ಬಂಧನದಿಂದ ಮುಕ್ತವಾಗಲಿದೆ : ಗುರು ಬಸವಣ್ಣನವರ ಮೂರ್ತಿ

 ಈ ರೀತಿ ವಿಡಿಯೋ ಮೂಲಕ ಬೆಂಗಳೂರಿನ ಬಸವಗಂಗೋತ್ರಿ ಯಲ್ಲಿ ಗುರುಬಸವಣ್ಣನವರ ಮೂರ್ತಿ ನಿರ್ಮಾಣಕ್ಕಾಗಿ ಕಾಣಿಕೆ ಕೊಟ್ಟವರಿಗೆ ಅಭಿನಂದನೆ ಸಲ್ಲಿಸುವುದು ನಮ್ಮ ಕರ್ತವ್ಯ.

ಆದರೆ "ಹಣದ ಕೊರತೆಯಿಂದ ಮೂರ್ತಿ ಕೆಲಸ ಅರ್ಧಕ್ಕೆ ನಿಂತಿತ್ತು" ಎಂದು ಸಾರ್ವಜನಿಕವಾಗಿ ಹೇಳಿಕೊಳ್ಳುವುದು ಎಷ್ಟು *ಸೂಕ್ತ?*

ಇದರಿಂದ ಸಮಾಜಕ್ಕೆ ಯಾವ ಸಂದೇಶವನ್ನು ಕೊಡುತ್ತಾ ಇದ್ದೀರಿ?

ಪರಮಪೂಜ್ಯ ಮಾತೆಮಹಾದೇವಿಯವರು ಪ್ರಾರಂಭಿಸಿ ಹೋಗಿರುವ ಒಂದು ಮೂರ್ತಿಯ ನಿರ್ಮಾಣವನ್ನು ಪೂರ್ಣಗೊಳಿಸುವ *ಶಕ್ತಿ, ಸಾಮರ್ಥ್ಯ* ಅವರ ಅನುಯಾಯಿಗಳಲ್ಲಿ ಇಲ್ಲವೇ? ಎಂಬ ಪ್ರಶ್ನೆ/ಅನುಮಾನ ಸಮಾಜದ ಜನರಲ್ಲಿ ಮೂಡುತ್ತದೆ. 

ಹಾಗಾದರೆ ಪೂಜ್ಯ ಮಾತಾಜಿಯವರು ಲಿಂಗೈಕ್ಯ ಆದಮೇಲೆ ಮೊದಲಿನ ಹಾಗೆ *ಕಾಣಿಕೆ* ಬರುವುದು ನಿಂತುಬಿಟ್ಟಿದೆಯೇ? ಒಂದು ವೇಳೆ ಕಾಣಿಕೆ ಬರುವುದು ನಿಂತುಬಿಟ್ಟಿದ್ದರೆ ಇದಕ್ಕೆ *ಕಾರಣಗಳೇನು?* ಅಥವಾ ಕಾಣಿಕೆ ಬರುತಿದ್ದರೆ ಅನಾವಶ್ಯಕ ಚಟುವಟಿಕೆಗಳಿಗೆ *ವ್ಯರ್ಥ* (ಐಷಾರಾಮಿ ಕಾರುಗಳು, ಕೋರ್ಟ್, ಕಚೇರಿ, ಕೇಸ್ etc) ಮಾಡಲಾಗುತ್ತಿದೆಯೇ? ಈ ರೀತಿಯ ಪ್ರಶ್ನೆಗಳು ಸಮಾಜದ ಜನರಲ್ಲಿ ಮೂಡುತ್ತವೆ. 

ಪೂಜ್ಯ ಮಾತೆಮಹಾದೇವಿಯವರು ಬೆಳೆಸಿ ಹೋಗಿರುವ *ಒಬ್ಬೊಬ್ಬ* ನಿಷ್ಠಾವಂತ ಶರಣರಲ್ಲಿ ಕನಿಷ್ಠ ಒಂದು ಲಕ್ಷ ಕಾಣಿಕೆಯನ್ನು *ಸಂಗ್ರಹ* ಮಾಡುವ *ಸಾಮರ್ಥ್ಯ* ಇದೆ. ಇಂತಹ ಸಾವಿರಾರು ನಿಷ್ಠಾವಂತ ಶರಣರನ್ನು  ಪೂಜ್ಯ ಮಾತಾಜಿ ಅವರು ಬೆಳೆಸಿ ಹೋಗಿದ್ದಾರೆ. ಆದರೆ ಅಂತಹ ನಿಷ್ಠಾವಂತ ಶರಣರನ್ನು ದೂರ ಮಾಡಿಕೊಂಡು ಹೊರಗಿನ ಜನರ ಮೇಲೆ *ಅವಲಂಬನೆ* ಆಗುವ ಪರಿಸ್ಥಿತಿ ಏಕೆ ಬಂತು? ಎಂಬುದರ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕು. 

ತಮ್ಮ ಗುರುಗಳಾದ ಪೂಜ್ಯ ಮಾತೆಮಹಾದೇವಿಯವರ *ಆದೇಶಗಳಿಗೆ, ಸಂಕಲ್ಪಗಳಿಗೆ* ವಿರುದ್ಧವಾಗಿ ಸಂಸ್ಥೆಯಲ್ಲಿ ನಡೆದ ಚಟುವಟಿಕೆಗಳಿಂದ, ಅನೇಕ ನಿಷ್ಠಾವಂತ ಶರಣರನ್ನು ಸಂಸ್ಥೆಯೇ ತನ್ನಿಂದ *ದೂರ* ಮಾಡಿಕೊಂಡಿದೆ ಎಂಬುದು ಕಹಿ ಸತ್ಯ. 

ಪೂಜ್ಯ ಮಾತೆಮಹಾದೇವಿಯವರು ತನ್ನ ಸಂಶೋಧನೆ "ಲಿಂಗದೇವ" ವನ್ನು ಹಿಡಿದುಕೊಂಡೆ ಯಾರ ಮೇಲೆ ಅವಲಂಬಿತ ಆಗದೆ ಕಾಣಿಕೆ ಸಂಗ್ರಹ ಮಾಡಿ ಬಸವಕಲ್ಯಾಣದ 108 feet ಮೂರ್ತಿಯನ್ನು ಕಟ್ಟಿ ತೋರಿಸಿದರು. 

ಆದರೆ ಈಗಿನವರು ನಿಮ್ಮ ಗುರುಗಳ ಸಂಶೋಧನೆ ವಚನಾಂಕಿತ ಲಿಂಗದೇವ ವನು ಕೈಬಿಟ್ಟಿರುವ ನಿಮಗೆ ಹಣದ *ಕೊರತೆ* ಏಕೆ ಬಂತು? ನೀವು ಇದನ್ನು ಕೈ ಬಿಟ್ಟಾಗ ನಿಮ್ಮನ್ನು ಕರೆಸಿ, ಸನ್ಮಾನ ಸತ್ಕಾರ ಮೆರವಣಿಗೆ ಮಾಡಿರುವ ಅನೇಕ ಶ್ರೀಮಂತ ಮಠಾಧೀಶರು, ಬಸವಪರ ಸಂಘಟನೆಗಳ ಶ್ರೀಮಂತ ಮುಖಂಡರುಗಳು, ಶ್ರೀಮಂತ ಪದಾಧಿಕಾರಿಗಳು ಏಕೆ ಕಾಣಿಕೆ ಕೊಟ್ಟು ಮೂರ್ತಿಯನ್ನು ಪೂರ್ಣಗೊಳಿಸಲಿಲ್ಲ??? ಏಕೆ ಸಹಾಯ ಮಾಡಲಿಲ್ಲ??? ಮೂರ್ತಿಯ ಕಾರ್ಯ ಸ್ಥಗಿತಗೊಳಿಸುವ ಪರಿಸ್ಥಿತಿ ಏಕೆ ಬಂತು?

BDP ಸಂಸ್ಥೆಯ ಮುಂದಾಳತ್ವ ವಹಿಸಿಕೊಂಡವರು ಈ ರೀತಿಯ ಅನೇಕ ವಿಷಯಗಳನ್ನು ಅವಲೋಕನ ಮಾಡಿಕೊಂಡು ತನ್ನಿಂದ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಸಂಸ್ಥೆಯ ನಿಜವಾದ ಶಕ್ತಿ ನಿಷ್ಠಾವಂತ ಶರಣರಲ್ಲಿ ಇದೆ, ಒಗ್ಗಟ್ಟಿನಲ್ಲಿ ಇದೆ, ಎಂದು ಅರಿತು ಪರಾವಲಂಬನೆ (Dependent) ಆಗದೆ ಸಂಸ್ಥೆಯನ್ನು ಸ್ವತಂತ್ರವಾಗಿ (Independent) ಹೇಗೆ ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಚಿಂತನೆ ಆಗಲಿ... 

🙏🙏🙏

~ ಸಿದ್ಧವೀರ ಸಂಗಮದ


Please Comment Your Thought on this article

ದಯವಿಟ್ಟು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

ಕಾಮೆಂಟ್‌ಗಳು

  1. ಪೋಲೀಸರಿಗೆ, ಲಾಯರ್ಗಳಿಗೆ, ಶರಣರಿಗೆ ಬೊಗಳಲು ಕಚ್ಚಲು ಸಾಕಿರುವ ಸಾಕುನಾಯಿಗಳಿಗೆ, ಕೊಡಲಿಕ್ಕೆ ಹಣ ಹರಿದು ಹೋಗುವಾಗ . ವೈಯಕ್ತಿಕ ಆಸ್ತಿ ಸಂಪಾದನೆಗೆ ಸೋರಿ ಹೋಗುವಾಗ ಅರಿಷಡ್ವರ್ಗಗಳ ಉಪಟಳಕ್ಕೆ ಖರ್ಚು ಮಾಡುವಾಗ, ಮೂರ್ತಿಗೆ ಸಹಜವಾಗಿಯೇ ಕಡಿಮೆ ಬೀಳುತ್ತದೆ. ಇದರಲ್ಲಿ ಆಶ್ಚರ್ಯವೇನಿಲ್ಲ.

    *ಭಕ್ತರನಲ್ಲದೆ ಒಲ್ಲೆವೆಂದೆಂಬಿರಿ, ಭಕ್ತರಿಗಲ್ಲದೆ ಕೈಯಾನೆವೆಂಬಿರಿ, ಇದೇನ ಮಾಡುವಿರಿ ಇದೆಲ್ಲಿಗೊಯ್ಯುವಿರಿ ಪಾವನವಾದುದನು ಲಿಂಗಕ್ಕೆ ಮಾಡುವುದೆ ಆಚಾರ. ವಿಷಯಕ್ಕೆ ಇಕ್ಕಿ, ಅಸುಗತಿಗಿಳಿಯದಿರಿ ಲಿಂಗದೇವನ ಶರಣರ ಒಡೆವೆಯ.*

    ಲಿಂಗದೇವನ ಶರಣರ ಒಡವೆಯನು ಅವರ ಕಾಣಿಕೆಯನ್ನು ವಿಷಯಕ್ಕೆ ಇಕ್ಕಿ ದರೆ ಅಸುಗತಿ ಬರುವುದು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಗುರು ಬಸವಣ್ಣನವರ ಆಜ್ಞೆ ಮೀರಿದಮೇಲೆ ಹರನೂ ಕಾಯನು ಗುರುವೂ ಕಾಯರು.

    ಪ್ರತ್ಯುತ್ತರಅಳಿಸಿ
  2. ಹುಲಿಯ ಹಾಲು ಹುಲಿಗಲ್ಲದೆ ಹೊಲದ ಹುಲ್ಲೆಗುಣಬಾರದು,
    ಕಲಿಯ ಕಾಲ ತೊಡರು ಛಲದಾಳಿಗಲ್ಲದೆ ಇಕ್ಕಬಾರದು.
    ಅಳಿಮನದಾಸೆಯವರ ಮೂಗ ಹಲುದೋರೆ ಕೊಯ್ವ
    ಲಿಂಗದೇವ.

    ಪ್ರತ್ಯುತ್ತರಅಳಿಸಿ
  3. ತುಂಬಾ ಅರ್ಥಗರ್ಭಿತವಾಗಿ ಮನದಟ್ಟು ಮಾಡಿಕೊಟ್ಟಿದ್ದೀರಿ ಬ್ರದರ್,
    ರಸ್ತೆಯ ಭೂ ಸ್ವಾದೀನದಿಂದ ಬಂದ 2 ಕೋಟಿ 40 ಲಕ್ಷ ರೂಪಾಯಿ ಬಂದದ್ದು ಎಲ್ಲಿ ಹೋಯಿತು, ..?
    ಯಾರು ಧರ್ಮ ಪೀಠಕ್ಕೆ ಕಾಣಿಕೆ ಕೊಟ್ಟಿರುತ್ತಾರೋ ಖಂಡಿತವಾಗಿ ಅವರಿಗೆ ಕೇಳುವ ಹಕ್ಕಿರುತ್ತದೆ,
    ಆದರೆ ಬೆಕ್ಕಿನ ಕೊರಳಿಗೆ ಘಂಟಿ ಕಟ್ಟುವವರಾರು..?

    ಪ್ರತ್ಯುತ್ತರಅಳಿಸಿ
  4. ಅದಲ್ಲದೆ ತಿಂಗಳಿಗೆ ಸರಿಸುಮಾರು ೨ ಲಕ್ಷ ರೂಪಾಯಿ ಬ್ರಿಗೇಡ್ ಕಂಪನಿಯಿಂದ ಗಂಗೋತ್ರಿಗೆ ಬರುತ್ತಿದೆ.. ಇದೆಲ್ಲ ಎಲ್ಲಿ ಹೋಗಿತ್ತಿದೆ..?

    ಪ್ರತ್ಯುತ್ತರಅಳಿಸಿ
  5. ಇಷ್ಟೊಂದು ವೈಭವೀಕರಿಸಿ ಬಸವ ಧರ್ಮ ಪೀಠದ ಸ್ವಾಭಿಮಾನ ಘನತೆ ಗೌರವ ಕ್ಕೆ ಧಕ್ಕೆ ಬಂದಿದ್ದು ಸುಳ್ಳಲ್ಲ

    ಪ್ರತ್ಯುತ್ತರಅಳಿಸಿ
  6. ಸಾಮರ್ಥ್ಯ ಇಲ್ಲದವರು ಹಿಗೆ ಕೈ ಚಾಚುವರು

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…