ಲಿಂಗದೇವ ವಚನಾಂಕಿತವನ್ನು ಶಾಸ್ತ್ರೀಯವಾಗಿ ಪ್ರತಿಪಾದಿಸಲು ಐದು ಗ್ರಂಥಗಳು ಲಭ್ಯವಿವೆ.
ಲಿಂಗದೇವ ವಚನಾಂಕಿತವನ್ನು ಶಾಸ್ತ್ರೀಯವಾಗಿ ಪ್ರತಿಪಾದಿಸಲು ಐದು ಗ್ರಂಥಗಳು ಲಭ್ಯವಿವೆ.
೧೯೮೦-೯೦ರ ದಶಕಗಳಲ್ಲಿ ಆಗ ತಾನೆ ಲಿಂಗಾಯತ ಧರ್ಮ ಮತ್ತು ಇತರ ಧರ್ಮಗಳು ನೈಜ ರೀತಿಯಲ್ಲಿ ಪ್ರಸಾರವಾಗುತ್ತಿದ್ದ ಕಾಲವದು. ಧರ್ಮದ ವಿಚಾರದಲ್ಲಿ ಜನರ ಮನಸ್ಸುಗಳು ಅಂದು ತುಂಬಾ ಸೆನ್ಸಿಟಿವ್ ಆಗಿದ್ದವು. ಉದಾಹರಣೆಗೆ ಹೇಳುವುದಾದರೆ, 1992 ರಲ್ಲಿ ಬಾಬರಿ ಮಸೀದಿ ಧ್ವಂಸವಾದಾಗ ಸಾಕಷ್ಟು ಕೋಲಾಹಲ, ಆಸ್ತಿಪಾಸ್ತಿಗೆ ಹಾನಿ ಮತ್ತು ಜೀವಕ್ಕೆ ಹಾನಿಗಳಾಗಿದ್ದನ್ನು ನೋಡಬಹುದು. ಆದರೆ 2019ರಲ್ಲಿ ಬಾಬರಿ ಮಸೀದಿಯ ತೀರ್ಮಾನ ಸುಪ್ರೀಂ ಕೋರ್ಟಿನಿಂದ ಬಂದಾಗ ಯಾವುದೇ ಪ್ರಚೋದನೆ ಕಾರ್ಯಗಳಲ್ಲಿ ಹಿಂಸಾತ್ಮಕ ಕಾರ್ಯಗಳಲ್ಲಿ ಯಾರೂ ತೊಡಗಿಸಿಕೊಳ್ಳಲಿಲ್ಲ.
ಇದರ ಅರ್ಥ ಕಳೆದ 30 ವರ್ಷಗಳಲ್ಲಿ ಜನ ಪ್ರೌಢರಾಗಿದ್ದಾರೆ ಧರ್ಮ ತತ್ವವನ್ನ ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ದೇವರು ಕೇವಲ ಮಸೀದಿ ಮಂದಿರಗಳಿಗೆ ಸೀಮಿತವಾಗಿಲ್ಲ ಅವನು ಸರ್ವವ್ಯಾಪಿ ಎನ್ನುವುದನ್ನ ಅರಿತಿದ್ದಾರೆ.
ಅದೇ ರೀತಿ 1996ರಲ್ಲಿ ಪೂಜ್ಯ ಶ್ರೀ ಮಾತೆ ಮಹಾದೇವಿಯವರು 'ಲಿಂಗದೇವ' ವಚನಾಂಕಿತ ಅಳವಡಿಸಿದಾಗ, ಕೆಲವೊಂದು ಸಂಪ್ರದಾಯವಾದಿಗಳು ಧರ್ಮದ ವಿಚಾರದಲ್ಲಿ ತುಂಬಾ ಸೆನ್ಸಿಟಿವ್ ಆಗಿರುವಂತಹ ವ್ಯಕ್ತಿಗಳು, ಮಾತೆ ಮಹಾದೇವಿಯವರ ಪ್ರತಿಭೆ ಅವರ ಧರ್ಮ ಪ್ರಚಾರದ ಬಗ್ಗೆ ದ್ವೇಷವನ್ನು ಹೊಂದಿರುವಂತಹವರು ಅಂದಿನ ಕಾಲದಲ್ಲಿ ಗಲಾಟೆ ದೊಂಬಿ ಮಾಡಿ ಸರಕಾರದ ಮೇಲೆ ಒತ್ತಡ ತಂದು, 'ಬಸವ ವಚನ ದೀಪ್ತಿ' ಗುರು ಬಸವಣ್ಣನವರ ವಚನ ಸಂಗ್ರಹಗಳ ಪುಸ್ತಕ ಮುಟ್ಟುಗೋಲು ಆಗುವಂತೆ ಮಾಡಿದರು.
ಆದರೆ ಕಳೆದ 30 ವರ್ಷಗಳಲ್ಲಿ ಮಾತೆ ಮಹಾದೇವಿಯವರು ಮಾಡಿರುವಂತಹ ಧರ್ಮ ಪ್ರಚಾರ ಇದೆಲ್ಲವನ್ನು ತಿಳಿದುಕೊಂಡು ಜನ ಅವರ ಬಗ್ಗೆ, ಅವರ ಕಳಕಳಿಯ ಬಗ್ಗೆ, ಅವರ ಧರ್ಮ ಪ್ರಚಾರದ ಬಗ್ಗೆ ಅವರು ಗುರು ಬಸವಣ್ಣನವರನ್ನು ಬಿಂಬಿಸುವ ಬಗ್ಗೆ ಅರಿತುಕೊಂಡರು.
ಮಾತೆ ಮಹಾದೇವಿಯವರು ಬಸವಚನ ದೀಪ್ತಿ ಮುಟ್ಟುಗೋಳ ಆದ ನಂತರ ಬಸವ ವಚನಾಮೃತ ಎನ್ನುವಂತಹ 14 ಪುಸ್ತಕಗಳನ್ನು ಪ್ರಕಟ ಮಾಡಿದರು . ಇದರ ನಂತರ ಸಾವಿರದ ಎಂಟು ವಚನಗಳ ಇನ್ನೊಂದು ಗ್ರಂಥವನ್ನು ಪ್ರಕಟಿಸಿದ್ರು. ಅದಾದ ಮೇಲೆ ಸಂಪೂರ್ಣವಾಗಿ 1416 ವಚನಗಳ 'ಬಸವ ವಚನಾಮೃತ' ಎನ್ನುವಂತಹ ಗ್ರಂಥ ಪ್ರಕಟಣೆ ಮಾಡಿದರು. ಇದರಲ್ಲಿ ಗುರು ಬಸವಣ್ಣನವರ ಎಲ್ಲಾ ವಚನಗಳಿಗೆ ವ್ಯಾಖ್ಯಾನ ಬರೆದಿದ್ದಾರೆ. ಈ ರೀತಿ ಪ್ರಕಟಣೆ ಮಾಡಿದಾಗಲೂ ಕೂಡ ಯಾರು ಅದಕ್ಕೆ ಅಕ್ಷೇಪ ವ್ಯಕ್ತಪಡಿಸಿರಲಿಲ್ಲ. ಕಾರಣವೇನೆಂದರೆ ಈ ಸಮಾಜ ಲಿಂಗದೇವ ವಚನಾಂಕಿತ ಮಹತ್ವವನ್ನು ಅರಿತುಕೊಂಡಿದೆ. ಅನೇಕ ಇಸ್ಲಾಂ ಧರ್ಮದ ಗ್ರಂಥಗಳಲ್ಲೂ ಲಿಂಗದೇವ ವಚನಾಂಕಿತದ ಬಗ್ಗೆ ಪ್ರಸ್ತಾಪಿಸಿ ಕೊಂಡಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಮಾತೆ ಮಹಾದೇವಿ ತಾಯಿಯವರ ಶಿಷ್ಯರು, ಗುರು ಬಸವಣ್ಣನವರ ವಚನಗಳಿಗೆ ವ್ಯಾಖ್ಯಾನ ಬರೆದ ಬಸವ ವಚನಾಮೃತ ಪುಸ್ತಕವನ್ನು ತಿದ್ದಿ ಪುನಃ ಅದರಲ್ಲಿ ಕೂಡಲಸಂಗಮದೇವ ವಚನಾಂಕಿತ ಹಾಕಿ ಮುದ್ರಿಸುತ್ತಿರುವುದು ಇಡೀ ಲಿಂಗಾಯತ ಸಮಾಜಕ್ಕೆ, ಬಸವ ಧರ್ಮಕ್ಕೆ ಮಾತೆ ಮಹಾದೇವಿಯವರಿಗೆ ಬಗೆದಂತಹ ಈ ಮನುಕುಲ ಕಂಡ ಬಹುದೊಡ್ಡ ಗುರು ದ್ರೋಹ ಎಂದು ನಾನು ಹೇಳಬಯಸುತ್ತೇನೆ. ಇಂತಹ ಕೃತ್ಯವನ್ನು ಗುರು ಬಸವಣ್ಣನವರು ಹಾಗೂ ಸೃಷ್ಟಿಕರ್ತ ಪರಮಾತ್ಮ ಲಿಂಗದೇವರು ಎಂದಿಗೂ ಕ್ಷಮಿಸುವುದಿಲ್ಲ. ಕೇವಲ ಕೆಲವರ ಹಿತಾಸಕ್ತಿಗೆ ಮಣಿದು ಧರ್ಮ ಬಲಿಕೊಟ್ಟ ದುರಂತ ನಾಯಕರ ಸಾಲಿಗೆ ಈ ಈ ಕೃತ್ಯದ ಕಾರಣಕರ್ತರು ಸೇರುತ್ತಾರೆ.
ಅಂದು ಮಾತೆ ಮಹಾದೇವಿಯವರು ವಚನಾಂಕಿತ ಮನವರಿಗೆ ಮಾಡಿಕೊಡುತ್ತೇನೆ ಆಧಾರಗಳನ್ನು ಕೊಡುತ್ತೇನೆ. ನೀವಾದರೂ ಸಭೆ ಏರ್ಪಡಿಸಿ ನಾನು ಬರುತ್ತೇನೆ ಇಲ್ಲ ನಾನೇ ಸಭೆ ಏರ್ಪಡಿಸುತ್ತೇನೆ ನೀವೇ ಬನ್ನಿ ಎಂದು ಕರೆದರೂ ಯಾರು ಬರಲಿಲ್ಲ ಕಾರಣ ಕಾರಣಮಾತೆ ಮಹಾದೇವಿಯವರ ಮೇಲಿನ ಮತ್ಸರ ಈ ಕಾವಿಧಾರಿಗಳಿಗೆ ಇರುವ ಮತ್ಸರ ಜನಸಾಮಾನ್ಯರಿಗಿಂತ ಅಧಿಕವಾದದ್ದು ಒಬ್ಬ ವ್ಯಕ್ತಿ ಲಿಂಗೈಕ್ಯ ಆದ ಮೇಲೆ ಅವನ ಬಗೆಗಿನ ಕೆಟ್ಟ ಭಾವನೆಗಳನ್ನ ವ್ಯಕ್ತಿ ಅಳಿಸಿ ಹಾಕಿಕೊಳ್ಳುತ್ತಾನೆ. ಆದರೆ ಮಾತೆ ಮಹಾದೇವಿಯವರು ಲಿಂಗೈಕ್ಯರಾದ ಮೇಲೂ ಕೆಲ ಬಿಳಿ ಬಟ್ಟೆಧರಿಸಿದವರ ಒಡಲ ದ್ವೇಷದ ಕಿಚ್ಚು ಕೆಲ ಕಾವಿಧಾರಿಗಳಲ್ಲಿಯ ದ್ವೇಷ ಮತ್ಸರ ಅಳಿದು ಹೋಗಲೇ ಇಲ್ಲ. ಇಂತಹವರು ಈಗಿನ ಬಸವ ತತ್ವ ಪ್ರಚಾರಕರು!!! ಮಾತಾಜಿಯವರು ಲಿಂಗೈಕ್ಯರಾದ ಮೇಲೂ ಇವರಲ್ಲಿಯ ಮತ್ಸರದ ಕಿಚ್ಚು ಆರಿಲ್ಲ ಎಂದರೆ ಮಾತೆ ಮಹಾದೇವಿಯವರು ತುಕ್ಕುಹಿಡಿದ ಇವರು ಮನಸ್ಸಗಳಿಗೆ ಎಂತಹ ಪೆಟ್ಟು ಕೊಟ್ಟಿರಬಹುದು ಎನ್ನುವುದನ್ನು ಪ್ರಾಮಾಣಿಕರು ಖಂಡಿತವಾಗಿ ಅರ್ಥಮಾಡಿಕೊಳ್ಳುತ್ತಾರೆ. ಬಸವ ಧರ್ಮ ಪೀಠದವರಲ್ಲಿ ಇಲ್ಲವೇ ಇವರ ಮೇಲೆ ಮುಗಿಬಿದ್ದ ಮಾತಾಜಿ ದ್ವೇಷಿಗಳಲ್ಲಿ ಅಷ್ಟೊಂದು ಬಸವ ಭಕ್ತಿ ಪ್ರತಿಭೆ ಪಾಂಡಿತ್ಯವಿದ್ದರೆ. ಮಾತೆ ಮಹಾದೇವಿಯವರು ಬರೆದ ಪುಸ್ತಕಗಳನ್ನು ಬದಲಾಯಿಸದೇ ತಮ್ಮ ಸ್ವಯಂ ಜ್ಞಾನದಿಂದ ವ್ಯಾಖ್ಯಾನ ಬರೆದು ಪ್ರಕಟಿಸಲಿ.
ಮಾತೆ ಮಹಾದೇವಿಯವರನ್ನು ದ್ವೇಷಮಾಡಿ ದೂರ ಹೋಗಿ ೨೫ವರ್ಷ ಕಳೆದರೂ ಇವರಿಗೆ ಸಮಾಜದಲ್ಲಿ ಒಂದು ನೆಲೆ ಸಿಗಲಿಲ್ಲ ಆದ್ದರಿಂದಲೇ ನೆಲೆ ಕಂಡುಕೊಳ್ಳಲಿಕ್ಕೆ ಪುನಃ ಬಸವ ಧರ್ಮ ಪೀಠದ ಮೇಲೆ ಆಕ್ರಮಣ.!
"ಭೂಮಿಯಲ್ಲಿ ಬೀಜ ಬಿದ್ದಲ್ಲಿ ಕೆಟ್ಟಿತ್ತೆನಬೇಡ ಮುಂದಣ ಫಲದೊಳಗರಸಿಕೊ" ಎನ್ನುವ ಶರಣರ ವಾಣಿಯಂತೆ ಪೂಜ್ಯಶ್ರೀ ಮಾತೆ ಮಹಾದೇವಿಯವರ ಚಿಂತನೆಗಳು ತಮ್ಮ ಸಮಕಾಲೀನರಿಗಿಂತ ಒಂದೆರಡು ಶತಮಾನ ಮುಂದೆ ಇದ್ದವು. ಹೀಗಾಗಿ ಸಮಕಾಲೀನರು ಅರ್ಥ ಮಾಡಿಕೊಳ್ಳದಿದ್ದರೂ ಮುಂದಿನ ಜನಾಂಗ ಅರ್ಥ ಮಾಡಿಕೊಳ್ಳುತ್ತೆ ಎಂದು ಮಾತೆ ಮಹಾದೇವಿಯವರು ನಂಬಿದ್ದರು. ಅವರ ನಂಬಿಕೆಗೆ ಕೊಡಲಿ ಪೆಟ್ಟು ಕೊಟ್ಟ ದ್ರೋಹಿಗಳಿಗೆ ಲಿಂಗದೇವರು ತಕ್ಕುದ ಮಾಡಲಿ.
🙏

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ