ಸಾವನ್ನು ಸ್ವಾಗತಿಸಲಿಕ್ಕೆ ಸಿದ್ಧರಾಗಿ ಗುರುಬಸವಣ್ಣನವರಿಗಾಗಿ ಅದರೊಡನೆ ಯುದ್ಧ ಮಾಡಿದ ಪೂಜ್ಯ ಶ್ರೀ ಮಹಾಜಗದ್ಗುರು ಮಾತೆ ಮಹಾದೇವಿಯವರು
ಸಾವನ್ನು ಸ್ವಾಗತಿಸಲಿಕ್ಕೆ ಸಿದ್ಧರಾಗಿ ಗುರುಬಸವಣ್ಣನವರಿಗಾಗಿ ಅದರೊಡನೆ ಯುದ್ಧ ಮಾಡಿದ ಪೂಜ್ಯ ಶ್ರೀ ಮಹಾಜಗದ್ಗುರು ಮಾತೆ ಮಹಾದೇವಿಯವರು* -Sachidanand Prabhu Chatnalli 9888894454 ಕೆಲವು ವರ್ಷಗಳ ಹಿಂದೆ ಬಸವ ಮಂಟಪದಲ್ಲಿ ಕೆಲವೊಂದು ಹಳೆಯ ಭಾವಚಿತ್ರಗಳ ಸಂಗ್ರಹ ನನ್ನ ಕಣ್ಣಿಗೆ ಬಿತ್ತು. ಅದರಲ್ಲಿ ಮೂರು ಭಾವಚಿತ್ರಗಳು ನನ್ನ ಗಮನ ಸೆಳೆದವು. ಒಂದು ಕ್ಷಣ ಸರ್ವಾಂಗದಲ್ಲಿ ಕಂಪನವಾಯಿತು. ನನಗರಿವಿಲ್ಲದೆ ಕಣ್ಣಿನಿಂದ ಅಶ್ರು ಬಿಂದುಗಳು ಬರಲಾರಂಭಿಸಿದವು! ಕಾರಣ, ಆ ಭಾವಚಿತ್ರಗಳು 1972ನೇ ಇಸವಿಯಲ್ಲಿ ಬೆಂಗಳೂರಿನ ಬಸವ ಮಂಟಪ ಕಟ್ಟುವಾಗ ತೆಗೆದಂಥವುಗಳು. ಆ ಮೂರು ಭಾವಚಿತ್ರದಲ್ಲಿ ಪೂಜ್ಯ ಮಾತಾಜಿಯವರು ತಲೆಯ ಮೇಲೆ ಸೆರಗನ್ನು ಹೊದ್ದು ಸಿಮೆಂಟಿನ ಬುಟ್ಟಿಯನ್ನು ಹೊತ್ತಿದ್ದಾರೆ. ಮತ್ತೊಂದು ಭಾವಚಿತ್ರದಲ್ಲಿ ಪೂಜ್ಯ ಅಪ್ಪಾಜಿಯವರು ಕಾಂಕ್ರೀಟನ್ನು ಬುಟ್ಟಿಯಲ್ಲಿ ತುಂಬುತ್ತಿದ್ದಾರೆ. ನಾವು ಇಂದು ಬೆಂಗಳೂರಿನಲ್ಲಿ ಯಾವ ಕಟ್ಟಡದಲ್ಲಿ ಕುಳಿತು, ಪ್ರಾರ್ಥನೆ ಮಾಡುತ್ತಿದ್ದೇವೆಯೋ ಆ ಕಟ್ಟಡ ಸಾಮಾನ್ಯವಾದುದಲ್ಲ. ಅದರಲ್ಲಿ ಪೂಜ್ಯ ಅಪ್ಪಾಜಿ ಮತ್ತು ಪೂಜ್ಯ ಮಾತಾಜಿ ಬೆವರಿನ ಹನಿಗಳು ಸೇರಿಕೊಂಡಿವೆ. ಅವರ ದಿವ್ಯ ಶರೀರದ ಪರಿಶ್ರಮದಿಂದ ಈ ಬಸವ ಮಂಟಪ ನಿರ್ಮಾಣವಾಗಿದೆ. ಬಸವ ಮಂಟಪ ಕಟ್ಟುವಾಗ ಮಾತಾಜಿಯವರು ಕಲ್ಲು, ಇಟ್ಟಿಗೆ ಕಾಂಕ್ರಿಟನ್ನು ತಲೆಯ ಮೇಲೆ ಹೊತ್ತಿದ್ದಾರೆ ಎಂದು ಅರಿತಾಗ ನನ್ನ ಶರೀರದಲ್ಲಿ ಕಂಪನವಾಯಿತು. ಈ ಚಿತ್ರಗಳನ್ನು ನೋಡ...