ಪೋಸ್ಟ್‌ಗಳು

ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಜನ್ಮ - ಲಿಂಗಾಯತ ಧರ್ಮದ ಪುನರ್ಜನ್ಮ

ಇಮೇಜ್
  ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಜನ್ಮ - ಲಿಂಗಾಯತ ಧರ್ಮದ ಪುನರ್ಜನ್ಮ. ಆನೆಯು ಆ ದಾರಿಯಲ್ಲಿ ಹೋಯಿತ್ತೆಂದಡೆ ಆಡೂ ಆ ದಾರಿಯಲ್ಲಿ ಹೋಯಿತ್ತೆನಬಹುದೆ ? ಸಂಗನ ಶರಣರಿಗೆ ಆನು ಸರಿಯೆಂದು ಗಳಹಲುಬಹುದೆ ? ಜಂಗಮಕ್ಕೆ ಮಾಡುವ ಭಕ್ತರಿಗೆ ಆನು ಸರಿಯೇ ಹೇಳಾ ಲಿಂಗದೇವಾ ಆನೆ ಬೃಹದಾಕಾರದ ಪ್ರಾಣಿ. ಅದು ನಡೆದ ಜಾಗದಲ್ಲಿ ರಸ್ತೆ ನಿರ್ಮಾಣವಾಗುತ್ತದೆ. ಸಾಮಾನ್ಯವಾಗಿ ಕಾಡಿನಲ್ಲಿ ಹುಲ್ಲು, ಚಿಕ್ಕಪುಟ್ಟ ಗಿಡಗಳು ಇರುವ ಕಡೆ ಆನೆ ಹೋದರೆ ಅದು ತನ್ನ ಸೊಂಡಿಲಿನಿಂದ ತನಗೆ ಅಡ್ಡ ಬಂದ ಗಿಡ-ಮರ ಟೊಂಗೆಗಳನ್ನು ಕಿತ್ತಿ ಎಸೆಯುತ್ತದೆ. ಹೀಗೆ ಒಂದು ಸಲ ಆನೆಯು ಹೋಗುವ ದಾರಿಯು ಎಷ್ಟೇ ಇಕ್ಕಟ್ಟಾಗಿದ್ದರೂ ಅಲ್ಲಿ  ರಸ್ತೆ ನಿರ್ಮಾಣವಾಗುತ್ತದೆ. ಆ ದಾರಿಯಲ್ಲಿ ಇತರ ಆಡಿನಂತಹ ಸಣ್ಣ ಪುಟ್ಟ ಪ್ರಾಣಿಗಳು ಯಾವುದೇ ತೊಂದರೆ ಇಲ್ಲದೆ ಸಾಗಬಹುದು. ಅದೇ ರೀತಿ ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿಯವರು ಜಿಡ್ಡುಗಟ್ಟಿದ ಸಂಪ್ರದಾಯದಲ್ಲಿ ಆನೆಯಂತೆ ಮುನ್ನುಗ್ಗಿ ಅನೇಕ ಮೂಢನಂಬಿಕೆಗಳು, ತಪ್ಪು ಆಚರಣೆಗಳೆಂಬ ಗಿಡ ಮರಗಳನ್ನು ಕಿತ್ತೆಸೆದು ನವ ಪಥವನ್ನು ನಿರ್ಮಿಸಿದ್ದಾರೆ. ಸುಮಾರು 50 ವರ್ಷಗಳ ಹಿಂದಿನ ದಿನಗಳನ್ನು ನೋಡಿದರೆ ಅಂದು ಬಸವಣ್ಣನವರು ಎಂದರೆ ಯಾರು? ವಚನಗಳೆಂದರೇನು? ಬಸವ ತತ್ತ್ವ, ಲಿಂಗಾಯತ ಧರ್ಮ, ಬಸವ ಧರ್ಮ ಎನ್ನುವ ಶಬ್ದಗಳು ಸಂಪೂರ್ಣವಾಗಿ ಮರೆಮಾಚಿ ಹೋದಾಗ ಮತ್ತೊಮ್ಮೆ 12ನೆಯ ಶತಮಾನದ ಭವ್ಯತೆ ದಿವ್ಯತೆಯನ್ನು ಭಾರತ ದೇಶದಲ್ಲಿ ಪ್ರತಿಷ್ಠಾಪಿಸಿದ ಮೊಟ್ಟಮೊ...

ಮೆರವಣಿಗೆ/ಸನ್ಮಾನ V/s ತತ್ವ

ಇಮೇಜ್
 ➡️ 📌 ದಿನಾಂಕ 23/8/22 ರ  ನ್ಯೂಸ್ ಪೇಪರ್ (ಪ್ರಜಾವಾಣಿ) ವರದಿಯಲ್ಲಿ "ಮಾತೆಗಂಗಾದೇವಿ ಮೆರವಣಿಗೆ, ಸನ್ಮಾನ" ಎಂಬ ಶೀರ್ಷಿಕೆಯಲ್ಲಿ ಬರೆದಿರುವ ಕೆಲವು ಸಾಲುಗಳು ಈ ರೀತಿ ಇವೆ  ---- "ವಚನಾಂಕಿತ ತಿದ್ದಿರುವ ಬಗ್ಗೆ ಕ್ಷಮೆ ಕೇಳಿ ತಪ್ಪನ್ನು ತಿದ್ದಿಕೊಳ್ಳುವುದಾಗಿ ಹೇಳಿಕೆ ನೀಡಿದರೆ, ಮಾತೆಮಹಾದೇವಿ ಅವರನ್ನು ಮೆರವಣಿಗೆ ಮೂಲಕ ಬಸವೇಶ್ವರ ದೇವಸ್ಥಾನಕ್ಕೆ ಕರೆತಂದು ಅದ್ದೂರಿಯಾಗಿ ಸನ್ಮಾನಿಸಲಾಗುವುದು ಎಂದು ದೇವಸ್ಥಾನ ಸಮಿತಿಯಿಂದ ಹೇಳಲಾಗಿತ್ತು"  ಈ ಸಾಲುಗಳನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ. ಬಸವಕಲ್ಯಾಣ ದೇವಸ್ಥಾನ ಕಮಿಟಿಯವರು ಅದ್ದೂರಿಯಾಗಿ ಮೆರವಣಿಗೆ  ಮಾಡುತ್ತೇವೆ ಎಂದು  *offer* ಕೊಟ್ಟರೂ ಕೂಡ ಪೂಜ್ಯ  ಮಾತಾಜಿ(ಮಾತೆಮಹಾದೇವಿ)ಯವರು ತಮ್ಮ ಜೀವಿತಾವಧಿಯಲ್ಲಿ ತಾನು ಮಾಡಿದ್ದು ತಪ್ಪು ಎಂದು ಒಪ್ಪಿಕೊಳ್ಳಲಿಲ್ಲ.. ಕ್ಷಮೆ ಕೇಳಲಿಲ್ಲ...  ಏಕೆ??? ಮಾತಾಜಿಯವರು ಮನಸ್ಸು ಮಾಡಿದ್ದರೆ ತಮ್ಮ ಸಂಶೋಧನೆಯನ್ನು ವಾಪಸ್ಸು ತೆಗೆದುಕೊಂಡು ಇಂತಹ ನೂರಾರು ಮೆರವಣಿಗೆಗಳನ್ನು ಸನ್ಮಾನಗಳನ್ನು ಮಾಡಿಸಿಕೊಳ್ಳಬಹುದಿತ್ತು.  ನೂರಾರು ಪುರಸ್ಕಾರಗಳನ್ನು ಪಡೆಯಬಹುದಿತ್ತು. ಆದರೆ ಅವರು ಇದಕ್ಕೆ ಒಪ್ಪಲಿಲ್ಲ. ಏಕೆಂದರೆ ಪೂಜ್ಯ ಮಾತಾಜಿಯವರಿಗೆ *ತನ್ನನ್ನು ತಾನು ಮೆರೆಸಿಕೊಳ್ಳುವುದಕ್ಕಿಂತ ಗುರು ಬಸವಣ್ಣನವರ ತತ್ವವನ್ನು ಇಡೀ ಜಗತ್ತಿಗೆ ಮೆರೆಸಬೇಕೆಂಬ ಅದಮ್ಯ ಆಸೆ ಇತ್ತು.* ಲಿಂಗದೇವ ವಚನಾಂಕಿತ ಪ್ರ...

ತಮಗೊಂದು ಕಥೆ ಹೇಳ್ತಿನಿ ಕೇಳಿ

ಇಮೇಜ್
 ತಮಗೊಂದು ಕಥೆ ಹೇಳ್ತಿನಿ ಕೇಳಿ.... ಒಂದುರಲ್ಲಿ ಒಬ್ಬ ಶಿಲ್ಪಕಾರ ಮೂರು ಕತ್ತೆಗಳನ್ನು ಸಲವಿದ್ದ.. ಆತ ಮೂರ್ತಿ ಕೆತ್ತನೆ ಮಾಡಿ.. ಪಟ್ಟಣಕ್ಕೆ ಒಯಿದು ಮಾರಾಟ ಮಾಡಿ ಬಂದ ದುಡ್ಡಲ್ಲಿ... ತನ್ನ ಉಪಜೀವನ ನಡೆಸುತ್ತಿದ್ದಾ.....ಒಂದು ದಿನ... ಮೂರು ಮೂರ್ತಿಗಳನ್ನ ಮಾಡಿದ... 1) ವಿಶ್ವ ಗುರು ಬಸವಣ್ಣನವರದು.... 2) ಪ್ರವಚನ ಪಿತಾಮಹ ಲಿಂಗಾನಂದ ಅಪ್ಪಾಜಿಯವರದು... 3) ಮಹಿಳಾ ಜಗತಗುರು ಲಿಂಗೈಕ್ಯ ಮಾತೆ ಮಾಹಾದೇವಿ ತಾಯಿಯವರದು....  ಮೂರು ಕತ್ತೆಗಳ ಮೇಲೆ ಹೋರಿಕೊಂಡು... ಮಾರಾಟಕ್ಕೆ ಪಟ್ಟಣಕ್ಕೆ ನಡೆದ. ....ಮಧ್ಯದಲ್ಲಿ ಹತ್ತುವ ಕೆಲವು ಹಳ್ಳಿಗಳಲ್ಲಿ.... ಪೂಜೆ. ಸನ್ಮಾನ.. ನಡೆಯಿತು... ಕತ್ತೆಗೊಂದು ಮಾಲೆ ... ಮೇಲೆ ಹೋರಿಸಿದ ಮೂರ್ತಿಗಳಿಗೆ ಒಂದು ಮಾಲೆ ... ಮಾಡುತ್ತಾ ಭಕ್ತರು ಕತ್ತೆಗೆ ನೈವಾದ್ಯ ಕೂಡುವದು... ತೆಂಗು ಕಾಯಿ ಕರ್ಪುರ... ಮಾಡುತ್ತಲೇ ಹೋದರು,,,,, ಕತ್ತೆಗೊಂದು... ಮದ ಏರಿತು... ನನಗೆ ಎಷ್ಟು ಸನ್ಮಾನ... ನನಗೆ ಎಷ್ಟು ತಿಂಡಿ ತಿನಿಸು.. ಈ ವೂರಲ್ಲಿ ಅಂತ ತನ್ನನ್ನೇ ತಾನು ಗರ್ವಿ ಆಯಿತು.... ನನ್ನ ಮಾಲೀಕ ಇಲ್ಲಿವರೆಗೂ ನನಗೆ ಯಾವತ್ತು ಎರಡು ಅಗರಬತ್ತಿ ಹಚ್ಚಿಲ್ಲ... ಸಿಹಿ ತಿಂಡಿ ತಿನಿಸುಗಳನ್ನ ಕೊಟ್ಟಿಲ್ಲ,,, ಆದರೆ ನನಗೆ ಇ ಊರಲ್ಲಿ ಎಷ್ಟು ಸನ್ಮಾನ ಎಷ್ಟು ಸನ್ಮಾನ,,, ಅಂತ ಗರ್ವದಿಂದ ತುರಾಡಿತು,,,,,ಮಾಲೀಕ ಮೂರ್ತಿಗಳನ್ನು ಮಾರಾಟ ಮಾಡಿ....ಮತ್ತೆ ಮಾಲೀಕ ಕತ್ತೆಗಳನ್ನು ತನ್ನ ಮನೆಗೆ ಕರೆದು ಕೊಂಡು ಬಂದು ಕಾ...

ಪೂಜ್ಯ ಶ್ರೀ ಗಂಗಾಮಾತಾಜಿಯವರು ಗುರು ಬಸವಣ್ಣನವರ ಆದೇಶಗಳನ್ನು ತಿರಸ್ಕಿರಿಸಿರುವುದನ್ನು ಪ್ರಶ್ನಿಸುತ್ತ ಗುರು ಬಸವಣ್ಣನವರ ಆದೇಶಗಳನ್ನು‌ಪಾಲಿಸಲು ಆಗ್ರಹಿಸಿ ಬರೆದ ಪತ್ರ.

ಇಮೇಜ್
 

ರೊಹಿತ ಚಕ್ರತಿರ್ಥ/ವಕ್ರತಿರ್ಥ ನ ಅಪ್ಪನ ಮನೆಯ ಸ್ವತ್ತಾ, ಕನ್ನಡ ಸಾಹಿತ್ಯ ತಿರುಚುವುದಕ್ಕೆ

ಇಮೇಜ್
  ಪಠ್ಯಪುಸ್ತಕದಲ್ಲಿ ಆದ ಬದಲಾವಣೆಗಳನ್ನು ಸರಿಪಡಿಸಿ ರೋಹಿತ್ ಚಕ್ರತಿರ್ಥ ನನ್ನು ಸಮಿತಿಯಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾಧ್ಯಮಗಳೊಂದಿಗೆ ಮಾತನಾಡಲು ಆಯಿತು. ಈ ಸಂದರ್ಭದಲ್ಲಿ  ಬೆಳಗಾವಿ ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷರಾದಅಶೋಕ್ ಬೆಂಡಿಗೇರಿ. ರಾಷ್ಟ್ರೀಯ ಬಸವದಳ ರಾಜ್ಯ ಘಟಕದ  ಕಾರ್ಯದರ್ಶಿಗಳಾದ ಕೆ. ಶರಣ ಪ್ರಸಾದ್  ಲಿಂಗಾಯತ ಧರ್ಮ ಮಹಾಸಭೆಯ ಅಧ್ಯಕ್ಷರಾದ ಮಹಾಂತೇಶ್ ಗುಡಸ್. ಕಾರ್ಯದರ್ಶಿ ಆನಂದ ಗುಡಸ. ಎಸ್ ಎಸ್ ಪಾಟೀಲ್. ರಾಷ್ಟ್ರೀಯ ಬಸವದಳದ ಎಲ್ಲಾ ಪದಾಧಿಕಾರಿಗಳು. ಉಪಸ್ಥಿತರಿದ್ದರು.

ಪೀರ ಪಾಶಾ ದರ್ಗಾವೆ ಅನುಭವ ಮಂಟಪದ ವಿವಾದದ ನಿಜ ಸತ್ಯ

ಇಮೇಜ್
 ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಬಸವ ಪ್ರಕಾಶ ಸ್ವಾಮೀಜಿ. ಪೀರ ಪಾಶಾ ದರ್ಗಾ ಅನುಭವ ಮಂಟಪ ಅಲ್ಲ: ಬಸವಲಿಂಗ ಪಟ್ಟದೇವರು ಮಹತ್ವದ ಮಾಹಿತಿ ಬಸವ ಕಲ್ಯಾಣದಲ್ಲಿರುವ ಪೀರ ಪಾಶಾ ದರ್ಗಾದಲ್ಲಿ ಅನುಭವ ಮಂಟಪವಿದ್ದ ಬಗ್ಗೆ ಸಾಕ್ಷ್ಯಗಳಿಲ್ಲ. ಜಗಜ್ಯೋತಿ ಬಸವಣ್ಣನವರ ಬಗ್ಗೆ ಹತ್ತಾರು ಗ್ರಂಥಗಳು ಬಂದಿವೆ. ದರ್ಗಾದಲ್ಲಿ ಅನುಭವ ಮಂಟಪವಿದೆ ಅಂತ ಯಾರು ಬರೆದಿಲ್ಲ ಎಂದು ಭಾಲ್ಕಿ ಹಿರೇಮಠದ ಪರಮಪೂಜ್ಯ ಬಸವಲಿಂಗ ಪಟ್ಟದೇವರು ಸ್ಪಷ್ಟಪಡಿಸಿದ್ದಾರೆ. ಹೌದು ದೇಶಾಧ್ಯಂತ ಮಂದಿರ-ಮಸೀದಿಗಳ ಮಧ್ಯ ದೊಡ್ಡ ಸಂಘರ್ಷ ಶುರುವಾಗಿದೆ. ಇದೀಗ ಬಸವಕಲ್ಯಾಣದ ಪೀರ ಪಾಶಾ ದರ್ಗಾ 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಎಂಬ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಮಾತನಾಡಿರುವ ಪರಮಪೂಜ್ಯ ಬಸವಲಿಂಗ ಪಟ್ಟದೇವರು ಅನುಭವ ಮಂಟಪ ಸಾಧಾರಣ ಕಟ್ಟಡವಾಗಿರಬಹುದು. ಇತಿಹಾಸಕಾರರು ಸಂಶೋಧನೆ ಮಾಡಿದ್ರೆ ಮಾತ್ರ ಗೊತ್ತಾಗುತ್ತೆ. ಆದರೆ ಇದುವರೆಗೂ ಕೂಡ ಆ ದರ್ಗಾದಲ್ಲಿ ಅನುಭವ ಮಂಟಪದ ಕುರುಹಗಳಿವೆ ಎಂದು ಎಲ್ಲಿಯೂ ಉಲ್ಲೇಖವಾಗಿಲ್ಲ. ಬಸವಣ್ಣನವರು ಸ್ಥಾವರಕ್ಕೆ ಅವರು ಮಹತ್ವ ಕೊಟ್ಟಿರಲಿಲ್ಲ. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎನ್ನುವುದು ಅವರ ಸಿದ್ಧಾಂತ. ಈ ದೃಷ್ಟಿಯಿಂದ ನೋಡಿದ್ರೆ ಅವರ ಅನುಭವ ಮಂಟಪ ಬಹುತೇಕ ಸಾಧಾರಣ ಕಟ್ಟಡ ಇರಬಹುದು. ಹಂಚಿನ ಮನೆಯೋ ಅಥವಾ ಮತ್ಯಾವುದೋ ಅನುಭವ ಮಂಟಪ ಕೂಡುವ ಒಂದು ವೇದಿಕೆ ಇರಬಹುದು. ಕಾಲಾನುಕ್ರಮದಲ್ಲಿ ಅದು...

ಇಚ್ಛಾ ಪತ್ರ

ಇಮೇಜ್
 ಇಚ್ಛಾ ಪತ್ರ ಕೆಲವು ದಿನಗಳ ಹಿಂದೆ ನಾನು ಮನೆಯಲ್ಲಿದ್ದ ಹಳೆಯ ಕಲ್ಯಾಣ ಕಿರಣಗಳನ್ನು ಒಂದು ಕಡೆ ಜೋಡಿಸುತ್ತ ಕೂತಿದ್ದೆ. ಆವಾಗ ಮುಖ ಪುಟ ಹರಿದುಹೋಗಿದ್ದ  ಒಂದು ಕಲ್ಯಾಣ ಕಿರಣ ನನ್ನ ಗಮನ ಸೆಳೆಯಿತು. ಅದನ್ನು ತೆಗೆದು ನೋಡಿದಾಗ ಅದು 2002 ಜೂನ ತಿಂಗಳದ್ದು. ಪೂಜ್ಯ ಲಿಂಗೈಕ್ಯ ಮಾತೆ ಮಹಾದೇವಿಯವರು ಮೊದಲನೆಯ ಕಲ್ಯಾಣ ಪರ್ವದ ಸಮಯದಲ್ಲಿ ಆದ ಅನುಭವಗಳನ್ನು ಲೇಖನಗಳ ಮೂಲಕ ಅದರಲ್ಲಿ ಹೇಳಿಕೊಂಡಿದ್ದಾರೆ. ನಾನು ಕೂಡ ಆ ಕಲ್ಯಾಣಪರ್ವದಲ್ಲಿ ಭಾಗವಹಿಸಿ ಪೋಲಿಸ್ ದೌರ್ಜನ್ಯವನ್ನು ನನ್ನ ಕಣ್ಣಾರೆ ನೋಡಿದ್ದೇ. ಅದರಲ್ಲಿ ಪೂಜ್ಯ ಮಾತಾಜಿಯವರು ಬರೆದ *ಇಚ್ಛಾಪತ್ರ* ಓದಿ ಅದನ್ನು ವಾಟ್ಸಾಪ್ ಗ್ರೂಪ್ ಗಳಲ್ಲಿ ಹಾಕಿದ್ದೆ.   ಇದನ್ನು ಓದಿ ಓರ್ವ (ಅಪರಿಚಿತ) ಶರಣೆಯೊಬ್ಬರು ನನ್ನ ಮೊಬೈಲ್ ಗೆ ಕರೆ ಮಾಡಿದ್ರು. ಅವರು ಆಡಿದ ಮಾತುಗಳು ಈ ರೀತಿ ...  (ಅಣ್ಣವ್ರೆ, ಮಾತಾಜಿಯವರ ಈ ಇಚ್ಛಾಪತ್ರ ಓದಿ ಬಹಳ ಮನಸ್ಸಿಗೆ ನೋವಾಯ್ತು. ಆ ತಾಯಿಯ ಹೃದಯದಲ್ಲಿ ಇಷ್ಟೊಂದು ಕಷ್ಟ ನೋವುಗಳನ್ನು ಇಟ್ಟುಕೊಂಡಿದ್ದರು ಕೂಡ ಭಕ್ತರೆದುರು ಎಷ್ಟು ಸಮಾಧಾನಿಯಾಗಿ, ಹಸನ್ಮುಖಿಯಾಗಿ ಇರುತ್ತಿದ್ರು. "ನನ್ನ ನಂತರ ನನ್ನ ಶಿಷ್ಯರು ಮುಂದುವರಿಸಿಕೊಂಡು ಹೋಗುತ್ತಾರೆ" ಎಂದು ಮಾತಾಜಿ ಹೇಳಿರುವುದನ್ನು ನೋಡಿದ್ರೆ, ನಮ್ಮ ಈಗಿನ ಪೀಠಾಧ್ಯಕ್ಷರು, ಜಂಗಮಮೂರ್ತಿಗಳು ಏಕೆ ಇದನ್ನು ಅರ್ಥಮಾಡಿಕೊಳ್ಳುತ್ತಿಲ್ಲ?  ಏಕೆ ಮಾತಾಜಿಯವರ ಸಂಕಲ್ಪಗಳಿಗೆ ವಿರುದ್ಧವಾಗಿ ನಡೆದುಕ...

ನಮ್ಮ ಶಿಶ್ಯರು ನನ್ನ ನಂತರ ಮುಂದುವರೆಸುತ್ತಾರೆ...

ಇಮೇಜ್
ನಾನು ಹೊದರೆನಂತೆ, ನಮ್ಮ ಶಿಶ್ಯರುಗಳು ಅನೇಕರು ಇದ್ದಾರೆ, ಪೂಜ್ಯ ಅಪ್ಪಾಜಿಯವರ ಸಂಕಲ್ಪವನ್ನು ಹೇಗೆ ನಾವು ಒಂದೊಂದಾಗಿ ಪೂರ್ತಿ ಮಾಡುತ್ತಿದ್ದೆಯೋ ಹಾಗೆ ನಮ್ಮ ಶಿಶ್ಯರು ನನ್ನ ನಂತರ ಮುಂದುವರೆಸುತ್ತಾರೆ... - ಲಿಂ ಮಾತಾಜಿ. ಇಚ್ಛಾ  ಪತ್ರ ನಮ್ಮ ಗುರುಬಸವಣ್ಣನವರ 108 ಅಡಿ ಎತ್ತರದ ಭವ್ಯ ಮೂರ್ತಿ ಎಂದು ಗರ್ವದಿಂದ ಹೆಳುತ್ತೆವೆ.....ಇದರ ಹಿಂದಿನ ಸಂಕಲ್ಪ ಹಾಗು ಆ ಸಂಕಲ್ಪಕ್ಕೆ ಎದುರಾದ ಅನೆಕ‌ ತೊಂದರೆಗಳಲ್ಲಿ ಒಂದನ್ನು ಇಲ್ಲಿ ಲಿಂ ಮಾತಾಜಿಯವರು ಉಲ್ಲೆಖ ಮಾಡಿದ್ದಾರೆ... ಅಂದು ಮಾತಾಜಿಯವರು ತಮ್ಮ ದೃಡ ಸಂಕಲ್ಪದಿಂದ ಇಟ್ಟ ಹೆಜ್ಜೆ ಹಿಂದಕ್ಕೆ ತೆಗೆದುಕೊಂಡಿದ್ದರೆ.. ! ಗುರು ಬಸವಣ್ಣನವರ ಕಾರ್ಯಸ್ಥಳ ವಾಗಿದ್ದ ಬಸವಕಲ್ಯಾಣ ಈ ಎತ್ತರದ ಖ್ಯಾತಿ ಪಡೆಯುತ್ತಿರಲಿಲ್ಲಾ. ಕೆಲವು ಮಹತ್ವಪೂರ್ಣ Pointsಗಳನ್ನು ಗಮನಿಸಿ. Point 1.  ತಮ್ಮ ದೃಢ ಸಂಕಲ್ಪದಿಂದ *ಗುರು ಬಸವಣ್ಣನವರ ಕಾರ್ಯಸ್ಥಳ ವಾಗಿದ್ದ ಬಸವಕಲ್ಯಾಣ* ವನ್ನು ಸಮಾಜದಲ್ಲಿ ಗುರುತಿಸಿ, ಜಾಗ್ರತಿಯನ್ನು ಮುಡಿಸಿದ್ದಾರೆ. Point 2. ಅಂದು (ಗುರು ಬಸವಣ್ಣನವರ ಪುತ್ತಳಿ ನಿರ್ಮಾಣಕಿಂತ ಮೊದಲು) ಬಸವಕಲ್ಯಾಣದ ಜನರು  ಮನೆ ಮೆನೆಗೆ ಲಾರಿ (Lorry) ಯನ್ನು ಹೊಂದಿದ್ದಕ್ಕೆ famous ಆಗಿತ್ತು , ಇದನ್ನು ಬದಲಾಯಿಸಿ ಒಂದು Tourist ಸ್ಥಳವಾಗಿ ಪರಿವರ್ತಿಸಿದವರು ಲಿಂ ಮಾತಾಜಿಯವರು. Point 3:  ಅಂದು ಮಾತಾಜಿಯವರು  ಇಟ್ಟ ಹೆಜ್ಜೆ ಹಿಂತೆಯದೆ ಗುರು ಬಸವಣ್ಣನವರ ಭವ್ಯ ಮೂರ್...

ಪೂಜ್ಯ ಶ್ರೀ ಗುರು ಹೇಮರೆಡ್ಡಿ ಮಲ್ಲಮ್ಮನವರು

ಇಮೇಜ್
ನಮ್ಮ ಭಾರತದ 🇮🇳 ನೆಲದಲ್ಲಿ _ವ್ಯವಸಾಯ ಮತ್ತು ಹೈನುಗಾರಿಕೆಯಲ್ಲಿ _ ಮಹಿಳೆಯರ ಕೊಡುಗೆ ಬಹುಮುಖ್ಯವಾದುದು ಅದೇ ರೀತಿ ಆಧ್ಯಾತ್ಮಿಕ ಕ್ಷೇತ್ರದಲ್ಲಿಯೂ  ಮಹಿಳೆಯರ ಕೊಡುಗೆ ಅಪಾರ. ಬಾಲ್ಯದಿಂದಲೂ ನಿತ್ಯ ಬೆಳಿಗ್ಗೆ _ಇಷ್ಟಲಿಂಗ ಯೋಗವನ್ನು ಮಾಡುತ್ತಾ ತನು-ಮನ-ಭಾವದಲ್ಲಿ  ಗುರು ಬಸವಣ್ಣನವರ ಸ್ಮರಿಸುವ  ಪೂಜ್ಯ ಶ್ರೀ ಗುರು ಹೇಮರೆಡ್ಡಿ ಮಲ್ಲಮ್ಮನವರ ಜಯಂತಿ ಶುಭಾಶಯಗಳು (10th May 2022) ಮನೆತನದ ಪವಿತ್ರ ಕಾಯಕ    ವ್ಯವಸಾಯ ಮತ್ತು ಹೈನುಗಾರಿಕೆಯಲ್ಲಿ  ನಿತ್ಯ ತಮ್ಮನ್ನು ತೊಡಗಿಸಿಕೊಂಡು, ತನಗಿಂತ ಕಿರಿಯರಿಲ್ಲ ಎಂಬ ಧರ್ಮಗುರುವಿನ ನೆಡೆಯಂತೆ ವಿನಯವೇ ಜೀವನದ ಉಸಿರಾಗಿಕೂಂಡು, ಬಾಳಿನಲ್ಲಿ _ಸತ್ಯ, ನಿಷ್ಠೆ, ಪ್ರಾಮಾಣಿಕತೆಯೇ ನಿತ್ಯ ನಿಯಮಗಳಾಗಿ_ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಗೈದ ಪೂಜ್ಯ ಶ್ರೀ ಗುರು ಹೇಮರೆಡ್ಡಿ ಮಲ್ಲಮ್ಮನವರು. ಸಮುದ್ರದಲ್ಲಿ ನೆರೆ-ತೊರೆಗಳು ಇರುವ ಹಾಗೆ ಸಂಸಾರದಲ್ಲಿ ಬರುವ ಸುಖ-ದು:ಖಗಳ ಬಗ್ಗೆ ಸಮಾಧಾನವಾಗಿ ಲಿಂಗಚಿತ್ತದಿಂದ ಬಗೆಹರಿಸಿ ಸದಾ ಬಸವಾದಿ ಶರಣರಾದ ಗುಡ್ಡಾಪುರದ ದಾನಮ್ಮತಾಯಿ, ದಾಸೋಹ ಮೂರ್ತಿ ನೀಲಾಂಬಿಕಾತಾಯಿ, ವೀರಮಾತೆ ಅಕ್ಕನಾಗಲಾಂಬಿಕಾತಾಯಿ, ವೈರಾಗ್ಯನಿಧಿ ಅಕ್ಕಮಹಾದೇವಿ ತಾಯಿಯವರು  ಜೀವನದ ಆದರ್ಶ ನೆನೆಸಿಕೊಂಡು ಸಮಾನತೆ, ಶಿಕ್ಷಣ, ದಾಸೋಹ, ಅನುಭವಗಳಿಂದ _ಧರ್ಮಗುರು ಬಸವಣ್ಣನವರ ವಚನಗಳನ್ನು_ ಪ್ರಚಾರ ಮಾಡಿದ ಮಹಾಯೋಗಿನಿ ಪೂಜ್ಯ ಶ್ರೀ ಹೇಮ...

ಭಾಲ್ಕಿ ಶ್ರೀಗಳೇ ತಮಗೆ ಲಿಂಗೈಕ್ಯ ಮಾತಾಜಿಯವರ ಸಂಶೋಧನೆ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ?

ಇಮೇಜ್
ಭಾಲ್ಕಿ ಮಠದ ಬಸವಲಿಂಗ ಪಟ್ಟದೇವರೆ, ಕಲ್ಯಾಣ ಕಿರಣದಲ್ಲಿ ಪ್ರಕಟವಾದ  ಅಭಿನಂದನೆಗಳು ಎಂಬ ಲೇಖನದಲ್ಲಿ ಲಿಂಗೈಕ್ಯ ಮಾತಾಜಿಯವರನ್ನು ಪ್ರಾರಂಭದಲ್ಲಿ ಹಾಡಿ ಹೊಗಳಿ, ನಂತರ ಪರೋಕ್ಷವಾಗಿ ಅವಮಾನಿಸುವ ಕೃತ್ಯ ಮಾಡಿದ್ದೀರಿ. ಲಿಂಗದೇವವು ದೇವರ ಹೆಸರು ಎಂದು ಒಪ್ಪಿಕೊಳ್ಳಲು ತಮಗೆ 25 ವರ್ಷಗಳು ಬೇಕಾದವೇ??? ಹಾಗಾದರೆ ತಮಗೆ ಮಾತಾಜಿ ಅವರ ಸಂಶೋಧನೆ ಲಿಂಗದೇವ  ವಚನಾಂಕಿತ ಅರ್ಥ ಮಾಡಿಕೊಳ್ಳಲು ಇನ್ನು 25 ವರ್ಷಗಳು ಬೇಕಾಗುತ್ತವೆ ಎಂದೆನಿಸುತ್ತದೆ.  ಇತ್ತೀಚಿಗೆ ಬಸವಕಲ್ಯಾಣದಲ್ಲಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಗುರು ಬಸವಣ್ಣನವರ ಭಾವಚಿತ್ರದ ಜೊತೆಗೆ * ನಂದಿ ಮೂರ್ತಿ* ಯ ಭಾವಚಿತ್ರವನ್ನು  ಹಾಕಿ ಕಾರ್ಯಕ್ರಮ ಮಾಡಲಾಗಿತ್ತು. ಗುರು ಬಸವಣ್ಣನವರಿಗೆ ಅಪಚಾರ ವಾಗಿದ್ದ ಆ ಒಂದು ಕಾರ್ಯಕ್ರಮದಲ್ಲಿ  *ಯಾವುದೇ ಚಕಾರವೇತ್ತದೆ ಮೌನವಾಗಿ * ಭಾಗವಹಿಸಿ ಬಂದಿರುವ ತಮಗೆ ಲಿ0.ಮಾತಾಜಿಯವರ ಸಂಶೋಧನೆ ಬಗ್ಗೆ ಮಾತಾಡುವ ಯಾವ ನೈತಿಕತೆ ಇದೆ  ???  * ಪ್ರಶ್ನೆ ಮಾಡಿದರೆ ಸರಕಾರದಿಂದ ಬರುವ ಅನುದಾನಗಳನ್ನು ಕಳೆದುಕೊಳ್ಳುತ್ತೇವೆ ಎಂಬ ಭಯವೇ??? * ಅನೇಕ ಶಾಲಾ ಕಾಲೇಜುಗಳನ್ನು ತೆಗೆದು ಲಾಭ ನಷ್ಟದ ವ್ಯವಹಾರಗಳಲ್ಲಿ (ಚಿಂತೆಗಳಲ್ಲಿ) ಮುಳುಗಿಹೋಗಿರುವ ತಮಗೆ ಲಿ0.ಮಾತಾಜಿಯವರ ಸಂಶೋಧನೆ ಬಗ್ಗೆ ಮಾತಾಡುವ ಯಾವ ನೈತಿಕತೆ ಇದೆ???  ಈ ಲೇಖನದಲ್ಲಿ ತಾವು " 12 ವರ್ಷಗಳ ಚಿಂತೆ ಇಂದು ನಿಶ್ಚಿಂತೆ ಆಯಿತು" ಎಂಬ ಗುರು ಬಸವಣ್ಣನವರ ...

ಮಾತಾಜಿ ನಮ್ಮನ್ನು ಕ್ಷಮಿಸಿ

ಇಮೇಜ್
🙏🏼 ಮಾತಾಜಿ ನಮ್ಮನ್ನು ಕ್ಷಮಿಸಿ 🙏🏼 ನಿಮ್ಮ ಅನರ್ಘ್ಯ ರತ್ನದ ಕೊಡಗೆಯನ್ನು ಕಳೆದು ಕೊಂಡೆವು, ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ 🙏🏼 ನಿಮ್ಮ ಬೆವರಿನಿಂದ ಕಟ್ಟಿದ ಸಂಸ್ಥೆಯು ಒಡೆದು ಹನ್ನೊಂದಾಯಿತು , ಕಾಪಾಡಿಕೊಳ್ಳಲು ನಮಗೆ ಆಗಲಿಲ್ಲಾ, ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ. 🙏🏼 ಅಂದು, * ಧನವಂತರ ಮನೆಯಿಂದ ಬಂದು * ಬಸವ ಧರ್ಮದ ಸಿರಿತನವನ್ನು ಲಿಂಗಾಯತರಿಗೆ ತಿಳಿಸಿಕೊಟ್ಟಿರಿ, ಇಂದು ನಿಮ್ಮ ಸಂಸ್ಥೆಯ ಅಡಿಯಲಿದ್ದವರು * ತಮ್ಮ ಬಂಧು ಬಾಂಧವರನ್ನು ಸಿರಿವಂತರನ್ನಾಗಿ ಮಾಡುತ್ತಿದ್ದಾರೆ *, ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ 🙏🏼 ನಿಮ್ಮ ಗುರುವಿನ ಋಣ ತೀರಿಸಲು, ಗುರುವಿಗೊಂದು ಪೀಠವನ್ನು ನಿರ್ಮಿಸಿದಿರಿ , ನಿಮ್ಮವರು ನಿಮಗೆ ಗುರು ದ್ರೋಹವನ್ನು ಮಾಡಿದರು , ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ .🙏🏼 ತಾವು ತಮ್ಮ ವಚನಗಳನ್ನು ಬರೆಯುವುದನ್ನು ನಿಲ್ಲಿಸಿ , ಶರಣರ ವಚನಗಳನ್ನು ಮನೆ ಮನಗಳಲ್ಲಿ ಬಿತ್ತಿದ್ದಿರಿ, ನಿಮ್ಮ ಸಾಹಿತ್ಯದ ಕೊಲೆ ನಿಮ್ಮವರಿಂದಲೆ ಆಗುತ್ತಿದೆ , ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ 🙏🏼 * ಶರಣರನ್ನು ಕೂಡಿಸಲು *, ಶರಣಮೇಳ, ಕಲ್ಯಾಣ ಪರ್ವ, ಗಣ ಮೇಳ, ಶರಣೋತ್ಸವ ಹಾಗು ಲಿಂಗಾಯತ  ರ್ಯಾಲಿಗಳನ್ನು ನಡೆಸಿದಿರಿ, ಇಂದು ಇವೆ ಕಾರ್ಯಕ್ರಮಗಳನ್ನು *ಶರಣರನ್ನು ಒಡೆಯಲು* ಉಪಯೋಗಿಸುತಿದ್ದಾರೆ , ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ 🙏🏼 ಜನರನ್ನು ಶರಣರನ್ನಾಗಿ ಮಾಡಲು, * ಬಸವ ಧರ್ಮ ಸಂಸ್ಕಾರ * ಎಂಬ ಕೃತಿಯನ್...

ಲಿಂಗಾಯತ ಧರ್ಮ ಸಂವಿಧಾನಕ್ಕೆ ಜಗನ್ಮಾತೆ ಗುರು ಅಕ್ಕಮಹಾದೇವಿಯವರ ಕೊಡುಗೆ

ಇಮೇಜ್
ಲಿಂಗಾಯತ ಧರ್ಮ ಸಂವಿಧಾನಕ್ಕೆ ಜಗನ್ಮಾತೆ ಗುರು ಅಕ್ಕಮಹಾದೇವಿಯವರ ಕೊಡುಗೆ. -ಸಚ್ಚಿದಾನಂದ ಪ್ರಭು ಚಟ್ನಳ್ಳಿ ೯೮೮೬೬೯೪೪೫೪ ವಚನ : * ತನುವಿನೊಳಗಿದ್ದು ತನುವ ಗೆದ್ದಳು,* *ಮನದೊಳಗಿದ್ದು ಮನವ ಗೆದ್ದಳು,* *ವಿಷಯದೊಳಗಿದ್ದು ವಿಷಯಂಗಳ ಗೆದ್ದಳು,* *ಅಂಗಸುಖವ ತೊರೆದು ಭವವ ಗೆದ್ದಳು,* * ಕೂಡಲಚೆನ್ನಸಂಗಯ್ಯನ ಹೃದಯಕಮಲವ ಬಗಿದು ಹೊಕ್ಕು ನಿಜಪದವನೈದಿದ ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ ಎಂಬೆನು.* -ಗುರು ಚನ್ನಬಸವಣ್ಣನವರು ಇಂದಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೋಕಿನ ಉಡುತಡಿ ಎಂಬ ಗ್ರಾಮದಲ್ಲಿ ಶರಣ ಓಂಕಾರ ಮತ್ತು ಶರಣೆ ಲಿಂಗಮ್ಮ ದಂಪತಿಗಳ ಉದರದಲ್ಲಿ ದವನದ ಹುಣ್ಣಿಮೆಯಂದು ಉಗಮಗೊಂಡ ದಿವ್ಯ ತರಂಗಿಣಿ ಜಗನ್ಮಾತೆ ಅಕ್ಕಮಹಾದೇವಿಯವರು. ಅವರು ಬಸವಕಲ್ಯಾಣದ ಅನುಭಾವ ಮಂಟಪದ ಶರಣ ಸಮೂಹದೆಡೆಗೆ ಹರಿದು ಗುರು ಬಸವಣ್ಣನವರ ಭಕ್ತಿಯ ಶಕ್ತಿಯಾಗಿ ನಿಂದು ಶ್ರೀಶೈಲದ ಕದಳಿಯ ಬನದಲ್ಲಿ ಚೆನ್ನಮಲ್ಲಿಕಾಜುರ್ನದೇವರ ದೇವನೆಂಬ ಮಹಾಶರಧಿಯಲ್ಲಿ ಸಮಾಗಮಗೊಂಡರು. ಆದರೆ ಅವರು ತಾವು ನೀಡಿದ ವಚನಗಳ ಮೂಲಕ ಎಂದೆಂದಿಗೂ ನಮ್ಮಂಥ ಅಸಂಖ್ಯಾತ ಶರಣರ ಹೃನ್ಮನಗಳಲ್ಲಿ ವಾಸವಾಗಿರುತ್ತಾರೆ.  * ಗುರು  ಅಕ್ಕಮಹಾದೇವಿಯವರು, ತಮ್ಮ ವಚನಗಳಲ್ಲಿ ಹಾಗು ತಮ್ಮ ಜೀವನದ ಶೈಲಿಯಲ್ಲಿ ಅನೇಕ ವಿಶೇಷವಾದ ತತ್ತ್ವಗಳನ್ನು ಕಲಿಸುತ್ತಾರೆ. ಪ್ರಮುಖವಾಗಿ ಇವರ ವಚನಗಳಲ್ಲಿ ಗಮನಿಸಬೇಕಾದ ಮೂರು ಅಂಶಗಳಿವೆ. 1. ಲಿಂಗದೇವನಲ್ಲಿ ಅನನ್ಯ ಶರಣಾಗತಿ. 2. ಗುರು ಬಸವ ಭಕ್ತಿ. 3....

ಯಾವುದು ಅನಧಿಕೃತ?

ಇಮೇಜ್
ಯಾವುದು ಅನಧಿಕೃತ??? ದಿನಾಂಕ 13 April 2022 ಶ್ರೇಷ್ಠ ದಾರ್ಶನಿಕ ಸಾಹಿತಿ ಪೂಜ್ಯ ಮಾತೆಮಹಾದೇವಿಯವರು ಲಿಂಗೈಕ್ಯರಾದ ಮೇಲೆ ಅವರ ಶ್ರೇಷ್ಠ ಸಂಶೋಧನೆಯನ್ನು ಮತ್ತೊಬ್ಬರು ಹಿಂತೆಗೆದುಕೊಳ್ಳುವುದು ಅನಧಿಕೃತ .. ಪೂಜ್ಯ ಮಾತಾಜಿಯವರು ತಾವು ಬರೆದಿರುವ ಸಾಹಿತ್ಯವನ್ನು ಯಾರು ಕೂಡ ಬದಲಾವಣೆ ಮಾಡಬಾರದು ಎಂದು ಆದೇಶಿಸಿ ಹೋದರು ಕೂಡ ಅವರು ಲಿಂಗೈಕ್ಯ ಆದಮೇಲೆ ಬದಲಾವಣೆ ಮಾಡುತ್ತಿರುವುದು ಅನಧಿಕೃತ ... ತಮ್ಮ ತಪ್ಪು ನಿರ್ಧಾರಗಳನ್ನು ಪ್ರಶ್ನೆ ಮಾಡದೆ ಮೌನವಾಗಿ ಇರುವವರನ್ನು ಇರಿಸಿಕೊಂಡು ಪ್ರಶ್ನೆ ಮಾಡುವವರನ್ನು ಬಸವಧರ್ಮ ಪೀಠದಿಂದ ಉಚ್ಚಾಟಿಸುವುದು ಅನಧಿಕೃತ .. ಸರ್ವಾಧಿಕಾರಿಯಂತೆ ವರ್ತಿಸುತ್ತಾ ಬಸವ ಮಂಟಪಗಳಲ್ಲಿ ಲಿಂಗದೇವ  ಬಳಸಬಾರದು ಎಂದು ಸುತ್ತೋಲೆ ಹೊರಡಿಸುವುದು ಅನಧಿಕೃತ .. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾ ತತ್ವನಿಷ್ಠ ಲಿಂಗದೇವನ ಶರಣರನ್ನು ದೂರಮಾಡಿ ಡಾಂಬಿಕ ಭಕ್ತರನ್ನು ಸೇರಿಸಿಕೊಂಡು ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಅನಧಿಕೃತ .. ನಾನು ಹಾಕಿದ ಗೆರೆ ದಾಟುವುದಿಲ್ಲ ಎಂದು ನಿಮ್ಮ ಮೇಲೆ ನಂಬಿಕೆ ಇಟ್ಟು ಪೀಠದ ಮೇಲೆ ಕೂರಿಸಿದ ನಿಮ್ಮ ಗುರುಗಳಾದ ಪೂಜ್ಯ ಲಿಂಗೈಕ್ಯ ಮಾತೆಮಹಾದೇವಿಯವರ ಸಂಕಲ್ಪಗಳಿಗೆ ವಿರುದ್ಧವಾಗಿ ನಡೆಯುತ್ತಿರುವುದು ಅನಧಿಕೃತ .. ಸಿದ್ಧವೀರ ಸಂಗಮದ

ಮೊಟ್ಟೆ ತಿಂದು ಬದುಕುವುದಕ್ಕಿಂತ ಸಾಯುವುದು ಶ್ರೇಷ್ಠ - ಮಹಾತ್ಮ ಗಾಂಧೀಜಿ

ಇಮೇಜ್
  ಮೊಟ್ಟೆ ತಿಂದು ಬದುಕುವುದಕ್ಕಿಂತ ಸಾಯುವುದು ಶ್ರೇಷ್ಠ  - ಮಹಾತ್ಮ ಗಾಂಧೀಜಿ. Sachidanand Chatnalli -9886694454 ಅಂಗದಿಚ್ಛೆಗೆ ಮದ್ಯ ಮಾಂಸವ ತಿಂಬುವರು; ಕಂಗಳಿಚ್ಛೆಗೆ ಪರವಧುವ ನೆರೆವರು; ಲಿಂಗಲಾಂಛನ ಧಾರಿಯಾದಲ್ಲಿ ಫಲವೇನು ಲಿಂಗ ಪಥವ ತಪ್ಪಿ ನಡೆವವರು? ಜಂಗಮ ಮುಖದಿಂದ ನಿಂದೆ ಬಂದಡೆ ಕೊಂಡ ಮಾರಿಂಗೆ ಹೋಹುದು ತಪ್ಪದು ಕೂಡಲಸಂಗಮದೇವಾ!  ಸಸ್ಯಾಹಾರಿ ಪದ್ಧತಿ ಅತ್ಯಂತ ಶ್ರೇಷ್ಠವಾದುದು. ಪಾಶ್ಚಿಮಾತ್ಯ ರಾಷ್ಟ್ರಗಳವರು ಇದನ್ನರಿತು ಈಗೀಗ ಹೆಚ್ಚು ಜನ ಸಸ್ಯಾಹಾರಿಗಳಾಗುತ್ತಿದ್ದಾರೆ. ಭಾರತ ದೇಶವು ಮೂಲಭೂತವಾಗಿ, ಧಾರ್ಮಿಕ ಆಧ್ಯಾತ್ಮಿಕ ಪರಂಪರೆಯುಳ್ಳ ದೇಶ. ಈ ದೇಶದಲ್ಲಿ ಹುಟ್ಟಿದಷ್ಟು ಅಹಿಂಸಾವಾದಿ ಪ್ರವಾದಿಗಳು ಬೇರೆ ಯಾವ ದೇಶದಲ್ಲೂ ಹುಟ್ಟಿಲ್ಲ. ಮಹಾವೀರ, ಬುದ್ಧ, ಗುರು ಬಸವಣ್ಣನವರು ಅಹಿಂಸೆಯನ್ನು ಪ್ರತಿಪಾದಿಸಿದವರು. `ಅಂಹಿಸೊ ಪರಮೋ ಧರ್ಮ' `ದಯವೇ ಧರ್ಮದ ಮೂಲ' `ಸಕಲ ಜೀವಾತ್ಮರಿಗೆ ಲೇಸ ಬಯಸುವವನೇ ಕುಲಜನು' ಎಂದು ದಿನನಿತ್ಯವೂ ಕೇಳುವವರು ನಾವು. ಇಂಥ ಸಂದರ್ಭದಲ್ಲಿ ದಿನನಿತ್ಯವೂ ಸಸ್ಯಾಹಾರಿಗಳ ಸಂಖ್ಯೆ ಹೆಚ್ಚಾಗಬೇಕಾಗಿತ್ತು ಆದರೆ ವಿಪರ್ಯಾಸವೇನೆಂದರೆ ಸಸ್ಯಾಹಾರಿಗಳ ಸಂಖ್ಯೆ ದಿನ ದಿನವೂ ಕಡಿಮೆಯಾಗುತ್ತಿದೆ. ಅದರಲ್ಲೂ ಸರಕಾರವೇ ಮಕ್ಕಳಿಗೆ ಕೋಳಿ ಮೊಟ್ಟೆ ಕೊಡುವ ಯೋಜನೆ  ರೂಪಿಸಿ ಮಾಂಸಹಾರಕ್ಕೆ ಪ್ರಚೋದಿಸುತ್ತಿರುವುದು ಅತ್ಯಂತ ಕಳವಳಕಾರಿಯಾದ ವಿಷಯವಾಗಿದೆ. ಫಾರಂ ಕೋಳಿಗಳಿಗೆ ಚುಚ್ಚುಮದ್ದು ನೀಡಿ,...

Part 5 : ಲಿಂಗದೇವಾ ಮತ್ತು ಕೂಡಲ ಸಂಗಮದೇವಾ ಒಂದು ಅಧ್ಯಯನ

ಇಮೇಜ್
ಲಿಂಗದೇವಾ ಮತ್ತು ಕೂಡಲ ಸಂಗಮದೇವಾ ಒಂದು ಅಧ್ಯಯನ; ಭಾಗ-5 - ಶರಣ ಸಚ್ಚಿದಾನಂದ ಪ್ರಭು ಚಟ್ನಳ್ಳಿ ಗುರು ಬಸವಣ್ಣನವರು ಭಕ್ತಿಯ ಪಥದಲ್ಲಿ ಮುನ್ನಡೆಯುತ್ತ, ಬಾಲ್ಯದಲ್ಲಿಯೇ ಶಿವಭಕ್ತಿಯ ಪರಾಕಾಷ್ಠೆಯನ್ನು ತಲುಪುತ್ತಾರೆ. ವೈಚಾರಿಕವಾಗಿ ಬೆಳೆಯುತ್ತಾ ಹೋದಂತೆ ಅವರು ಶಿವನೇ ಬೇರೆ ಸಚರಾಚರ ಬ್ರಹ್ಮಾಂಡಕ್ಕೆಲ್ಲ ಒಡೆಯನಾಗಿ, ಸರ್ವವ್ಯಾಪಿ, ಸರ್ವಶಕ್ತ, ಸರ್ವಜ್ಞನಾದ ದೇವರೇ ಬೇರೆ ಎಂದು ಅರಿಯುತ್ತಾರೆ. ಆಗಲೇ ಅವರ ಹೃದಯದಲ್ಲಿ ಇಷ್ಟಲಿಂಗದ ಕಲ್ಪನೆ ಮೂಡುತ್ತದೆ. ನಿರಾಕಾರ ನಿರವಯನಾದ ಪರಮಾತ್ಮನನ್ನು ಇಷ್ಟಲಿಂಗರೂಪದಲ್ಲಿ ಸಾಕಾರ ಗೊಳಿಸಿ ಅಂತಹ ಪರಮಾತ್ಮನನ್ನು ‘ಲಿಂಗದೇವ’ ಎಂದು ಕರೆದರು.  *“ ಹೊನ್ನ ಹಾವುಗೆಯ ಮೆಟ್ಟಿದವನ! ಮಿಡಿಮುಟ್ಟಿದ ಕೆಂಜೆಡೆಯವನ!"      ಎಂದು ಶಿವನ ನಿಲವು ಮತ್ತು ಸ್ವರೂಪ ವರ್ಣನೆ ಮಾಡುವಂತಹ ಗುರು ಬಸವಣ್ಣನವರು ಬಾಲ್ಯದಲ್ಲಿ ಬರೆದ ವಚನಗಳನ್ನು ಓದಿ "ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ" “ಅಮೂಲ್ಯನು ಅಪ್ರಮಾಣನು ಅಗೋಚರ ಲಿಂಗವು” ಎನ್ನುವಂಥ ಧರ್ಮಗುರುವಾಗಿ ಗುರು ಬಸವಣ್ಣನವರು ಬರೆದ ದೇವರ ಸ್ವರೂಪದ ವಚನಗಳನ್ನು ಓದಿದಾಗ ಈ ಎರಡೂ ವಚನಗಳಲ್ಲಿರುವ ವಚನಾಂಕಿತದ ಬಗ್ಗೆ ಮನಸಸ್ಸಿನಲ್ಲಿ ಗೊಂದಲ ಏಳಲು ಆರಂಭಿಸುತ್ತದೆ. ಏಕೆಂದರೆ ಹೊನ್ನ ಹಾವುಗೆ ಮೆಟ್ಟಿದವನು, ಕರದಲ್ಲಿ ಕಪಾಲ ಹಿಡಿದವನು, ಚೋಳಂಗೆ ಹೊನ್ನ ಮಳೆ ಕರೆದವನು, ದಕ್ಷನ ಯಜ್ಞವ ಕೆಡಿಸಿದವರು ಜಗದಗಲ ಮುಗಿಲಗಲ ಮಿಗೆಯಗಲವಾಗಿರುವುದಕ್ಕೆ ಸಾಧ್ಯವೇ ಇ...

ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ - ಮಡಿವಾಳ ಮಾಚಿದೇವರ ವಚನ ನಿರ್ವಚನ

ಇಮೇಜ್
  ಮಡಿವಾಳ ಮಾಚಿದೇವರ ವಚನ ನಿರ್ವಚನ ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ. ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು. ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ. ಆಯತ ಬಸವಣ್ಣನಿಂದ, ಸ್ವಾಯತ ಬಸವಣ್ಣನಿಂದ. ಸನ್ನಹಿತವು ಬಸವಣ್ಣನಿಂದ, ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ. ಜಂಗಮ ಬಸವಣ್ಣನಿಂದ. ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ. ಅತ್ತ ಬಲ್ಲಡೆ ನೀವು ಕೇಳಿರೆ, ಇತ್ತ ಬಲ್ಲಡೆ ನೀವು ಕೇಳಿರೆ. ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ, ಶೂನ್ಯ ಕಾಣಾ, ಕಲಿದೇವರದೇವಾ. - ಮಡಿವಾಳ ಮಾಚಿದೇವ ಸಮಗ್ರ ವಚನ ಸಂಪುಟ: 8   ವಚನದ ಸಂಖ್ಯೆ: 526 *ಭಾವಾರ್ಥ:* ಲಿಂಗಾಯತ ಧರ್ಮದ ಆಯತ, ಸ್ವಾಯತ, ಸನ್ನಿಹಿತ ಮತ್ತು ಪಂಚ ವಿಧಗಳಾದ ಗುರು-ಲಿಂಗ-ಜಂಗಮ-ಪ್ರಸಾದ-ಪಾದೋದಕಗಳು ಬಸವಣ್ಣನವರಿಂದಲೇ ಕೊಡಲ್ಪಟ್ಟವೆಂಬುದನ್ನು ಮಡಿವಾಳ ಮಾಚಿದೇವರು ಸ್ಪಷ್ಟಪಡಿಸಿದ್ದಾರೆ. ಬಸವ ಪೂರ್ವದಲ್ಲಿ ಗುರು-ಲಿಂಗ-ಜಂಗಮ-ಪ್ರಸಾದ-ಪಾದೋದಕಗಳು ಅರಿವಿಲ್ಲದ ಕುರುಹುಗಳಾಗಿ ಕೇವಲ ಸ್ಥಾವರವಾಗಿದ್ದವು. ಗುರು ಬಸವಣ್ಣನವರು, ತಮ್ಮ ಅನುಭಾವದ ಬೆಳಗಿನಿಂದ ಗುರು-ಲಿಂಗ-ಜಂಗಮಕ್ಕೆ ಹೊಸ ಭಾಷ್ಯ ಬರೆದರು. ಕೇವಲ ಕುರುಹಾಗಿದ್ದ ಶಬ್ದಗಳಿಗೆ ಅರಿವಿನ ಸಿಂಚನವನ್ನು ಮಾಡಿದರು. ಭಕ್ತನ ಕಾಯದೊಳಗೆ ಗುರು-ಲಿಂಗ-ಜಂಗಮದ ಆಯತವನ್ನು ತೋರಿ, ಲಿಂಗವನ್ನು ಅರಿವಿನ ಕುರುಹಾಗಿ ಮಾಡಿ ನೋಟದ ಭಕ್ತಿಯನ್ನು ಕೊಟ್ಟರು.  ಈ ಸತ್ಯವನ್ನು ಲಿಂಗಾಯತ ಧರ್ಮದ ಅನುಯಾಯಿಗ...

ಪ್ರಥಮ ವಚನಕಾರರು ಗುರು ಬಸವಣ್ಣನವರೇ ಹೊರತು ದೇವರದಾಸಿಮಯ್ಯ ಅಥವಾ ಜೇಡರ ದಾಸಯ್ಯನವರಲ್ಲ

ಇಮೇಜ್
ಪ್ರಥಮ ವಚನಕಾರರು ಗುರು ಬಸವಣ್ಣನವರೇ ಹೊರತು ದೇವರದಾಸಿಮಯ್ಯ ಅಥವಾ ಜೇಡರ ದಾಸಯ್ಯನವರಲ್ಲ . -ಸಚ್ಚಿದಾನಂದ ಪ್ರಭು ಚಟ್ನಳ್ಳಿ     9886694454 ದೇವರ ದಾಸಿಮಯ್ಯ 11ನೇ ಶತಮಾನದಲ್ಲಿ ನೇಯ್ಗೆ ಕಾಯಕ ಮಾಡುತ್ತಿದ್ದ ಒಬ್ಬ ಪರಮ ಶಿವಭಕ್ತ ಇವರು ವಚನಗಳನ್ನು ಬರೆದಿಲ್ಲ. ಆದರೆ ಜೇಡರ ದಾಸಯ್ಯನವರು ಗುರು ಬಸವಣ್ಣನವರ ಸಮಕಾಲೀನರು. ದೇವರದಾಸಿಮಯ್ಯ ನವರ ಪತ್ನಿಯ ಹೆಸರು ದುಗ್ಗಳೆ ಮತ್ತು ಜೇಡರ ದಾಸಯ್ಯನವರ ಪತ್ನಿಯ ಹೆಸರೂ ದುಗ್ಗಳೆಯೇ ಆಗಿತ್ತು. ಇದರಿಂದಾಗಿ ಅನೇಕರಿಗೆ ಈ ವಿಚಾರದಲ್ಲಿ ದ್ವಂದ್ವವುಂಟಾಗಿದೆ.  ಜೇಡರ ದಾಸಯ್ಯ ಮತ್ತು ದುಗ್ಗಳೆಯವರು ಗುರು ಬಸವಣ್ಣನವರಿಂದ ಇಷ್ಟಲಿಂಗದೀಕ್ಷೆಯನ್ನು ಪಡೆದುಕೊಂಡಿದ್ದಾರೆ. ಗುರು ಬಸವಣ್ಣನರು ಹಾಗು ಅನುಭವ ಮಂಟಪದ ಶರಣರಿಂದ ಸ್ಫೂರ್ತಿಗೊಂಡು ದಂಪತಿಗಳಿಬ್ಬರೂ ವಚನಗಳನ್ನು ರಚಿಸಿದ್ದಾರೆ. ದುಗ್ಗಳೆಯವರ ಎರಡು ವಚನಗಳು ಹೀಗಿವೆ: ವಚನ: ಬಸವಣ್ಣನಿಂದ ಗುರುಪ್ರಸಾದಿಯಾದೆನು. ಚೆನ್ನಬಸವಣ್ಣನಿಂದ ಲಿಂಗಪ್ರಸಾದಿಯಾದೆನು. ಪ್ರಭುದೇವರಿಂದ ಜಂಗಮಪ್ರಸಾದಿಯಾದೆನು. ಮರುಳಶಂಕರದೇವರಿಂದ ಮಹಾಪ್ರಸಾದಿಯಾದೆನು. ಇಂತೀ ಚತುರ್ವಿಧವು ಏಕೀಭವಿಸಿ ಪ್ರಾಣಲಿಂಗವಾದ *ಮಹಾಮಹಿಮಂಗೆ ಶರಣೆಂದು ಬದುಕಿದೆನಯ್ಯಾ ದಾಸಯ್ಯಪ್ರಿಯ ರಾಮನಾಥ. ವಚನ: ಭಕ್ತನಾದಡೆ ಬಸವಣ್ಣನಂತಾಗಬೇಕು. ಜಂಗಮವಾದಡೆ ಪ್ರಭುದೇವರಂತಾಗಬೇಕು. ಯೋಗಿಯಾದಡೆ ಸಿದ್ಧರಾಮಯ್ಯನಂತಾಗಬೇಕು. ಭೋಗಿಯಾದಡೆ ಚೆನ್ನಬಸವಣ್ಣನಂತಾಗಬೇಕು. ಐಕ್ಯನಾದಡೆ ಅಜಗಣ್ಣನಂತ...