ ತಾಲಿಬಾನ್ ಎಂದು ಮುಂದೆ ಹೇಳುವುದು ಬೇಡ ಎಂದು ಮನವಿ‌ ಎಂಬುದನ್ನೇ ಒಂದು ರೀತಿ ತಾಕೀತು ಧ್ವನಿಯಲ್ಲಿ ಹೇಳಿದಾಗ ಸ್ವಾಮೀಜಿ ಒಂದು ಸಲವಲ್ಲ, ನೂರು ಬಾರಿ ಹೇಳುತ್ತೇನೆ. ಚರ್ಚೆ ಮಾಡೋಣ‌ ಬನ್ನಿ‌ ಎಂದು ಹೊರನಡೆದರೆ ವಿನಃ ಬಸವ ಅನುಯಾಯಿಗಳು ಹೇಳಿಕೊಂಡಂತೆ ಚರ್ಚೆಗೆ ಹೆದರಿ ಕಾಲ್ಕಿತ್ತಲಿಲ್ಲ.
    ತೋಟದ ಮಾಲಿಕ‌ರ ಎರಡು ಮನೆಗಳಿದ್ದು ಬಂದ ಕೂಡಲೇ ಒಬ್ಬರ ಮನೆಗೆ ಹೋಗಿದ್ದರು, ಇನ್ನೊಬ್ಬ ಭಕ್ತ‌ ತಮ್ಮ ಮನೆಗೆ ಪಾದವಿಡುವಂತೆ ಕೇಳಿದ್ದಕ್ಕೆ ಸಭೆಯಿಂದ ಅವರ ನಿವಾಸಕ್ಕೆ ಹೋದರು. ಸಭೆ ಆರಂಭಕ್ಕೆ ಸ್ವಾಮೀಜಿ ಮಠಕ್ಕೆ ಬನ್ನಿ ಚರ್ಚಿಸೋಣ ನಾನು ಹೊರಡುವುದಿದೆ. ಕೆಲ ನಿಮಿಷ ಮಾತ್ರ ಇರುವೆ ಎಂದಿದ್ದರು.
    ತೋಟದ ಮಾಲಿಕನ ಮನೆಯಿಂದ ಬಂದು ವಾಹನದಲ್ಲಿ‌ ಕುಳಿತು‌ ಹೋಗುವಾಗಲೂ‌ ಸಭೆ ಸ್ಥಳದಲ್ಲಿ ಬಂದಾಗ ಬಂದವರ ಕಡೆ ಕೈ‌ಮುಗಿದು ಬರುತ್ತೇನೆ ಎಂದು ಸ್ವಾಮೀಜಿಯವರು ಹೇಳಿದಾಗ ಬಸವ ಅನುಯಾಯಿಯೊಬ್ಬರು ನಿಮ್ಮದು‌‌ ಆರ್‌ಎಸ್ ಎಸ್ ಮಠ ಗೊತ್ತಿದೆ ಹೋಗಿ ಎಂದರು. ಮಠಾಧೀಶರು ಎಂದು‌ ನೋಡದೆ, ಕೈ ಮುಗಿದ ಸೌಜನ್ಯವನ್ನು‌‌ ಪರಿಗಣಿಸದೆ ತಿರಸ್ಕಾರ ಭಾವ ತೋರಿದ್ದು ಯಾವ ಬಸವ ಸಂಸ್ಕೃತಿ ಎಂಬ ಪ್ರಶ್ನೆ ಮೂಡುವಂತಿತ್ತು.
    ಕನೇರಿ ಸ್ವಾಮೀಜಿಯವರ ಜತೆ ಚರ್ಚೆಗೆ ಬಂದಿದ್ದು 15-18 ಜನ‌ ಮಾತ್ರ 50 ಜನ ಹೋಗಿದ್ದೇವು ಎಂದು‌ ಹೇಳಿಕೊಂಡಿದ್ದಾರೆ.
    'ಕಲಬೇಡ, ಕುಲಬೇಡ, ಹುಸಿಯ ನುಡಿಯಲು ಬೇಡ ... ಎಂಬ ಬಸವಣ್ಣನವರ ವಚನ ಪಾಲನೆ ಇವರಿಂದ ಆಗುತ್ತಿದೆಯೇ? ಬಸವಣ್ಣನ ಅನುಯಾಯಿಗಳೆಂದು‌ ಹೇಳಿಕೊಳ್ಳುವುದಕ್ಕೆ ಇವರು ಅರ್ಹರೇ? ಅಥವಾ ಬಸವಣ್ಣನ ಅನುಯಾಯಿಗಳೆಂದು‌ ಹೇಳಿಕೊಳ್ಳುವವರಿಗೆ ಇಂತಹ ಕಾರ್ಯಗಳಿಗೆ ಬಸವಣ್ಣನವರು‌ ಅನುಮತಿ‌ ಕರುಣಿದ್ದಾರೆಯೇ ಎಂಬ ಪ್ರಶ್ನೆ ಮೂಡದಿರದು.

    ಪ್ರತ್ಯುತ್ತರಅಳಿಸಿ
  4. ಕನ್ನೇರಿ ಸ್ವಾಮೀಜಿ ಅವರ ಹೇಳಿಕೆ ಹೇಗಿದೆ ಎಂದರೆ ಆನೆಯ ಮೇಲೆ ಹೋಹನ ಶ್ವಾನ ಬೋಗುಳಿದಂತೆ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…