ಬೀದರ ಬಸವ ಮಂಟಪದಲ್ಲಿ ನಡೆದ ಯಶಸ್ವಿ ಚನ್ನಹುಣ್ಣಿಮೆ ಕಾರ್ಯಕ್ರಮದಿಂದ ಸಿಗುವ ಪರೋಕ್ಷ ಸಂದೇಶ

ಬೀದರ ಬಸವ ಮಂಟಪದಲ್ಲಿ ನಡೆದ ಯಶಸ್ವಿ ಚನ್ನಹುಣ್ಣಿಮೆ ಕಾರ್ಯಕ್ರಮದಿಂದ ಸಿಗುವ ಪರೋಕ್ಷ ಸಂದೇಶ








ಪೂಜ್ಯ ಮಾತಾಜಿಯವರ ಬಲಿಷ್ಠ ನಾಯಕತ್ವದಲ್ಲಿ ಎಲ್ಲಾ ರಾ.ಬ.ದಳಗಳು ಸುಗಮವಾಗಿ ಸಾಗುತಿದ್ದವು. ಆದರೆ ಪೂಜ್ಯ ಮಾತಾಜಿ ಲಿಂಗೈಕ್ಯ ಆದ ಮೇಲೆ ಬೀದರ್ ರಾ.ಬ.ದಳ ಸಂಘಟನೆಯಲ್ಲಿ ಕೆಲವರು ಒಳಗಿಂದೊಳಗೆ  ಚಟುವಟಿಕೆಗಳನ್ನು ಪ್ರಾರಂಭಿಸಿದರು. ಲಿಂಗದೇವ ನೆಪ ಮಾಡಿಕೊಂಡು ಸಂಘಟನೆಯನ್ನು ಒಡೆಯಲು ಶುರು ಮಾಡಿದರು. 


ಲಿಂಗಾಯತ ಧರ್ಮ ಮಾನ್ಯತೆ ಕೊಡಿಸುತ್ತೇವೆ ಎಂಬ ಸುಳ್ಳು ಕನಸುಗಳನ್ನು ತೋರಿಸಿ ರಾ.ಬ.ದಳ ಸಂಘಟನೆಯನ್ನು ಒಡೆದು ಜಾ.ಲಿ.ಮಾಹಸಭಾ ಸಂಘಟನೆಯನ್ನು ಬೆಳೆಸುವ ಪ್ರಯತ್ನ ಮಾಡಲಾಯಿತು.


ಇದರ ಫಲವಾಗಿ ಒಂದು ವರ್ಷದ ಹಿಂದೆ ಮಾತೆಗಂಗಾದೇವಿ ಯವರು ಕೆಲವರ ಒತ್ತಡಕ್ಕೆ ಮಣಿದು ಪೂಜ್ಯ ಲಿಂ. ಮಾತಾಜಿಯವರ ಶ್ರೇಷ್ಠ ಸಂಶೋಧನೆ ಲಿಂಗದೇವ  ವಚನಾಂಕಿತವನ್ನು ಹಿಂಪಡೆಯುತ್ತೇನೆ ಎಂದು ಹೇಳಿಕೆ ಕೊಟ್ಟರು (ಕೊಡಿಸಲಾಯಿತು).


ಇದಾದ ನಂತರ ಬೀದರಿನ ಕೆಲವರು ಪೂಜ್ಯ ಸದ್ಗುರು ಸತ್ಯಾದೇವಿ ಮಾತಾಜಿ ಅವರ ಮೇಲೆ ಹಾಗೂ ಶರಣರ ಮೇಲೆ ಸಾಮೂಹಿಕ ಪ್ರಾರ್ಥನೆಯಲ್ಲಿ ಲಿಂಗದೇವ ಬಳಸಬಾರದು ಎಂದು ಒತ್ತಡ ತರಲು ಪ್ರಾರಂಭಿಸಿದರು. ಆದರೆ ಬೀದರ್ ನ ತತ್ವ ನಿಷ್ಠ ಶರಣರು ಯಾವುದೇ ಒತ್ತಡಕ್ಕೆ, ಬೆದರಿಕೆಗೆ ಬಗ್ಗದೆ ಪೂಜ್ಯ ಲಿಂಗೈಕ್ಯ ಮಾತಾಜಿ ಅವರ ಸಂಕಲ್ಪದಂತೆ, ಅವರು ಹಾಕಿಕೊಟ್ಟ ದಾರಿಯಂತೆ, ವಾರದ ಪ್ರಾರ್ಥನೆಯನ್ನು ಮುಂದುವರಿಸ್ಕೊಂಡು ಬರಲಾಯಿತು. 


ಅವಾಗ ಆ ಸ್ವಾರ್ಥ ಶಕ್ತಿಗಳು ಪರ್ಯಾಯ ಮಾರ್ಗವನ್ನು ಹುಡುಕಿದವು. ಒಂದೇ ಬಸವ ಮಂಟಪದಲ್ಲಿ ಬೇರೆ ಸಮಯಕ್ಕೆ ಮತ್ತೋಂದು ಪ್ರಾರ್ಥನೆ ಶುರು ಮಾಡಿದರು. ಪ್ರಾರಂಭದಲ್ಲಿ ಜನರನ್ನು ಸೇರಿಸಿ ಲಿಂಗದೇವ ಹಿಂಪಡೆದ ನಂತರ ಬಹಳಷ್ಟು ಜನರು ಪ್ರಾರ್ಥನೆಗೆ ಬರುತ್ತಿದ್ದಾರೆ ಎಂದು ನ್ಯೂಸ್ ಪೇಪರ್ ನಲ್ಲಿ ಹಾಕಿಸಿದರು. ಆದರೆ ಬರು ಬರುತ್ತಾ ಆ ಗುಂಪಿನವರು ಶುರು ಮಾಡಿದ್ದ  ಪ್ರಾರ್ಥನೆಯನ್ನು ನಡೆಸಲಾರದೆ ಬಿಟ್ಟುಬಿಟ್ಟರು. ಆದರೆ ಪೂಜ್ಯ ಲಿಂಗೈಕ್ಯ ಮಾತಾಜಿಯವರ  ಕಟ್ಟಾ ಅನುಯಾಯಿಗಳು ನಡೆಸಿಕೊಂಡು ಬರುತ್ತಿದ್ದ ವಾರದ ಪ್ರಾರ್ಥನೆ ಹಾಗೆಯೆ ಮುಂದುವರೆದಿದೆ.


ಇತ್ತೀಚಿಗೆ ಬೀದರ್ ಬಸವ ಮಂಟಪದಲ್ಲಿ ಸದ್ಗುರು ಮಾತೆ ಸತ್ಯಾದೇವಿಯವರ ನೇತ್ರತ್ವದಲ್ಲಿ ನಡೆದ ಚೆನ್ನ ಹುಣ್ಣಿಮೆ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ಜರುಗಿತ್ತು. ಕೆಲವು ಸ್ವಾರ್ಥ ಜನರ ಕುತಂತ್ರಕ್ಕೆ ಬಲಿಯಾಗಿ ದಾರಿ ತಪ್ಪಿ ಹೋಗಿದ್ದ ಅನೇಕ ಮುಗ್ಧ ಶರಣರು ಮತ್ತೆ ಹಿಂತಿರುಗಿ ಕಾರ್ಯಕ್ರಮಕ್ಕೆ ಬಂದಿದ್ದರು. 


ಇದರಿಂದ ಗೊತ್ತಾಗುತ್ತೆ,  ಯಾರು ಯಾವುದೇ ಸ್ವಾರ್ಥ ಇಟ್ಟುಕೊಳ್ಳದೆ ನಿಸ್ವಾರ್ಥದಿಂದ, ಪ್ರಾಮಾಣಿಕವಾಗಿ ಕಾರ್ಯ ಮಾಡುತ್ತಾರೋ ಅವರ ಕಾರ್ಯಗಳನ್ನು ಯಾವ ಆಧಿಕಾರ ಬಲ ಅಥವಾ ಹಣ ಬಲದಿಂದ ತಡೆಯಲು ಸಾಧ್ಯವಿಲ್ಲ. 


ಅದಕ್ಕಾಗಿಯೇ ಪೂಜ್ಯ ಲಿಂಗೈಕ್ಯ ಮಾತಾಜಿಯವರು ಸರಕಾರಗಳ, ರಾಜಕಾರಣಿಗಳ ಸಪೋರ್ಟ್ ಇಲ್ಲದೆ ಲಿಂಗದೇವ ವಚನಾಂಕಿತ ಇಟ್ಟುಕೊಂಡು ಸಹ ಯಾವ ಮಠಾಧೀಶರು ಮಾಡದಂತಹ ಸಾಧನೆಗಳನ್ನು ಮಾಡಿ ತೋರಿಸಿದರು ಹಾಗೂ ಯಾರು ಕಟ್ಟದಂತಹ ಬಲಿಷ್ಠವಾದ ರಾಷ್ಟ್ರೀಯ ಬಸವ ದಳ ಸಂಘಟನೆಯನ್ನು ಕಟ್ಟಿ ತೋರಿಸಿದರು. 


ಇದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗೋಣ..


🙏🙏🙏

(-ಸಿದ್ಧವೀರ ಸಂಗಮದ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…