ಪೋಸ್ಟ್‌ಗಳು

ಗುರು ಬಸವಣ್ಣನವರ ಬೋಧನೆಗಳ ಕುರಿತು

ಇಮೇಜ್
12ನೇ ಶತಮಾನದ ಸಮಾಜ ಸುಧಾರಕ ಬಸವೇಶ್ವರರ ಇಂದಿನ ಪ್ರಸ್ತುತತೆಯನ್ನು ಅನುಮೋದಿಸುವ ಸಲುವಾಗಿ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE), ತಾಂತ್ರಿಕ ವಿಶ್ವವಿದ್ಯಾಲಯಗಳು, ಡೀಮ್ಡ್ ವಿಶ್ವವಿದ್ಯಾಲಯಗಳು ಮತ್ತು AICTE-ಅನುಮೋದಿತ ಸಂಸ್ಥೆಗಳ ಉಪಕುಲಪತಿಗಳಿಗೆ ಅವರ ತತ್ವಶಾಸ್ತ್ರ, ಆಡಳಿತ ಮಾದರಿಗಳು ಮತ್ತು ಕ್ರಾಂತಿಕಾರಿ ಚಿಂತಕರ ಸಾಮಾಜಿಕ ಸುಧಾರಣಾ ಕಾರ್ಯಸೂಚಿಯನ್ನು ಸಕ್ರಿಯವಾಗಿ ಪ್ರಚಾರ ಮಾಡಲು ಮತ್ತು ಸಂಶೋಧಿಸಲು ನಿರ್ದೇಶನ ನೀಡಿದೆ. ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಉನ್ನತ ಶಿಕ್ಷಣ ಇಲಾಖೆಯಿಂದ ಬಂದಿರುವ ಸಂವಹನದಲ್ಲಿ, AI-CTE ಶೈಕ್ಷಣಿಕ ಜಗತ್ತು ಆಧುನಿಕ ಭಾರತಕ್ಕಾಗಿ ಗುರು ಬಸವೇಶ್ವರರ ಬೋಧನೆಗಳನ್ನು ಎತ್ತಿ ತೋರಿಸಬೇಕೆಂದು ಒತ್ತಾಯಿಸಿದೆ. ಭಾರತವು ಸಮಗ್ರ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಕೇಂದ್ರೀಕೃತ ಆಡಳಿತದ ಹೊಸ ಮಾದರಿಗಳನ್ನು ಹುಡುಕುತ್ತಿರುವ ಸಮಯದಲ್ಲಿ, ನವ ಸಮಾಜ ನಿರ್ಮಾಪಕ ಗುರು ಬಸವೇಶ್ವರರ ಆಮೂಲಾಗ್ರ ವಿಚಾರಗಳನ್ನು ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ಪುನರುಜ್ಜೀವನಗೊಳಿಸುತ್ತಿವೆ. ಬಸವೇಶ್ವರರ ತತ್ವಶಾಸ್ತ್ರದ ಕುರಿತು ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ಮತ್ತು ಸಂಶೋಧನಾ ಯೋಜನೆಗಳು, ಅವರ ಅನುಭವ ಮಂಟಪ' ಭಾಗವಹಿಸುವ ಸ್ಥಳೀಯ ಆಡಳಿತದ ಅನುಭವ ಪರಿಶೋಧನೆ, ಸಾಮಾಜಿಕ ಸಮಾನತೆ, ಲಿಂಗ ಸಮಾನತೆ ಮತ್ತು ಜಾತಿ ಆಧಾರಿತ ತಾರತಮ್ಯ ಮತ್ತು ದೌರ್ಜನ್ಯಗಳು ನಿರ್ಮೂಲನೆಗಾಗಿ ಅವರ ಹೋರಾಟದ ಅಧ್ಯಯನಗಳು ಮತ್...

ಗುರು ಬಸವಣ್ಣನವರ ಜಿವನ ಆಧಾರಿತ ಚಿತ್ರಗಳ ಆರ್ಟ ಗ್ಯಾಲರಿ ಲೋಕಾರ್ಪಣೆ : ಜುಲೈ 6, 2025 ರಂದು

ಇಮೇಜ್
  ಬಸವ ಗುರುವಿನ ತತ್ವ ಲೋಕದಿ ಹಬ್ಬಲಿ, ಮನುಜ ಕಲ್ಪಿತ ಜಾತಿ ಹೆರೆ ತೊಲಗಿ ಹೊಗಲಿ. - ಮಾತಾಜಿ ಆರ್ಟ ಗ್ಯಾಲರಿ ವಿಳಾಸ : ಸಿ.ಬಿ ಸೊಮಶಟ್ಟಿ ಚಿತ್ರಾಲಯ, ವಾಸು ಆಸ್ಪತ್ರೆ ಹತ್ತರ, ಬಸವ ನಗರ, ಬೀದರ್. : https://maps.app.goo.gl/4Zoa11Ghj5d26h146 Please Comment Your Thought on this article ದಯವಿಟ್ಟು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ ರೇಣುಕಾಚಾರ್ಯರ ಜಯಂತಿ ಮತ್ತು ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಸೇರಿಸಿ ಮಾಡುತ್ತಿರುವುದು ಏಕೆ ?

ಇಮೇಜ್
ಈ ಆಮಂತ್ರಣ ಪತ್ರಿಕೆಯಲ್ಲಿ ರೇಣುಕಾಚಾರ್ಯರ ಹೆಸರಿನ ಜೊತೆ "ಜಗದ್ಗುರು" ಪದವನ್ನು ಬಳಸಲಾಗಿದೆ ಆದರೆ ಬಸವಣ್ಣನವರ ಹೆಸರಿನ ಜೊತೆ "ಭಕ್ತಿ ಭಂಡಾರಿ" ಎಂಬ ಪದವನ್ನ ಮಾತ್ರ ಬಳಸಲಾಗಿದೆ. "ಗುರು" ಅಥವಾ "ವಿಶ್ವಗುರು" ಪದವನ್ನು ಬಳಸಿಲ್ಲ.  ರೇಣುಕಾಚಾರ್ಯರು ಮಾತ್ರ ಗುರು ಆದರೆ ಬಸವಣ್ಣನವರು ಕೇವಲ ಭಕ್ತರು ಎನ್ನುವ ಅರ್ಥದಲ್ಲಿ ಪರೋಕ್ಷವಾಗಿ ಬಿಂಬಿಸಲಾಗಿದೆ. ಈ ರೀತಿ ಮಾಡಿ ಗುರು ಬಸವಣ್ಣನವರನ್ನು ರೇಣುಕಾಚಾರ್ಯರ ಹೆಸರಿನ ಕೆಳಗಡೆ ತೋರಿಸಿ ಅಳಿಸಿ ಹೋಗುತ್ತಿರುವ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. *ಏಪ್ರಿಲ್ 2* ರಂದು ವೀರಶೈವ ಮಹಾಸಭಾದವರು ಬಸವ ಜಯಂತಿಯ ದಿನದಂದು ರೇಣುಕಾಚಾರ್ಯ ಜಯಂತಿ ಸೇರಿಸಿ ಎರಡು ಫೋಟೋ ಇಟ್ಟು ಆಚರಣೆ ಮಾಡಬೇಕೆಂದು ಒಂದು ಸುತ್ತೋಲೆ (Circular) ಹೊರಡಿಸಿದ್ದರು. ಬಸವ ಪರ ಸಂಘಟನೆಗಳ ಬಸವಭಕ್ತರ ಪ್ರತಿಭಟನೆಯಿಂದಾಗಿ *ಎಪ್ರಿಲ್ 27* ರಂದು ಈ ಸುತ್ತೋಲೆಯನ್ನು ವೀರಶೈವ ಮಹಾಸಭಾ  ಹಿಂಪಡೆದುಕೊಂಡಿತು.  ಇವಾಗ *ಜೂನ್ 13* ರಂದು ರಂಭಾಪುರಿ ಶ್ರೀಗಳು ಮತ್ತೆ ಅದನ್ನೇ ಮಾಡುತ್ತಿರುವುದನ್ನು ನೋಡಿದರೆ ವೀರಶೈವ ಮಹಾಸಭಾದವರು ಅವಾಗ ಹೊರಡಿಸಿದ್ದ ಸುತ್ತೋಲೆ ಹಿಂದೆ ಇವರ ಕೈ ಇತ್ತೇ ? ಎಂಬ ಸಂಶಯ ಮೂಡುತ್ತಿದೆ.  ತಾವು ರೇಣುಕಾಚಾರ್ಯ ಜಯಂತಿಯನ್ನು ವರ್ಷದಲ್ಲಿ 100 ಸಲ ಆದರೂ ಮಾಡಿ ನಮಗೆ ಯಾವುದೇ ಅಭ್ಯಂತರವಿಲ್ಲ ಆದರೆ ಗುರು ಬಸವಣ್ಣನವರ ಜಯಂತಿಯನ್ನು ಮಾತ್ರ...

ಆದಿ ಬಣಜಿಗ, ದೀಕ್ಷಾ ಬಣಜಿಗ,ಪಂಚಮಸಾಲಿ ಮೂಲ

ಇಮೇಜ್
  ಆದಿ ಬಣಜಿಗ, ದೀಕ್ಷಾ ಬಣಜಿಗ,ಪಂಚಮಸಾಲಿ ಮೂಲ Please Comment Your Thought on this article ದಯವಿಟ್ಟು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

ಲಿಂಗಾಯತ ಧರ್ಮಕ್ಕೆ ಬಸವಣ್ಣನವರೇ ಆದಿ ಗುರು

ಇಮೇಜ್
ಅಂಗದ ಮೇಲೆ ಇಷ್ಟಲಿಂಗವನ್ನು ಧರಿಸಿಕೊಂಡು, ಕಡ್ಡಾಯವಾದ ಧರ್ಮ ಸಂಸ್ಕಾರ ಪಡೆದು, ಜಾತಿವರ್ಣ ವರ್ಗಗಳನ್ನೊಪ್ಪದ ವಿಚಾರ- ಆಚಾರ ಸಂಹಿತೆ ಪ್ರಾರಂಭವಾದುದು ಬಸವಣ್ಣನವರಿಂದಲೇ ! ಅವರಿಗಿಂತ ಮೊದಲಿಗೆ ಇದ್ದುದು ಶೈವ ಧರ್ಮ. ಇದು ವೇದಪೂರ್ವಕಾಲದ, ಹರಪ್ಪ ಮೊಹೆಂಜೊದಾರೊ ಸಂಸ್ಕೃತಿಯ ಕಾಲದಿಂದ ಪ್ರಚಲಿತವಿದೆ. ಸಂಪೂರ್ಣ ಹೊಸ ಅರ್ಥ, ತತ್ತ್ವಜ್ಞಾನ, ಧೋರಣೆಯನ್ನು ಒಳಗೊಂಡ ಇಷ್ಟ ಲಿಂಗಧಾರಣೆಯ ಸಂವಿಧಾನ ಆರಂಭವಾದುದು ಬಸವಣ್ಣನವರಿಂದ ! ಅವರು ಆದ್ಯರಾದುದರಿಂದಲೇ ಅವರ ಹೆಸರು ಮಂತ್ರವಾಯಿತು . - ಪೂಜ್ಯ ಶ್ರೀ ಮಾಹಾ ಜಗದ್ಗುರು ಮಾತೆ ಮಹಾದೇವಿಯವರು Please Comment Your Thought on this article ದಯವಿಟ್ಟು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

25 May 2025 ರಂದು (ಹುಬ್ಬಳ್ಳಿಯಲ್ಲಿ ಸಾಮೂಹಿಕ ಲಿಂಗಾಯತ ಧರ್ಮ ದೀಕ್ಷೆ ಕಾರ್ಯಕ್ರಮ*

ಇಮೇಜ್
ಶರಣ ಸಾಹಿತಿಗಳಾದ ಶರಣ ಸಚ್ಚಿದಾನಂದ ಚಟ್ನಳ್ಳಿ ಯವರು ತಮ್ಮ ಮಗ ಸರ್ವಜ್ಞ ಲಿಂಗಾಯತ ಇವರಿಗೆ 8ನೇ ವಯಸ್ಸಿಗೆ ಕೊಡುವ ಧರ್ಮ ಸಂಸ್ಕಾರವಾದ ಇಷ್ಟಲಿಂಗದೀಕ್ಷೆ ಕಾರ್ಯಕ್ರಮ ತಮ್ಮ ಹುಬ್ಬಳ್ಳಿಯ ನಿವಾಸದಲ್ಲಿ ಆಯೋಜಿಸಿದ್ದಾರೆ. ಈ ನಿಮಿತ್ತವಾಗಿ ಸಾಮೂಹಿಕ ಉಚಿತ ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ. ಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಯರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗುವುದು. ಮನುಗುಂಡಿಯ ಪೂಜ್ಯ ಶ್ರೀ ಬಸವಾನಂದ ಸ್ವಾಮೀಜಿ, ಚಿಕ್ಕಮಗಳೂರಿನ ಪೂಜ್ಯ ಶ್ರೀ ಜಯಬಸವಾನಂದ ಸ್ವಾಮೀಜಿ, ಉಡುಪಿಯ ಅಲ್ಲಮ ಪ್ರಭು ಅನುಭಾವ ಪೀಠದ ಪೀಠಾಧಿಪತಿಗಳಾದ ಶರಣ ಜಗನ್ನಾಥ ಪನಸಾಲೆಯವರು , ಮಂಡ್ಯದ ಪೂಜ್ಯ ಶ್ರೀ ಓಂಕಾರೇಶ್ವರ ಸ್ವಾಮೀಜಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನರಜನ್ಮಕ್ಕೊಮ್ಮೆ ಬಂದ ಬಳಿಕ, ಗುರುವಿನ ಕುರುಹ ಕಾಣಬೇಕು. ಗುರುವಿನ ಕುರುಹ ತಾ ಕಂಡ ಬಳಿಕ, ಶಿಷ್ಯನಾಗಿ ಗುರುಕರಜಾತನಾಗಬೇಕು. ಗುರುಕರಜಾತನಾದ ಬಳಿಕ, ಗುರುಸ್ವರೂಪಾಗಿ, ಕಪಿಲಸಿದ್ಧಮಲ್ಲಿಕಾರ್ಜುನ ದೇವರ ದೇವನ ಪಾದಪದ್ಮದಲ್ಲಿ ಐಕ್ಯವ ಗಳಿಸಬೇಕು, ಘಟ್ಟಿವಾಳಯ್ಯಾ ಲಿಂಗಾಯತ ಧರ್ಮದ ಹೆಬ್ಬಾಗಿಲು ಇಷ್ಟಲಿಂಗ ದೀಕ್ಷಾ ಸಂಸ್ಕಾರ. ಯಾವುದೇ ಜಾತಿ ಮತ ಪಂಥದಲ್ಲಿ ಹುಟ್ಟಿದ ವ್ಯಕ್ತಿ ಲಿಂಗಾಯತನಾಗಲಿಕ್ಕೆ ಇರುವ ಏಕೈಕ ಸಾಧನ ಇಷ್ಟಲಿಂಗ ದೀಕ್ಷೆ. ಇಷ್ಟಲಿಂಗ ದೀಕ್ಷೆಯಲ್ಲಿ ಸ್ವತಃ ವ್ಯಕ್ತಿಯೇ ಗುರುವಿನಿಂದ ಇಷ್ಟಲಿಂಗವನ್ನು ಪಡೆದು ಗುರುವಿನ ಹಸ್ತದಲ್ಲಿ ಹುಟ್ಟನ್ನ...

ಶಿವಜ್ಞಾನವನರಿಯದಿರ್ದಡೆ ಆ ಕಾಗೆ, ಕೋಳಿಗಳಿಗಿಂತ ಕರಕಷ್ಟ

ಇಮೇಜ್
  ವಚನ :  ವಾಯುಗುಣವ ಸರ್ಪಬಲ್ಲುದು, ಮಧುರಗುಣವ ಇರುವೆ ಬಲ್ಲುದು, ಗೋತ್ರದ ಗುಣವ ಕಾಗೆ ಬಲ್ಲುದು, ವೇಳೆಯ ಗುಣವ ಕೋಳಿ ಬಲ್ಲುದು, ಮಾನವನಾಗಿ ಹುಟ್ಟಿದ ಬಳಿಕ ಶಿವಜ್ಞಾನವನರಿಯದಿರ್ದಡೆ ಆ ಕಾಗೆ, ಕೋಳಿಗಳಿಗಿಂತ ಕರಕಷ್ಟ ಕಾಣಾ ಕಲಿದೇವರ ದೇವಾ.” ವಾಯುವನ್ನೇ ಆಹಾರವನ್ನಾಗಿಸಿಕೊಂಡು ಜೀವನ ನಿರ್ವಹಣೆ ಮಾಡಬಲ್ಲ ವಿಶಿಷ್ಟ ಶಕ್ತಿ ಸರ್ಪಕ್ಕಿದೆಯೆಂದು ಪ್ರತೀತಿಯಿದೆ. ಮಧುರ ಗುಣವನ್ನು ದೂರದಿಂದಾದರೂ ಅರಿಯಬಲ್ಲ ವಿಶಿಷ್ಟವಾದ ಶಕ್ತಿ ಇರುವೆಗಿದೆಯೆಂಬುದನ್ನು ಸಾಮಾನ್ಯವಾಗಿ ಎಲ್ಲರೂ ತಿಳಿದಿರಲು ಸಾಕು, ಎಲ್ಲಿಯಾದರೂ ಸಿಹಿ ಪದಾರ್ಥವನ್ನಿಟ್ಟರೆ ಆಗಲೇ ಇರುವ ಗಳು ಬಂದು ಆಮಂತ್ರಿಸಿದವರಂತೆ ಮುಕುರುವವು. ಅಷ್ಟೇ ಏಕೆ, ಗಿಡದಲ್ಲಿರುವ ಹಲಸಿನಕಾಯಿ ಹಣ್ಣಾಗಿವೆಯೋ ಇಲ್ಲವೋ ಎಂಬುದನ್ನು ಗಿಡದ ಬೊಡ್ಡೆ ಮೂಸಿನೋ ಡಿಯೇ ಇರುವೆ ತಿಳಿಯುತ್ತದೆಯಂತೆ! ಹಣ್ಣಿದ್ದರೆ ಏರಿ ಹೋಗುತ್ತದಂತೆ. ಇಲ್ಲವಾದರೆ ಇರುವೆ ಗಿಡವನ್ನು ವ್ಯರ್ಥವಾಗಿ ಏರಲಾರದು ! ಕಾಗೆಯ ಬಳಗವೆಂದು ಸಾಮಾನ್ಯವಾಗಿ ಬಳಸುವರು. ಅದಕ್ಕೆ ತನ್ನ ಗೋತ್ರದ ಜ್ಞಾನ ತುಂಬಾ ಜಾಗ್ರತವಾಗಿರುತ್ತದಂತೆ. ಕೋಳಿಗೆ ಸಮಯ ಜ್ಞಾನವಿರುತ್ತದೆಂಬುದನ್ನು ಸಾಮಾನ್ಯವಾಗಿ ಹಳ್ಳಿಗರೆಲ್ಲರೂ ಬಲ್ಲವ ರಾಗಿದ್ದಾರೆ. ಕೋಳಿ ಕೂಗಿದಾಗ ಎದ್ದು ಹೊಲದ ಕೆಲಸಕ್ಕೆ ಹಳ್ಳಿಗರು ಹೋಗುವುದು ಇಂದಿಗೂ ರೂಢಿಯಲ್ಲಿದೆ. ಹಿಂದಿನ ಕಾಲದಲ್ಲಿ ಕೋಳಿಗಳೇ ಗಡಿಯಾರಗಳಾಗಿ ಕೆಲಸ ಮಾಡುತ್ತಿದ್ದವಷ್ಟೆ. ಈ ಪ್ರಾಣಿಗಳು ಒಂದೊಂದು ವಿಶಿಷ್ಟ ಗುಣವನ್ನು...

ಬಂಧನದಿಂದ ಮುಕ್ತವಾಗಲಿದೆ : ಗುರು ಬಸವಣ್ಣನವರ ಮೂರ್ತಿ

ಇಮೇಜ್
 ಈ ರೀತಿ ವಿಡಿಯೋ ಮೂಲಕ ಬೆಂಗಳೂರಿನ ಬಸವಗಂಗೋತ್ರಿ ಯಲ್ಲಿ ಗುರುಬಸವಣ್ಣನವರ ಮೂರ್ತಿ ನಿರ್ಮಾಣಕ್ಕಾಗಿ ಕಾಣಿಕೆ ಕೊಟ್ಟವರಿಗೆ ಅಭಿನಂದನೆ ಸಲ್ಲಿಸುವುದು ನಮ್ಮ ಕರ್ತವ್ಯ. ಆದರೆ "ಹಣದ ಕೊರತೆಯಿಂದ ಮೂರ್ತಿ ಕೆಲಸ ಅರ್ಧಕ್ಕೆ ನಿಂತಿತ್ತು" ಎಂದು ಸಾರ್ವಜನಿಕವಾಗಿ ಹೇಳಿಕೊಳ್ಳುವುದು ಎಷ್ಟು *ಸೂಕ್ತ?* ಇದರಿಂದ ಸಮಾಜಕ್ಕೆ ಯಾವ ಸಂದೇಶವನ್ನು ಕೊಡುತ್ತಾ ಇದ್ದೀರಿ? ಪರಮಪೂಜ್ಯ ಮಾತೆಮಹಾದೇವಿಯವರು ಪ್ರಾರಂಭಿಸಿ ಹೋಗಿರುವ ಒಂದು ಮೂರ್ತಿಯ ನಿರ್ಮಾಣವನ್ನು ಪೂರ್ಣಗೊಳಿಸುವ *ಶಕ್ತಿ, ಸಾಮರ್ಥ್ಯ* ಅವರ ಅನುಯಾಯಿಗಳಲ್ಲಿ ಇಲ್ಲವೇ? ಎಂಬ ಪ್ರಶ್ನೆ/ಅನುಮಾನ ಸಮಾಜದ ಜನರಲ್ಲಿ ಮೂಡುತ್ತದೆ.  ಹಾಗಾದರೆ ಪೂಜ್ಯ ಮಾತಾಜಿಯವರು ಲಿಂಗೈಕ್ಯ ಆದಮೇಲೆ ಮೊದಲಿನ ಹಾಗೆ *ಕಾಣಿಕೆ* ಬರುವುದು ನಿಂತುಬಿಟ್ಟಿದೆಯೇ? ಒಂದು ವೇಳೆ ಕಾಣಿಕೆ ಬರುವುದು ನಿಂತುಬಿಟ್ಟಿದ್ದರೆ ಇದಕ್ಕೆ *ಕಾರಣಗಳೇನು?* ಅಥವಾ ಕಾಣಿಕೆ ಬರುತಿದ್ದರೆ ಅನಾವಶ್ಯಕ ಚಟುವಟಿಕೆಗಳಿಗೆ *ವ್ಯರ್ಥ* (ಐಷಾರಾಮಿ ಕಾರುಗಳು, ಕೋರ್ಟ್, ಕಚೇರಿ, ಕೇಸ್ etc) ಮಾಡಲಾಗುತ್ತಿದೆಯೇ? ಈ ರೀತಿಯ ಪ್ರಶ್ನೆಗಳು ಸಮಾಜದ ಜನರಲ್ಲಿ ಮೂಡುತ್ತವೆ.  ಪೂಜ್ಯ ಮಾತೆಮಹಾದೇವಿಯವರು ಬೆಳೆಸಿ ಹೋಗಿರುವ *ಒಬ್ಬೊಬ್ಬ* ನಿಷ್ಠಾವಂತ ಶರಣರಲ್ಲಿ ಕನಿಷ್ಠ ಒಂದು ಲಕ್ಷ ಕಾಣಿಕೆಯನ್ನು *ಸಂಗ್ರಹ* ಮಾಡುವ *ಸಾಮರ್ಥ್ಯ* ಇದೆ. ಇಂತಹ ಸಾವಿರಾರು ನಿಷ್ಠಾವಂತ ಶರಣರನ್ನು  ಪೂಜ್ಯ ಮಾತಾಜಿ ಅವರು ಬೆಳೆಸಿ ಹೋಗಿದ್ದಾರೆ. ಆದರೆ ಅಂತಹ ನ...

ಸಂಸ್ಕಾರ ಮತ್ತು ಸಂಘಟನೆ

ಇಮೇಜ್
(ಸಂಘಟನೆಗಳ ಸಮಾವೇಶ ಮಾಡುವವರಿಗೆ ಕೈದೀವಿಗೆ) ನಾವು  ಶ್ರೇಷ್ಠವಾದ ಲಿಂಗಾಯತ ಧರ್ಮದ ಅನುಯಾಯಿಗಳು. ಶರಣ ಪರಂಪರೆಯ ಮಕ್ಕಳು. ನಾವು ಒಂದು ವಿಶಿಷ್ಟವಾದ ತತ್ವ  ಸಿದ್ಧಾಂತಗಳಿಗೆ ಒಳಪಟ್ಟವರು. ನಾವು ಒಂದು ಸತ್ಪಥದಲ್ಲಿ, ಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದೇವೆ; ನಮ್ಮ  ಆಚರಣೆಗಳು ಇತರರಿಗಿಂತ ಭಿನ್ನವಾಗಿವೆ ಎನ್ನುವುದಕ್ಕೆ ಯಾವುದು ಸಾಕ್ಷಿ  ಏನು ಪ್ರಮಾಣ? * ಗುರು ಶಿಷ್ಯ ಸಂಬಂಧವಾದುದಕ್ಕಿದು ಚಿಹ್ನೆ,*  *ಹಿಂದೆ  ಬಿಟ್ಟು  ಮುಂದೆ ಹಿಡಿಯಲೇ ಬೇಕು* *ಲಿಂಗದೇವ  ಕೇಳಯ್ಯಾ ಕಿಚ್ಚಿನೊಳಗೆ ಕೋಲ ಬೈಚಿಟ್ಟಂತಿರಬೇಕು.* ಹಿಂದೆ ಮಾಡುತ್ತಿದ್ದ ಅನೇಕ ತಪ್ಪು ಆಚರಣೆಗಳನ್ನು ಬಿಟ್ಟು , ಮುಂದೆ ಗುರು ತೋರಿದಂಥ ಆಚರಣೆಗಳನ್ನು ಮಾಡುತ್ತಿದ್ದರೆ ಅದೇ ನಾವು ಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದೇವೆ ಎನ್ನುವುದಕ್ಕೆ ಸಾಕ್ಷಿ. ಕಿಚ್ಚಿನೊಳಗೆ ಕೋಲ ಬೈಚಿಟ್ಟಂತಿರಬೇಕು, ಎಂದರೆ ಕಿಚ್ಚಿನೊಳಗೆ ಒಂದು ಮರದ ಕೋಲನಿಟ್ಟಾಗ ಅದೂ ತಾನೂ ಕಿಚ್ಚಿನ ಸ್ವರೂಪವನ್ನೇ ಪಡೆದುಕೊಳ್ಳುತ್ತದೆ. ಅದೇ ರೀತಿ ಧರ್ಮ  ಸಂಸ್ಕಾರಕ್ಕೆ  ಒಳಪಟ್ಟು  ಸನ್ಮಾರ್ಗದಲ್ಲಿ ನಡೆಯುತ್ತಿರುವ  ವ್ಯಕ್ತಿ  ನೋಡಲು ಮುನ್ನಿನಂತೆ ಕಂಡರೂ, ಮಾನವ ಸಹಜವಾದ ಮುನ್ನಿನ ಗುಣಗಳನ್ನು ಜ್ಞಾನದ ಕಿಚ್ಚಿನಲ್ಲಿ ಸುಟ್ಟುಕೊಂಡಿರಬೇಕು. ಧರ್ಮ ಮಾರ್ಗದಲ್ಲಿ  ನಡೆದು ಆದರ್ಶ ಶರಣರಾಗಬೇಕು. ಲಿಂಗಾಯತ ಸಮಾಜಕ್ಕೆ ಒಂದು ಕಲಂಕ ಅಂಟಿಕೊಂಡಿದ...

ಸಂಸತ್ ಭವನದಲ್ಲಿ "ಬಸವ ಜಯಂತಿ" ಇದೇ ಮೊದಲ ಬಾರಿಗೆ

ಇಮೇಜ್
  ನವದೆಹಲಿ, ಏ. 21- ವಿಶ್ವಕ್ಕೆ ಸಂಸತ್ ಪರಿಚಯಿಸಿದ ಬಸವೇಶ್ವರರ ಜಯಂತಿಯನ್ನು ಮೊದಲ ಬಾರಿಗೆ ನೂತನ ಸಂಸತ್ ಭವನದ ಆವರಣದಲ್ಲಿ ಆಚರಿಸಲು ನಿರ್ಧರಿಸ ಲಾಗಿದೆ. ಈ ಸಂಬಂಧ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಸಂಸತ್ ಅಧಿಕಾರಿಗಳ ಜೊತೆ ಪೂರ್ವಭಾವಿ ಸಭೆ ನಡೆಸಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಸಚಿವ ವಿ.ಸೋಮಣ್ಣನವರು, ಸಂಸತ್ ಆವರಣ ದಲ್ಲಿ ಬಸವ ಜಯಂತಿ ಆಚರಣೆಗೆ ಅವಕಾಶ ಸಿಕ್ಕಿದೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಒಪ್ಪಿಗೆ ಕೊಟ್ಟಿದ್ದಾರೆ. ಬಸವ ಜಯಂತಿ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಬರಲಿದ್ದಾರೆ. ಏ.30ರಂದು ಬಸವ ಜಯಂತಿ ಆಯೋಜಿಸಲಾಗಿದೆ. ಕರ್ನಾಟಕದ ಬಸವ ಅಭಿಮಾನಿಗಳು, ಮಠಾಧಿಪತಿ ಗಳು ಬರಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಏ.25ರ ಒಳಗಾಗಿ ಮಾಹಿತಿ ನೀಡಬೇಕು. ಕಡ್ಡಾಯವಾಗಿ ಆಧಾರ ಕಾರ್ಡ್ ನೀಡಬೇಕು ಎಂದು ಹೇಳಿದರು. ಸಂಸತ್ ಭವನದೊಳಗೆ ಬಸವಣ್ಣರ ವಚನ:  2023ರಲ್ಲಿ ಲೋಕಾರ್ಪಣೆ ಗೊಂಡ ನೂತನ ಸಂಸತ್ ಭವನ ವೈಭವೋಪೇತವಾಗಿದೆ. ಈ ಸಂಸತ್ ಭವನ ಹಲವು ವಿಶೇಷತೆಗಳಿಂದ ಕೂಡಿದೆ. ಸಂಸತ್ ಭವನದಲ್ಲಿ ಅಖಂಡ ಭಾರತದ ನಕ್ಷೆ ಯೊಂದಿಗೆ ಭಾರತೀಯ ಪರಂಪರೆ ಸಂಸ್ಕೃತಿಯ ಅನಾ ವರಣಗೊಂಡಿದ್ದು, ಕನ್ನಡ ಕಂಪು ಪಸರಿಸಿದೆ. ಸಂಸತ್ ಭವನದ ಗೋಡೆಯ ಮೇಲೆ ಹಂಪಿಯ ಕಲ್ಲಿನ ರಥವನ್ನು ಕೆತ್ತಲಾಗಿದೆ. ಇದರ ಪಕ್ಕದಲ್ಲೇ ಗೋಡೆಯ “ಕಳಬೇಡ ಕೊಲ ಬೇಡ ಹುಸಿಯ ನುಡಿಯಲು ಬೇಡ ಮುನಿಯ ಬೇಡ ಅನ್ಯರಿಗೆ ಅಸಹ್ಯಪಡ ಬೇಡ ತನ್ನ ಬಣ್ಣಿಸಬೇಡ ಇದಿರ ಹಳಿ ಯಲು ಬೇಡ, ಇದ...

ಶರಣರ ಪರಿಚಯ : ತುರುಗಾಹಿ ರಾಮಣ್ಣನವರು

ಇಮೇಜ್
ಶರಣ ತುರುಗಾಹಿ ರಾಮಣ್ಣನವರು ಅಂಕಿತ: ಗೋಪತಿನಾಥ ವಿಶ್ವೇಶ್ವರಲಿಂಗ ಕಾಯಕ: ಪಶುಪಾಲಕ ಭಕ್ತರ ಮನೆಯ ಗೋವುಗಳನ್ನು ಕಾಯುವ ಕಾಯಕವನ್ನು ಕೈಕೊಂಡ ಇವರ ಕಾಲ ೧೧೬೦ ‘ಗೋಪತಿನಾಥ ವಿಶ್ವೇಶ್ವರಲಿಂಗ’ ಅಂಕಿತದಲ್ಲಿ ರಚಿಸಿದ ೪೬ ವಚನಗಳು ದೊರೆತಿವೆ. ತನ್ನ ವೃತ್ತಿ ವಲಯದ ಅನುಭವವನ್ನು ಆಧ್ಯಾತ್ಮಾನುಭವದ ಜೊತೆ ಸಮೀಕರಿಸಿ ಹೇಳಿದ ರೀತಿ ತುಂಬ ಅರ್ಥಪೂರ್ಣವೆನಿಸಿದೆ. ಕೆಲವು ಬೆಡಗಿನ ವಚನಗಳಲ್ಲಿ ತಾತ್ವಿಕ ವಿವೇಚನೆಯಿದೆ. ಕಲ್ಯಾಣ ಕ್ರಾಂತಿಯ ನಂತರ ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವ, ಅಕ್ಕಮಹಾದೇವಿ ಮತ್ತು ಇತರ ಶರಣರು ಎಲ್ಲಿ ಹೋಗಿ ಐಕ್ಯರಾದರು ಎಂಬುದನ್ನು ತಿಳಿಸುವ ವಚನ ಐತಿಹಾಸಿಕ ಮಹತ್ವವನ್ನು ಪಡಿದಿದೆ. ಕಾಯಕದ ಪರಿಭಾಷೆಯಲ್ಲಿ ಅಧ್ಯಾತ್ಮ ಬೋಧೆ ಮಾಡಿರುವರು. ಹಾಗೆಯೇ ತನ್ನ ಕಾಯಕದ ಬಗೆಗೂ ಹೇಳಿಕೊಂಡಿರುವರು. ಬಸವಣ್ಣ, ಚೆನ್ನಬಸವಣ್ಣ, ಅಲ್ಲಮ, ಅಕ್ಕಮಹಾದೇವಿ – ಇವರು ಬಯಲಾದ ವಿವರ ನೀಡಿರುವರು. ಶರಣ ತುರುಗಾಹಿ ರಾಮಣ್ಣನವರ ವಚನ : ಬಂದಿತ್ತು ದಿನ ಬಸವಣ್ಣ ಕಲ್ಲಿಗೆ,  ಚನ್ನಬಸವಣ್ಣ ಉಳುವೆಯಲ್ಲಿಗೆ,  ಪ್ರಭು ಅಕ್ಕ ಕದಳಿದ್ವಾರಕ್ಕೆ,  ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ಲಕ್ಷ ್ಯಕ್ಕೆ,  ನಾ ತುರುವಿನ ಬೆಂಬಳಿಯಲ್ಲಿ ಹೋದ ಮರೆಯಲ್ಲಿ,  ಅಡಗಿಹರೆಲ್ಲರು ಅಡಗಿದುದ ಕೇಳಿ ನಾ  ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿಯೆ ಉಡುಗುವೆನು 🙏🙏ಶರಣು🙏🙏ಶರಣಾರ್ಥಿಗಳು🙏🙏 ಮಹಾದೇವ ದಾ ಸಂಖ ಅಧ್ಯಕ್ಷರು ಕರ್ನಾಟಕವಚನ ಸಾಹಿತ್ಯ ಪರಿ...

ಕೇವಲ ಹೇಳಿಕೆಗಳಿಗೆ ಸೀಮಿತವಾಗಿರುವ ಮಠ/ಪೀಠಗಳ ಕಾವಿಧಾರಿಗಳು ಹಾಗೂ ಲಿಂಗಾಯತ ಸಂಘಟನೆಗಳ ಮುಖಂಡರು

ಇಮೇಜ್
ಧರ್ಮಗುರು ಬಸವಣ್ಣನವರ ಮೇಲೆ ಅಥವಾ ಲಿಂಗಾಯತ ಧರ್ಮದ ಮೇಲೆ ಯಾವುದೇ ಅಪಚಾರ ಅಥವಾ ಚ್ಯುತಿ ಆದಾಗ ಬಸವಪರ ಸಂಘಟನೆಗಳ ಮುಖ್ಯಸ್ಥರು, ಮತ್ತು ಬಸವ ತತ್ವ ಹೇಳುವ ಮಠಾಧೀಶರು/ಪೀಠಾಧ್ಯಕ್ಷರು ಗಳು ಕೇವಲ ಖಂಡನೆ ಹೇಳಿಕೆಗಳನ್ನು ಕೊಟ್ಟು ಕುಳಿತು ಬಿಡುತ್ತಿದ್ದಾರೆ. ಯಾವುದೇ ಪ್ರತಿಭಟನೆ ಅಥವಾ ಧರಣಿ ಸತ್ಯಾಗ್ರಹ ಅಥವಾ ಹೋರಾಟ ಅಥವಾ ರ್ಯಾಲಿ ಮಾಡುತ್ತಿಲ್ಲ. *ವಚನದರ್ಶನ* ಪುಸ್ತಕದ ಮೂಲಕ ವೈದಿಕವಾದಿಗಳು ಲಿಂಗಾಯತ ಧರ್ಮದ ಅಸ್ತಿತ್ವಕ್ಕೆ ಕೈ ಹಾಕಿದಾಗ ಕೂಡ ಇವರೆಲ್ಲರೂ ಹೇಳಿಕೆ ಕೊಟ್ಟು ಸುಮ್ಮನೆ ಕುಳಿತರು. ರಸ್ತೆಗೆ ಇಳಿದು ಈ ಪುಸ್ತಕವನ್ನು ಬ್ಯಾನ್ ಮಾಡುವಂತೆ ಯಾವುದೇ ಪ್ರತಿಭಟನೆ ಮಾಡಲಿಲ್ಲ. ಶಾಸಕ *ಯತ್ನಾಳ* ಧರ್ಮಗುರು ಬಸವಣ್ಣನವರ ಬಗ್ಗೆ ಸಾರ್ವಜನಿಕವಾಗಿ ಅವಹೇಳನಕಾರಿ (ಅಪಹಾಸ್ಯ) ಮಾತನಾಡಿದಾಗ, ಮತ್ತು ಗುರು ಬಸವಣ್ಣನವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು ಎಂದು ಸುಳ್ಳನ್ನು ವಿಧಾನಸಭೆಯಲ್ಲಿ ಹೇಳಿದಾಗ ಕೂಡ, ಇವರೆಲ್ಲರೂ ಹೇಳಿಕೆ ಕೊಟ್ಟು ಸುಮ್ಮನೆ ಕುಳಿತಿರು. (ಪೂಜ್ಯ ಮಾತೆಮಹಾದೇವಿಯವರ ನಿಷ್ಠಾವಂತ ಅನುಯಾಯಿಗಳು ಮಾತ್ರ ರಸ್ತೆಗೆ ಇಳಿದು ಪ್ರತಿಭಟಿಸಿದರು) ಇವಾಗ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಅಧ್ಯಕ್ಷ *ಶಂಕರ್ ಬಿದರಿ*  ಲಿಂಗಾಯತ ಧರ್ಮಕ್ಕೆ ಸಂಬಂಧವೇ ಇಲ್ಲದ, ರೇಣುಕಾಚಾರ್ಯರ ಜಯಂತಿಯನ್ನು ತಂದು ಬಸವ ಜಯಂತಿಯ ದಿನದಂದು ಆಚರಿಸುವಂತೆ ಹಾಗೂ ರೇಣುಕಾಚಾರ್ಯರ ಫೋಟೋವನ್ನು ಗುರು ಬಸವಣ್ಣನವರ ಫೋಟೋ ಜೊತೆ  ಇಡುವಂತೆ *ಸುತ್ತೋಲ...