ನಮ್ಮ ಲಿಂಗಾಯತ ಧರ್ಮದ ಬೇಡಿಕೆಗಳು ಈಡೇರಿಸಲು ಒಪ್ಪಿಕೊಂಡ ಸರಕಾರ

 *ನಮ್ಮ ಲಿಂಗಾಯತ ಧರ್ಮದ ಬೇಡಿಕೆಗಳು ಈಡೇರಿಸಲು ಒಪ್ಪಿಕೊಂಡ ಸರಕಾರ:*



*ಸನ್ಮಾನ್ಯಶ್ರೀ ಜಗದೀಶ, ಮಾನ್ಯ ಕಾರ್ಯದರ್ಶಿ, ಹಿಂದುಳಿದ ಆಯೋಗ ಅವರನ್ನು ಕರ್ನಾಟಕ ರಾಜ್ಯ ಸರಕಾರ ಮನವಿ ಸ್ವೀಕರಿಸಲು ಕಳಿಸಿತ್ತು:*

*ಶ್ರೀ ಜಗದೀಶ ಮಾತನಾಡಿ ನನಗೆ ಮುಖ್ಯಮಂತ್ರಿ ಕಾರ್ಯಾಲಯ ಹಾಗೂ ಹಿಂದುಳಿದ ವರ್ಗಗಳ ಸಚಿವರು  ನಿಮ್ಮ ಮನವಿ ಸ್ವೀಕರಿಸಿ ಆಶ್ವಾಸನೆ ನೀಡಲು ಕಳಿಸಿದ್ದಾರೆ ಎಂದು ಮನವಿ ಸ್ವೀಕರಿಸಿ ಮಾತನಾಡಿದರು.*

*ಸಂಪೂರ್ಣ ಸಫಲವಾದ ಲಿಂಗಾಯತ ಧರ್ಮದ ಮಾನ್ಯತೆ ಸಾಂಕೇತಿಕ ಧರಣಿ: ಸಮಯ ಕೂಡಿ ಬಂದರೆ, ನಿಸ್ವಾರ್ಥ ಮನಸಿನಿಂದ ಯೋಜನೆ ಬದ್ದ ಕೆಲಸ ಮಾಡಿದರೆ ಎಂತಹ ಕೆಲಸ ಕೂಡ ಆಗುತ್ತವೆ ಎಂಬುದಕ್ಕೆ ಇಂದಿನ ದಿನ ಹಾಗೂ ಮುಂಬಯಿ ರಾಲಿ ಉದಾಹರಣೆ.*

*ಫ್ರೀಡಂ ಪಾರ್ಕ್ ಬೆಂಗಳೂರು: ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ವತಿಯಿಂದ.*

*ಧರಣಿಯಲ್ಲಿ ಭಾಗವಹಿಸಿದ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶ ಲಿಂಗಾಯತ ಧರ್ಮದ ಪೂಜ್ಯರು, ಮುಖಂಡರು ಮತ್ತು ಶರಣ ಶರಣೆಯರು.*

*ಕೆಲವೇ ದಿವಸಗಳ ಹಿಂದೆ ಮುಂಬಯಿಯಲ್ಲಿ ಘೋಷಣೆ ಮಾಡಿದ್ದ ಹಾಗೆ, ಲಿಂಗಾಯತ ಧರ್ಮದ ಮಾನ್ಯತೆ ಹಾಗೂ ಅಲ್ಪಸಂಖ್ಯಾತ ಸೌಲಭ್ಯ ಕೊಡಲು ಹಾಗೂ ವಿವಿಧ ಬೇಡಿಕೆಗೆ ಸಾಂಕೇತಿಕ ಧರಣಿ ನಿರ್ಧರಿಸಲಾಗಿತ್ತು.* *ಸುಮಾರು 2018ರಿಂದ ಇಲ್ಲಿಯವರೆಗೆ ಯಾವ ಸಂಘಟನೆಗಳು ಸರಕಾರಕ್ಕೆ ಮನವಿ ಸಲ್ಲಿಸಿಲ್ಲಾ, ಒಂದು ಸಮಾವೇಶ ಅಥವಾ ರಾಲಿ ಕೂಡ ಮಾಡಿಲ್ಲ.*

*ಆದರಿಂದ ನಮ್ಮ ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ವತಿಯಿಂದ ಇಂದು ಸಾಂಕೇತಿಕ ಧರಣಿ ಹಮ್ಮಿಕೊಳಲಾಗಿತು.*

 *ಮೊದಲೇ ಸರಕಾರದ ಮುಖ್ಯಮಂತ್ರಿ, ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಂಪರ್ಕ ಸಾಧಿಸಿದ್ದೇವೆ. ಅದರಂತೆ ಸರಕಾರದ ಅಧಿಕಾರಿಯಿಂದ ನನಗೆ ಕರೆ ಮಾಡಿ ಮೊದಲು ನಿಮ್ಮ ಬೇಡಿಕೆ ಅರ್ಜಿ ವಾಟ್ಸ್ ಆ್ಯಪ್ ಗೆ ಕಳಿಸಿಕೊಡಿ, ಸಚಿವರು ಪರಿಶೀಲನೆಗಾಗಿ ಕೇಳಿದ್ದಾರೆ ಎಂದು ಹೇಳಿದರು. ಅದರಂತೆ ನಾನು ಮುಂಜಾನೆ 11ಘಂಟೆಗೆ ಮನವಿ ಕಳಿಸಿದೆ. ಮುಖ್ಯಮಂತ್ರಿ ತುಂಬಾ ವ್ಯಸ್ತರಾಗಿದ್ದು ಸಮಯ ಇಲ್ಲ, ಸಾಯಂಕಾಲ ಸಮಯ ಅವಕಾಶ ಕೊಡಬಹುದು, ಅದಕ್ಕಿಂತ ಮೊದಲೇ ನಿಮ್ಮ ಮನವಿ ಸ್ವೀಕರಿಸಲು ಉನ್ನತ ಅಧಿಕಾರಿಯನ್ನು ನಿಮ್ಮ ಧರಣಿ ಸ್ಥಳಕ್ಕೆ ಮಧ್ಯಾನ 2:15 ಕ್ಕೆ  ಕಳಿಸಲಾಗುವುದು ಎಂದು ನನಗೆ ಪೊಲೀಸ್ ಅಧಿಕಾರಿ ಹೇಳಿದರು.*

*ಅದರಂತೆ ಸನ್ಮಾನ್ಯ ಶ್ರೀ ಜಗದೀಶ ಮಾನ್ಯ ಕಾರ್ಯದರ್ಶಿ ಹಿಂದುಳಿದ ವರ್ಗಗಳ ಆಯೋಗ ವೇದಿಕೆಗೆ ಬಂದು ಮನವಿ ಸ್ವೀಕರಿಸಿ ಮಾತನಾಡಿ ಈ ಕೂಡಲೇ ಸಚಿವರಿಗೆ ಮನವಿ ಮುಟ್ಟುಸಲಾಗುವದು  ಎಂದು ಹೇಳಿದರು. ಪೂಜ್ಯ ಡಾ ಚನ್ನಬಸವಾನಂದ ಮಹಾಸ್ವಾಮೀಜಿ ಕಾರ್ಯದರ್ಶಿ ಅವರಿಗೆ ಸ್ವಾಗತಿಸಿ ಸಮಸ್ಯೆಗಳ ಬಗ್ಗೆ ತಿಳಿಸಿ ಹೇಳಿದರು, ನಾನು ಶ್ರೀಕಾಂತ ಸ್ವಾಮಿ ಕರ್ನಾಟಕ ರಾಜ್ಯ ಸಂಚಾಲಕ ಮನವಿ ಓದಿ ಹೇಳಿದೆ, ಎಲ್ಲರೂ ಜೊತೆಗೂಡಿ ಮನವಿ ಸಲ್ಲಿಸಿದೇವು.*

*ನಮ್ಮ ಬೇಡಿಕೆಗಳು:*

*1) ಕೇಂದ್ರ ಸರ್ಕಾರ ತಿರಸ್ಕರಿಸಿದ ರಾಜ್ಯ ಸರಕಾರ ಕಳಿಸಿದ ಲಿಂಗಾಯತ ಧರ್ಮ ಮಾನ್ಯತೆ ಹಾಗೂ ಅಲ್ಪಸಂಖ್ಯಾತ ಸೌಲಭ್ಯ, ನ್ಯಾಯಮೂರ್ತಿ ನಾಗಮೋಹನದಾಸ ವರದಿ ಯಥಾವತ್ತಾಗಿ ಹಾಗೂ ಕೇಂದ್ರ ಆಕ್ಷೇಪಣೆ ಸಮಜಾಯಿಷಿ ಅರ್ಜಿ ಮರು ಕಳಿಸಬೇಕು.*

*2) ಕೂಡಲ ಸಂಗಮ ಬಸವೇಶ್ವರ ಐಕ್ಯ ಸ್ಥಳಕ್ಕೆ ಉಚಿತ ಪ್ರವೇಶ ಕೊಡಬೇಕು.*

*3) ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ವಿಶ್ವಗುರು ಬಸವೇಶ್ವರ ನಾಮಕರಣ ಮಾಡಬೇಕು*

*4) ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರು ಎಂದು ಘೋಷಿಸಬೇಕು*

*5) ಮಹಾರಾಷ್ಟ್ರ ಮಂಗಳವೇಡಾ ದಲ್ಲಿ ಸ್ಮಾರಕ ಸ್ಥಾಪಿಸಲು ಅನುದಾನ ಬಿಡುಗಡೆ ಮಾಡಬೇಕು.*

*ಪೂಜ್ಯ ಡಾ ಪೂಜ್ಯ ಚೆನ್ನಬಸವಾನಂದ ಜಗದ್ಗುರು ಸಾನಿಧ್ಯ ವಹಿಸಿದ್ದರು, ದಿವ್ಯ ಉಪಸ್ಥಿತಿ ಪೂಜ್ಯ ಶ್ರೀ ದಯಾನಂದ ಮಹಾಸ್ವಾಮಿ, ಪೂಜ್ಯ ಶ್ರೀ ಸತ್ಯಾದೇವಿ ಮಾತಾಜಿ, ಪೂಜ್ಯ ಶ್ರೀ ಬಸವಪ್ರಭು ಸ್ವಾಮೀಜಿ, ಪೂಜ್ಯ ಶ್ರೀ ಪ್ರಭುಲಿಂಗ ಸ್ವಾಮೀಜಿ. ಭಾಗವಹಿಸಿದ ಮುಖಂಡರು ಶ್ರೀ ಅವಿನಾಶ ಭೋಸ್ವಿಕರ ನಾಂದೇಡ ರಾಷ್ಟ್ರೀಯ ಸಂಚಾಲಕ, ಶ್ರೀ ವಿಜಯಕುಮಾರ ಪಟ್ನೆ ರಾಜ್ಯ ಅಧ್ಯಕ್ಷ ಲಿಂಗಾಯತ ಮಹಾಸಭಾ ತೆಲಂಗಾಣ ಹೈದ್ರಾಬಾದ, ಶ್ರೀ ಚಂದ್ರಮೌಳಿ ರಾಬಾದ, ಶ್ರೀ ಶಿವರಾಜ್ ಪಾಟೀಲ ಅತಿವಾಳ, ಶ್ರೀ ಬಸವರಾಜ ಸಂಗಮದ, ಶ್ರೀ ಈಶಣ್ಣ ಕೊರಲಹಳ್ಳಿ ರಾಜ್ಯಾಧ್ಯಕ್ಷ ರಾಬದ, ಶ್ರೀ ವಿಶ್ವನಾಥ ಕೊರೆ, ಶ್ರೀ ಆನಂದ ಗುಡಸ, ಶ್ರೀ ವೀರೇಶ ಗಂಗಾವತಿ, ಶ್ರೀ ಶ್ರೀನಾಥ ಕೊರೆ ಸಾವಿರಾರು ಶರಣ ಶರಣೆಯರು ಹಾಜರಿದ್ದರು.*

*ಬಲ್ಲಮೂಲಗಳ ಸುದ್ದಿ ಹಾಗೂ ಅದಿಕಾರಿಗಳು ಹೇಳಿದ್ದು ಸಂಪೂರ್ಣ ಲಿಂಗಾಯತ ಧರ್ಮಕ್ಕೆ ಎಲ್ಲಾ ಒಳಪಂಗಡ ಒಳಗೊಂಡು ಕೆಲವೇ ದಿವಸದಲ್ಲಿ ವಿಶೇಷ ಮೀಸಲಾತಿ ಘೋಷಿಸಲಾಗುತ್ತದೆ. ನಿಮ್ಮ ಮನವಿ ಮತ್ತಿಷ್ಟು ಪುಷ್ಟಿ ಕೊಟ್ಟಿದೆ ಎಂದು ಹೇಳಿದರು. ಹಾಗೂ ಸಲ್ಲಿಸಿದ ಬೇಡಿಕೆಗಳಲ್ಲಿ ಕೆಲವನ್ನು ಕೇವಲ ಹದಿನೈದು ದಿವಸದಲ್ಲಿ ಇಡೀರಿಸಲಾಗುವದು ಎಂದು ಹೇಳಿದ್ದಾರೆ.*


Photos










*ಸಹಕಾರ ಮಾಡಿದ ಮಾನ್ಯ ಮುಖ್ಯಮಂತ್ರಿ, ಮಾನ್ಯ ಹಿಂದುಳಿದ ಸಚಿವರು ಹಾಗೂ ಅಧಿಕಾರಿಗಳಿಗೆ ಧನ್ಯವಾದ.* 

*ಶ್ರೀಕಾಂತ ಸ್ವಾಮಿ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.*

ಕಾಮೆಂಟ್‌ಗಳು

  1. ಹಾಗಾದ್ರೆ ಬೇಡಿಕೆ ಈಡೇರಿ ಬಿಟ್ಟಿ ತಾ... ಇನ್ನೇಕೆ ಸಂಘಟನೆ.. ಸಮಾವೇಶ ಹೋರಾಟ... ಬನ್ನಿ ಎಲ್ರೂ ವಿಜಯೋತ್ಸವ ಆಚರಿಸೋಣ... ಚಡ್ಡಿ ಗಳ ಬಾಜ್ಪಕ್ಕೆ ವತ್ತೋಣ... ಟೈಂ ಬಂತಲ್ಲಾ... ಬಸವನ ಮಾರಾಟಕ್ಕಿಟ್ಟಿರುವ ಬುರುಡೆ ಪುರಾಣವನ್ನು ರಾಜ್ಯದ ಲಿಂಗಾಯತರು ಗಮನಿಸುತ್ತಿದ್ದಾರೆ... ಗಹಗಹಿಸುತ್ತಿದ್ದಾರೆ...!

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…