"ಸರ್ವ ಶರಣರ ದಿನಾಚರಣೆ" : ಶಿವನ ತಪಸ್ಸಿನ ದಿನವಾದ “ಶಿವರಾತ್ರಿಯಂದು” ಸರ್ವ ಶರಣರ ಸಂಸ್ಮರಣೆಯನ್ನು ಒಟ್ಟಾಗಿ ಮಾಡೋಣ.

ಸರ್ವ ಶರಣರ ದಿನಾಚರಣೆ (ಮಾತಾಜಿಯವರ ಸಂದೇಶ)

ಒಂದು ತತ್ತ್ವಜ್ಞಾನವಾಗಲೀ, ಧರ್ಮವಾಗಲೀ ಜೀವಂತವಾಗಿರಬೇಕಾದರೆ ಅದು ಪರಂಪರೆಯಾಗಿ (heritage) ಸಾಗಿಬರಬೇಕು. 

ಶ್ರೀ ಗುರು ಬಸವಣ್ಣನವರೇ ಆದಿ ಪ್ರಮಥರಾಗಿ ಆರಂಭವಾದ ಲಿಂಗಾಯತ ಧರ್ಮದ ಪರಂಪರೆಯು ಶೂನ್ಯ ಪೀಠಾಧೀಶ ಅಲ್ಲಮಪ್ರಭು, ಚಿನ್ಮಯಜ್ಞಾನಿ ಚೆನ್ನಬಸವಣ್ಣ ಬಸವಯೋಗಿ ಸಿದ್ಧರಾಮೇಶ್ವರ, ವೀರವಿರಾಗಿಣಿ ಅಕ್ಕಮಹಾದೇವಿ, ವೀರಶರಣ ಮಡಿವಾಳ ಮಾಚಿದೇವ, ವೀರ ಮಾತೆ ಅಕ್ಕನಾಗಲಾಂಬಿಕೆ ಎಂಬ ಸಪ್ತಗಣಾಧೀಶರನ್ನೊಡಗೂಡಿ ಅವ್ಯಾಹ ಹತವಾಗಿ ಸಾಗಿ ಬಂದಿದೆ. ಗುರು ಬಸವಣ್ಣನವರ ಕಾಲದ ಆದಿ ಪ್ರಮಥರಿಂದ ಈವರೆಗೆ ಆಗಿ ಹೋಗಿರುವ ಲಿಂಗಾಂಗಯೋಗಿಗಳು, ಶರಣರು ಅಸಂಖ್ಯಾತರು. ಅವರ ಜಯಂತಿ -ಲಿಂಗೈಕ್ಯ ದಿನ ಆಚರಿಸಲು ವರ್ಷದ 365 ದಿನಗಳು ಸಾಕಾಗವು. ಅಂಥ ಸಮೃದ್ಧ ಪರಂಪರೆಯ ವಾರಸುದಾರರು ನಾವು. ಆದ್ದರಿಂದ ಜಗತ್ತಿನ ಮೊಟ್ಟಮೊದಲ ಯೋಗಿಯೂ, ಓಂಕಾರದ ದ್ರಷ್ಟಾರನೂ, ಭಾರತೀಯ ಧಾರ್ಮಿಕ ಪರಂಪರೆಯ ಮೂಲಿಗನಾದ ವೇದಪೂರ್ವ ಪ್ರವಾದಿ“ಯೋಗಿರಾಜ ಶಿವನ ತಪಸ್ಸಿನ ದಿನವಾದ “ಶಿವರಾತ್ರಿಯಂದು” ಸರ್ವ ಶರಣರ ಸಂಸ್ಮರಣೆಯನ್ನು ಒಟ್ಟಾಗಿ ಮಾಡೋಣ.



ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…