ರಾಷ್ಟ್ರೀಯ ಬಸವ ದಳದ ಮೇಲೆ ನಿರೀಕ್ಷೆ
*ರಾಷ್ಟ್ರೀಯ ಬಸವ ದಳದ ಮೇಲೆ ನಿರೀಕ್ಷೆ...*
ಸಮಾಜದಲ್ಲಿ ಅನೇಕ ಬಸವಪರ ಸಂಘಟನೆಗಳು ಇದ್ದರೂ ಕೂಡ, ಬಸವ ತತ್ವಕ್ಕೆ ಚ್ಯುತಿ ಬಂದಾಗ, ಹಾಗೂ ಲಿಂಗಾಯತ ಧರ್ಮ ಮಾನ್ಯತೆ ಹೋರಾಟ ಮಾಡಲು ರಾಷ್ಟ್ರೀಯ ಬಸವ ದಳದ ಮೇಲೆಯೇ ಎಲ್ಲರೂ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರುವುದು ಏಕೆ??? ಎಂಬುದನ್ನು ನಾವು ವಿಚಾರ ಮಾಡಬೇಕು.
ಇದರ ಅರ್ಥ ರಾಷ್ಟ್ರೀಯ ಬಸವ ದಳವು ಒಂದು *ಬಲಿಷ್ಠ ಸಂಘಟನೆ* ಯಾಗಿದೆ. ಹಾಗಾದರೆ, ಲಿಂಗದೇವ ವಚನಾಂಕಿತ ಪ್ರತಿಷ್ಠಾಪನೆ ಮಾಡಿದ ನಂತರ ಸಂಘಟನೆಯು ದುರ್ಬಲವಾಗಿತ್ತು ಎಂಬ ಕೆಲವರ ವಾದವು ಸುಳ್ಳು ಎಂದು ಸಾಬೀತಾಗುತ್ತೆ.
ಹಾಗಾದರೆ, 23 ವರ್ಷಗಳ ಕಾಲ ಲಿಂಗದೇವ ವಚನಾಂಕಿತವನ್ನು ಬಳಸಿಯೂ ಕೂಡ ಪೂಜ್ಯ ಮಾತಾಜಿ (ಮಾತೆಮಹಾದೇವಿ)ಯವರಿಗೆ ಇಂಥ ಬಲಿಷ್ಠ ಸಂಘಟನೆ ಕಟ್ಟಲು ಹೇಗೆ ಸಾಧ್ಯವಾಯಿತು???
ಏಕೆಂದರೆ ಪೂಜ್ಯ ಮಾತಾಜಿಯವರು ಧರ್ಮಗುರುವಿನ ಭಕ್ತಿಯ ಜೊತೆಗೆ ರಾಷ್ಟ್ರೀಯ ಬಸವದಳವನ್ನು ಕಟ್ಟಿದ್ದು *ಲಿಂಗದೇವ ನಿಷ್ಠೆ* (ಏಕದೇವೋಪಾಸನೆ) ಎಂಬ ಭದ್ರ ಬುನಾದಿಯ ಮೇಲೆ...
ಇಂತಹ *ಲಿಂಗದೇವ ನಿಷ್ಠೆ* ಯನ್ನು ಲಕ್ಷಾಂತರ ಶರಣರ ಹೃದಯಗಳಲ್ಲಿ ಮಾತಾಜಿಯವರು ಪ್ರತಿಷ್ಠಾಪನೆ ಮಾಡಿದ್ದು *ಲಿಂಗದೇವ ವಚನಾಂಕಿತ* ಎಂಬ ಸಂಶೋಧನೆಯ ಮೂಲಕವೇ ಎಂಬ ಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು... ಇದರಿಂದ ಅರ್ಥವಾಗುತ್ತದೆ ಪೂಜ್ಯ ಮಾತಾಜಿಯವರ (ಗುರು ಬಸವಣ್ಣನವರಿಂದ ಪ್ರೇರಿತ) ಈ ಸಂಶೋಧನೆಯು ಎಷ್ಟು ಮಹತ್ವದ್ದು... ಅದಕ್ಕಾಗಿ ಪೂಜ್ಯ ಮಾತಾಜಿಯವರನ್ನು ಒಬ್ಬ *ಶ್ರೇಷ್ಠ ದಾರ್ಶನಿಕರು* ಎಂದು ಕರೆಯಲಾಗುತ್ತದೆ...
ಪೂಜ್ಯ ಮಾತಾಜಿಯವರ ಲಿಂಗೈಕ್ಯ ಆದನಂತರ ಇಂತಹ ಬಲಿಷ್ಠ ಸಂಘಟನೆಯ ಭದ್ರ ಬುನಾದಿಯನ್ನೇ ಅಲುಗಾಡಿಸುವ ಪ್ರಯತ್ನ ಪ್ರಾರಂಭವಾಗಿದೆ. ಒಂದು ವೇಳೆ ಹೀಗಾದರೆ, ಒಂದು ತತ್ವನಿಷ್ಠರ ಬಲಿಷ್ಠ ಸಂಘಟನೆಯು ಕೇವಲ ಒಂದು ದುರ್ಬಲ ಸಾಮಾಜಿಕ ಸಂಘಟನೆಯಾಗಿ ಉಳಿದುಬಿಡುತ್ತದೆ.
(~ ಸಿದ್ಧವೀರ ಸಂಗಮದ)

ಕೋಂಡಿ ಮಂಚಣ್ಣ ಬಸವಣ್ಣನವರ ಕಾಲಕ್ಕೂ ಇದ್ದರು ಈವಾಗೂ ಇದ್ದಾರೆ ಆದರೂ ಬಸವಣ್ಣನವರ ಆಕಾಲದ ಶರಣರ ಸಾಹಿತ್ಯ ಇಂದಿನವರೆಗೂ ಉಳಿದಿದೇಯಲ್ಲ ಹಾಗೇ ಪರಮಪೂಜ್ಯ ಜಗದ್ಗುರು ಡಾಕ್ಟರ್ ಮತೇಮಹಾದೇವಿ ಮಾತಾಜಿಯವರ ಲಿಂಗದೇವ ಸಂಶೋಧನೆ ಈವಾಗೂ ಇರುತ್ತೇ ಯುಗ ಯುಗಾಂತರದವರೇಗೂ ಇರುತ್ತೇ ಓಳ್ಳೇದು ಯಾವಾಗಲೂ ಇರುತ್ತೇ ಅಳಿಸೋದಿಲ್ಲ ಶರಣುಶರಣಾರ್ಥಿ
ಪ್ರತ್ಯುತ್ತರಅಳಿಸಿSharnarti Pujya mataji
ಪ್ರತ್ಯುತ್ತರಅಳಿಸಿ