ಭಾಲ್ಕಿ ಶ್ರೀಗಳೇ ತಮಗೆ ಲಿಂಗೈಕ್ಯ ಮಾತಾಜಿಯವರ ಸಂಶೋಧನೆ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ?
ಭಾಲ್ಕಿ ಮಠದ ಬಸವಲಿಂಗ ಪಟ್ಟದೇವರೆ, ಕಲ್ಯಾಣ ಕಿರಣದಲ್ಲಿ ಪ್ರಕಟವಾದ ಅಭಿನಂದನೆಗಳು ಎಂಬ ಲೇಖನದಲ್ಲಿ ಲಿಂಗೈಕ್ಯ ಮಾತಾಜಿಯವರನ್ನು ಪ್ರಾರಂಭದಲ್ಲಿ ಹಾಡಿ ಹೊಗಳಿ, ನಂತರ ಪರೋಕ್ಷವಾಗಿ ಅವಮಾನಿಸುವ ಕೃತ್ಯ ಮಾಡಿದ್ದೀರಿ. ಲಿಂಗದೇವವು ದೇವರ ಹೆಸರು ಎಂದು ಒಪ್ಪಿಕೊಳ್ಳಲು ತಮಗೆ 25 ವರ್ಷಗಳು ಬೇಕಾದವೇ??? ಹಾಗಾದರೆ ತಮಗೆ ಮಾತಾಜಿ ಅವರ ಸಂಶೋಧನೆ ಲಿಂಗದೇವ ವಚನಾಂಕಿತ ಅರ್ಥ ಮಾಡಿಕೊಳ್ಳಲು ಇನ್ನು 25 ವರ್ಷಗಳು ಬೇಕಾಗುತ್ತವೆ ಎಂದೆನಿಸುತ್ತದೆ. ಇತ್ತೀಚಿಗೆ ಬಸವಕಲ್ಯಾಣದಲ್ಲಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಗುರು ಬಸವಣ್ಣನವರ ಭಾವಚಿತ್ರದ ಜೊತೆಗೆ * ನಂದಿ ಮೂರ್ತಿ* ಯ ಭಾವಚಿತ್ರವನ್ನು ಹಾಕಿ ಕಾರ್ಯಕ್ರಮ ಮಾಡಲಾಗಿತ್ತು. ಗುರು ಬಸವಣ್ಣನವರಿಗೆ ಅಪಚಾರ ವಾಗಿದ್ದ ಆ ಒಂದು ಕಾರ್ಯಕ್ರಮದಲ್ಲಿ *ಯಾವುದೇ ಚಕಾರವೇತ್ತದೆ ಮೌನವಾಗಿ * ಭಾಗವಹಿಸಿ ಬಂದಿರುವ ತಮಗೆ ಲಿ0.ಮಾತಾಜಿಯವರ ಸಂಶೋಧನೆ ಬಗ್ಗೆ ಮಾತಾಡುವ ಯಾವ ನೈತಿಕತೆ ಇದೆ ??? * ಪ್ರಶ್ನೆ ಮಾಡಿದರೆ ಸರಕಾರದಿಂದ ಬರುವ ಅನುದಾನಗಳನ್ನು ಕಳೆದುಕೊಳ್ಳುತ್ತೇವೆ ಎಂಬ ಭಯವೇ??? * ಅನೇಕ ಶಾಲಾ ಕಾಲೇಜುಗಳನ್ನು ತೆಗೆದು ಲಾಭ ನಷ್ಟದ ವ್ಯವಹಾರಗಳಲ್ಲಿ (ಚಿಂತೆಗಳಲ್ಲಿ) ಮುಳುಗಿಹೋಗಿರುವ ತಮಗೆ ಲಿ0.ಮಾತಾಜಿಯವರ ಸಂಶೋಧನೆ ಬಗ್ಗೆ ಮಾತಾಡುವ ಯಾವ ನೈತಿಕತೆ ಇದೆ??? ಈ ಲೇಖನದಲ್ಲಿ ತಾವು " 12 ವರ್ಷಗಳ ಚಿಂತೆ ಇಂದು ನಿಶ್ಚಿಂತೆ ಆಯಿತು" ಎಂಬ ಗುರು ಬಸವಣ್ಣನವರ ...