ಪೋಸ್ಟ್‌ಗಳು

ಆಗಸ್ಟ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಜನ್ಮ - ಲಿಂಗಾಯತ ಧರ್ಮದ ಪುನರ್ಜನ್ಮ

ಇಮೇಜ್
  ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಜನ್ಮ - ಲಿಂಗಾಯತ ಧರ್ಮದ ಪುನರ್ಜನ್ಮ. ಆನೆಯು ಆ ದಾರಿಯಲ್ಲಿ ಹೋಯಿತ್ತೆಂದಡೆ ಆಡೂ ಆ ದಾರಿಯಲ್ಲಿ ಹೋಯಿತ್ತೆನಬಹುದೆ ? ಸಂಗನ ಶರಣರಿಗೆ ಆನು ಸರಿಯೆಂದು ಗಳಹಲುಬಹುದೆ ? ಜಂಗಮಕ್ಕೆ ಮಾಡುವ ಭಕ್ತರಿಗೆ ಆನು ಸರಿಯೇ ಹೇಳಾ ಲಿಂಗದೇವಾ ಆನೆ ಬೃಹದಾಕಾರದ ಪ್ರಾಣಿ. ಅದು ನಡೆದ ಜಾಗದಲ್ಲಿ ರಸ್ತೆ ನಿರ್ಮಾಣವಾಗುತ್ತದೆ. ಸಾಮಾನ್ಯವಾಗಿ ಕಾಡಿನಲ್ಲಿ ಹುಲ್ಲು, ಚಿಕ್ಕಪುಟ್ಟ ಗಿಡಗಳು ಇರುವ ಕಡೆ ಆನೆ ಹೋದರೆ ಅದು ತನ್ನ ಸೊಂಡಿಲಿನಿಂದ ತನಗೆ ಅಡ್ಡ ಬಂದ ಗಿಡ-ಮರ ಟೊಂಗೆಗಳನ್ನು ಕಿತ್ತಿ ಎಸೆಯುತ್ತದೆ. ಹೀಗೆ ಒಂದು ಸಲ ಆನೆಯು ಹೋಗುವ ದಾರಿಯು ಎಷ್ಟೇ ಇಕ್ಕಟ್ಟಾಗಿದ್ದರೂ ಅಲ್ಲಿ  ರಸ್ತೆ ನಿರ್ಮಾಣವಾಗುತ್ತದೆ. ಆ ದಾರಿಯಲ್ಲಿ ಇತರ ಆಡಿನಂತಹ ಸಣ್ಣ ಪುಟ್ಟ ಪ್ರಾಣಿಗಳು ಯಾವುದೇ ತೊಂದರೆ ಇಲ್ಲದೆ ಸಾಗಬಹುದು. ಅದೇ ರೀತಿ ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿಯವರು ಜಿಡ್ಡುಗಟ್ಟಿದ ಸಂಪ್ರದಾಯದಲ್ಲಿ ಆನೆಯಂತೆ ಮುನ್ನುಗ್ಗಿ ಅನೇಕ ಮೂಢನಂಬಿಕೆಗಳು, ತಪ್ಪು ಆಚರಣೆಗಳೆಂಬ ಗಿಡ ಮರಗಳನ್ನು ಕಿತ್ತೆಸೆದು ನವ ಪಥವನ್ನು ನಿರ್ಮಿಸಿದ್ದಾರೆ. ಸುಮಾರು 50 ವರ್ಷಗಳ ಹಿಂದಿನ ದಿನಗಳನ್ನು ನೋಡಿದರೆ ಅಂದು ಬಸವಣ್ಣನವರು ಎಂದರೆ ಯಾರು? ವಚನಗಳೆಂದರೇನು? ಬಸವ ತತ್ತ್ವ, ಲಿಂಗಾಯತ ಧರ್ಮ, ಬಸವ ಧರ್ಮ ಎನ್ನುವ ಶಬ್ದಗಳು ಸಂಪೂರ್ಣವಾಗಿ ಮರೆಮಾಚಿ ಹೋದಾಗ ಮತ್ತೊಮ್ಮೆ 12ನೆಯ ಶತಮಾನದ ಭವ್ಯತೆ ದಿವ್ಯತೆಯನ್ನು ಭಾರತ ದೇಶದಲ್ಲಿ ಪ್ರತಿಷ್ಠಾಪಿಸಿದ ಮೊಟ್ಟಮೊ...

ಮೆರವಣಿಗೆ/ಸನ್ಮಾನ V/s ತತ್ವ

ಇಮೇಜ್
 ➡️ 📌 ದಿನಾಂಕ 23/8/22 ರ  ನ್ಯೂಸ್ ಪೇಪರ್ (ಪ್ರಜಾವಾಣಿ) ವರದಿಯಲ್ಲಿ "ಮಾತೆಗಂಗಾದೇವಿ ಮೆರವಣಿಗೆ, ಸನ್ಮಾನ" ಎಂಬ ಶೀರ್ಷಿಕೆಯಲ್ಲಿ ಬರೆದಿರುವ ಕೆಲವು ಸಾಲುಗಳು ಈ ರೀತಿ ಇವೆ  ---- "ವಚನಾಂಕಿತ ತಿದ್ದಿರುವ ಬಗ್ಗೆ ಕ್ಷಮೆ ಕೇಳಿ ತಪ್ಪನ್ನು ತಿದ್ದಿಕೊಳ್ಳುವುದಾಗಿ ಹೇಳಿಕೆ ನೀಡಿದರೆ, ಮಾತೆಮಹಾದೇವಿ ಅವರನ್ನು ಮೆರವಣಿಗೆ ಮೂಲಕ ಬಸವೇಶ್ವರ ದೇವಸ್ಥಾನಕ್ಕೆ ಕರೆತಂದು ಅದ್ದೂರಿಯಾಗಿ ಸನ್ಮಾನಿಸಲಾಗುವುದು ಎಂದು ದೇವಸ್ಥಾನ ಸಮಿತಿಯಿಂದ ಹೇಳಲಾಗಿತ್ತು"  ಈ ಸಾಲುಗಳನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ. ಬಸವಕಲ್ಯಾಣ ದೇವಸ್ಥಾನ ಕಮಿಟಿಯವರು ಅದ್ದೂರಿಯಾಗಿ ಮೆರವಣಿಗೆ  ಮಾಡುತ್ತೇವೆ ಎಂದು  *offer* ಕೊಟ್ಟರೂ ಕೂಡ ಪೂಜ್ಯ  ಮಾತಾಜಿ(ಮಾತೆಮಹಾದೇವಿ)ಯವರು ತಮ್ಮ ಜೀವಿತಾವಧಿಯಲ್ಲಿ ತಾನು ಮಾಡಿದ್ದು ತಪ್ಪು ಎಂದು ಒಪ್ಪಿಕೊಳ್ಳಲಿಲ್ಲ.. ಕ್ಷಮೆ ಕೇಳಲಿಲ್ಲ...  ಏಕೆ??? ಮಾತಾಜಿಯವರು ಮನಸ್ಸು ಮಾಡಿದ್ದರೆ ತಮ್ಮ ಸಂಶೋಧನೆಯನ್ನು ವಾಪಸ್ಸು ತೆಗೆದುಕೊಂಡು ಇಂತಹ ನೂರಾರು ಮೆರವಣಿಗೆಗಳನ್ನು ಸನ್ಮಾನಗಳನ್ನು ಮಾಡಿಸಿಕೊಳ್ಳಬಹುದಿತ್ತು.  ನೂರಾರು ಪುರಸ್ಕಾರಗಳನ್ನು ಪಡೆಯಬಹುದಿತ್ತು. ಆದರೆ ಅವರು ಇದಕ್ಕೆ ಒಪ್ಪಲಿಲ್ಲ. ಏಕೆಂದರೆ ಪೂಜ್ಯ ಮಾತಾಜಿಯವರಿಗೆ *ತನ್ನನ್ನು ತಾನು ಮೆರೆಸಿಕೊಳ್ಳುವುದಕ್ಕಿಂತ ಗುರು ಬಸವಣ್ಣನವರ ತತ್ವವನ್ನು ಇಡೀ ಜಗತ್ತಿಗೆ ಮೆರೆಸಬೇಕೆಂಬ ಅದಮ್ಯ ಆಸೆ ಇತ್ತು.* ಲಿಂಗದೇವ ವಚನಾಂಕಿತ ಪ್ರ...

ತಮಗೊಂದು ಕಥೆ ಹೇಳ್ತಿನಿ ಕೇಳಿ

ಇಮೇಜ್
 ತಮಗೊಂದು ಕಥೆ ಹೇಳ್ತಿನಿ ಕೇಳಿ.... ಒಂದುರಲ್ಲಿ ಒಬ್ಬ ಶಿಲ್ಪಕಾರ ಮೂರು ಕತ್ತೆಗಳನ್ನು ಸಲವಿದ್ದ.. ಆತ ಮೂರ್ತಿ ಕೆತ್ತನೆ ಮಾಡಿ.. ಪಟ್ಟಣಕ್ಕೆ ಒಯಿದು ಮಾರಾಟ ಮಾಡಿ ಬಂದ ದುಡ್ಡಲ್ಲಿ... ತನ್ನ ಉಪಜೀವನ ನಡೆಸುತ್ತಿದ್ದಾ.....ಒಂದು ದಿನ... ಮೂರು ಮೂರ್ತಿಗಳನ್ನ ಮಾಡಿದ... 1) ವಿಶ್ವ ಗುರು ಬಸವಣ್ಣನವರದು.... 2) ಪ್ರವಚನ ಪಿತಾಮಹ ಲಿಂಗಾನಂದ ಅಪ್ಪಾಜಿಯವರದು... 3) ಮಹಿಳಾ ಜಗತಗುರು ಲಿಂಗೈಕ್ಯ ಮಾತೆ ಮಾಹಾದೇವಿ ತಾಯಿಯವರದು....  ಮೂರು ಕತ್ತೆಗಳ ಮೇಲೆ ಹೋರಿಕೊಂಡು... ಮಾರಾಟಕ್ಕೆ ಪಟ್ಟಣಕ್ಕೆ ನಡೆದ. ....ಮಧ್ಯದಲ್ಲಿ ಹತ್ತುವ ಕೆಲವು ಹಳ್ಳಿಗಳಲ್ಲಿ.... ಪೂಜೆ. ಸನ್ಮಾನ.. ನಡೆಯಿತು... ಕತ್ತೆಗೊಂದು ಮಾಲೆ ... ಮೇಲೆ ಹೋರಿಸಿದ ಮೂರ್ತಿಗಳಿಗೆ ಒಂದು ಮಾಲೆ ... ಮಾಡುತ್ತಾ ಭಕ್ತರು ಕತ್ತೆಗೆ ನೈವಾದ್ಯ ಕೂಡುವದು... ತೆಂಗು ಕಾಯಿ ಕರ್ಪುರ... ಮಾಡುತ್ತಲೇ ಹೋದರು,,,,, ಕತ್ತೆಗೊಂದು... ಮದ ಏರಿತು... ನನಗೆ ಎಷ್ಟು ಸನ್ಮಾನ... ನನಗೆ ಎಷ್ಟು ತಿಂಡಿ ತಿನಿಸು.. ಈ ವೂರಲ್ಲಿ ಅಂತ ತನ್ನನ್ನೇ ತಾನು ಗರ್ವಿ ಆಯಿತು.... ನನ್ನ ಮಾಲೀಕ ಇಲ್ಲಿವರೆಗೂ ನನಗೆ ಯಾವತ್ತು ಎರಡು ಅಗರಬತ್ತಿ ಹಚ್ಚಿಲ್ಲ... ಸಿಹಿ ತಿಂಡಿ ತಿನಿಸುಗಳನ್ನ ಕೊಟ್ಟಿಲ್ಲ,,, ಆದರೆ ನನಗೆ ಇ ಊರಲ್ಲಿ ಎಷ್ಟು ಸನ್ಮಾನ ಎಷ್ಟು ಸನ್ಮಾನ,,, ಅಂತ ಗರ್ವದಿಂದ ತುರಾಡಿತು,,,,,ಮಾಲೀಕ ಮೂರ್ತಿಗಳನ್ನು ಮಾರಾಟ ಮಾಡಿ....ಮತ್ತೆ ಮಾಲೀಕ ಕತ್ತೆಗಳನ್ನು ತನ್ನ ಮನೆಗೆ ಕರೆದು ಕೊಂಡು ಬಂದು ಕಾ...

ಪೂಜ್ಯ ಶ್ರೀ ಗಂಗಾಮಾತಾಜಿಯವರು ಗುರು ಬಸವಣ್ಣನವರ ಆದೇಶಗಳನ್ನು ತಿರಸ್ಕಿರಿಸಿರುವುದನ್ನು ಪ್ರಶ್ನಿಸುತ್ತ ಗುರು ಬಸವಣ್ಣನವರ ಆದೇಶಗಳನ್ನು‌ಪಾಲಿಸಲು ಆಗ್ರಹಿಸಿ ಬರೆದ ಪತ್ರ.

ಇಮೇಜ್