ಪೋಸ್ಟ್‌ಗಳು

ಜಾಮದಾರ್ ಅವರ ಹೇಳಿಕೆಗೆ ರಾಷ್ಟ್ರೀಯ ಬಸವದಳದ ಉತ್ತರ

ಇಮೇಜ್
  ಸಮಸ್ಯೆ :: S M Jamadar  :    ನೀಲಾಂಬಿಕೆ ಹಾಗು ಗಂಗಾಂಬಿಕೆಯವರ ಬೇರೆ ಬೇರೆ ರೀತಿಯ ವಚನಗಳಿವೆ. ನೀಲಾಂಬಿಕೆಗೆ ಸೇರಿದ ಸಮಾಧಿ ತಂಗಡಗಿಯಲ್ಲಿದೆ ಮತ್ತು ಗಂಗಾಂಬಿಕೆಗೆ ಸೇರಿದ ಸಮಾಧಿ ಹುಬ್ಬಳ್ಳಿಯಲ್ಲಿದೆ.  ನೀಲಾಂಬಿಕೆ, ಗಂಗಾಂಬಿಕೆ ಮಕ್ಕಳ ಹೆಸರುಗಳು ಬೇರೆ ಬೇರೆ ಇವೆ. ಈ ಅಂಶಗಳ ಆಧಾರದ ಮೇಲೆ, ಎರಡೂ ಕೂಡ ಒಂದೇ ವ್ಯಕ್ತಿಯ ಹೆಸರುಗಳು ಎಂದು ನಾವು ಹೇಗೆ ಹೇಳಬಹುದು ? ಸಮಾಧಾನ :: ಶರಣು ಶರಣಾರ್ಥಿ ಸರ್ , ಮೇಲಿನ ಸಂದೇಶಕ್ಕೆ ನೀವು ನೀಡಿದ ತ್ವರಿತ ಮತ್ತು ತಾಳ್ಮೆಯ ಪ್ರತಿಕ್ರಿಯೆ ಪ್ರಶಂಸನಾರ್ಹ. 12 ನೇ ಶತಮಾನದ ಶರಣರ ವಚನಗಳಿಂದ,  *ಪೂಜ್ಯ ಶ್ರೀ ಮಹಾಜಗದ್ಗುರು ಮಾತೆ ಮಹಾದೇವಿ ತಾಯಿಯವರ* ಸಾಹಿತ್ಯ ಮತ್ತು ಪ್ರವಚನ, ಮುಖ್ಯವಾಗಿ *ಪೂಜ್ಯ ಶ್ರೀ ಮಹಾಜಗದ್ಗುರು ಮಾತೆ ಗಂಗಾದೇವಿಯವರ* 40 ವರ್ಷದ ನಿರಂತರ ಪ್ರವಚನದ ಕೆಲವು ನಿದರ್ಶನಗಳೊಂದಿಗೆ ನಾನು ಈ ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ,  ೧) * ನಿಮ್ಮ ಹೇಳಿಕೆಯ ಪ್ರಕಾರ ಎರಡು ವಿಭಿನ್ನ ವಚನಾಂಕಿತಗಳು ಹೊಂದಿರುವ ಎರಡು ವಚನಗಳ ಸೆಟ್‌ಗಳಿವೆ* * ಬಸವಯೋಗಿ ಸಿದ್ದರಾಮೇಶ್ವರರು * * ಕಪಿಲ ಸಿದ್ದ ಮಲ್ಲಿಕಾರ್ಜುನ* ಮತ್ತು *ಯೋಗಿನಾಥ*   ಮತ್ತು  *ಜಗನ್ಮಾತಾ ಅಕ್ಕಮಹಾದೇವಿ *  * ಚನ್ನಮಲ್ಲಿಕಾರ್ಜುನ  ಮತ್ತು  ಚನ್ನಾಮಲ್ಲಿಕಾರ್ಜುನದೇವರದೇವ * ಎರಡು ವಚನಾಂಕಿತದಲ್ಲಿ ವಚನಗಳನ್ನು ಬರೆದಿರುವ ಅನೇಕ ಉದಾಹರಣೆಗಳು ನಮ್ಮ...

ಗುರು ಶಿಷ್ಯ ಪರಂಪರೆಯಲ್ಲಿ ಗುರು ಕಳೆಯ ಮಹತ್ವ

ಇಮೇಜ್
ವಚನ:    ಗುರುಕಳೆಯಿಲ್ಲದೆ ವಾದಿಪೆನೆ ಸಿಂಹ  ಶರಣನೊಂದಿಗೆ?  ಗುರುಕಳೆ ಬಸವನೆಂಬ ಗಜದಲ್ಲಿ ಸೇರಿದ ಕಾರಣ  ಲಿಂಗದೇವನ ಶರಣನೆಂಬ ಸಿಂಹದೊಂದಿಗೆ ವಾದದ ಭರವು ಕೇಳಾ. ಭಾರತ ದೇಶದ ಪ್ರಾಗೈತಿಹಾಸಿಕ ಕಾಲದಿಂದಲೂ ಇಲ್ಲಿ ಗುರು ಶಿಷ್ಯ ಪರಂಪರೆ ಅತ್ಯಂತ ಪವಿತ್ರ ಮತ್ತು ಪ್ರಬಲವಾಗಿದೆ. ಈ ಗುರು ಶಿಷ್ಯ ಪರಂಪರೆ ಪ್ರಬಲವಾಗಿರುವುದರಿಂದಲೇ, ಭಕ್ತಿಯೋಗ, ಜ್ಞಾನ ಯೋಗ, ಸಂಗೀತ, ನಾಟ್ಯ, ಆಯುರ್ವೇದ, ಯೋಗ ಮುಂತಾದ ಅನೇಕ ಕಲೆಗಳು ವಿದ್ಯೆಗಳು ಶತಮಾನಗಳಿಂದ ಗುರುವಿನಿಂದ ಶಿಷ್ಯನಿಗೆ ಧಾರೆಯೆರೆಯುತ್ತ  ಬಂದಿರುವುದರಿಂದ ಈ ದೇಶದಲ್ಲಿ ಜೀವಂತವಾಗಿವೆ.  ಸ್ವಯಂ ಸಾಧಕರಾದ ಆದಿಗುರುಗುಳು ತಾವು ಕಲಿತ ಮತ್ತು ಸಾಧಿಸಿದ ವಿದ್ಯೆಯನ್ನು ತಮ್ಮ ಅಹಂ ತೃಪ್ತಿಗಾಗಿ ಬಳಸದೇ ಲೋಕ ಕಲ್ಯಾಣಕ್ಕಾಗಿ ಬಳಸುತ್ತ ಬಂದಿದ್ದಾರೆ.  ಒಬ್ಬ ಗುರು ತನ್ನ ನಂತರದ ದಿನಗಳಲ್ಲಿ ತನ್ನ ವಿಚಾರ, ತನ್ನ ಧರ್ಮ, ತನ್ನ ವಿದ್ಯೆ ಮತ್ತು ತಾನು ನಡೆದು ಬಂದ ಪರಂಪರೆಯನ್ನು ಮುಂದುರೆಸಿಕೊಂಡು ಹೋಗುವಂತಹ ಒಬ್ಬ ವ್ಯಕ್ತಿಯನ್ನು ತನ್ನ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿಕೊಂಡು, ತನ್ನೆಲ್ಲ ಲೌಕಿಕ ಮತ್ತು ಪಾರಲೌಕಿಕ ಸಂಪತ್ತನ್ನು ಆ ಶಿಷ್ಯನಿಗೆ ಧಾರೆಯೆರೆಯುತ್ತಾರೆ. ತನ್ನ ಗುರು ನಡೆದ ಪಥದಲ್ಲಿ ಆ ಶಿಷ್ಯ ನಡೆದು ಆ ಗುರುವಿನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತ ಆ ಪರಂಪರೆಯ ಅನುಯಾಯಿಗಳನ್ನು ವೃದ್ಧಿಗೊಳಿಸುತ್ತ ಹೋಗುತ್ತಾನೆ. ಇದಕ್ಕಾಗಿ ಆ ಶಿಷ್ಯ ಎಂತ...

ಗುರು ಬಸವಣ್ಣನವರು ಮದುವೆಯಾದದ್ದು ಒಬ್ಬರನ್ನೆ

ಇಮೇಜ್
  Guru Basava was only ever married once, and his wife's name is Nilambike ಕ್ರಾಂತಿಕಾರಿ ವಿಚಾರಶೀಲರೂ, ಸ್ತ್ರೀ ವಿಮೋಚನಾವಾದಿಯೂ, ಸ್ತ್ರೀ ಸಮತಾವಾದಿಯೂ ಆದ ಬಸವಣ್ಣನವರು ಇಬ್ಬರು ಹೆಂಡತಿಯರನ್ನು ಹೊಂದಿದ್ದರೆ ? ಮೊದಲ ಹೆಂಡತಿಗೆ ಮಕ್ಕಳಾಗಲಿಲ್ಲವೆಂದೆ ? ಅಥವಾ ನೀಲಾಂಬಿಕೆ ತನ್ನ ಚೆಲುವು-ನಡೆನುಡಿಗಳಿಂದ ಮನಸೆಳೆದಳೆ ? ಅಥವಾ ಬಿಜ್ಜಳ ಮಹಾರಾಜನು ತನ್ನ ವಚನ ರಕ್ಷಣೆಗಾಗಿ ಬಸವಣ್ಣನವರನ್ನು ತಮ್ಮ ತತ್ಯದಿಂದ ದೂರಸರಿಯುವಂತೆ ಮಾಡಿದನೆ ? ಹೀಗೆಲ್ಲ ಸಂಶಯಗಳು ಉಳಿದವರಂತೆ ನಮಗೂ ಕಾಡುತ್ತಿದ್ದವು. ಕ್ರಾಂತಿಯೋಗಿ ಬಸವಣ್ಣ ಚಲನ ಚಿತ್ರದಲ್ಲಿ ಹೀಗೇ ಚಿತ್ರಿಸಿರುವೆವಲ್ಲದೆ ತೀರಾ ಇತ್ತೀಚಿನವರೆಗೆ ಹಾಗೆಯೇ ತಿಳಿದಿದ್ದೆವು ಮತ್ತು ಇನ್ನಿತರ ಪುಸ್ತಕಗಳಲ್ಲೂ ಹಾಗೆಯೇ ಬರೆದಿದ್ದೆವು. ದಿವಂಗತ ಹೆಚ್.ದೇವೀರಪ್ಪನವರ ಒಂದು ಲೇಖನ “ಬಸವರಾಜನರಸಿಯರು'' (ಧರ್ಮದುಂದುಭಿ-ಕಲ್ಯಾಣ ಕಿರಣ ವಿಶೇಷಾಂಕ ೧೯೮೭ ಸೆಪ್ಟಂಬರ- ಅಕ್ಟೋಬರ್) ಓದಿದಾಗ ನಮ್ಮ ಚಿಂತನೆಗೆ ಹೊಸ ದಿಕ್ಕು ದೊರಕಿತು. ಶ್ರೀ ದೇವೀರಪ್ಪನವರ ಹೆಸರನ್ನು ಈ ವಿಷಯವಾಗಿ ಖಂಡಿತವಾಗಿಯೂ ಹೇಳುವೆವು. ಕೆಲವು ದೊಡ್ಡ ದೊಡ್ಡ ಸಾಹಿತಿಗಳು ನಮ್ಮ ಅನೇಕ ಹೊಸ ಸಂಶೋಧನಾತ್ಮಕ ವಿಚಾರಗಳನ್ನು ಫಕ್ಕನೆ ಎತ್ತಿಕೊಂಡು ತಮ್ಮ ಪುಸ್ತಕದಲ್ಲಿ ಬರೆದು, ಆ ಬಗ್ಗೆ ನಮ್ಮ ಗ್ರಂಥಗಳನ್ನು ಮಾತ್ರ ಉಲ್ಲೇಖಿಸದೆ, ಇನ್ನಿತರರ ಬೇರೆ ಬೇರೆ ಗ್ರಂಥಗಳನ್ನು ಉಲ್ಲೇಖಿಸುವರು. ಈ ಅಪ್ರಾಮಾಣಿಕತನವನ್ನು ಸಾಕಷ್ಟು ...

ಮಾರ್ಚ್ 13 : ಮಾತೆಮಹಾದೇವಿಯವರ ಜಯಂತಿ

ಇಮೇಜ್
  ಮಾರ್ಚ್ 13 :  ಲಿಂಗಾಯತ ಧರ್ಮದ ಪುನರುತ್ಥಾರಕರು, ಮಹಾಜಗದ್ಗುರು, ಬಸವಾತ್ಮಜೆ ಪರಮಪೂಜ್ಯ ಮಾತೆಮಹಾದೇವಿಯವರ ಜಯಂತಿ. ನಾರಿ ಒಬ್ಬಳು ಬಂದು ಭಾರಿ ಅಬ್ಬರ ಹೊತ್ತು ಆರೂಢ ಭಿಕ್ಷವ ಬೆಡ್ಯಾಳು ಸುವ್ವಿ! ಮತ್ತಿನ್ನು ವೀರ ಬಸವಣ್ಣ ಬರುವಾಗ ಸುವ್ವಿ

Video : ವೀರಶೈವ V/s ಲಿಂಗಾಯತ

ಇಮೇಜ್
ಕರ್ನಾಟಕದಲ್ಲಿ ಯಾರು ವೀರಶೈವ ರಿಲ್ಲಾ ಅವರೆಲ್ಲರೂ ಲಿಂಗಾಯತರೆ. ವೀರಶೈವ ಶೈವದ ಒಂದು ಶಾಖೆ. ವೀರಶೈವ ಲಿಂಗಾಯತ, ಲಿಂಗಾಯತದ ಧರ್ಮದ ಒಂದು ಶಾಖೆ ವೀರಶೈವ ಲಿಂಗಾಯತ ಒಂದು ಧರ್ಮವಲ್ಲಾ ಲಿಂಗಾಯತವು ಒಂದು ಸ್ವತಂತ್ರ ಧರ್ಮ ವೀರಶೈವ ಕ್ಕೆ ಯಾರು ಧರ್ಮಗುರುವಿಲ್ಲಾ ಲಿಂಗಾಯತದ ಧರ್ಮ ಗುರು ಬಸವಣ್ಣನವರು Video  

ಪೂಜ್ಯ ಶ್ರೀ ಮಾತೆ ಮಹಾದೇವಿಯವರ ಬದುಕು ಗಿಳಿಯೋದಿನಂತಿರಲಿಲ್ಲ

ಇಮೇಜ್
ಗುರು ಬಸವಣ್ಣನವರ ವಚನ:  ಗಿಳಿಯೋದಿ ಫಲವೇನು ಬೆಕ್ಕು ಬಹುದ ಹೇಳಲರಿಯದು. ಜಗವೆಲ್ಲ ಕಾಂಬ ಕಣ್ಣು, ತನ್ನ ಕೊಂಬ ಕೊಲ್ಲೆಯ ಕಾಣಲರಿಯದು, ಇದಿರ ಗುಣವ ಬಲ್ಲೆವೆಂಬರು ತಮ್ಮ ಗುಣವ ತಾವರಿಯರು ಲಿಂಗದೇವಾ.   ಗಿಳಿ ಏನು ಹೇಳಿಕೊಟ್ಟರೂ ಅದನ್ನು ಕಲಿಯುತ್ತದೆ. ಅದನ್ನೇ ಪುನರಾವರ್ತನೆ ಮಾಡುತ್ತಿರುತ್ತದೆ. ಗಿಳಿಶಾಸ್ತ್ರದವರು ಗಿಳಿಗಳಿಗೆ ಕೆಲವು ಸಂಸ್ಕೃತ ಶ್ಲೋಕಗಳನ್ನು, ಪ್ರವಚನಗಳನ್ನು ಹೇಳಿಕೊಟ್ಟಿರುತ್ತಾರೆ. ಅದು ಅವರ ಸಂಜ್ಞೆಯನುಕರಿಸಿ ತಾನು ಬಾಯಿಪಾಠ ಮಾಡಿದ ಶ್ಲೋಕಗಳನ್ನು ಶಾಸ್ತç ಕೇಳುವವರ ಮುಂದೆ ಹೇಳುತ್ತಿರುತ್ತದೆ. ಆದರೆ ಅದರ ಅರ್ಥ ಗಿಳಿಗೆ ಗೊತ್ತಿರುವುದಿಲ್ಲ.  ಬೇರೆಯವ ಭವಿಷ್ಯ ಹೇಳುವ ಗಿಳಿ ತನ್ನ ಭವಿಷ್ಯವನ್ನೇ ತಾನರಿಯುವುದಿಲ್ಲ. ಯಾವ ದಿಕ್ಕಿನಿಂದ ಬೆಕ್ಕು ಬಂದು ಅದನ್ನು ತಿಂದುಹಾಕುತ್ತದೆಯೋ ಎನ್ನುವ ಜ್ಞಾನ ಆ ಗಿಳಿಗೆ ಇರುವುದಿಲ್ಲ. ಕೇಡು ಯಾವ ವೇಷದಲ್ಲಿ, ಯಾವ ರೂಪದಲ್ಲಿ ಬಂದು ಅದರ ಅವನತಿಗೊಳಿಸುವುದೋ ಎನ್ನುವ ಜ್ಞಾನ, ಪ್ರವಚನ ಬಾಯಿಪಾಠ ಮಾಡಿದ ಗಿಳಿಗೆ ಇರುವುದಿಲ್ಲ.  ಅದು ಸದಾ ಜಾಗೃತವಾಗಿರುವುದಿಲ್ಲ.  ಇಡೀ ಜಗತ್ತಿನ ಆಗು ಹೋಗುಗಳ ಬಗ್ಗೆ ಬಾಯಿ ಪಾಠ ಮಾಡಿದರೂ ತನ್ನನ್ನು ಕೊಲ್ಲುವ ಸಾವು (ಕೊಲ್ಲೆ) ಯಾವ ಕಡೆಯಿಂದ ಬರುತ್ತದೆ, ತನ್ನಗೆ ಹಾನಿ ಮಾಡುವಂಥವ ಹಿತ ಶತ್ರುಗಳು  ಯಾವ ರೂಪದಲ್ಲಿ ಬರುತ್ತಾರೆ ಎನ್ನುವ ಜ್ಞಾನ ಅದಕ್ಕಿರುವುದಿಲ್ಲ. ಬೇರೆಯವರ ಗುಣಗಳ ಬಗ್ಗೆಯೇ ಹೇಳುವ ಗಿಳಿ ತನ್ನ ಗುಣದ ಬಗ...