ಪೋಸ್ಟ್‌ಗಳು

ಲಿಂಗದೇವನ ಲೀಲಾ ವಿಶೇಷ - ಸಂಶೋಧನಾ ಕೃತಿ

ಇಮೇಜ್
  ಲಿಂಗದೇವನ ಲೀಲಾ ವಿಶೇಷ - ಸಂಶೋಧನಾ ಕೃತಿ ಈ ವಿಡಿಯೋ ಅನ್ನು ಕ್ಲಿಕ್ ಮಾಡಿ ನೊಡಿ ದಿನಾಂಕ 28-12-2022ರಂದು *ಬೀದರ್* ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ವತಿಯಿಂದ ಕಳೆದ ವರ್ಷ ಇದೆ ದಿನದಂದು ಮಾತೆಗಂಗಾದೆವಿಯವರು ತೆಗೆದುಕೊಂಡಿದ್ದ ವ್ಯಯಕ್ತಿಕ  ನಿರ್ಣಯವನ್ನು ಧಿಕ್ಕರಿಸಿ ಈ ದಿನವನ್ನು *"ಕರಾಳ ದಿನ"* ಎಂದು ಘೋಷಿಸಿ ಪೂಜ್ಯ ಲಿಂಗೈಕ್ಯ ಮಾತಾಜಿಯವರ ಶ್ರೇಷ್ಠ ಸಂಶೋಧನೆ "ಲಿಂಗದೇವ"ದ ಮಹತ್ವವನ್ನು ತಿಳಿಸಿಕೊಡುವ *ಲಿಂಗದೇವನ ಲೀಲಾ ವಿಶೇಷ*  ಪುಸ್ತಕದ ಮರು ಮುದ್ರಣ ಮಾಡಿ ಬಿಡುಗಡೆಗೊಳಿಸಲಾಯಿತು. 🙏🙏🙏 " ಲಿಂಗದೇವನ ಲೀಲಾ ವಿಶೇಷ" ಪುಸ್ತಕ ಬೇಕಾಗಿದ್ದರೆ ಈ ಕೆಳಗಿನ ನಂಬರ್ ಗೆ ಕಾಲ್ ಮಾಡಿ ಅಥವಾ ವಾಟ್ಸಪ್ ಮೆಸೇಜ್ ಮಾಡಿ ಸಂಪರ್ಕಿಸಬಹುದು . 9886691820

ಪೂಜ್ಯ ಮಾತೆಮಹಾದೇವಿಯವರ ಅನುಪಸ್ಥಿತಿಯಲ್ಲಿ ಲಿಂಗಾಯತ ಧರ್ಮ ಹೋರಾಟದ ನಾಯಕತ್ವದ ಕೊರತೆ

ಇಮೇಜ್
 ಪೂಜ್ಯ ಮಾತೆಮಹಾದೇವಿಯವರ ಅನುಪಸ್ಥಿತಿಯಲ್ಲಿ ಲಿಂಗಾಯತ ಧರ್ಮ ಹೋರಾಟದ ನಾಯಕತ್ವದ ಕೊರತೆ 📌 2018 ರಲ್ಲಿ ಜಸ್ಟಿಸ್ ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ಅಂದಿನ ಸಿದ್ದರಾಮಯ್ಯ ಸರ್ಕಾರವು ಲಿಂಗಾಯತ ಪ್ರತ್ಯೇಕ ಧರ್ಮ ಮತ್ತು ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಅನುಮೋದನೆ ನೀಡಿತ್ತು. ಹಾಗೂ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿತ್ತು ಆದರೆ ಇಲ್ಲಿಯ ತನಕವು ಕೂಡ ಕೇಂದ್ರ ಸರ್ಕಾರವು ಈ ಪ್ರಸ್ತಾವನೆಯನ್ನು ಅನುಮೋದನೆ ಮಾಡಿಲ್ಲ. ಕರ್ನಾಟಕದಲ್ಲಿ ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ಆಗಲಿದೆ.  ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಎರಡು ಕಡೆ ಒಂದೇ ಪಕ್ಷ ಅಧಿಕಾರದಲ್ಲಿದೆ. ಇಂಥ ಸಮಯದಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ Rally ಗಳನ್ನು ಮಾಡಿ ಸರ್ಕಾರದ ಮೇಲೆ ಒತ್ತಡ ತರುವಂತಹ ಕೆಲಸ ಏಕೆ ಆಗುತ್ತಿಲ್ಲ?  ಪೂಜ್ಯ ಲಿಂಗೈಕ್ಯ ಮಾತೆಮಹಾದೇವಿಯವರ ಅನುಪಸ್ಥಿತಿಯಲ್ಲಿ ಲಿಂಗಾಯತ ಧರ್ಮ ಹೋರಾಟದ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆಯೆ? ಪೂಜ್ಯ ಲಿಂಗೈಕ್ಯ ಮಾತೆಮಹಾದೇವಿಯವರಿಗೆ ಇದ್ದಂತಹ ಛಲ ಮತ್ತು ಕಳಕಳಿ ಇಂದಿನ ಮಠಾಧೀಶರಲ್ಲಿ, ಪೀಠಾಧಿಪತಿ ಗಳಲ್ಲಿ ಇಲ್ಲದಾಗಿದೆಯೆ? ಶಿಕ್ಷಣ ಸಂಸ್ಥೆಗಳ ಮೂಲಕ ಕೋಟಿ ಕೋಟಿ ಆದಾಯ ಮಾಡಿಕೊಳ್ಳುತ್ತಿರುವ ಲಿಂಗಾಯತ ಮಠಗಳಿಗೆ ತಮ್ಮದೇ ಧರ್ಮದ ಹೋರಾಟಕ್ಕಾಗಿ ಸ್ವಲ್ಪ ಹಣವನ್ನು ವಿನಿಯೋಗಿಸಿ ಹೋರಾಟ ನಡೆಸಲು ಏಕೆ ಮುಂದಾಗುತ್ತಿಲ್ಲ? ಪೂಜ್ಯ ಮಾತಾಜಿವರು ಲಿಂಗ...

ಲಿಂಗಾಯತ ಧರ್ಮ ಸಂವಿಧಾನಕ್ಕೆ ಗುರು ಚೆನ್ನಬಸವಣ್ಣನವರ ಕೊಡುಗೆ - Part 1

ಇಮೇಜ್
 *ಲಿಂಗಾಯತ ಧರ್ಮ ಸಂವಿಧಾನಕ್ಕೆ ಗುರು ಚೆನ್ನಬಸವಣ್ಣನವರ ಕೊಡುಗೆ* ಭಾಗ-೧ Contributions of Guru ChennaBasavanna to the Constitution of Lingayat Religion, Part-1 ಗುರು ಚೆನ್ನಬಸವಣ್ಣನವರ ಜಯಂತೋತ್ಸವ ಈ ವರ್ಷ 26-10-2022ರಂದು ಬಂದಿದೆ. ನನ್ನ ಲೇಖನಗಳು ತುಂಬಾ ಉದ್ದವಿರುತ್ತವೆ ಓದಲಿಕ್ಕೆ ಕಷ್ಟವಾಗುತ್ತದೆ ಎಂದು ಕೆಲವರು ಹೇಳಿದ್ದಾರೆ. ಅದಕ್ಕಾಗಿ ಆ ಮಹಾ ಗುರುವಿನ ಜೀವನ ಸಾಧನೆ ಸಂದೇಶವನ್ನು ಈ ಮೂರುದಿನಗಳ ಕಾಲ ತಿಳಿದುಕೊಳ್ಳೋಣ. ನಾಲ್ಕು ಭಾಗಗಳಲ್ಲಿ (24-10-2022 ಭಾಗ-1, 25-10-2022ರಂದು ಭಾಗ-1, 26-10-2022ರಂದು ಬೆಳಿಗ್ಗೆ ಭಾಗ-3, ಮತ್ತು ಸಂಜೆ ಭಾಗ-4)  ಮೇಲಿನ ಶೀರ್ಷಿಕೆಯ ವಿಚಾರಗಳನ್ನು ಮಂಡಿಸುತ್ತೇನೆ. ವೀರ ಮಾತೆ, ಕ್ರಾಂತಿ ಗಂಗೋತ್ರಿ ಅ ತಾಯಿ ಅಕ್ಕನಾಗಮ್ಮನವರ ಚಿದ್ಗರ್ಭದಲ್ಲಿ ಹುಟ್ಟಿ ಗುರು ಬಸವಣ್ಣನವರ ಮಡಿಲಲ್ಲಿ ಬೆಳೆದ ಅಪರೂಪದ ಶಿಶು ಗುರು ಚೆನ್ನಬಸವಣ್ಣನವರು. ತಾಯಿಯ ಒಡಲಲ್ಲಿ ಇರುವಾಗಲೇ ಗುರು ಬಸವಣ್ಣನವರಿಂದ ಅನುಗೃಹ ಪಡೆದ ಕಾರಣಿಕ ಶಿಶು ಗುರು ಚೆನ್ನಬಸವಣ್ಣನವರು.  * ೧೨ನೇ ಶತಮಾನದ ಆದಿ ಶರಣರಲ್ಲಿ ಸಂಪೂರ್ಣವಾಗಿ ಲಿಂಗಾಯತ ಧರ್ಮದಲ್ಲೇ ಹುಟ್ಟಿ ಬೆಳೆದಿದ್ದು ಗುರು ಚೆನ್ನಬಸವಣ್ಣನವರು ಮಾತ್ರ. ಅವರಿಂದ ಅನೇಕ ಸ್ವತಂತ್ರ ವಿಚಾರಗಳು ಲಿಂಗಾಯತ ಧರ್ಮ ಸಂವಿಧಾನಕ್ಕೆ ಕೊಡಲ್ಪಟ್ಟಿವೆ. ಗುರುಬಸವಣ್ಣನವರ ನಂತರ ಲಿಂಗಾಯತ ಧರ್ಮಕ್ಕೆ ಎರಡನೆಯದಾಗಿ ಅತೀ ಹೆಚ್ಚಿನ ಕೊಡುಗೆಯನ್ನು ನೀಡಿದವರು...

ಶರಣ ಸಚ್ಚಿದಾನಂದನವರ ಮೇಲೆ ಹಲ್ಲೆ ಮಾಡುವುದೆಂದರೆ ಬಸವಾತ್ಮಜೆ ಮೇಲೆ ಹಲ್ಲೆ ಮಾಡಿದಂತೆ...

ಇಮೇಜ್
ಜಹಜಕಜಃಜ * ಶರಣ ಸಚ್ಚಿದಾನಂದನವರ ಮೇಲೆ ಹಲ್ಲೆ ಮಾಡುವುದೆಂದರೆ ಬಸವಾತ್ಮಜೆ ಮೇಲೆ ಹಲ್ಲೆ ಮಾಡಿದಂತೆ.. .* ಶರಣ ಸಚ್ಚಿದಾನಂದ ಹಲ್ಲೆ ನಡೆಯುವಾಗ ತೆದೆದ video clips ವ್ಯಕ್ತಿಯನ್ನು ಕೊಲ್ಲಬಹುದೇ ಹೊರತು; ವ್ಯಕ್ತಿಯ ಸಂಶೋಧನೆಯನ್ನಲ್ಲ. ಎನ್ನುವ ಚಿಂತಕರ ಮಾತಿನಂತೆ  ಸಚ್ಚಿದಾನಂದ ಅವರ ಮೇಲೆ ಹಲ್ಲೆ ಮಾಡುವುದೆಂದರೆ, ಅವರೊಳಗಿನ ವಚನ ಸಾಹಿತ್ಯದ ಸಂಶೋಧನಾ ಮಹಾಜ್ಞಾನಕ್ಕೆ ಅಪಮಾನ ಮಾಡಿದಂತೆ, ಹಲ್ಲೆ ಮಾಡಿದಂತೆ ಹಲ್ಲೆಗೆ ಮುಂದಾದ ದುಷ್ಟಶಕ್ತಿಗಳ ನಡೆಯನ್ನು ವಿಚಾರವಾದಿಗಳಾದ ನಾವು ಉಗ್ರವಾಗಿ ಖಂಡಿಸುತ್ತೇವೆ. ಅವರು ಬರೆಯುವ ಒಂದೊಂದು ಲೇಖನವೂ ಮೌಲ್ಯಗಳಿಂದ ಕೂಡಿವೆ. ವಚನ ಸಾಹಿತ್ಯದ ಸತ್ಯ ಸಂಶೋಧನೆಗಳೇ ಆಗಿವೆ. ನಮ್ಮೊಳಗಿನ ತಪ್ಪನ್ನು ತಿದ್ದಿಕೊಳ್ಳಲು ವಚನ ಸಾಹಿತ್ಯ ದಿವ್ಯ ಮಾರ್ಗದರ್ಶಿಯಾಗಿವೆ. ಮಾಡಿದ ತಪ್ಪನ್ನು ವಚನ ಸಾಹಿತ್ಯದ ಸಂವಿಧಾನದ ಆಶಯದಂತೆ ತಿದ್ದಿಕೊಂಡು ಮುನ್ನೆಡೆಯಬೇಕೇ ವಿನಾ, ಸಚ್ಚಿದಾನಂದ ಅವರ ಮೇಲೆ ಹಲ್ಲೆ ಮಾಡಿರುವುದು ಅಕ್ಷಮ್ಯ ಅಪರಾಧ.  ಗೂಬೆ ಸೂರ್ಯನನ್ನು ನಿಂದಿಸಿದಂತೆ, ಕಾಗೆ ಚಂದ್ರಮನನ್ನು ನಿಂದಿಸಿದಂತೆ, ವಚನ ಸಾಹಿತ್ಯ ಅಧ್ಯಯನವಿರಲಾರದ ಅಂದ ಅಭಿಮಾನಿಗಳು ಸಚ್ಚಿದಾನಂದವರು ಬರೆದ ಸಂಸೋಧಿತ ವಿಚಾರಗಳನ್ನು ನಿಂದಿಸುವುದಲ್ಲದೆ ದೈಹಿಕ ಹಲ್ಲೆಗೆ ಮುಂದಾಗಿರುವುದು ಅವರ  ಬೌದ್ಧಿಕ ದಿವಾಳಿತನವು ಎತ್ತಿ ತೋರಿಸುತ್ತದೆ.  ಬಸವಾತ್ಮಜೆಯ ಎಲ್ಲಾ ಆಶಯಗಳನ್ನು ಗಾಳಿಗೆ ತೂರಿ, ಅವರೆಲ್ಲ ಆಶಯಗಳ ವಿರುದ್ಧವಾಗ...

ಅಖಂಡ ಬ್ರಹ್ಮಚಾರಿ ಗುರು ಬಸವಣ್ಣನವರೊಬ್ಬರೇ

ಇಮೇಜ್
  ಅಖಂಡ ಬ್ರಹ್ಮಚಾರಿ ಗುರು ಬಸವಣ್ಣನವರೊಬ್ಬರೇ ಸತಿಯ ಕಂಡು ವ್ರತಿಯಾದ ಬಸವಣ್ಣ.  ವ್ರತಿಯಾಗಿ ಬ್ರಹ್ಮಚಾರಿಯಾದ ಬಸವಣ್ಣ.  ಬ್ರಹ್ಮಚಾರಿಯಾಗಿ ಭವಗೆಟ್ಟನಯ್ಯಾ ಬಸವಣ್ಣ.  ಗುಹೇಶ್ವರ ಲಿಂಗದಲ್ಲಿ ಅಖಂಡ ಬ್ರಹ್ಮಚಾರಿ ಬಸವಣ್ಣ ಒಬ್ಬನೇ. ಬ್ರಹ್ಮಚರ್ಯೆ ಎನ್ನುವುದು ಬಹುದೊಡ್ಡ ಸಾಧನೆ. ಅದು ಕೇವಲ ಸಾಧನೆ ಮಾಡಿ ಬಿಡುವಂತಹುದಲ್ಲ ಇಡೀ ಜೀವಮಾನವೆಲ್ಲ ಕಾಯ್ದುಕೊಳ್ಳುವಂತಹದ್ದು. ಗುರು ಬಸವಣ್ಣನವರ ಬಗ್ಗೆ ಗುರು ಅಲ್ಲಮಪ್ರಭುದೇವರು ಹೇಳುವ ಮೇಲಿನ ವಚನದಲ್ಲಿ ವಿಶೇಷವಾದ ಅರ್ಥವಿದೆ. ಗುರು ಬಸವಣ್ಣನವರ ಕೆಲವು ವಚನಗಳನ್ನು ಗಮನಿಸಿದರೆ ಅವರು ಸಾಧಿಸಿದ ಸಾಧನೆ ಮತ್ತು ತಾವು ಮದುವೆಯಾಗಿ ಕರೆತಂದ ಶರಣೆ ನೀಲಗಂಗಮ್ಮನವರಿಗೂ ಬೋಧಿಸಿದ ಬೋಧನೆ ಅಗಾಧವಾದುದು.  ಮೊದಲಿಗೆ ಇಬ್ಬರು ಸತಿಪತಿಗಳಾಗಿ ಬದುಕಿ ನಂತರದ ದಿನಗಳಲ್ಲಿ ಇಬ್ಬರೂ ಲಿಂಗದೇವರಿಗೆ ಸತಿಯಾದರು. ಗುರು ಬಸವಣ್ಣನವರ ಈ ಕೆಳಗಿನ ವಚನ ಅವರು ಮದುವೆಯಾಗಿ ಶರಣೆ ನೀಲಗಂಗಮ್ಮನವರನ್ನು ಮನೆ ತುಂಬಿಸಿಕೊಂಡ ದಿನ ಬರೆದ ವಚನ ಎನಿಸುತ್ತದೆ. ಆ ವಚನದ ಸಾಲುಗಳು ಹೀಗಿವೆ: *ಐದು ಮಾನವ ಕುಟ್ಟಿ ಒಂದು ಮಾನವ ಮಾಡು, ಕಂಡಾ ಮದವಳಿಗೆ!* *ಇದು ನಮ್ಮ ಬಾಳುವೆ, ಮದವಳಿಗೆ! ಇದು ನಮ್ಮ ವಿಸ್ತಾರ, ಮದವಳಿಗೆ!* ಐದು ಮಾನ ಎಂದರೆ ಐದು ಸೇರು (ಧಾನ್ಯಗಳ ಅಳತೆ ಮಾಡುವ ಒಂದು ಅಳತೆಗೋಲು) ಐದು ಸೇರು ಇರುವಂತಹ ಧಾನ್ಯಗಳನ್ನು ಕುಟ್ಟಿ ಒಂದೇ ಮಾನವ ಮಾಡು - ಒಂದೇ ಸೇರು ಮಾಡು. ಎಂದರೆ ಪಂಚೇಂದ್ರೀಯಗಳೊಡನೆ ಕ...

Time will Answer - ಸಮಯ ಉತ್ತರಿಸುತ್ತದೆ

ಇಮೇಜ್
 *ಗುರು ನಿಷ್ಟೆ* *ತತ್ವ ನಿಷ್ಟೆ* *ವ್ಯಕ್ತಿ ನಿಷ್ಟೆ* *ಸಂಸ್ಥೆಯ ನಿಷ್ಟೆ* ಅವರವರ ವೈಯಕ್ತಿಕ.. ಹೆಳಿದ್ದರು ಹೆಳದೆಇದ್ದರು,  ಅವರವರ   ನಡುವಳಿಕೆಯಿಂದ, ಗೊತ್ತಾಗುತ್ತದೆ Actually ಇಲ್ಲಿ Dec 28 ನಂತರ, ಲಿಂಗಾಯತರಲ್ಲಿ ಸದ್ಯಕ್ಕೆ ನಾಲ್ಕು Group ಗಳಾಗಿ ಜನರನ್ನು/ಶರಣರನ್ನು ಗುರುತಿಸಬಹುದು. 1. ಲಿಂಗದೇವ ನಿಷ್ಟರು, ಕೊಡಲಸಂಗಮದೇವ ವಿರೊಧಿಗಳಲ್ಲದವರು Group, ವಚನ ಅಂತರಾಳವನ್ನು ಅರಿತು, ಲಿಂಗದೇವ ಮಾಡಿರುವ ಮೊಲ ಉದ್ದೇಶ ಅರೆತ‌ ಶರಣರನ್ನು ಈ Group ಗೆ ಸೇರಿಸಬಹುದು. 2. ಕೊಡಲಸಂಗದೆವ ಅಡಿಯಲ್ಲಿ ಲಿಂಗದೇವ ವಿರೋಧಿಸುವ ಒಂದು Group, ಇದರಲ್ಲಿ ವ್ಯಾಪಾರಿಗಳು, ರಾಜಕಾರಣಿಗಳು, ಇತರ ಮಠದ ಜಂಗಮರು ಹಾಗು ಲಿಂಗೈಕ್ಯ ಮಾತಾಜಿಯವರ ಸಾಧನೆ ಸಹಿಸದ ಜನರು ಈ Group ನಲ್ಲಿ ಸೆರಿಸಬಹುದು. 3. ಲಿಂಗದೇವ ಸರಿಯಾಗಿದೆ ಅಂತ ಗೊತ್ತಿದ್ದರು, ಕೊಡಲಸಂಗಮದೇವ ಮಾತ್ರ ಹೆಳುವವರ ಮೆಲೆ  ಅವಲಂಬಿತರಾಗಿರುವ ಜನರನ್ನು ಈ Group ಗೆ ಸೆರಿಸಬಹುದು, ಬೆಡದಮನಸಿನಿಂದಲು, ಗುರುದ್ರೊಹ ಸ್ವಿಕರಿ, ಅವಲಂಬಿತನವನ್ನು ಯಾವುದೆ ಕಾರಣಕ್ಕೆ ಬಿಡದ ಜನರು (ಹೆಡಿಗಳು). ತಮ್ಮ ವ್ಯವಹಾರ, ಬರುವ ಗಳಿಕೆ ಇವರಿಗೆ ಅತಿ‌ಮೊಖ್ಯವಾಗಿರುತ್ತದೆ.‌ ಇಂಥಹ ಜನರನ್ನು ಈ Group ಗೆ ಸೇರಿಸಬಹುದು, ಇದರಲ್ಲಿ ಪದಾಧಿಕಾರಿಗಳು, ಸಣ್ಣಪುಟ್ಟ ವ್ಯವಹಾರ ಮಾಡುವರು, ಪ್ರವಚನ ಮಾಡುವುದಕ್ಕೆ ಬರದೆ ಇರುವ ಜಂಗಮರು, ಇಂಥಹ ಜಂಗಮರ ಅಡಿಯಲ್ಲಿರುವ ಸಾಧಕರು, ಸಂಸ್ಥಯ ಮೆಲೆ ಅವ...

ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಜನ್ಮ - ಲಿಂಗಾಯತ ಧರ್ಮದ ಪುನರ್ಜನ್ಮ

ಇಮೇಜ್
  ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಜನ್ಮ - ಲಿಂಗಾಯತ ಧರ್ಮದ ಪುನರ್ಜನ್ಮ. ಆನೆಯು ಆ ದಾರಿಯಲ್ಲಿ ಹೋಯಿತ್ತೆಂದಡೆ ಆಡೂ ಆ ದಾರಿಯಲ್ಲಿ ಹೋಯಿತ್ತೆನಬಹುದೆ ? ಸಂಗನ ಶರಣರಿಗೆ ಆನು ಸರಿಯೆಂದು ಗಳಹಲುಬಹುದೆ ? ಜಂಗಮಕ್ಕೆ ಮಾಡುವ ಭಕ್ತರಿಗೆ ಆನು ಸರಿಯೇ ಹೇಳಾ ಲಿಂಗದೇವಾ ಆನೆ ಬೃಹದಾಕಾರದ ಪ್ರಾಣಿ. ಅದು ನಡೆದ ಜಾಗದಲ್ಲಿ ರಸ್ತೆ ನಿರ್ಮಾಣವಾಗುತ್ತದೆ. ಸಾಮಾನ್ಯವಾಗಿ ಕಾಡಿನಲ್ಲಿ ಹುಲ್ಲು, ಚಿಕ್ಕಪುಟ್ಟ ಗಿಡಗಳು ಇರುವ ಕಡೆ ಆನೆ ಹೋದರೆ ಅದು ತನ್ನ ಸೊಂಡಿಲಿನಿಂದ ತನಗೆ ಅಡ್ಡ ಬಂದ ಗಿಡ-ಮರ ಟೊಂಗೆಗಳನ್ನು ಕಿತ್ತಿ ಎಸೆಯುತ್ತದೆ. ಹೀಗೆ ಒಂದು ಸಲ ಆನೆಯು ಹೋಗುವ ದಾರಿಯು ಎಷ್ಟೇ ಇಕ್ಕಟ್ಟಾಗಿದ್ದರೂ ಅಲ್ಲಿ  ರಸ್ತೆ ನಿರ್ಮಾಣವಾಗುತ್ತದೆ. ಆ ದಾರಿಯಲ್ಲಿ ಇತರ ಆಡಿನಂತಹ ಸಣ್ಣ ಪುಟ್ಟ ಪ್ರಾಣಿಗಳು ಯಾವುದೇ ತೊಂದರೆ ಇಲ್ಲದೆ ಸಾಗಬಹುದು. ಅದೇ ರೀತಿ ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿಯವರು ಜಿಡ್ಡುಗಟ್ಟಿದ ಸಂಪ್ರದಾಯದಲ್ಲಿ ಆನೆಯಂತೆ ಮುನ್ನುಗ್ಗಿ ಅನೇಕ ಮೂಢನಂಬಿಕೆಗಳು, ತಪ್ಪು ಆಚರಣೆಗಳೆಂಬ ಗಿಡ ಮರಗಳನ್ನು ಕಿತ್ತೆಸೆದು ನವ ಪಥವನ್ನು ನಿರ್ಮಿಸಿದ್ದಾರೆ. ಸುಮಾರು 50 ವರ್ಷಗಳ ಹಿಂದಿನ ದಿನಗಳನ್ನು ನೋಡಿದರೆ ಅಂದು ಬಸವಣ್ಣನವರು ಎಂದರೆ ಯಾರು? ವಚನಗಳೆಂದರೇನು? ಬಸವ ತತ್ತ್ವ, ಲಿಂಗಾಯತ ಧರ್ಮ, ಬಸವ ಧರ್ಮ ಎನ್ನುವ ಶಬ್ದಗಳು ಸಂಪೂರ್ಣವಾಗಿ ಮರೆಮಾಚಿ ಹೋದಾಗ ಮತ್ತೊಮ್ಮೆ 12ನೆಯ ಶತಮಾನದ ಭವ್ಯತೆ ದಿವ್ಯತೆಯನ್ನು ಭಾರತ ದೇಶದಲ್ಲಿ ಪ್ರತಿಷ್ಠಾಪಿಸಿದ ಮೊಟ್ಟಮೊ...

ಮೆರವಣಿಗೆ/ಸನ್ಮಾನ V/s ತತ್ವ

ಇಮೇಜ್
 ➡️ 📌 ದಿನಾಂಕ 23/8/22 ರ  ನ್ಯೂಸ್ ಪೇಪರ್ (ಪ್ರಜಾವಾಣಿ) ವರದಿಯಲ್ಲಿ "ಮಾತೆಗಂಗಾದೇವಿ ಮೆರವಣಿಗೆ, ಸನ್ಮಾನ" ಎಂಬ ಶೀರ್ಷಿಕೆಯಲ್ಲಿ ಬರೆದಿರುವ ಕೆಲವು ಸಾಲುಗಳು ಈ ರೀತಿ ಇವೆ  ---- "ವಚನಾಂಕಿತ ತಿದ್ದಿರುವ ಬಗ್ಗೆ ಕ್ಷಮೆ ಕೇಳಿ ತಪ್ಪನ್ನು ತಿದ್ದಿಕೊಳ್ಳುವುದಾಗಿ ಹೇಳಿಕೆ ನೀಡಿದರೆ, ಮಾತೆಮಹಾದೇವಿ ಅವರನ್ನು ಮೆರವಣಿಗೆ ಮೂಲಕ ಬಸವೇಶ್ವರ ದೇವಸ್ಥಾನಕ್ಕೆ ಕರೆತಂದು ಅದ್ದೂರಿಯಾಗಿ ಸನ್ಮಾನಿಸಲಾಗುವುದು ಎಂದು ದೇವಸ್ಥಾನ ಸಮಿತಿಯಿಂದ ಹೇಳಲಾಗಿತ್ತು"  ಈ ಸಾಲುಗಳನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ. ಬಸವಕಲ್ಯಾಣ ದೇವಸ್ಥಾನ ಕಮಿಟಿಯವರು ಅದ್ದೂರಿಯಾಗಿ ಮೆರವಣಿಗೆ  ಮಾಡುತ್ತೇವೆ ಎಂದು  *offer* ಕೊಟ್ಟರೂ ಕೂಡ ಪೂಜ್ಯ  ಮಾತಾಜಿ(ಮಾತೆಮಹಾದೇವಿ)ಯವರು ತಮ್ಮ ಜೀವಿತಾವಧಿಯಲ್ಲಿ ತಾನು ಮಾಡಿದ್ದು ತಪ್ಪು ಎಂದು ಒಪ್ಪಿಕೊಳ್ಳಲಿಲ್ಲ.. ಕ್ಷಮೆ ಕೇಳಲಿಲ್ಲ...  ಏಕೆ??? ಮಾತಾಜಿಯವರು ಮನಸ್ಸು ಮಾಡಿದ್ದರೆ ತಮ್ಮ ಸಂಶೋಧನೆಯನ್ನು ವಾಪಸ್ಸು ತೆಗೆದುಕೊಂಡು ಇಂತಹ ನೂರಾರು ಮೆರವಣಿಗೆಗಳನ್ನು ಸನ್ಮಾನಗಳನ್ನು ಮಾಡಿಸಿಕೊಳ್ಳಬಹುದಿತ್ತು.  ನೂರಾರು ಪುರಸ್ಕಾರಗಳನ್ನು ಪಡೆಯಬಹುದಿತ್ತು. ಆದರೆ ಅವರು ಇದಕ್ಕೆ ಒಪ್ಪಲಿಲ್ಲ. ಏಕೆಂದರೆ ಪೂಜ್ಯ ಮಾತಾಜಿಯವರಿಗೆ *ತನ್ನನ್ನು ತಾನು ಮೆರೆಸಿಕೊಳ್ಳುವುದಕ್ಕಿಂತ ಗುರು ಬಸವಣ್ಣನವರ ತತ್ವವನ್ನು ಇಡೀ ಜಗತ್ತಿಗೆ ಮೆರೆಸಬೇಕೆಂಬ ಅದಮ್ಯ ಆಸೆ ಇತ್ತು.* ಲಿಂಗದೇವ ವಚನಾಂಕಿತ ಪ್ರ...

ತಮಗೊಂದು ಕಥೆ ಹೇಳ್ತಿನಿ ಕೇಳಿ

ಇಮೇಜ್
 ತಮಗೊಂದು ಕಥೆ ಹೇಳ್ತಿನಿ ಕೇಳಿ.... ಒಂದುರಲ್ಲಿ ಒಬ್ಬ ಶಿಲ್ಪಕಾರ ಮೂರು ಕತ್ತೆಗಳನ್ನು ಸಲವಿದ್ದ.. ಆತ ಮೂರ್ತಿ ಕೆತ್ತನೆ ಮಾಡಿ.. ಪಟ್ಟಣಕ್ಕೆ ಒಯಿದು ಮಾರಾಟ ಮಾಡಿ ಬಂದ ದುಡ್ಡಲ್ಲಿ... ತನ್ನ ಉಪಜೀವನ ನಡೆಸುತ್ತಿದ್ದಾ.....ಒಂದು ದಿನ... ಮೂರು ಮೂರ್ತಿಗಳನ್ನ ಮಾಡಿದ... 1) ವಿಶ್ವ ಗುರು ಬಸವಣ್ಣನವರದು.... 2) ಪ್ರವಚನ ಪಿತಾಮಹ ಲಿಂಗಾನಂದ ಅಪ್ಪಾಜಿಯವರದು... 3) ಮಹಿಳಾ ಜಗತಗುರು ಲಿಂಗೈಕ್ಯ ಮಾತೆ ಮಾಹಾದೇವಿ ತಾಯಿಯವರದು....  ಮೂರು ಕತ್ತೆಗಳ ಮೇಲೆ ಹೋರಿಕೊಂಡು... ಮಾರಾಟಕ್ಕೆ ಪಟ್ಟಣಕ್ಕೆ ನಡೆದ. ....ಮಧ್ಯದಲ್ಲಿ ಹತ್ತುವ ಕೆಲವು ಹಳ್ಳಿಗಳಲ್ಲಿ.... ಪೂಜೆ. ಸನ್ಮಾನ.. ನಡೆಯಿತು... ಕತ್ತೆಗೊಂದು ಮಾಲೆ ... ಮೇಲೆ ಹೋರಿಸಿದ ಮೂರ್ತಿಗಳಿಗೆ ಒಂದು ಮಾಲೆ ... ಮಾಡುತ್ತಾ ಭಕ್ತರು ಕತ್ತೆಗೆ ನೈವಾದ್ಯ ಕೂಡುವದು... ತೆಂಗು ಕಾಯಿ ಕರ್ಪುರ... ಮಾಡುತ್ತಲೇ ಹೋದರು,,,,, ಕತ್ತೆಗೊಂದು... ಮದ ಏರಿತು... ನನಗೆ ಎಷ್ಟು ಸನ್ಮಾನ... ನನಗೆ ಎಷ್ಟು ತಿಂಡಿ ತಿನಿಸು.. ಈ ವೂರಲ್ಲಿ ಅಂತ ತನ್ನನ್ನೇ ತಾನು ಗರ್ವಿ ಆಯಿತು.... ನನ್ನ ಮಾಲೀಕ ಇಲ್ಲಿವರೆಗೂ ನನಗೆ ಯಾವತ್ತು ಎರಡು ಅಗರಬತ್ತಿ ಹಚ್ಚಿಲ್ಲ... ಸಿಹಿ ತಿಂಡಿ ತಿನಿಸುಗಳನ್ನ ಕೊಟ್ಟಿಲ್ಲ,,, ಆದರೆ ನನಗೆ ಇ ಊರಲ್ಲಿ ಎಷ್ಟು ಸನ್ಮಾನ ಎಷ್ಟು ಸನ್ಮಾನ,,, ಅಂತ ಗರ್ವದಿಂದ ತುರಾಡಿತು,,,,,ಮಾಲೀಕ ಮೂರ್ತಿಗಳನ್ನು ಮಾರಾಟ ಮಾಡಿ....ಮತ್ತೆ ಮಾಲೀಕ ಕತ್ತೆಗಳನ್ನು ತನ್ನ ಮನೆಗೆ ಕರೆದು ಕೊಂಡು ಬಂದು ಕಾ...

ಪೂಜ್ಯ ಶ್ರೀ ಗಂಗಾಮಾತಾಜಿಯವರು ಗುರು ಬಸವಣ್ಣನವರ ಆದೇಶಗಳನ್ನು ತಿರಸ್ಕಿರಿಸಿರುವುದನ್ನು ಪ್ರಶ್ನಿಸುತ್ತ ಗುರು ಬಸವಣ್ಣನವರ ಆದೇಶಗಳನ್ನು‌ಪಾಲಿಸಲು ಆಗ್ರಹಿಸಿ ಬರೆದ ಪತ್ರ.

ಇಮೇಜ್
 

ರೊಹಿತ ಚಕ್ರತಿರ್ಥ/ವಕ್ರತಿರ್ಥ ನ ಅಪ್ಪನ ಮನೆಯ ಸ್ವತ್ತಾ, ಕನ್ನಡ ಸಾಹಿತ್ಯ ತಿರುಚುವುದಕ್ಕೆ

ಇಮೇಜ್
  ಪಠ್ಯಪುಸ್ತಕದಲ್ಲಿ ಆದ ಬದಲಾವಣೆಗಳನ್ನು ಸರಿಪಡಿಸಿ ರೋಹಿತ್ ಚಕ್ರತಿರ್ಥ ನನ್ನು ಸಮಿತಿಯಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾಧ್ಯಮಗಳೊಂದಿಗೆ ಮಾತನಾಡಲು ಆಯಿತು. ಈ ಸಂದರ್ಭದಲ್ಲಿ  ಬೆಳಗಾವಿ ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷರಾದಅಶೋಕ್ ಬೆಂಡಿಗೇರಿ. ರಾಷ್ಟ್ರೀಯ ಬಸವದಳ ರಾಜ್ಯ ಘಟಕದ  ಕಾರ್ಯದರ್ಶಿಗಳಾದ ಕೆ. ಶರಣ ಪ್ರಸಾದ್  ಲಿಂಗಾಯತ ಧರ್ಮ ಮಹಾಸಭೆಯ ಅಧ್ಯಕ್ಷರಾದ ಮಹಾಂತೇಶ್ ಗುಡಸ್. ಕಾರ್ಯದರ್ಶಿ ಆನಂದ ಗುಡಸ. ಎಸ್ ಎಸ್ ಪಾಟೀಲ್. ರಾಷ್ಟ್ರೀಯ ಬಸವದಳದ ಎಲ್ಲಾ ಪದಾಧಿಕಾರಿಗಳು. ಉಪಸ್ಥಿತರಿದ್ದರು.

ಪೀರ ಪಾಶಾ ದರ್ಗಾವೆ ಅನುಭವ ಮಂಟಪದ ವಿವಾದದ ನಿಜ ಸತ್ಯ

ಇಮೇಜ್
 ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಬಸವ ಪ್ರಕಾಶ ಸ್ವಾಮೀಜಿ. ಪೀರ ಪಾಶಾ ದರ್ಗಾ ಅನುಭವ ಮಂಟಪ ಅಲ್ಲ: ಬಸವಲಿಂಗ ಪಟ್ಟದೇವರು ಮಹತ್ವದ ಮಾಹಿತಿ ಬಸವ ಕಲ್ಯಾಣದಲ್ಲಿರುವ ಪೀರ ಪಾಶಾ ದರ್ಗಾದಲ್ಲಿ ಅನುಭವ ಮಂಟಪವಿದ್ದ ಬಗ್ಗೆ ಸಾಕ್ಷ್ಯಗಳಿಲ್ಲ. ಜಗಜ್ಯೋತಿ ಬಸವಣ್ಣನವರ ಬಗ್ಗೆ ಹತ್ತಾರು ಗ್ರಂಥಗಳು ಬಂದಿವೆ. ದರ್ಗಾದಲ್ಲಿ ಅನುಭವ ಮಂಟಪವಿದೆ ಅಂತ ಯಾರು ಬರೆದಿಲ್ಲ ಎಂದು ಭಾಲ್ಕಿ ಹಿರೇಮಠದ ಪರಮಪೂಜ್ಯ ಬಸವಲಿಂಗ ಪಟ್ಟದೇವರು ಸ್ಪಷ್ಟಪಡಿಸಿದ್ದಾರೆ. ಹೌದು ದೇಶಾಧ್ಯಂತ ಮಂದಿರ-ಮಸೀದಿಗಳ ಮಧ್ಯ ದೊಡ್ಡ ಸಂಘರ್ಷ ಶುರುವಾಗಿದೆ. ಇದೀಗ ಬಸವಕಲ್ಯಾಣದ ಪೀರ ಪಾಶಾ ದರ್ಗಾ 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಎಂಬ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಮಾತನಾಡಿರುವ ಪರಮಪೂಜ್ಯ ಬಸವಲಿಂಗ ಪಟ್ಟದೇವರು ಅನುಭವ ಮಂಟಪ ಸಾಧಾರಣ ಕಟ್ಟಡವಾಗಿರಬಹುದು. ಇತಿಹಾಸಕಾರರು ಸಂಶೋಧನೆ ಮಾಡಿದ್ರೆ ಮಾತ್ರ ಗೊತ್ತಾಗುತ್ತೆ. ಆದರೆ ಇದುವರೆಗೂ ಕೂಡ ಆ ದರ್ಗಾದಲ್ಲಿ ಅನುಭವ ಮಂಟಪದ ಕುರುಹಗಳಿವೆ ಎಂದು ಎಲ್ಲಿಯೂ ಉಲ್ಲೇಖವಾಗಿಲ್ಲ. ಬಸವಣ್ಣನವರು ಸ್ಥಾವರಕ್ಕೆ ಅವರು ಮಹತ್ವ ಕೊಟ್ಟಿರಲಿಲ್ಲ. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎನ್ನುವುದು ಅವರ ಸಿದ್ಧಾಂತ. ಈ ದೃಷ್ಟಿಯಿಂದ ನೋಡಿದ್ರೆ ಅವರ ಅನುಭವ ಮಂಟಪ ಬಹುತೇಕ ಸಾಧಾರಣ ಕಟ್ಟಡ ಇರಬಹುದು. ಹಂಚಿನ ಮನೆಯೋ ಅಥವಾ ಮತ್ಯಾವುದೋ ಅನುಭವ ಮಂಟಪ ಕೂಡುವ ಒಂದು ವೇದಿಕೆ ಇರಬಹುದು. ಕಾಲಾನುಕ್ರಮದಲ್ಲಿ ಅದು...

ಇಚ್ಛಾ ಪತ್ರ

ಇಮೇಜ್
 ಇಚ್ಛಾ ಪತ್ರ ಕೆಲವು ದಿನಗಳ ಹಿಂದೆ ನಾನು ಮನೆಯಲ್ಲಿದ್ದ ಹಳೆಯ ಕಲ್ಯಾಣ ಕಿರಣಗಳನ್ನು ಒಂದು ಕಡೆ ಜೋಡಿಸುತ್ತ ಕೂತಿದ್ದೆ. ಆವಾಗ ಮುಖ ಪುಟ ಹರಿದುಹೋಗಿದ್ದ  ಒಂದು ಕಲ್ಯಾಣ ಕಿರಣ ನನ್ನ ಗಮನ ಸೆಳೆಯಿತು. ಅದನ್ನು ತೆಗೆದು ನೋಡಿದಾಗ ಅದು 2002 ಜೂನ ತಿಂಗಳದ್ದು. ಪೂಜ್ಯ ಲಿಂಗೈಕ್ಯ ಮಾತೆ ಮಹಾದೇವಿಯವರು ಮೊದಲನೆಯ ಕಲ್ಯಾಣ ಪರ್ವದ ಸಮಯದಲ್ಲಿ ಆದ ಅನುಭವಗಳನ್ನು ಲೇಖನಗಳ ಮೂಲಕ ಅದರಲ್ಲಿ ಹೇಳಿಕೊಂಡಿದ್ದಾರೆ. ನಾನು ಕೂಡ ಆ ಕಲ್ಯಾಣಪರ್ವದಲ್ಲಿ ಭಾಗವಹಿಸಿ ಪೋಲಿಸ್ ದೌರ್ಜನ್ಯವನ್ನು ನನ್ನ ಕಣ್ಣಾರೆ ನೋಡಿದ್ದೇ. ಅದರಲ್ಲಿ ಪೂಜ್ಯ ಮಾತಾಜಿಯವರು ಬರೆದ *ಇಚ್ಛಾಪತ್ರ* ಓದಿ ಅದನ್ನು ವಾಟ್ಸಾಪ್ ಗ್ರೂಪ್ ಗಳಲ್ಲಿ ಹಾಕಿದ್ದೆ.   ಇದನ್ನು ಓದಿ ಓರ್ವ (ಅಪರಿಚಿತ) ಶರಣೆಯೊಬ್ಬರು ನನ್ನ ಮೊಬೈಲ್ ಗೆ ಕರೆ ಮಾಡಿದ್ರು. ಅವರು ಆಡಿದ ಮಾತುಗಳು ಈ ರೀತಿ ...  (ಅಣ್ಣವ್ರೆ, ಮಾತಾಜಿಯವರ ಈ ಇಚ್ಛಾಪತ್ರ ಓದಿ ಬಹಳ ಮನಸ್ಸಿಗೆ ನೋವಾಯ್ತು. ಆ ತಾಯಿಯ ಹೃದಯದಲ್ಲಿ ಇಷ್ಟೊಂದು ಕಷ್ಟ ನೋವುಗಳನ್ನು ಇಟ್ಟುಕೊಂಡಿದ್ದರು ಕೂಡ ಭಕ್ತರೆದುರು ಎಷ್ಟು ಸಮಾಧಾನಿಯಾಗಿ, ಹಸನ್ಮುಖಿಯಾಗಿ ಇರುತ್ತಿದ್ರು. "ನನ್ನ ನಂತರ ನನ್ನ ಶಿಷ್ಯರು ಮುಂದುವರಿಸಿಕೊಂಡು ಹೋಗುತ್ತಾರೆ" ಎಂದು ಮಾತಾಜಿ ಹೇಳಿರುವುದನ್ನು ನೋಡಿದ್ರೆ, ನಮ್ಮ ಈಗಿನ ಪೀಠಾಧ್ಯಕ್ಷರು, ಜಂಗಮಮೂರ್ತಿಗಳು ಏಕೆ ಇದನ್ನು ಅರ್ಥಮಾಡಿಕೊಳ್ಳುತ್ತಿಲ್ಲ?  ಏಕೆ ಮಾತಾಜಿಯವರ ಸಂಕಲ್ಪಗಳಿಗೆ ವಿರುದ್ಧವಾಗಿ ನಡೆದುಕ...

ನಮ್ಮ ಶಿಶ್ಯರು ನನ್ನ ನಂತರ ಮುಂದುವರೆಸುತ್ತಾರೆ...

ಇಮೇಜ್
ನಾನು ಹೊದರೆನಂತೆ, ನಮ್ಮ ಶಿಶ್ಯರುಗಳು ಅನೇಕರು ಇದ್ದಾರೆ, ಪೂಜ್ಯ ಅಪ್ಪಾಜಿಯವರ ಸಂಕಲ್ಪವನ್ನು ಹೇಗೆ ನಾವು ಒಂದೊಂದಾಗಿ ಪೂರ್ತಿ ಮಾಡುತ್ತಿದ್ದೆಯೋ ಹಾಗೆ ನಮ್ಮ ಶಿಶ್ಯರು ನನ್ನ ನಂತರ ಮುಂದುವರೆಸುತ್ತಾರೆ... - ಲಿಂ ಮಾತಾಜಿ. ಇಚ್ಛಾ  ಪತ್ರ ನಮ್ಮ ಗುರುಬಸವಣ್ಣನವರ 108 ಅಡಿ ಎತ್ತರದ ಭವ್ಯ ಮೂರ್ತಿ ಎಂದು ಗರ್ವದಿಂದ ಹೆಳುತ್ತೆವೆ.....ಇದರ ಹಿಂದಿನ ಸಂಕಲ್ಪ ಹಾಗು ಆ ಸಂಕಲ್ಪಕ್ಕೆ ಎದುರಾದ ಅನೆಕ‌ ತೊಂದರೆಗಳಲ್ಲಿ ಒಂದನ್ನು ಇಲ್ಲಿ ಲಿಂ ಮಾತಾಜಿಯವರು ಉಲ್ಲೆಖ ಮಾಡಿದ್ದಾರೆ... ಅಂದು ಮಾತಾಜಿಯವರು ತಮ್ಮ ದೃಡ ಸಂಕಲ್ಪದಿಂದ ಇಟ್ಟ ಹೆಜ್ಜೆ ಹಿಂದಕ್ಕೆ ತೆಗೆದುಕೊಂಡಿದ್ದರೆ.. ! ಗುರು ಬಸವಣ್ಣನವರ ಕಾರ್ಯಸ್ಥಳ ವಾಗಿದ್ದ ಬಸವಕಲ್ಯಾಣ ಈ ಎತ್ತರದ ಖ್ಯಾತಿ ಪಡೆಯುತ್ತಿರಲಿಲ್ಲಾ. ಕೆಲವು ಮಹತ್ವಪೂರ್ಣ Pointsಗಳನ್ನು ಗಮನಿಸಿ. Point 1.  ತಮ್ಮ ದೃಢ ಸಂಕಲ್ಪದಿಂದ *ಗುರು ಬಸವಣ್ಣನವರ ಕಾರ್ಯಸ್ಥಳ ವಾಗಿದ್ದ ಬಸವಕಲ್ಯಾಣ* ವನ್ನು ಸಮಾಜದಲ್ಲಿ ಗುರುತಿಸಿ, ಜಾಗ್ರತಿಯನ್ನು ಮುಡಿಸಿದ್ದಾರೆ. Point 2. ಅಂದು (ಗುರು ಬಸವಣ್ಣನವರ ಪುತ್ತಳಿ ನಿರ್ಮಾಣಕಿಂತ ಮೊದಲು) ಬಸವಕಲ್ಯಾಣದ ಜನರು  ಮನೆ ಮೆನೆಗೆ ಲಾರಿ (Lorry) ಯನ್ನು ಹೊಂದಿದ್ದಕ್ಕೆ famous ಆಗಿತ್ತು , ಇದನ್ನು ಬದಲಾಯಿಸಿ ಒಂದು Tourist ಸ್ಥಳವಾಗಿ ಪರಿವರ್ತಿಸಿದವರು ಲಿಂ ಮಾತಾಜಿಯವರು. Point 3:  ಅಂದು ಮಾತಾಜಿಯವರು  ಇಟ್ಟ ಹೆಜ್ಜೆ ಹಿಂತೆಯದೆ ಗುರು ಬಸವಣ್ಣನವರ ಭವ್ಯ ಮೂರ್...

ಪೂಜ್ಯ ಶ್ರೀ ಗುರು ಹೇಮರೆಡ್ಡಿ ಮಲ್ಲಮ್ಮನವರು

ಇಮೇಜ್
ನಮ್ಮ ಭಾರತದ 🇮🇳 ನೆಲದಲ್ಲಿ _ವ್ಯವಸಾಯ ಮತ್ತು ಹೈನುಗಾರಿಕೆಯಲ್ಲಿ _ ಮಹಿಳೆಯರ ಕೊಡುಗೆ ಬಹುಮುಖ್ಯವಾದುದು ಅದೇ ರೀತಿ ಆಧ್ಯಾತ್ಮಿಕ ಕ್ಷೇತ್ರದಲ್ಲಿಯೂ  ಮಹಿಳೆಯರ ಕೊಡುಗೆ ಅಪಾರ. ಬಾಲ್ಯದಿಂದಲೂ ನಿತ್ಯ ಬೆಳಿಗ್ಗೆ _ಇಷ್ಟಲಿಂಗ ಯೋಗವನ್ನು ಮಾಡುತ್ತಾ ತನು-ಮನ-ಭಾವದಲ್ಲಿ  ಗುರು ಬಸವಣ್ಣನವರ ಸ್ಮರಿಸುವ  ಪೂಜ್ಯ ಶ್ರೀ ಗುರು ಹೇಮರೆಡ್ಡಿ ಮಲ್ಲಮ್ಮನವರ ಜಯಂತಿ ಶುಭಾಶಯಗಳು (10th May 2022) ಮನೆತನದ ಪವಿತ್ರ ಕಾಯಕ    ವ್ಯವಸಾಯ ಮತ್ತು ಹೈನುಗಾರಿಕೆಯಲ್ಲಿ  ನಿತ್ಯ ತಮ್ಮನ್ನು ತೊಡಗಿಸಿಕೊಂಡು, ತನಗಿಂತ ಕಿರಿಯರಿಲ್ಲ ಎಂಬ ಧರ್ಮಗುರುವಿನ ನೆಡೆಯಂತೆ ವಿನಯವೇ ಜೀವನದ ಉಸಿರಾಗಿಕೂಂಡು, ಬಾಳಿನಲ್ಲಿ _ಸತ್ಯ, ನಿಷ್ಠೆ, ಪ್ರಾಮಾಣಿಕತೆಯೇ ನಿತ್ಯ ನಿಯಮಗಳಾಗಿ_ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಗೈದ ಪೂಜ್ಯ ಶ್ರೀ ಗುರು ಹೇಮರೆಡ್ಡಿ ಮಲ್ಲಮ್ಮನವರು. ಸಮುದ್ರದಲ್ಲಿ ನೆರೆ-ತೊರೆಗಳು ಇರುವ ಹಾಗೆ ಸಂಸಾರದಲ್ಲಿ ಬರುವ ಸುಖ-ದು:ಖಗಳ ಬಗ್ಗೆ ಸಮಾಧಾನವಾಗಿ ಲಿಂಗಚಿತ್ತದಿಂದ ಬಗೆಹರಿಸಿ ಸದಾ ಬಸವಾದಿ ಶರಣರಾದ ಗುಡ್ಡಾಪುರದ ದಾನಮ್ಮತಾಯಿ, ದಾಸೋಹ ಮೂರ್ತಿ ನೀಲಾಂಬಿಕಾತಾಯಿ, ವೀರಮಾತೆ ಅಕ್ಕನಾಗಲಾಂಬಿಕಾತಾಯಿ, ವೈರಾಗ್ಯನಿಧಿ ಅಕ್ಕಮಹಾದೇವಿ ತಾಯಿಯವರು  ಜೀವನದ ಆದರ್ಶ ನೆನೆಸಿಕೊಂಡು ಸಮಾನತೆ, ಶಿಕ್ಷಣ, ದಾಸೋಹ, ಅನುಭವಗಳಿಂದ _ಧರ್ಮಗುರು ಬಸವಣ್ಣನವರ ವಚನಗಳನ್ನು_ ಪ್ರಚಾರ ಮಾಡಿದ ಮಹಾಯೋಗಿನಿ ಪೂಜ್ಯ ಶ್ರೀ ಹೇಮ...

ಭಾಲ್ಕಿ ಶ್ರೀಗಳೇ ತಮಗೆ ಲಿಂಗೈಕ್ಯ ಮಾತಾಜಿಯವರ ಸಂಶೋಧನೆ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ?

ಇಮೇಜ್
ಭಾಲ್ಕಿ ಮಠದ ಬಸವಲಿಂಗ ಪಟ್ಟದೇವರೆ, ಕಲ್ಯಾಣ ಕಿರಣದಲ್ಲಿ ಪ್ರಕಟವಾದ  ಅಭಿನಂದನೆಗಳು ಎಂಬ ಲೇಖನದಲ್ಲಿ ಲಿಂಗೈಕ್ಯ ಮಾತಾಜಿಯವರನ್ನು ಪ್ರಾರಂಭದಲ್ಲಿ ಹಾಡಿ ಹೊಗಳಿ, ನಂತರ ಪರೋಕ್ಷವಾಗಿ ಅವಮಾನಿಸುವ ಕೃತ್ಯ ಮಾಡಿದ್ದೀರಿ. ಲಿಂಗದೇವವು ದೇವರ ಹೆಸರು ಎಂದು ಒಪ್ಪಿಕೊಳ್ಳಲು ತಮಗೆ 25 ವರ್ಷಗಳು ಬೇಕಾದವೇ??? ಹಾಗಾದರೆ ತಮಗೆ ಮಾತಾಜಿ ಅವರ ಸಂಶೋಧನೆ ಲಿಂಗದೇವ  ವಚನಾಂಕಿತ ಅರ್ಥ ಮಾಡಿಕೊಳ್ಳಲು ಇನ್ನು 25 ವರ್ಷಗಳು ಬೇಕಾಗುತ್ತವೆ ಎಂದೆನಿಸುತ್ತದೆ.  ಇತ್ತೀಚಿಗೆ ಬಸವಕಲ್ಯಾಣದಲ್ಲಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಗುರು ಬಸವಣ್ಣನವರ ಭಾವಚಿತ್ರದ ಜೊತೆಗೆ * ನಂದಿ ಮೂರ್ತಿ* ಯ ಭಾವಚಿತ್ರವನ್ನು  ಹಾಕಿ ಕಾರ್ಯಕ್ರಮ ಮಾಡಲಾಗಿತ್ತು. ಗುರು ಬಸವಣ್ಣನವರಿಗೆ ಅಪಚಾರ ವಾಗಿದ್ದ ಆ ಒಂದು ಕಾರ್ಯಕ್ರಮದಲ್ಲಿ  *ಯಾವುದೇ ಚಕಾರವೇತ್ತದೆ ಮೌನವಾಗಿ * ಭಾಗವಹಿಸಿ ಬಂದಿರುವ ತಮಗೆ ಲಿ0.ಮಾತಾಜಿಯವರ ಸಂಶೋಧನೆ ಬಗ್ಗೆ ಮಾತಾಡುವ ಯಾವ ನೈತಿಕತೆ ಇದೆ  ???  * ಪ್ರಶ್ನೆ ಮಾಡಿದರೆ ಸರಕಾರದಿಂದ ಬರುವ ಅನುದಾನಗಳನ್ನು ಕಳೆದುಕೊಳ್ಳುತ್ತೇವೆ ಎಂಬ ಭಯವೇ??? * ಅನೇಕ ಶಾಲಾ ಕಾಲೇಜುಗಳನ್ನು ತೆಗೆದು ಲಾಭ ನಷ್ಟದ ವ್ಯವಹಾರಗಳಲ್ಲಿ (ಚಿಂತೆಗಳಲ್ಲಿ) ಮುಳುಗಿಹೋಗಿರುವ ತಮಗೆ ಲಿ0.ಮಾತಾಜಿಯವರ ಸಂಶೋಧನೆ ಬಗ್ಗೆ ಮಾತಾಡುವ ಯಾವ ನೈತಿಕತೆ ಇದೆ???  ಈ ಲೇಖನದಲ್ಲಿ ತಾವು " 12 ವರ್ಷಗಳ ಚಿಂತೆ ಇಂದು ನಿಶ್ಚಿಂತೆ ಆಯಿತು" ಎಂಬ ಗುರು ಬಸವಣ್ಣನವರ ...

ಮಾತಾಜಿ ನಮ್ಮನ್ನು ಕ್ಷಮಿಸಿ

ಇಮೇಜ್
🙏🏼 ಮಾತಾಜಿ ನಮ್ಮನ್ನು ಕ್ಷಮಿಸಿ 🙏🏼 ನಿಮ್ಮ ಅನರ್ಘ್ಯ ರತ್ನದ ಕೊಡಗೆಯನ್ನು ಕಳೆದು ಕೊಂಡೆವು, ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ 🙏🏼 ನಿಮ್ಮ ಬೆವರಿನಿಂದ ಕಟ್ಟಿದ ಸಂಸ್ಥೆಯು ಒಡೆದು ಹನ್ನೊಂದಾಯಿತು , ಕಾಪಾಡಿಕೊಳ್ಳಲು ನಮಗೆ ಆಗಲಿಲ್ಲಾ, ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ. 🙏🏼 ಅಂದು, * ಧನವಂತರ ಮನೆಯಿಂದ ಬಂದು * ಬಸವ ಧರ್ಮದ ಸಿರಿತನವನ್ನು ಲಿಂಗಾಯತರಿಗೆ ತಿಳಿಸಿಕೊಟ್ಟಿರಿ, ಇಂದು ನಿಮ್ಮ ಸಂಸ್ಥೆಯ ಅಡಿಯಲಿದ್ದವರು * ತಮ್ಮ ಬಂಧು ಬಾಂಧವರನ್ನು ಸಿರಿವಂತರನ್ನಾಗಿ ಮಾಡುತ್ತಿದ್ದಾರೆ *, ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ 🙏🏼 ನಿಮ್ಮ ಗುರುವಿನ ಋಣ ತೀರಿಸಲು, ಗುರುವಿಗೊಂದು ಪೀಠವನ್ನು ನಿರ್ಮಿಸಿದಿರಿ , ನಿಮ್ಮವರು ನಿಮಗೆ ಗುರು ದ್ರೋಹವನ್ನು ಮಾಡಿದರು , ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ .🙏🏼 ತಾವು ತಮ್ಮ ವಚನಗಳನ್ನು ಬರೆಯುವುದನ್ನು ನಿಲ್ಲಿಸಿ , ಶರಣರ ವಚನಗಳನ್ನು ಮನೆ ಮನಗಳಲ್ಲಿ ಬಿತ್ತಿದ್ದಿರಿ, ನಿಮ್ಮ ಸಾಹಿತ್ಯದ ಕೊಲೆ ನಿಮ್ಮವರಿಂದಲೆ ಆಗುತ್ತಿದೆ , ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ 🙏🏼 * ಶರಣರನ್ನು ಕೂಡಿಸಲು *, ಶರಣಮೇಳ, ಕಲ್ಯಾಣ ಪರ್ವ, ಗಣ ಮೇಳ, ಶರಣೋತ್ಸವ ಹಾಗು ಲಿಂಗಾಯತ  ರ್ಯಾಲಿಗಳನ್ನು ನಡೆಸಿದಿರಿ, ಇಂದು ಇವೆ ಕಾರ್ಯಕ್ರಮಗಳನ್ನು *ಶರಣರನ್ನು ಒಡೆಯಲು* ಉಪಯೋಗಿಸುತಿದ್ದಾರೆ , ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ 🙏🏼 ಜನರನ್ನು ಶರಣರನ್ನಾಗಿ ಮಾಡಲು, * ಬಸವ ಧರ್ಮ ಸಂಸ್ಕಾರ * ಎಂಬ ಕೃತಿಯನ್...

ಲಿಂಗಾಯತ ಧರ್ಮ ಸಂವಿಧಾನಕ್ಕೆ ಜಗನ್ಮಾತೆ ಗುರು ಅಕ್ಕಮಹಾದೇವಿಯವರ ಕೊಡುಗೆ

ಇಮೇಜ್
ಲಿಂಗಾಯತ ಧರ್ಮ ಸಂವಿಧಾನಕ್ಕೆ ಜಗನ್ಮಾತೆ ಗುರು ಅಕ್ಕಮಹಾದೇವಿಯವರ ಕೊಡುಗೆ. -ಸಚ್ಚಿದಾನಂದ ಪ್ರಭು ಚಟ್ನಳ್ಳಿ ೯೮೮೬೬೯೪೪೫೪ ವಚನ : * ತನುವಿನೊಳಗಿದ್ದು ತನುವ ಗೆದ್ದಳು,* *ಮನದೊಳಗಿದ್ದು ಮನವ ಗೆದ್ದಳು,* *ವಿಷಯದೊಳಗಿದ್ದು ವಿಷಯಂಗಳ ಗೆದ್ದಳು,* *ಅಂಗಸುಖವ ತೊರೆದು ಭವವ ಗೆದ್ದಳು,* * ಕೂಡಲಚೆನ್ನಸಂಗಯ್ಯನ ಹೃದಯಕಮಲವ ಬಗಿದು ಹೊಕ್ಕು ನಿಜಪದವನೈದಿದ ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ ಎಂಬೆನು.* -ಗುರು ಚನ್ನಬಸವಣ್ಣನವರು ಇಂದಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೋಕಿನ ಉಡುತಡಿ ಎಂಬ ಗ್ರಾಮದಲ್ಲಿ ಶರಣ ಓಂಕಾರ ಮತ್ತು ಶರಣೆ ಲಿಂಗಮ್ಮ ದಂಪತಿಗಳ ಉದರದಲ್ಲಿ ದವನದ ಹುಣ್ಣಿಮೆಯಂದು ಉಗಮಗೊಂಡ ದಿವ್ಯ ತರಂಗಿಣಿ ಜಗನ್ಮಾತೆ ಅಕ್ಕಮಹಾದೇವಿಯವರು. ಅವರು ಬಸವಕಲ್ಯಾಣದ ಅನುಭಾವ ಮಂಟಪದ ಶರಣ ಸಮೂಹದೆಡೆಗೆ ಹರಿದು ಗುರು ಬಸವಣ್ಣನವರ ಭಕ್ತಿಯ ಶಕ್ತಿಯಾಗಿ ನಿಂದು ಶ್ರೀಶೈಲದ ಕದಳಿಯ ಬನದಲ್ಲಿ ಚೆನ್ನಮಲ್ಲಿಕಾಜುರ್ನದೇವರ ದೇವನೆಂಬ ಮಹಾಶರಧಿಯಲ್ಲಿ ಸಮಾಗಮಗೊಂಡರು. ಆದರೆ ಅವರು ತಾವು ನೀಡಿದ ವಚನಗಳ ಮೂಲಕ ಎಂದೆಂದಿಗೂ ನಮ್ಮಂಥ ಅಸಂಖ್ಯಾತ ಶರಣರ ಹೃನ್ಮನಗಳಲ್ಲಿ ವಾಸವಾಗಿರುತ್ತಾರೆ.  * ಗುರು  ಅಕ್ಕಮಹಾದೇವಿಯವರು, ತಮ್ಮ ವಚನಗಳಲ್ಲಿ ಹಾಗು ತಮ್ಮ ಜೀವನದ ಶೈಲಿಯಲ್ಲಿ ಅನೇಕ ವಿಶೇಷವಾದ ತತ್ತ್ವಗಳನ್ನು ಕಲಿಸುತ್ತಾರೆ. ಪ್ರಮುಖವಾಗಿ ಇವರ ವಚನಗಳಲ್ಲಿ ಗಮನಿಸಬೇಕಾದ ಮೂರು ಅಂಶಗಳಿವೆ. 1. ಲಿಂಗದೇವನಲ್ಲಿ ಅನನ್ಯ ಶರಣಾಗತಿ. 2. ಗುರು ಬಸವ ಭಕ್ತಿ. 3....