ಪೂಜ್ಯ ಮಾತೆಮಹಾದೇವಿಯವರ ಅನುಪಸ್ಥಿತಿಯಲ್ಲಿ ಲಿಂಗಾಯತ ಧರ್ಮ ಹೋರಾಟದ ನಾಯಕತ್ವದ ಕೊರತೆ

 ಪೂಜ್ಯ ಮಾತೆಮಹಾದೇವಿಯವರ ಅನುಪಸ್ಥಿತಿಯಲ್ಲಿ ಲಿಂಗಾಯತ ಧರ್ಮ ಹೋರಾಟದ ನಾಯಕತ್ವದ ಕೊರತೆ

📌2018 ರಲ್ಲಿ ಜಸ್ಟಿಸ್ ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ಅಂದಿನ ಸಿದ್ದರಾಮಯ್ಯ ಸರ್ಕಾರವು ಲಿಂಗಾಯತ ಪ್ರತ್ಯೇಕ ಧರ್ಮ ಮತ್ತು ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಅನುಮೋದನೆ ನೀಡಿತ್ತು. ಹಾಗೂ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿತ್ತು ಆದರೆ ಇಲ್ಲಿಯ ತನಕವು ಕೂಡ ಕೇಂದ್ರ ಸರ್ಕಾರವು ಈ ಪ್ರಸ್ತಾವನೆಯನ್ನು ಅನುಮೋದನೆ ಮಾಡಿಲ್ಲ.

ಕರ್ನಾಟಕದಲ್ಲಿ ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ಆಗಲಿದೆ.  ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಎರಡು ಕಡೆ ಒಂದೇ ಪಕ್ಷ ಅಧಿಕಾರದಲ್ಲಿದೆ. ಇಂಥ ಸಮಯದಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ Rally ಗಳನ್ನು ಮಾಡಿ ಸರ್ಕಾರದ ಮೇಲೆ ಒತ್ತಡ ತರುವಂತಹ ಕೆಲಸ ಏಕೆ ಆಗುತ್ತಿಲ್ಲ? 

ಪೂಜ್ಯ ಲಿಂಗೈಕ್ಯ ಮಾತೆಮಹಾದೇವಿಯವರ ಅನುಪಸ್ಥಿತಿಯಲ್ಲಿ ಲಿಂಗಾಯತ ಧರ್ಮ ಹೋರಾಟದ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆಯೆ? ಪೂಜ್ಯ ಲಿಂಗೈಕ್ಯ ಮಾತೆಮಹಾದೇವಿಯವರಿಗೆ ಇದ್ದಂತಹ ಛಲ ಮತ್ತು ಕಳಕಳಿ ಇಂದಿನ ಮಠಾಧೀಶರಲ್ಲಿ, ಪೀಠಾಧಿಪತಿ ಗಳಲ್ಲಿ ಇಲ್ಲದಾಗಿದೆಯೆ? ಶಿಕ್ಷಣ ಸಂಸ್ಥೆಗಳ ಮೂಲಕ ಕೋಟಿ ಕೋಟಿ ಆದಾಯ ಮಾಡಿಕೊಳ್ಳುತ್ತಿರುವ ಲಿಂಗಾಯತ ಮಠಗಳಿಗೆ ತಮ್ಮದೇ ಧರ್ಮದ ಹೋರಾಟಕ್ಕಾಗಿ ಸ್ವಲ್ಪ ಹಣವನ್ನು ವಿನಿಯೋಗಿಸಿ ಹೋರಾಟ ನಡೆಸಲು ಏಕೆ ಮುಂದಾಗುತ್ತಿಲ್ಲ?

ಪೂಜ್ಯ ಮಾತಾಜಿವರು ಲಿಂಗೈಕ್ಯ ಆದ ಮೇಲೆ ಅವರ ಲಿಂಗದೇವ ಸಂಶೋಧನೆಯನ್ನು ಅವರ ಉತ್ತರಾಧಿಕಾರಿಗಳಿಂದ ಕೈ ಬಿಡುವಂತೆ ಮಾಡಿ ಈಗ ನಾವೆಲ್ಲರೂ ಈಗ ಒಗ್ಗಟ್ಟಾಗಿದ್ದೇವೆ, ನಮ್ಮ ಬಲ ಈಗ ಸಾಕಷ್ಟು ಹೆಚ್ಚಾಗಿದೆ ಎಂದು ಹೇಳಲಾಗಿತ್ತು. ಹಾಗಾದರೆ ಲಿಂಗಾಯತ ಧರ್ಮ ಮಾನ್ಯತೆ ಹೋರಾಟಕ್ಕಾಗಿ ಸರ್ಕಾರದ ಮುಂದೆ ನಿಮ್ಮ ಈ ಬಲಪ್ರದರ್ಶನವನ್ನು ಏಕೆ ಮಾಡುತ್ತಿಲ್ಲ?

ಈ ಮುಂಬರುವ  ಚುನಾವಣೆಗಿಂತ ಮುಂಚೆ ಲಿಂಗಾಯತ ಮಠಾಧೀಶರು, ಹಾಗೂ ಬಸವ ಪರ ಸಂಘಟನೆಗಳು ಒಗ್ಗಟ್ಟಾಗಿ ಸರ್ಕಾರಗಳಿಗೆ, ರಾಜಕೀಯ ಪಕ್ಷಗಳಿಗೆ ಒಂದು ಸ್ಪಷ್ಟ ಸಂದೇಶ ಕೊಡುವ ಅವಶ್ಯಕತೆ ಇದೆ. ರಾಜ್ಯದ ಎಲ್ಲಾ ಲಿಂಗಾಯತ ಮಠಾಧೀಶರ ಒಂದು ನಿಯೋಗವು ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗಳಿಗೆ ಭೇಟಿ ಮಾಡಿ ಮನವಿ ಸಲ್ಲಿಸಬೇಕು, ಒತ್ತಡ ತರಬೇಕು. ಈ ರೀತಿ ಮಾಡದೆ ಹೋದರೆ ಆಯಾ ಮಠ, ಪೀಠಗಳ ಭಕ್ತರು ಕಾಣಿಕೆ ಕೊಡುವುದನ್ನು ನಿಲ್ಲಿಸಬೇಕು. 

ಶರಣು ಶರಣಾರ್ಥಿ

🙏🙏🙏

(ಸಿದ್ದವೀರ ಸಂಗಮದ)



ಕಾಮೆಂಟ್‌ಗಳು

  1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  2. ಪೂಜ್ಯ ಮಾತಾಜಿ ಇಲ್ಲದೆ,ಈ ಹೋರಾಟ ಸೂತ್ರ ಇಲ್ಲದ ಗಾಳಿ ಪಟದಂತಾಗಿದೆ . ದೃಢ ನಿರ್ಧಾರ, ಸಂಘಟನೆ ಕೊರತೆ, ಮಾರ್ಗದರ್ಶನ ಎಲ್ಲದರಲ್ಲೂ ಶಕ್ತಿ ಇಲ್ಲದಾಗಿದೆ.

    ಮಂಜುನಾಥ Responded in WhatsApp

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…