ಮೆರವಣಿಗೆ/ಸನ್ಮಾನ V/s ತತ್ವ
➡️ 📌 ದಿನಾಂಕ 23/8/22 ರ ನ್ಯೂಸ್ ಪೇಪರ್ (ಪ್ರಜಾವಾಣಿ) ವರದಿಯಲ್ಲಿ "ಮಾತೆಗಂಗಾದೇವಿ ಮೆರವಣಿಗೆ, ಸನ್ಮಾನ" ಎಂಬ ಶೀರ್ಷಿಕೆಯಲ್ಲಿ ಬರೆದಿರುವ ಕೆಲವು ಸಾಲುಗಳು ಈ ರೀತಿ ಇವೆ ---- "ವಚನಾಂಕಿತ ತಿದ್ದಿರುವ ಬಗ್ಗೆ ಕ್ಷಮೆ ಕೇಳಿ ತಪ್ಪನ್ನು ತಿದ್ದಿಕೊಳ್ಳುವುದಾಗಿ ಹೇಳಿಕೆ ನೀಡಿದರೆ, ಮಾತೆಮಹಾದೇವಿ ಅವರನ್ನು ಮೆರವಣಿಗೆ ಮೂಲಕ ಬಸವೇಶ್ವರ ದೇವಸ್ಥಾನಕ್ಕೆ ಕರೆತಂದು ಅದ್ದೂರಿಯಾಗಿ ಸನ್ಮಾನಿಸಲಾಗುವುದು ಎಂದು ದೇವಸ್ಥಾನ ಸಮಿತಿಯಿಂದ ಹೇಳಲಾಗಿತ್ತು"
ಈ ಸಾಲುಗಳನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ. ಬಸವಕಲ್ಯಾಣ ದೇವಸ್ಥಾನ ಕಮಿಟಿಯವರು ಅದ್ದೂರಿಯಾಗಿ ಮೆರವಣಿಗೆ ಮಾಡುತ್ತೇವೆ ಎಂದು *offer* ಕೊಟ್ಟರೂ ಕೂಡ ಪೂಜ್ಯ ಮಾತಾಜಿ(ಮಾತೆಮಹಾದೇವಿ)ಯವರು ತಮ್ಮ ಜೀವಿತಾವಧಿಯಲ್ಲಿ ತಾನು ಮಾಡಿದ್ದು ತಪ್ಪು ಎಂದು ಒಪ್ಪಿಕೊಳ್ಳಲಿಲ್ಲ.. ಕ್ಷಮೆ ಕೇಳಲಿಲ್ಲ... ಏಕೆ???
ಮಾತಾಜಿಯವರು ಮನಸ್ಸು ಮಾಡಿದ್ದರೆ ತಮ್ಮ ಸಂಶೋಧನೆಯನ್ನು ವಾಪಸ್ಸು ತೆಗೆದುಕೊಂಡು ಇಂತಹ ನೂರಾರು ಮೆರವಣಿಗೆಗಳನ್ನು ಸನ್ಮಾನಗಳನ್ನು ಮಾಡಿಸಿಕೊಳ್ಳಬಹುದಿತ್ತು. ನೂರಾರು ಪುರಸ್ಕಾರಗಳನ್ನು ಪಡೆಯಬಹುದಿತ್ತು. ಆದರೆ ಅವರು ಇದಕ್ಕೆ ಒಪ್ಪಲಿಲ್ಲ. ಏಕೆಂದರೆ ಪೂಜ್ಯ ಮಾತಾಜಿಯವರಿಗೆ *ತನ್ನನ್ನು ತಾನು ಮೆರೆಸಿಕೊಳ್ಳುವುದಕ್ಕಿಂತ ಗುರು ಬಸವಣ್ಣನವರ ತತ್ವವನ್ನು ಇಡೀ ಜಗತ್ತಿಗೆ ಮೆರೆಸಬೇಕೆಂಬ ಅದಮ್ಯ ಆಸೆ ಇತ್ತು.*
ಲಿಂಗದೇವ ವಚನಾಂಕಿತ ಪ್ರತಿಷ್ಠಾಪನೆ ಮಾಡಿದ್ದು ಸಮಾಜದ ದೃಷ್ಟಿಯಲ್ಲಿ ಇದು ತಪ್ಪಾಗಿ ಕಾಣಿಸಿತ್ತು ಆದರೆ ಮಾತಾಜಿಯವರ ದೃಷ್ಟಿಯಲ್ಲಿ ಇದು ಒಂದು *ಸಂಶೋಧನೆ* (ಸತ್ಯ ಶೋಧನೆ) ಆಗಿತ್ತು. ದೈವಿ ಪ್ರೇರಣೆ ಆಗಿತ್ತು. ಬಸವ ಸಂಕಲ್ಪ ಆಗಿತ್ತು. ಅದಕ್ಕಾಗಿ ಎಷ್ಟೇ ಕಷ್ಟಗಳು, ಕಿರುಕುಳ, ಬೆದರಿಕೆಗಳು, ಅವಾಚ್ಯ ಶಬ್ಧಗಳು, ಅವಮಾನ, ನೋವುಗಳು, ಎದುರಾದರೂ ಕೂಡ ತಮ್ಮ ಉಸಿರು ಇರುವವರೆಗೂ ತಮ್ಮ ಶೋಧನೆಯನ್ನು ಬಿಟ್ಟುಕೊಡಲಿಲ್ಲ. ಮಾತಾಜಿಯವರ ಈ *ತ್ಯಾಗ* ಬಹು ದೊಡ್ಡದು.
ಮಹಾತ್ಮರು ಲೋಕದ ಇಚ್ಛೆಯಂತೆ ಬಾಳುವುದಿಲ್ಲ, ಲೋಕವನ್ನು ಮೆಚ್ಚಿಸಲು ಪ್ರಯತ್ನಿಸುವುದಿಲ್ಲ. ಪರಮಾತ್ಮನು ಮೆಚ್ಚುವಂತೆ ಬಾಳುವರು, ಎಂಬುದಕ್ಕೆ ಪೂಜ್ಯ ಲಿಂಗೈಕ್ಯ ಮಾತಾಜಿಯವರೇ ಸಾಕ್ಷಿ...
ಇಂತಹ ಗುರುವಿಗೆ (ಮಾತಾಜಿಯವರಿಗೆ) ಕೀರ್ತಿ ತರುವಂತಹ ಕೆಲಸವನ್ನು ನಾವು ಮಾಡದಿದ್ದರೂ ಪರವಾಗಿಲ್ಲ ಆದರೆ ಅವರಿಗೆ *ಅಪಕೀರ್ತಿ*, *ಅವಮಾನ* ಮಾಡಿಸುವಂತಹ ಕೆಲಸವನ್ನು ನಾವು ಅಪ್ಪಿತಪ್ಪಿಯೂ ಮಾಡುವುದು ಬೇಡ...
🙏🙏🙏
ಶರಣು ಶರಣಾರ್ಥಿ
~ ಸಿದ್ದವೀರ ಸಂಗಮದ
.jpeg)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ