Posts

ಲಿಂಗಾಯತ ಮಠಾಧೀಶರು ಆತ್ಮವಲೋಕನ ಮಾಡುವ ಸಮಯ

  ಲಿಂಗಾಯತ ಮಠಾಧೀಶರು ಆತ್ಮವಲೋಕನ ಮಾಡುವ ಸಮಯ ಇತ್ತೀಚೆಗೆ  ಸಾಣೆಹಳ್ಳಿ ಶ್ರೀಗಳು ಕೊಟ್ಟಿರುವ ಹೇಳಿಕೆಗೆ  ವೈದಿಕವಾದಿಗಳು, ಪುರೋಹಿತಶಾಹಿಗಳಿಂದ ವಿರೋಧ ವ್ಯಕ್ತವಾಯಿತು. ಲಿಂಗಾಯತರಾದವರು ವೇದಿಕೆ ಮೇಲೆ ಅಥವಾ ಮನೆಗಳಲ್ಲಿ ಗಣಪತಿ ಪೂಜೆ ಮಾಡುವ ಬದಲು ವಚನ ಪಠಣ ಹಾಗೂ ಪ್ರಾರ್ಥನೆ ಮಾಡಬೇಕು ಎಂದು ಶ್ರೀಗಳು ಹೇಳಿದ್ದರು. ಅವರ ಈ ಹೇಳಿಕೆ *ಬಸವತತ್ವ* ಕ್ಕೇ ಅನುಸಾರವಾಗಿ ಇದೆ. ಶ್ರೀಗಳು ಈ ಹೇಳಿಕೆ ಕೊಟ್ಟಿದ್ದು ಲಿಂಗಾಯತರಿಗೆ ಮಾತ್ರ. ಆದ್ದರಿಂದ ಲಿಂಗಾಯತರಲ್ಲದವರು ಇವರ ಹೇಳಿಕೆಗೆ ಪ್ರತಿಕ್ರಿಯೆ ಕೊಡುವುದು ಸರಿಯಲ್ಲ.  ಲಿಂಗಾಯತ ಧರ್ಮದಲ್ಲಿ ಬಹು ದೇವತಾ ಉಪಾಸನೆಗೆ ಅವಕಾಶವಿಲ್ಲ. ಲಿಂಗಾಯತರಾದವರು  *ಇಷ್ಟಲಿಂಗ* ಬಿಟ್ಟು ಬೇರೆ ಯಾವುದೇ *ಅನ್ಯದೈವ* ವನ್ನೂ ಪೂಜಿಸಬಾರದು ಎಂದು ಬಸವಾದಿ ಶರಣರು ತಮ್ಮ ವಚನಗಳಲ್ಲಿ ಪ್ರತಿಪಾದಿಸಿದ್ದಾರೆ.  ಇದೇ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಈ ರೀತಿ ಹೇಳಿ ದಾರಿ ತಪ್ಪಿಸ್ತಾ ಇದ್ದಾರೆ "ಬಸವಣ್ಣನವರ ವಚನಾಂಕಿತ ಕೂಡಲಸಂಗಮದೇವ ಇದೆ. ಅವರು ಅರ್ಚಕರಾಗಿದ್ದರು. ಬಸವಣ್ಣನವರು ಕೂಡಲಸಂಗಮದ ದೇವಸ್ಥಾನದಲ್ಲಿರುವ ಸಂಗಮೇಶ್ವರ (ಶಿವಲಿಂಗದ) ಹೆಸರಿನ ಮೇಲೆಯೇ ತಮ್ಮ ಎಲ್ಲ ವಚನಗಳು ಬರೆದಿದ್ದಾರೆ" ಎಂದು ವಾದಿಸುತ್ತಿದ್ದಾರೆ. ಈ ರೀತಿ ವೈದಿಕರು ಲಿಂಗಾಯತ ಧರ್ಮದ ಬುಡಕ್ಕೆ ದಾಳಿ ಮಾಡ್ತಾ ಇದ್ದಾರೆ.  ಈ ರೀತಿಯ ದಾಳಿಗಳಿಗೆ ಪ್ರತ್ಯುತ್ತರ ಕೊಡಲು ಪೂಜ್ಯ ಲಿಂಗೈಕ್ಯ ಮಾತೆಮಹಾದೇವಿ ಅವರು 30 ವರ್ಷಗಳ

ಉತ್ತರಪ್ರದೇಶದ ವಾರಣಾಸಿಯ *ಕಾಶಿಯಲ್ಲಿರುವ ಜಂಗಮವಾಡಿ ಮಠದ* ಪುಸ್ತಕವೊಂದರಲ್ಲಿದ್ದ ಕಂಡುಬಂದ ಶ್ರೀ ಶರಣಾಧ್ಯಕ್ಷ ಬಸವೇಶ್ವರರಂದು ಹೇಳಲಾಗುವ ಫೋಟೋ ಇದು

Image
 ಶ್ರೀ ಶರಣಾಧ್ಯಕ್ಷ ಬಸವೇಶ್ವರರ ಪೋಟೊ ಇದೆಂದು ಹೇಳಲಾಗುತ್ತಿದೆ. ಕೆಳದಿಯ ರಾಣಿ ಚೆನ್ನಮ್ಮನವರ ವಂಶಸ್ಥರು ಕಟ್ಟಿಸಿದ* ಉತ್ತರಪ್ರದೇಶದ ವಾರಣಾಸಿಯ *ಕಾಶಿಯಲ್ಲಿರುವ ಜಂಗಮವಾಡಿ ಮಠದ* ಪುಸ್ತಕವೊಂದರಲ್ಲಿದ್ದ ಕಂಡುಬಂದ  ಶ್ರೀ ಶರಣಾಧ್ಯಕ್ಷ ಬಸವೇಶ್ವರರಂದು ಹೇಳಲಾಗುವ ಫೋಟೋ ಇದು. ಕನ್ನಡದ ಲಿಂಗಾಯತ ಸಾಧಕರೊಬ್ಬರು ಬಹಳಕಾಲದಿಂದ ಕಾಶಿಯಲ್ಲಿ ಸಾಧನೆಗೈಯುತ್ತಿದ್ದಂತ ಕಾಲದಲ್ಲಿ ಒಬ್ಬ ಶೈವ ಭಕ್ತ ಆಶ್ರಯಕ್ಕೆಂದು ಬಂದುದಲ್ಲದೇ ಮುಂದೊಂದು ದಿನ *ಕಾಶಿಪೀಠವೆಂದು* ಘೋಷಿಸಿಕೊಂಡು ಚತುರಾಚಾರ್ಯರಿದ್ದವರ ಜೊತೆ ಕೈಜೋಡಿಸಿಕೊಂಡು (ಇಂದಿನ ಪಂಚಾಚಾರ್ಯರು)  ಕಾಶಿಪೀಠ ಕಬಳಿಸಿಕೊಂಡು ಪಂಚಪೀಠಗಳು ನಮ್ಮವು ಎಂದು ಘೋಷಿಸಿಕೊಂಡಿದ್ದಾರೆ.  ಅದು ಕೆಳದಿ ಸಂಸ್ಥಾನದ ಆರೈಕೇಯಲ್ಲಿದ್ದವರದೆಂದು ಈಗಾಗಲೇ ಎಂ.ಎಂ.ಕಲಬುರ್ಗಿಯವರು ಸಾಕಷ್ಟು ಧಾಖಲೆ ಪುರಾವೆಗಳನ್ನ ನೀಡಿದ್ದಾರೆ. *ಜಂಗಮದಿಂದ ಸ್ಥಾವಾವರದೆಡೆಗೆ* ಮತ್ತು *ರೇವಣಸಿದ್ಧರು ಮತ್ತು...* ಎಂಬ ಮೃತ್ಯುಂಜಯ ರುಮಾಲೆಯವರ  ಸಂಶೋಧನಾತ್ಮಕ ಕೃತಿಯನ್ನು ಓದಬಹುದು.

*ಜಾಮದಾರ್* ಅವರು ಈ ರೀತಿಯ *ಕೆಳಮಟ್ಟದ ಭಾಷೆ* ಉಪಯೋಗಿಸಿ ತಮ್ಮ ಗೌರವವನ್ನು ತಾವೇ ಕಡಿಮೆ ಮಾಡಿಕೊಂಡಿದ್ದಾರೆ.

Image
  ವೀಡಿಯೋನಲ್ಲಿ *ಜಾಮದಾರ್* ಅವರು ಈ ರೀತಿಯ *ಕೆಳಮಟ್ಟದ ಭಾಷೆ*  ಉಪಯೋಗಿಸಿ ತಮ್ಮ ಗೌರವವನ್ನು ತಾವೇ ಕಡಿಮೆ ಮಾಡಿಕೊಂಡಿದ್ದಾರೆ. ಲಿಂಗಾಯತ ಧರ್ಮ ಕ್ಕಾಗಿ ಮಹಾರಾಷ್ಟ್ರದಲ್ಲಿ ಅನೇಕ ರ್ಯಾಲಿ ಗಳನ್ನೂ ಮಾಡಿ ಇತ್ತೀಚೆಗೆ ಮುಂಬೈ ರ್ಯಾಲಿ  ಮಾಡಿ ತೋರಿಸಿದ ಶರಣ ಅವಿನಾಶ್ ಭೂಸೀಕರ್ ಬಗ್ಗೆ * ಏಕವಚನದಲ್ಲಿ * ಮಾತನಾಡಿರುವುದು ಜಾಮದರ್ ಅವರಲ್ಲಿ ಮೂಡಿರುವ *ಅಹಂಕಾರ* ಎದ್ದು ಕಾಣುತ್ತಿದೆ.  ಬಸವಕಲ್ಯಾಣದಲ್ಲಿ ನಡೆದ ಲಿಂಗಾಯತ ಅಧಿವೇಶನವನ್ನೂ ಒಂದು ರಾಜಕೀಯ ಪಕ್ಷ ಕಾರ್ಯಕ್ರಮ ನಡೆಸಿದ ಟೆಂಟ್ ನಲ್ಲಿಯೇ ಮಾಡಿರುವುದರಿಂದ ರಾಜ್ಯದಂತ ಬಹಳಷ್ಟು ಜನ ತಮ್ಮ ವಿರೋಧ ವ್ಯಕ್ತಪಡಿಸಿದರು.   ಆದರೆ ತಾವು ಈ ವಿಡಿಯೋ ನಲ್ಲಿ ಕೇವಲ 3 ವ್ಯಕ್ತಿಗಳ ಹೆಸರುಗಳನ್ನು ತೆಗೆದುಕೊಂಡಿದ್ದು ನೋಡಿದರೆ, ತಾವು ಬೇರೊಬ್ಬರ  ಮಾತುಗಳಿಂದ * misguide * ಆಗಿರೋದು ಎದ್ದು ಕಾಣುತ್ತಿದೆ.   ಇಷ್ಟು ದಿನಗಳ ಕಾಲ ಜಾಮಾದಾರ್ ಅವರು ಸ್ವತಂತ್ರ ತಲೆ ಉಳ್ಳವರು ಎಂದು ಎಲ್ಲರೂ ಭಾವಿಸಿದ್ದರು ಆದರೆ ಇವರು ಈ ರೀತಿ ಮಾತುಗಳನ್ನು ಆಡಿದ ಮೇಲೆ * ಪರತಂತ್ರ ತಲೆ* ಉಳ್ಳವರು ಎಂದು ಅನೇಕರಿಗೆ ಅನಿಸುತಿದೆ.  ಒಂದು ಬೆಳೆದು ನಿಂತಿರುವ ಸಂಘಟನೆ ಯನ್ನ ಒಡೆದು ಅಲ್ಲಿನವರನ್ನು ಇಂಪೋರ್ಟ್ ಮಾಡಿಕೊಂಡು ನಿಮ್ಮ ಸಂಘಟನೆಯನ್ನು ಬೆಳೆಸೋದು ಸುಲಭದ ಕೆಲಸ. ಆದರೆ, ಒಂದು ಸಂಘಟನೆಯನ್ನು ಗ್ರೌಂಡ್ ಲೆವೆಲ್ ನಿಂದ ಕಟ್ಟಿ ಬೆಳೆಸುವುದು ಬಹಳ ಕಷ್ಟದ ಕೆಲಸ....  ಸೊಸಿಯಲ್ ಮಿಡಿಯಾದಲ್ಲಿ ಈ‌ ಸುದ್ದಿ ಬಹಳ‌ ವೈರಲ್

ನಮ್ಮ ಲಿಂಗಾಯತ ಧರ್ಮದ ಬೇಡಿಕೆಗಳು ಈಡೇರಿಸಲು ಒಪ್ಪಿಕೊಂಡ ಸರಕಾರ

Image
 * ನಮ್ಮ ಲಿಂಗಾಯತ ಧರ್ಮದ ಬೇಡಿಕೆಗಳು ಈಡೇರಿಸಲು ಒಪ್ಪಿಕೊಂಡ ಸರಕಾರ:* *ಸನ್ಮಾನ್ಯಶ್ರೀ ಜಗದೀಶ, ಮಾನ್ಯ ಕಾರ್ಯದರ್ಶಿ, ಹಿಂದುಳಿದ ಆಯೋಗ ಅವರನ್ನು ಕರ್ನಾಟಕ ರಾಜ್ಯ ಸರಕಾರ ಮನವಿ ಸ್ವೀಕರಿಸಲು ಕಳಿಸಿತ್ತು:* *ಶ್ರೀ ಜಗದೀಶ ಮಾತನಾಡಿ ನನಗೆ ಮುಖ್ಯಮಂತ್ರಿ ಕಾರ್ಯಾಲಯ ಹಾಗೂ ಹಿಂದುಳಿದ ವರ್ಗಗಳ ಸಚಿವರು  ನಿಮ್ಮ ಮನವಿ ಸ್ವೀಕರಿಸಿ ಆಶ್ವಾಸನೆ ನೀಡಲು ಕಳಿಸಿದ್ದಾರೆ ಎಂದು ಮನವಿ ಸ್ವೀಕರಿಸಿ ಮಾತನಾಡಿದರು.* *ಸಂಪೂರ್ಣ ಸಫಲವಾದ ಲಿಂಗಾಯತ ಧರ್ಮದ ಮಾನ್ಯತೆ ಸಾಂಕೇತಿಕ ಧರಣಿ: ಸಮಯ ಕೂಡಿ ಬಂದರೆ, ನಿಸ್ವಾರ್ಥ ಮನಸಿನಿಂದ ಯೋಜನೆ ಬದ್ದ ಕೆಲಸ ಮಾಡಿದರೆ ಎಂತಹ ಕೆಲಸ ಕೂಡ ಆಗುತ್ತವೆ ಎಂಬುದಕ್ಕೆ ಇಂದಿನ ದಿನ ಹಾಗೂ ಮುಂಬಯಿ ರಾಲಿ ಉದಾಹರಣೆ.* *ಫ್ರೀಡಂ ಪಾರ್ಕ್ ಬೆಂಗಳೂರು: ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ವತಿಯಿಂದ.* *ಧರಣಿಯಲ್ಲಿ ಭಾಗವಹಿಸಿದ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶ ಲಿಂಗಾಯತ ಧರ್ಮದ ಪೂಜ್ಯರು, ಮುಖಂಡರು ಮತ್ತು ಶರಣ ಶರಣೆಯರು.* *ಕೆಲವೇ ದಿವಸಗಳ ಹಿಂದೆ ಮುಂಬಯಿಯಲ್ಲಿ ಘೋಷಣೆ ಮಾಡಿದ್ದ ಹಾಗೆ, ಲಿಂಗಾಯತ ಧರ್ಮದ ಮಾನ್ಯತೆ ಹಾಗೂ ಅಲ್ಪಸಂಖ್ಯಾತ ಸೌಲಭ್ಯ ಕೊಡಲು ಹಾಗೂ ವಿವಿಧ ಬೇಡಿಕೆಗೆ ಸಾಂಕೇತಿಕ ಧರಣಿ ನಿರ್ಧರಿಸಲಾಗಿತ್ತು.* *ಸುಮಾರು 2018ರಿಂದ ಇಲ್ಲಿಯವರೆಗೆ ಯಾವ ಸಂಘಟನೆಗಳು ಸರಕಾರಕ್ಕೆ ಮನವಿ ಸಲ್ಲಿಸಿಲ್ಲಾ, ಒಂದು ಸಮಾವೇಶ ಅಥವಾ ರಾಲಿ ಕೂಡ ಮಾಡಿಲ್ಲ.* *ಆದರಿಂದ ನಮ್ಮ ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ

ಬೀದರ ಬಸವ ಮಂಟಪದಲ್ಲಿ ನಡೆದ ಯಶಸ್ವಿ ಚನ್ನಹುಣ್ಣಿಮೆ ಕಾರ್ಯಕ್ರಮದಿಂದ ಸಿಗುವ ಪರೋಕ್ಷ ಸಂದೇಶ

Image
ಬೀದರ ಬಸವ ಮಂಟಪದಲ್ಲಿ ನಡೆದ ಯಶಸ್ವಿ ಚನ್ನಹುಣ್ಣಿಮೆ ಕಾರ್ಯಕ್ರಮದಿಂದ ಸಿಗುವ ಪರೋಕ್ಷ ಸಂದೇಶ ಪೂಜ್ಯ ಮಾತಾಜಿಯವರ ಬಲಿಷ್ಠ ನಾಯಕತ್ವದಲ್ಲಿ ಎಲ್ಲಾ ರಾ.ಬ.ದಳಗಳು ಸುಗಮವಾಗಿ ಸಾಗುತಿದ್ದವು. ಆದರೆ ಪೂಜ್ಯ ಮಾತಾಜಿ ಲಿಂಗೈಕ್ಯ ಆದ ಮೇಲೆ ಬೀದರ್ ರಾ.ಬ.ದಳ ಸಂಘಟನೆಯಲ್ಲಿ ಕೆಲವರು ಒಳಗಿಂದೊಳಗೆ  ಚಟುವಟಿಕೆಗಳನ್ನು ಪ್ರಾರಂಭಿಸಿದರು. ಲಿಂಗದೇವ ನೆಪ ಮಾಡಿಕೊಂಡು ಸಂಘಟನೆಯನ್ನು ಒಡೆಯಲು ಶುರು ಮಾಡಿದರು.  ಲಿಂಗಾಯತ ಧರ್ಮ ಮಾನ್ಯತೆ ಕೊಡಿಸುತ್ತೇವೆ ಎಂಬ ಸುಳ್ಳು ಕನಸುಗಳನ್ನು ತೋರಿಸಿ ರಾ.ಬ.ದಳ ಸಂಘಟನೆಯನ್ನು ಒಡೆದು ಜಾ.ಲಿ.ಮಾಹಸಭಾ ಸಂಘಟನೆಯನ್ನು ಬೆಳೆಸುವ ಪ್ರಯತ್ನ ಮಾಡಲಾಯಿತು. ಇದರ ಫಲವಾಗಿ ಒಂದು ವರ್ಷದ ಹಿಂದೆ ಮಾತೆಗಂಗಾದೇವಿ ಯವರು ಕೆಲವರ ಒತ್ತಡಕ್ಕೆ ಮಣಿದು ಪೂಜ್ಯ ಲಿಂ. ಮಾತಾಜಿಯವರ ಶ್ರೇಷ್ಠ ಸಂಶೋಧನೆ ಲಿಂಗದೇವ  ವಚನಾಂಕಿತವನ್ನು ಹಿಂಪಡೆಯುತ್ತೇನೆ ಎಂದು ಹೇಳಿಕೆ ಕೊಟ್ಟರು (ಕೊಡಿಸಲಾಯಿತು). ಇದಾದ ನಂತರ ಬೀದರಿನ ಕೆಲವರು ಪೂಜ್ಯ ಸದ್ಗುರು ಸತ್ಯಾದೇವಿ ಮಾತಾಜಿ ಅವರ ಮೇಲೆ ಹಾಗೂ ಶರಣರ ಮೇಲೆ ಸಾಮೂಹಿಕ ಪ್ರಾರ್ಥನೆಯಲ್ಲಿ ಲಿಂಗದೇವ ಬಳಸಬಾರದು ಎಂದು ಒತ್ತಡ ತರಲು ಪ್ರಾರಂಭಿಸಿದರು. ಆದರೆ ಬೀದರ್ ನ ತತ್ವ ನಿಷ್ಠ ಶರಣರು ಯಾವುದೇ ಒತ್ತಡಕ್ಕೆ, ಬೆದರಿಕೆಗೆ ಬಗ್ಗದೆ ಪೂಜ್ಯ ಲಿಂಗೈಕ್ಯ ಮಾತಾಜಿ ಅವರ ಸಂಕಲ್ಪದಂತೆ, ಅವರು ಹಾಕಿಕೊಟ್ಟ ದಾರಿಯಂತೆ, ವಾರದ ಪ್ರಾರ್ಥನೆಯನ್ನು ಮುಂದುವರಿಸ್ಕೊಂಡು ಬರಲಾಯಿತು.  ಅವಾಗ ಆ ಸ್ವಾರ್ಥ ಶಕ್ತಿಗಳು ಪರ್ಯಾಯ ಮಾರ್ಗವನ

ಮುಂಬೈನ ಆಝಾದ್ ಮೈದಾನದಲ್ಲಿ (29-Jan-2023) ಲಿಂಗಾಯತ ಸಮಾಜದ ಮುಖಂಡರು ಸರ್ಕಾರದ ಮುಂದೆ ಇಟ್ಟ ಬೇಡಿಕೆಗಳು.

Image
ಮುಂಬೈನ ಆಝಾದ್ ಮೈದಾನದಲ್ಲಿ (29-Jan-2023) ಲಿಂಗಾಯತ ಸಮಾಜದ ಮುಖಂಡರು ಸರ್ಕಾರದ ಮುಂದೆ ಇಟ್ಟ ಬೇಡಿಕೆಗಳು. 1 * ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು *. 2 ಲಿಂಗಾಯತ ಧರ್ಮೀಯರಿಗೆ * ಧಾರ್ಮಿಕ ಅಲ್ಪಸಂಖ್ಯಾತ * ಸ್ಥಾನ ಸಿಗಬೇಕು 3 ಲಿಂಗಾಯತ ಯುವಕರ ವಿಕಾಸಕ್ಕಾಗಿ * ಮಹಾತ್ಮ ಬಸವೇಶ್ವರ ಆರ್ಥಿಕ ವಿಕಾಸ * ಮಹಾಮಂಡಳಿ ಸ್ಥಾಪನೆಯಾಗ ಬೇಕು 4 ಮಂಗಳವೇಡೆಯಲ್ಲಿ ಮಂಜೂರಾದ *ಮಹಾತ್ಮ ಬಸವೇಶ್ವರರ ಸ್ಮಾರಕ ಕೆಲಸ ತ್ವರಿತವಾಗಿ ಆರಂಭಿಸಬೇಕು* 5 ವಿಧಾನ ಭವನದ ಪರಿಸರದಲ್ಲಿ * ಮಾಹತ್ಮ ಬಸವೇಶ್ವರರ ಮೂರ್ತಿ ಪ್ರತಿಷ್ಠಾಪನೆ ಯಾಗಬೇಕು* 6 ಪ್ರತಿಯೊಂದು ಊರಿನಲ್ಲಿ * ಲಿಂಗಾಯತ ರುದ್ರಭೂಮಿ * ಗೆ ಜಾಗ ಮೀಸಲಿಡಬೇಕು. 7 ಪ್ರತಿಯೊಂದು ಊರಿನಲ್ಲಿ * ಅನುಭವ ಮಂಟಪ * ಎಂಬ ಸಭಾಗೃಹ ನಿರ್ಮಿಸಿ ಕೊಡಬೇಕು. 8 ರಾಷ್ಟ್ರೀಯ * ಧರ್ಮವಾರು ಜನಗಣತಿಯಲ್ಲಿ ಲಿಂಗಾಯತರಿಗಾಗಿ ಪ್ರತ್ಯೇಕ ಧರ್ಮ ಕಾಲಂ * ಇರಬೇಕು 9 ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೋಸ್ಕರ ಪ್ರತಿಯೊಂದು ಜಿಲ್ಲೆಯಲ್ಲಿಯೂ * ವಸತಿ ನಿಲಯಗಳನ್ನು * ನಿರ್ಮಿಸಬೇಕು. 10 ಮೀರಜ್ ರೈಲ್ವೆ ಜಂಕ್ಷನ್ಗೆ * ಮಹಾತ್ಮಾ ಬಸವೇಶ್ವರ ರೈಲ್ವೆ ಜಂಕ್ಷನ್ * ಎಂದು ನಾಮಕರಣ ಮಾಡಬೇಕು.

ಡಾ|| ಸಂಗಮೇಶ ಸೌದತ್ತೀಮಠ ಅವರಿಗೆ ಕಿವಿ ಮಾತು

Image
 ಡಾ|| ಸಂಗಮೇಶ ಸೌದತ್ತೀಮಠ ಅವರಿಗೆ ಕಿವಿ ಮಾತು ಕನ್ನಡದಲ್ಲಿರುವ ವಚನ ಸಾಹಿತ್ಯದ ಆಳವನ್ನು ಇನ್ನೂ ತಿಳಿದುಕೊಳ್ಳಲು ಸಾಧ್ಯವಾಗದವರು ನೀವು ಬಸವಾದಿ ಶರಣರ ಪರಂಪರೆಯ ಧರ್ಮದ ಕುರಿತು ಮಾತನಾಡಲು ಅನರ್ಹರು. ದಯಮಾಡಿ ಏನೂ ಹೇಳದಿದ್ದರೂ ಪರವಾಗಿಲ್ಲ, ಸುಳ್ಳನ್ನು ಹೇಳಿ ನಿಮ್ಮನ್ನು ನೀವು ವಂಚಿಸಿಕೊಳ್ಳಬೇಡಿ. ಲಿಂಗಾಯತರಿಗೂ ಅನ್ಯಧರ್ಮಿಯರಿಗೂ ಇರುವ ಒಂದು ವ್ಯತ್ಯಾಸ ಹೇಳಲು ಬಯಸುತ್ತೇನೆ. ನಿಮ್ಮ ಮನೆಯ ಹೊರಗೆ ಯಾರಾದರೂ ಬಂದು " ನಿಮ್ಮ ಅಜ್ಜಾ ಏನು ಮಾಡ್ತಾಯಿದ್ದಾರೆ ? " ಎಂದು ಕೇಳಿದರೆ ನಿಮ್ಮ ಮೊಮ್ಮಗನು ನನ್ನ ಅಜ್ಜ * ಲಿಂಗ ಪೂಜೆ ಮಾಡ್ಕೊಳ್ಳುತಿದ್ದಾರೆ ಎಂತಾನೇ ವಿನಃ ಮಾಡ್ತಾಯಿದಾರೆ * ಎನ್ನೋದಿಲ್ಲ. ಇಡೀ ವಿಶ್ವದಲ್ಲಿಯೇ ಗುರು ಬಸವಣ್ಣ ನವರ ಕೊಡುಗೆ ಏನೆಂದರೆ ತನ್ನತಾನರಿದು ತಾನೇ ಪೂಜಗೈವುದು. ಇದು ಲಿಂಗಾಯತ ಧರ್ಮದ ಸಂಸ್ಕೃತಿ. ಇಂಥಾ ಸಂಸ್ಕೃತಿಯ ನೀವು ಹೇಳುತ್ತಿರುವ ಜಾತಿವಾದಿಗಳ ಮನೆಯಲ್ಲಿ ಕಾಣಲಾಗದು! ಈ ಸಂದರ್ಭದಲ್ಲಿ  ಅಲ್ಲಮಪ್ರಭು ದೇವರ ಒಂದು ವಚನ ನೆನಪಾಗುತ್ತಿದೆ. " ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ, ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ, ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ ! ತೊಟ್ಟಿಲು ಮುರಿದು ನೇಣು ಹರಿದು, ಜೋಗುಳ ನಿಂದಲ್ಲದೆ, ಗುಹೇಶ್ವರನೆಂಬ ಲಿಂಗವ ಕಾಣಬಾರದು." ಅಜ್ಞಾನವನ್ನು ನಿರ್ಮೂಲನೆ ಮಾಡಬೇಕಾದರೆ ಏನು ಮಾಡಬೇಕೆಂಬುದನ್ನು ಪ್ರಪ್ರಥಮ ಶೂನ್ಯ ಪೀ

ಲಿಂಗದೇವ ವಚನಾಂಕಿತವನ್ನು ಶಾಸ್ತ್ರೀಯವಾಗಿ ಪ್ರತಿಪಾದಿಸಲು ಐದು ಗ್ರಂಥಗಳು ಲಭ್ಯವಿವೆ.

Image
 ಲಿಂಗದೇವ ವಚನಾಂಕಿತವನ್ನು ಶಾಸ್ತ್ರೀಯವಾಗಿ ಪ್ರತಿಪಾದಿಸಲು ಐದು ಗ್ರಂಥಗಳು ಲಭ್ಯವಿವೆ. ೧೯೮೦-೯೦ರ ದಶಕಗಳಲ್ಲಿ ಆಗ ತಾನೆ ಲಿಂಗಾಯತ ಧರ್ಮ ಮತ್ತು ಇತರ ಧರ್ಮಗಳು ನೈಜ ರೀತಿಯಲ್ಲಿ ಪ್ರಸಾರವಾಗುತ್ತಿದ್ದ ಕಾಲವದು. ಧರ್ಮದ ವಿಚಾರದಲ್ಲಿ ಜನರ ಮನಸ್ಸುಗಳು ಅಂದು ತುಂಬಾ ಸೆನ್ಸಿಟಿವ್ ಆಗಿದ್ದವು. ಉದಾಹರಣೆಗೆ ಹೇಳುವುದಾದರೆ, 1992 ರಲ್ಲಿ ಬಾಬರಿ ಮಸೀದಿ ಧ್ವಂಸವಾದಾಗ ಸಾಕಷ್ಟು ಕೋಲಾಹಲ, ಆಸ್ತಿಪಾಸ್ತಿಗೆ ಹಾನಿ ಮತ್ತು ಜೀವಕ್ಕೆ ಹಾನಿಗಳಾಗಿದ್ದನ್ನು ನೋಡಬಹುದು. ಆದರೆ 2019ರಲ್ಲಿ ಬಾಬರಿ ಮಸೀದಿಯ ತೀರ್ಮಾನ ಸುಪ್ರೀಂ ಕೋರ್ಟಿನಿಂದ ಬಂದಾಗ ಯಾವುದೇ ಪ್ರಚೋದನೆ ಕಾರ್ಯಗಳಲ್ಲಿ ಹಿಂಸಾತ್ಮಕ ಕಾರ್ಯಗಳಲ್ಲಿ ಯಾರೂ ತೊಡಗಿಸಿಕೊಳ್ಳಲಿಲ್ಲ.  ಇದರ ಅರ್ಥ ಕಳೆದ 30 ವರ್ಷಗಳಲ್ಲಿ ಜನ ಪ್ರೌಢರಾಗಿದ್ದಾರೆ ಧರ್ಮ ತತ್ವವನ್ನ ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ದೇವರು‌ ಕೇವಲ ಮಸೀದಿ ಮಂದಿರಗಳಿಗೆ ಸೀಮಿತವಾಗಿಲ್ಲ ಅವನು ಸರ್ವವ್ಯಾಪಿ ಎನ್ನುವುದನ್ನ ಅರಿತಿದ್ದಾರೆ.  ಅದೇ ರೀತಿ 1996ರಲ್ಲಿ ಪೂಜ್ಯ ಶ್ರೀ ಮಾತೆ ಮಹಾದೇವಿಯವರು 'ಲಿಂಗದೇವ' ವಚನಾಂಕಿತ ಅಳವಡಿಸಿದಾಗ, ಕೆಲವೊಂದು ಸಂಪ್ರದಾಯವಾದಿಗಳು ಧರ್ಮದ ವಿಚಾರದಲ್ಲಿ ತುಂಬಾ ಸೆನ್ಸಿಟಿವ್ ಆಗಿರುವಂತಹ ವ್ಯಕ್ತಿಗಳು, ಮಾತೆ ಮಹಾದೇವಿಯವರ ಪ್ರತಿಭೆ ಅವರ ಧರ್ಮ ಪ್ರಚಾರದ ಬಗ್ಗೆ ದ್ವೇಷವನ್ನು ಹೊಂದಿರುವಂತಹವರು ಅಂದಿನ ಕಾಲದಲ್ಲಿ ಗಲಾಟೆ ದೊಂಬಿ ಮಾಡಿ ಸರಕಾರದ ಮೇಲೆ ಒತ್ತಡ ತಂದು, 'ಬಸವ ವಚನ ದೀಪ್ತಿ' ಗ

ಲಿಂಗದೇವನ ಲೀಲಾ ವಿಶೇಷ - ಸಂಶೋಧನಾ ಕೃತಿ

Image
  ಲಿಂಗದೇವನ ಲೀಲಾ ವಿಶೇಷ - ಸಂಶೋಧನಾ ಕೃತಿ ಈ ವಿಡಿಯೋ ಅನ್ನು ಕ್ಲಿಕ್ ಮಾಡಿ ನೊಡಿ ದಿನಾಂಕ 28-12-2022ರಂದು *ಬೀದರ್* ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ವತಿಯಿಂದ ಕಳೆದ ವರ್ಷ ಇದೆ ದಿನದಂದು ಮಾತೆಗಂಗಾದೆವಿಯವರು ತೆಗೆದುಕೊಂಡಿದ್ದ ವ್ಯಯಕ್ತಿಕ  ನಿರ್ಣಯವನ್ನು ಧಿಕ್ಕರಿಸಿ ಈ ದಿನವನ್ನು *"ಕರಾಳ ದಿನ"* ಎಂದು ಘೋಷಿಸಿ ಪೂಜ್ಯ ಲಿಂಗೈಕ್ಯ ಮಾತಾಜಿಯವರ ಶ್ರೇಷ್ಠ ಸಂಶೋಧನೆ "ಲಿಂಗದೇವ"ದ ಮಹತ್ವವನ್ನು ತಿಳಿಸಿಕೊಡುವ *ಲಿಂಗದೇವನ ಲೀಲಾ ವಿಶೇಷ*  ಪುಸ್ತಕದ ಮರು ಮುದ್ರಣ ಮಾಡಿ ಬಿಡುಗಡೆಗೊಳಿಸಲಾಯಿತು. 🙏🙏🙏 " ಲಿಂಗದೇವನ ಲೀಲಾ ವಿಶೇಷ" ಪುಸ್ತಕ ಬೇಕಾಗಿದ್ದರೆ ಈ ಕೆಳಗಿನ ನಂಬರ್ ಗೆ ಕಾಲ್ ಮಾಡಿ ಅಥವಾ ವಾಟ್ಸಪ್ ಮೆಸೇಜ್ ಮಾಡಿ ಸಂಪರ್ಕಿಸಬಹುದು . 9886691820

ಪೂಜ್ಯ ಮಾತೆಮಹಾದೇವಿಯವರ ಅನುಪಸ್ಥಿತಿಯಲ್ಲಿ ಲಿಂಗಾಯತ ಧರ್ಮ ಹೋರಾಟದ ನಾಯಕತ್ವದ ಕೊರತೆ

Image
 ಪೂಜ್ಯ ಮಾತೆಮಹಾದೇವಿಯವರ ಅನುಪಸ್ಥಿತಿಯಲ್ಲಿ ಲಿಂಗಾಯತ ಧರ್ಮ ಹೋರಾಟದ ನಾಯಕತ್ವದ ಕೊರತೆ 📌 2018 ರಲ್ಲಿ ಜಸ್ಟಿಸ್ ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ಅಂದಿನ ಸಿದ್ದರಾಮಯ್ಯ ಸರ್ಕಾರವು ಲಿಂಗಾಯತ ಪ್ರತ್ಯೇಕ ಧರ್ಮ ಮತ್ತು ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಅನುಮೋದನೆ ನೀಡಿತ್ತು. ಹಾಗೂ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿತ್ತು ಆದರೆ ಇಲ್ಲಿಯ ತನಕವು ಕೂಡ ಕೇಂದ್ರ ಸರ್ಕಾರವು ಈ ಪ್ರಸ್ತಾವನೆಯನ್ನು ಅನುಮೋದನೆ ಮಾಡಿಲ್ಲ. ಕರ್ನಾಟಕದಲ್ಲಿ ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ಆಗಲಿದೆ.  ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಎರಡು ಕಡೆ ಒಂದೇ ಪಕ್ಷ ಅಧಿಕಾರದಲ್ಲಿದೆ. ಇಂಥ ಸಮಯದಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ Rally ಗಳನ್ನು ಮಾಡಿ ಸರ್ಕಾರದ ಮೇಲೆ ಒತ್ತಡ ತರುವಂತಹ ಕೆಲಸ ಏಕೆ ಆಗುತ್ತಿಲ್ಲ?  ಪೂಜ್ಯ ಲಿಂಗೈಕ್ಯ ಮಾತೆಮಹಾದೇವಿಯವರ ಅನುಪಸ್ಥಿತಿಯಲ್ಲಿ ಲಿಂಗಾಯತ ಧರ್ಮ ಹೋರಾಟದ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆಯೆ? ಪೂಜ್ಯ ಲಿಂಗೈಕ್ಯ ಮಾತೆಮಹಾದೇವಿಯವರಿಗೆ ಇದ್ದಂತಹ ಛಲ ಮತ್ತು ಕಳಕಳಿ ಇಂದಿನ ಮಠಾಧೀಶರಲ್ಲಿ, ಪೀಠಾಧಿಪತಿ ಗಳಲ್ಲಿ ಇಲ್ಲದಾಗಿದೆಯೆ? ಶಿಕ್ಷಣ ಸಂಸ್ಥೆಗಳ ಮೂಲಕ ಕೋಟಿ ಕೋಟಿ ಆದಾಯ ಮಾಡಿಕೊಳ್ಳುತ್ತಿರುವ ಲಿಂಗಾಯತ ಮಠಗಳಿಗೆ ತಮ್ಮದೇ ಧರ್ಮದ ಹೋರಾಟಕ್ಕಾಗಿ ಸ್ವಲ್ಪ ಹಣವನ್ನು ವಿನಿಯೋಗಿಸಿ ಹೋರಾಟ ನಡೆಸಲು ಏಕೆ ಮುಂದಾಗುತ್ತಿಲ್ಲ? ಪೂಜ್ಯ ಮಾತಾಜಿವರು ಲಿಂಗೈಕ್ಯ ಆದ ಮೇಲೆ ಅ

ಲಿಂಗಾಯತ ಧರ್ಮ ಸಂವಿಧಾನಕ್ಕೆ ಗುರು ಚೆನ್ನಬಸವಣ್ಣನವರ ಕೊಡುಗೆ - Part 1

Image
 *ಲಿಂಗಾಯತ ಧರ್ಮ ಸಂವಿಧಾನಕ್ಕೆ ಗುರು ಚೆನ್ನಬಸವಣ್ಣನವರ ಕೊಡುಗೆ* ಭಾಗ-೧ Contributions of Guru ChennaBasavanna to the Constitution of Lingayat Religion, Part-1 ಗುರು ಚೆನ್ನಬಸವಣ್ಣನವರ ಜಯಂತೋತ್ಸವ ಈ ವರ್ಷ 26-10-2022ರಂದು ಬಂದಿದೆ. ನನ್ನ ಲೇಖನಗಳು ತುಂಬಾ ಉದ್ದವಿರುತ್ತವೆ ಓದಲಿಕ್ಕೆ ಕಷ್ಟವಾಗುತ್ತದೆ ಎಂದು ಕೆಲವರು ಹೇಳಿದ್ದಾರೆ. ಅದಕ್ಕಾಗಿ ಆ ಮಹಾ ಗುರುವಿನ ಜೀವನ ಸಾಧನೆ ಸಂದೇಶವನ್ನು ಈ ಮೂರುದಿನಗಳ ಕಾಲ ತಿಳಿದುಕೊಳ್ಳೋಣ. ನಾಲ್ಕು ಭಾಗಗಳಲ್ಲಿ (24-10-2022 ಭಾಗ-1, 25-10-2022ರಂದು ಭಾಗ-1, 26-10-2022ರಂದು ಬೆಳಿಗ್ಗೆ ಭಾಗ-3, ಮತ್ತು ಸಂಜೆ ಭಾಗ-4)  ಮೇಲಿನ ಶೀರ್ಷಿಕೆಯ ವಿಚಾರಗಳನ್ನು ಮಂಡಿಸುತ್ತೇನೆ. ವೀರ ಮಾತೆ, ಕ್ರಾಂತಿ ಗಂಗೋತ್ರಿ ಅ ತಾಯಿ ಅಕ್ಕನಾಗಮ್ಮನವರ ಚಿದ್ಗರ್ಭದಲ್ಲಿ ಹುಟ್ಟಿ ಗುರು ಬಸವಣ್ಣನವರ ಮಡಿಲಲ್ಲಿ ಬೆಳೆದ ಅಪರೂಪದ ಶಿಶು ಗುರು ಚೆನ್ನಬಸವಣ್ಣನವರು. ತಾಯಿಯ ಒಡಲಲ್ಲಿ ಇರುವಾಗಲೇ ಗುರು ಬಸವಣ್ಣನವರಿಂದ ಅನುಗೃಹ ಪಡೆದ ಕಾರಣಿಕ ಶಿಶು ಗುರು ಚೆನ್ನಬಸವಣ್ಣನವರು.  * ೧೨ನೇ ಶತಮಾನದ ಆದಿ ಶರಣರಲ್ಲಿ ಸಂಪೂರ್ಣವಾಗಿ ಲಿಂಗಾಯತ ಧರ್ಮದಲ್ಲೇ ಹುಟ್ಟಿ ಬೆಳೆದಿದ್ದು ಗುರು ಚೆನ್ನಬಸವಣ್ಣನವರು ಮಾತ್ರ. ಅವರಿಂದ ಅನೇಕ ಸ್ವತಂತ್ರ ವಿಚಾರಗಳು ಲಿಂಗಾಯತ ಧರ್ಮ ಸಂವಿಧಾನಕ್ಕೆ ಕೊಡಲ್ಪಟ್ಟಿವೆ. ಗುರುಬಸವಣ್ಣನವರ ನಂತರ ಲಿಂಗಾಯತ ಧರ್ಮಕ್ಕೆ ಎರಡನೆಯದಾಗಿ ಅತೀ ಹೆಚ್ಚಿನ ಕೊಡುಗೆಯನ್ನು ನೀಡಿದವರು ಗುರು ಚೆನ್ನಬಸವ

ಶರಣ ಸಚ್ಚಿದಾನಂದನವರ ಮೇಲೆ ಹಲ್ಲೆ ಮಾಡುವುದೆಂದರೆ ಬಸವಾತ್ಮಜೆ ಮೇಲೆ ಹಲ್ಲೆ ಮಾಡಿದಂತೆ...

Image
ಜಹಜಕಜಃಜ * ಶರಣ ಸಚ್ಚಿದಾನಂದನವರ ಮೇಲೆ ಹಲ್ಲೆ ಮಾಡುವುದೆಂದರೆ ಬಸವಾತ್ಮಜೆ ಮೇಲೆ ಹಲ್ಲೆ ಮಾಡಿದಂತೆ.. .* ಶರಣ ಸಚ್ಚಿದಾನಂದ ಹಲ್ಲೆ ನಡೆಯುವಾಗ ತೆದೆದ video clips ವ್ಯಕ್ತಿಯನ್ನು ಕೊಲ್ಲಬಹುದೇ ಹೊರತು; ವ್ಯಕ್ತಿಯ ಸಂಶೋಧನೆಯನ್ನಲ್ಲ. ಎನ್ನುವ ಚಿಂತಕರ ಮಾತಿನಂತೆ  ಸಚ್ಚಿದಾನಂದ ಅವರ ಮೇಲೆ ಹಲ್ಲೆ ಮಾಡುವುದೆಂದರೆ, ಅವರೊಳಗಿನ ವಚನ ಸಾಹಿತ್ಯದ ಸಂಶೋಧನಾ ಮಹಾಜ್ಞಾನಕ್ಕೆ ಅಪಮಾನ ಮಾಡಿದಂತೆ, ಹಲ್ಲೆ ಮಾಡಿದಂತೆ ಹಲ್ಲೆಗೆ ಮುಂದಾದ ದುಷ್ಟಶಕ್ತಿಗಳ ನಡೆಯನ್ನು ವಿಚಾರವಾದಿಗಳಾದ ನಾವು ಉಗ್ರವಾಗಿ ಖಂಡಿಸುತ್ತೇವೆ. ಅವರು ಬರೆಯುವ ಒಂದೊಂದು ಲೇಖನವೂ ಮೌಲ್ಯಗಳಿಂದ ಕೂಡಿವೆ. ವಚನ ಸಾಹಿತ್ಯದ ಸತ್ಯ ಸಂಶೋಧನೆಗಳೇ ಆಗಿವೆ. ನಮ್ಮೊಳಗಿನ ತಪ್ಪನ್ನು ತಿದ್ದಿಕೊಳ್ಳಲು ವಚನ ಸಾಹಿತ್ಯ ದಿವ್ಯ ಮಾರ್ಗದರ್ಶಿಯಾಗಿವೆ. ಮಾಡಿದ ತಪ್ಪನ್ನು ವಚನ ಸಾಹಿತ್ಯದ ಸಂವಿಧಾನದ ಆಶಯದಂತೆ ತಿದ್ದಿಕೊಂಡು ಮುನ್ನೆಡೆಯಬೇಕೇ ವಿನಾ, ಸಚ್ಚಿದಾನಂದ ಅವರ ಮೇಲೆ ಹಲ್ಲೆ ಮಾಡಿರುವುದು ಅಕ್ಷಮ್ಯ ಅಪರಾಧ.  ಗೂಬೆ ಸೂರ್ಯನನ್ನು ನಿಂದಿಸಿದಂತೆ, ಕಾಗೆ ಚಂದ್ರಮನನ್ನು ನಿಂದಿಸಿದಂತೆ, ವಚನ ಸಾಹಿತ್ಯ ಅಧ್ಯಯನವಿರಲಾರದ ಅಂದ ಅಭಿಮಾನಿಗಳು ಸಚ್ಚಿದಾನಂದವರು ಬರೆದ ಸಂಸೋಧಿತ ವಿಚಾರಗಳನ್ನು ನಿಂದಿಸುವುದಲ್ಲದೆ ದೈಹಿಕ ಹಲ್ಲೆಗೆ ಮುಂದಾಗಿರುವುದು ಅವರ  ಬೌದ್ಧಿಕ ದಿವಾಳಿತನವು ಎತ್ತಿ ತೋರಿಸುತ್ತದೆ.  ಬಸವಾತ್ಮಜೆಯ ಎಲ್ಲಾ ಆಶಯಗಳನ್ನು ಗಾಳಿಗೆ ತೂರಿ, ಅವರೆಲ್ಲ ಆಶಯಗಳ ವಿರುದ್ಧವಾಗಿ ಆಡಳಿತ ನಡೆಸುತ್ತಾ ದ

ಅಖಂಡ ಬ್ರಹ್ಮಚಾರಿ ಗುರು ಬಸವಣ್ಣನವರೊಬ್ಬರೇ

Image
  ಅಖಂಡ ಬ್ರಹ್ಮಚಾರಿ ಗುರು ಬಸವಣ್ಣನವರೊಬ್ಬರೇ * ಸತಿಯ ಕಂಡು ವ್ರತಿಯಾದ ಬಸವಣ್ಣ.* *ವ್ರತಿಯಾಗಿ ಬ್ರಹ್ಮಚಾರಿಯಾದ ಬಸವಣ್ಣ.* *ಬ್ರಹ್ಮಚಾರಿಯಾಗಿ ಭವಗೆಟ್ಟನಯ್ಯಾ ಬಸವಣ್ಣ.* *ಗುಹೇಶ್ವರ ಲಿಂಗದಲ್ಲಿ ಅಖಂಡ ಬ್ರಹ್ಮಚಾರಿ ಬಸವಣ್ಣ ಒಬ್ಬನೇ.* ಬ್ರಹ್ಮಚರ್ಯೆ ಎನ್ನುವುದು ಬಹುದೊಡ್ಡ ಸಾಧನೆ. ಅದು ಕೇವಲ ಸಾಧನೆ ಮಾಡಿ ಬಿಡುವಂತಹುದಲ್ಲ ಇಡೀ ಜೀವಮಾನವೆಲ್ಲ ಕಾಯ್ದುಕೊಳ್ಳುವಂತಹದ್ದು. ಗುರು ಬಸವಣ್ಣನವರ ಬಗ್ಗೆ ಗುರು ಅಲ್ಲಮಪ್ರಭುದೇವರು ಹೇಳುವ ಮೇಲಿನ ವಚನದಲ್ಲಿ ವಿಶೇಷವಾದ ಅರ್ಥವಿದೆ. ಗುರು ಬಸವಣ್ಣನವರ ಕೆಲವು ವಚನಗಳನ್ನು ಗಮನಿಸಿದರೆ ಅವರು ಸಾಧಿಸಿದ ಸಾಧನೆ ಮತ್ತು ತಾವು ಮದುವೆಯಾಗಿ ಕರೆತಂದ ಶರಣೆ ನೀಲಗಂಗಮ್ಮನವರಿಗೂ ಬೋಧಿಸಿದ ಬೋಧನೆ ಅಗಾಧವಾದುದು.  ಮೊದಲಿಗೆ ಇಬ್ಬರು ಸತಿಪತಿಗಳಾಗಿ ಬದುಕಿ ನಂತರದ ದಿನಗಳಲ್ಲಿ ಇಬ್ಬರೂ ಲಿಂಗದೇವರಿಗೆ ಸತಿಯಾದರು. ಗುರು ಬಸವಣ್ಣನವರ ಈ ಕೆಳಗಿನ ವಚನ ಅವರು ಮದುವೆಯಾಗಿ ಶರಣೆ ನೀಲಗಂಗಮ್ಮನವರನ್ನು ಮನೆ ತುಂಬಿಸಿಕೊಂಡ ದಿನ ಬರೆದ ವಚನ ಎನಿಸುತ್ತದೆ. ಆ ವಚನದ ಸಾಲುಗಳು ಹೀಗಿವೆ: *ಐದು ಮಾನವ ಕುಟ್ಟಿ ಒಂದು ಮಾನವ ಮಾಡು, ಕಂಡಾ ಮದವಳಿಗೆ!* *ಇದು ನಮ್ಮ ಬಾಳುವೆ, ಮದವಳಿಗೆ! ಇದು ನಮ್ಮ ವಿಸ್ತಾರ, ಮದವಳಿಗೆ!* ಐದು ಮಾನ ಎಂದರೆ ಐದು ಸೇರು (ಧಾನ್ಯಗಳ ಅಳತೆ ಮಾಡುವ ಒಂದು ಅಳತೆಗೋಲು) ಐದು ಸೇರು ಇರುವಂತಹ ಧಾನ್ಯಗಳನ್ನು ಕುಟ್ಟಿ ಒಂದೇ ಮಾನವ ಮಾಡು - ಒಂದೇ ಸೇರು ಮಾಡು. ಎಂದರೆ ಪಂಚೇಂದ್ರೀಯಗಳೊಡನೆ ಕೂಡಿ ಚರಿಸುವಂಥ ಮನವನ್

Time will Answer - ಸಮಯ ಉತ್ತರಿಸುತ್ತದೆ

Image
 *ಗುರು ನಿಷ್ಟೆ* *ತತ್ವ ನಿಷ್ಟೆ* *ವ್ಯಕ್ತಿ ನಿಷ್ಟೆ* *ಸಂಸ್ಥೆಯ ನಿಷ್ಟೆ* ಅವರವರ ವೈಯಕ್ತಿಕ.. ಹೆಳಿದ್ದರು ಹೆಳದೆಇದ್ದರು,  ಅವರವರ   ನಡುವಳಿಕೆಯಿಂದ, ಗೊತ್ತಾಗುತ್ತದೆ Actually ಇಲ್ಲಿ Dec 28 ನಂತರ, ಲಿಂಗಾಯತರಲ್ಲಿ ಸದ್ಯಕ್ಕೆ ನಾಲ್ಕು Group ಗಳಾಗಿ ಜನರನ್ನು/ಶರಣರನ್ನು ಗುರುತಿಸಬಹುದು. 1. ಲಿಂಗದೇವ ನಿಷ್ಟರು, ಕೊಡಲಸಂಗಮದೇವ ವಿರೊಧಿಗಳಲ್ಲದವರು Group, ವಚನ ಅಂತರಾಳವನ್ನು ಅರಿತು, ಲಿಂಗದೇವ ಮಾಡಿರುವ ಮೊಲ ಉದ್ದೇಶ ಅರೆತ‌ ಶರಣರನ್ನು ಈ Group ಗೆ ಸೇರಿಸಬಹುದು. 2. ಕೊಡಲಸಂಗದೆವ ಅಡಿಯಲ್ಲಿ ಲಿಂಗದೇವ ವಿರೋಧಿಸುವ ಒಂದು Group, ಇದರಲ್ಲಿ ವ್ಯಾಪಾರಿಗಳು, ರಾಜಕಾರಣಿಗಳು, ಇತರ ಮಠದ ಜಂಗಮರು ಹಾಗು ಲಿಂಗೈಕ್ಯ ಮಾತಾಜಿಯವರ ಸಾಧನೆ ಸಹಿಸದ ಜನರು ಈ Group ನಲ್ಲಿ ಸೆರಿಸಬಹುದು. 3. ಲಿಂಗದೇವ ಸರಿಯಾಗಿದೆ ಅಂತ ಗೊತ್ತಿದ್ದರು, ಕೊಡಲಸಂಗಮದೇವ ಮಾತ್ರ ಹೆಳುವವರ ಮೆಲೆ  ಅವಲಂಬಿತರಾಗಿರುವ ಜನರನ್ನು ಈ Group ಗೆ ಸೆರಿಸಬಹುದು, ಬೆಡದಮನಸಿನಿಂದಲು, ಗುರುದ್ರೊಹ ಸ್ವಿಕರಿ, ಅವಲಂಬಿತನವನ್ನು ಯಾವುದೆ ಕಾರಣಕ್ಕೆ ಬಿಡದ ಜನರು (ಹೆಡಿಗಳು). ತಮ್ಮ ವ್ಯವಹಾರ, ಬರುವ ಗಳಿಕೆ ಇವರಿಗೆ ಅತಿ‌ಮೊಖ್ಯವಾಗಿರುತ್ತದೆ.‌ ಇಂಥಹ ಜನರನ್ನು ಈ Group ಗೆ ಸೇರಿಸಬಹುದು, ಇದರಲ್ಲಿ ಪದಾಧಿಕಾರಿಗಳು, ಸಣ್ಣಪುಟ್ಟ ವ್ಯವಹಾರ ಮಾಡುವರು, ಪ್ರವಚನ ಮಾಡುವುದಕ್ಕೆ ಬರದೆ ಇರುವ ಜಂಗಮರು, ಇಂಥಹ ಜಂಗಮರ ಅಡಿಯಲ್ಲಿರುವ ಸಾಧಕರು, ಸಂಸ್ಥಯ ಮೆಲೆ ಅವಲಂಬಿತರಾಗಿರುವರು, ಒಂದು ಒಳ್

ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಜನ್ಮ - ಲಿಂಗಾಯತ ಧರ್ಮದ ಪುನರ್ಜನ್ಮ

Image
  ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಜನ್ಮ - ಲಿಂಗಾಯತ ಧರ್ಮದ ಪುನರ್ಜನ್ಮ. ಆನೆಯು ಆ ದಾರಿಯಲ್ಲಿ ಹೋಯಿತ್ತೆಂದಡೆ ಆಡೂ ಆ ದಾರಿಯಲ್ಲಿ ಹೋಯಿತ್ತೆನಬಹುದೆ ? ಸಂಗನ ಶರಣರಿಗೆ ಆನು ಸರಿಯೆಂದು ಗಳಹಲುಬಹುದೆ ? ಜಂಗಮಕ್ಕೆ ಮಾಡುವ ಭಕ್ತರಿಗೆ ಆನು ಸರಿಯೇ ಹೇಳಾ ಲಿಂಗದೇವಾ ಆನೆ ಬೃಹದಾಕಾರದ ಪ್ರಾಣಿ. ಅದು ನಡೆದ ಜಾಗದಲ್ಲಿ ರಸ್ತೆ ನಿರ್ಮಾಣವಾಗುತ್ತದೆ. ಸಾಮಾನ್ಯವಾಗಿ ಕಾಡಿನಲ್ಲಿ ಹುಲ್ಲು, ಚಿಕ್ಕಪುಟ್ಟ ಗಿಡಗಳು ಇರುವ ಕಡೆ ಆನೆ ಹೋದರೆ ಅದು ತನ್ನ ಸೊಂಡಿಲಿನಿಂದ ತನಗೆ ಅಡ್ಡ ಬಂದ ಗಿಡ-ಮರ ಟೊಂಗೆಗಳನ್ನು ಕಿತ್ತಿ ಎಸೆಯುತ್ತದೆ. ಹೀಗೆ ಒಂದು ಸಲ ಆನೆಯು ಹೋಗುವ ದಾರಿಯು ಎಷ್ಟೇ ಇಕ್ಕಟ್ಟಾಗಿದ್ದರೂ ಅಲ್ಲಿ  ರಸ್ತೆ ನಿರ್ಮಾಣವಾಗುತ್ತದೆ. ಆ ದಾರಿಯಲ್ಲಿ ಇತರ ಆಡಿನಂತಹ ಸಣ್ಣ ಪುಟ್ಟ ಪ್ರಾಣಿಗಳು ಯಾವುದೇ ತೊಂದರೆ ಇಲ್ಲದೆ ಸಾಗಬಹುದು. ಅದೇ ರೀತಿ ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿಯವರು ಜಿಡ್ಡುಗಟ್ಟಿದ ಸಂಪ್ರದಾಯದಲ್ಲಿ ಆನೆಯಂತೆ ಮುನ್ನುಗ್ಗಿ ಅನೇಕ ಮೂಢನಂಬಿಕೆಗಳು, ತಪ್ಪು ಆಚರಣೆಗಳೆಂಬ ಗಿಡ ಮರಗಳನ್ನು ಕಿತ್ತೆಸೆದು ನವ ಪಥವನ್ನು ನಿರ್ಮಿಸಿದ್ದಾರೆ. ಸುಮಾರು 50 ವರ್ಷಗಳ ಹಿಂದಿನ ದಿನಗಳನ್ನು ನೋಡಿದರೆ ಅಂದು ಬಸವಣ್ಣನವರು ಎಂದರೆ ಯಾರು? ವಚನಗಳೆಂದರೇನು? ಬಸವ ತತ್ತ್ವ, ಲಿಂಗಾಯತ ಧರ್ಮ, ಬಸವ ಧರ್ಮ ಎನ್ನುವ ಶಬ್ದಗಳು ಸಂಪೂರ್ಣವಾಗಿ ಮರೆಮಾಚಿ ಹೋದಾಗ ಮತ್ತೊಮ್ಮೆ 12ನೆಯ ಶತಮಾನದ ಭವ್ಯತೆ ದಿವ್ಯತೆಯನ್ನು ಭಾರತ ದೇಶದಲ್ಲಿ ಪ್ರತಿಷ್ಠಾಪಿಸಿದ ಮೊಟ್ಟಮೊದಲ ವ್ಯಕ್ತ

ಮೆರವಣಿಗೆ/ಸನ್ಮಾನ V/s ತತ್ವ

Image
 ➡️ 📌 ದಿನಾಂಕ 23/8/22 ರ  ನ್ಯೂಸ್ ಪೇಪರ್ (ಪ್ರಜಾವಾಣಿ) ವರದಿಯಲ್ಲಿ "ಮಾತೆಗಂಗಾದೇವಿ ಮೆರವಣಿಗೆ, ಸನ್ಮಾನ" ಎಂಬ ಶೀರ್ಷಿಕೆಯಲ್ಲಿ ಬರೆದಿರುವ ಕೆಲವು ಸಾಲುಗಳು ಈ ರೀತಿ ಇವೆ  ---- "ವಚನಾಂಕಿತ ತಿದ್ದಿರುವ ಬಗ್ಗೆ ಕ್ಷಮೆ ಕೇಳಿ ತಪ್ಪನ್ನು ತಿದ್ದಿಕೊಳ್ಳುವುದಾಗಿ ಹೇಳಿಕೆ ನೀಡಿದರೆ, ಮಾತೆಮಹಾದೇವಿ ಅವರನ್ನು ಮೆರವಣಿಗೆ ಮೂಲಕ ಬಸವೇಶ್ವರ ದೇವಸ್ಥಾನಕ್ಕೆ ಕರೆತಂದು ಅದ್ದೂರಿಯಾಗಿ ಸನ್ಮಾನಿಸಲಾಗುವುದು ಎಂದು ದೇವಸ್ಥಾನ ಸಮಿತಿಯಿಂದ ಹೇಳಲಾಗಿತ್ತು"  ಈ ಸಾಲುಗಳನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ. ಬಸವಕಲ್ಯಾಣ ದೇವಸ್ಥಾನ ಕಮಿಟಿಯವರು ಅದ್ದೂರಿಯಾಗಿ ಮೆರವಣಿಗೆ  ಮಾಡುತ್ತೇವೆ ಎಂದು  *offer* ಕೊಟ್ಟರೂ ಕೂಡ ಪೂಜ್ಯ  ಮಾತಾಜಿ(ಮಾತೆಮಹಾದೇವಿ)ಯವರು ತಮ್ಮ ಜೀವಿತಾವಧಿಯಲ್ಲಿ ತಾನು ಮಾಡಿದ್ದು ತಪ್ಪು ಎಂದು ಒಪ್ಪಿಕೊಳ್ಳಲಿಲ್ಲ.. ಕ್ಷಮೆ ಕೇಳಲಿಲ್ಲ...  ಏಕೆ??? ಮಾತಾಜಿಯವರು ಮನಸ್ಸು ಮಾಡಿದ್ದರೆ ತಮ್ಮ ಸಂಶೋಧನೆಯನ್ನು ವಾಪಸ್ಸು ತೆಗೆದುಕೊಂಡು ಇಂತಹ ನೂರಾರು ಮೆರವಣಿಗೆಗಳನ್ನು ಸನ್ಮಾನಗಳನ್ನು ಮಾಡಿಸಿಕೊಳ್ಳಬಹುದಿತ್ತು.  ನೂರಾರು ಪುರಸ್ಕಾರಗಳನ್ನು ಪಡೆಯಬಹುದಿತ್ತು. ಆದರೆ ಅವರು ಇದಕ್ಕೆ ಒಪ್ಪಲಿಲ್ಲ. ಏಕೆಂದರೆ ಪೂಜ್ಯ ಮಾತಾಜಿಯವರಿಗೆ *ತನ್ನನ್ನು ತಾನು ಮೆರೆಸಿಕೊಳ್ಳುವುದಕ್ಕಿಂತ ಗುರು ಬಸವಣ್ಣನವರ ತತ್ವವನ್ನು ಇಡೀ ಜಗತ್ತಿಗೆ ಮೆರೆಸಬೇಕೆಂಬ ಅದಮ್ಯ ಆಸೆ ಇತ್ತು.* ಲಿಂಗದೇವ ವಚನಾಂಕಿತ ಪ್ರತಿಷ್ಠಾಪನೆ ಮಾಡಿದ್ದು ಸಮಾಜದ

ತಮಗೊಂದು ಕಥೆ ಹೇಳ್ತಿನಿ ಕೇಳಿ

Image
 ತಮಗೊಂದು ಕಥೆ ಹೇಳ್ತಿನಿ ಕೇಳಿ.... ಒಂದುರಲ್ಲಿ ಒಬ್ಬ ಶಿಲ್ಪಕಾರ ಮೂರು ಕತ್ತೆಗಳನ್ನು ಸಲವಿದ್ದ.. ಆತ ಮೂರ್ತಿ ಕೆತ್ತನೆ ಮಾಡಿ.. ಪಟ್ಟಣಕ್ಕೆ ಒಯಿದು ಮಾರಾಟ ಮಾಡಿ ಬಂದ ದುಡ್ಡಲ್ಲಿ... ತನ್ನ ಉಪಜೀವನ ನಡೆಸುತ್ತಿದ್ದಾ.....ಒಂದು ದಿನ... ಮೂರು ಮೂರ್ತಿಗಳನ್ನ ಮಾಡಿದ... 1) ವಿಶ್ವ ಗುರು ಬಸವಣ್ಣನವರದು.... 2) ಪ್ರವಚನ ಪಿತಾಮಹ ಲಿಂಗಾನಂದ ಅಪ್ಪಾಜಿಯವರದು... 3) ಮಹಿಳಾ ಜಗತಗುರು ಲಿಂಗೈಕ್ಯ ಮಾತೆ ಮಾಹಾದೇವಿ ತಾಯಿಯವರದು....  ಮೂರು ಕತ್ತೆಗಳ ಮೇಲೆ ಹೋರಿಕೊಂಡು... ಮಾರಾಟಕ್ಕೆ ಪಟ್ಟಣಕ್ಕೆ ನಡೆದ. ....ಮಧ್ಯದಲ್ಲಿ ಹತ್ತುವ ಕೆಲವು ಹಳ್ಳಿಗಳಲ್ಲಿ.... ಪೂಜೆ. ಸನ್ಮಾನ.. ನಡೆಯಿತು... ಕತ್ತೆಗೊಂದು ಮಾಲೆ ... ಮೇಲೆ ಹೋರಿಸಿದ ಮೂರ್ತಿಗಳಿಗೆ ಒಂದು ಮಾಲೆ ... ಮಾಡುತ್ತಾ ಭಕ್ತರು ಕತ್ತೆಗೆ ನೈವಾದ್ಯ ಕೂಡುವದು... ತೆಂಗು ಕಾಯಿ ಕರ್ಪುರ... ಮಾಡುತ್ತಲೇ ಹೋದರು,,,,, ಕತ್ತೆಗೊಂದು... ಮದ ಏರಿತು... ನನಗೆ ಎಷ್ಟು ಸನ್ಮಾನ... ನನಗೆ ಎಷ್ಟು ತಿಂಡಿ ತಿನಿಸು.. ಈ ವೂರಲ್ಲಿ ಅಂತ ತನ್ನನ್ನೇ ತಾನು ಗರ್ವಿ ಆಯಿತು.... ನನ್ನ ಮಾಲೀಕ ಇಲ್ಲಿವರೆಗೂ ನನಗೆ ಯಾವತ್ತು ಎರಡು ಅಗರಬತ್ತಿ ಹಚ್ಚಿಲ್ಲ... ಸಿಹಿ ತಿಂಡಿ ತಿನಿಸುಗಳನ್ನ ಕೊಟ್ಟಿಲ್ಲ,,, ಆದರೆ ನನಗೆ ಇ ಊರಲ್ಲಿ ಎಷ್ಟು ಸನ್ಮಾನ ಎಷ್ಟು ಸನ್ಮಾನ,,, ಅಂತ ಗರ್ವದಿಂದ ತುರಾಡಿತು,,,,,ಮಾಲೀಕ ಮೂರ್ತಿಗಳನ್ನು ಮಾರಾಟ ಮಾಡಿ....ಮತ್ತೆ ಮಾಲೀಕ ಕತ್ತೆಗಳನ್ನು ತನ್ನ ಮನೆಗೆ ಕರೆದು ಕೊಂಡು ಬಂದು ಕಾಲಿಗೆ ಹಗ್ಗ

ಪೂಜ್ಯ ಶ್ರೀ ಗಂಗಾಮಾತಾಜಿಯವರು ಗುರು ಬಸವಣ್ಣನವರ ಆದೇಶಗಳನ್ನು ತಿರಸ್ಕಿರಿಸಿರುವುದನ್ನು ಪ್ರಶ್ನಿಸುತ್ತ ಗುರು ಬಸವಣ್ಣನವರ ಆದೇಶಗಳನ್ನು‌ಪಾಲಿಸಲು ಆಗ್ರಹಿಸಿ ಬರೆದ ಪತ್ರ.

Image