ಲಿಂಗಾಯತ ಮಠಾಧೀಶರು ಆತ್ಮವಲೋಕನ ಮಾಡುವ ಸಮಯ
ಲಿಂಗಾಯತ ಮಠಾಧೀಶರು ಆತ್ಮವಲೋಕನ ಮಾಡುವ ಸಮಯ
ಇತ್ತೀಚೆಗೆ ಸಾಣೆಹಳ್ಳಿ ಶ್ರೀಗಳು ಕೊಟ್ಟಿರುವ ಹೇಳಿಕೆಗೆ ವೈದಿಕವಾದಿಗಳು, ಪುರೋಹಿತಶಾಹಿಗಳಿಂದ ವಿರೋಧ ವ್ಯಕ್ತವಾಯಿತು. ಲಿಂಗಾಯತರಾದವರು ವೇದಿಕೆ ಮೇಲೆ ಅಥವಾ ಮನೆಗಳಲ್ಲಿ ಗಣಪತಿ ಪೂಜೆ ಮಾಡುವ ಬದಲು ವಚನ ಪಠಣ ಹಾಗೂ ಪ್ರಾರ್ಥನೆ ಮಾಡಬೇಕು ಎಂದು ಶ್ರೀಗಳು ಹೇಳಿದ್ದರು. ಅವರ ಈ ಹೇಳಿಕೆ *ಬಸವತತ್ವ* ಕ್ಕೇ ಅನುಸಾರವಾಗಿ ಇದೆ. ಶ್ರೀಗಳು ಈ ಹೇಳಿಕೆ ಕೊಟ್ಟಿದ್ದು ಲಿಂಗಾಯತರಿಗೆ ಮಾತ್ರ. ಆದ್ದರಿಂದ ಲಿಂಗಾಯತರಲ್ಲದವರು ಇವರ ಹೇಳಿಕೆಗೆ ಪ್ರತಿಕ್ರಿಯೆ ಕೊಡುವುದು ಸರಿಯಲ್ಲ.
ಲಿಂಗಾಯತ ಧರ್ಮದಲ್ಲಿ ಬಹು ದೇವತಾ ಉಪಾಸನೆಗೆ ಅವಕಾಶವಿಲ್ಲ. ಲಿಂಗಾಯತರಾದವರು *ಇಷ್ಟಲಿಂಗ* ಬಿಟ್ಟು ಬೇರೆ ಯಾವುದೇ *ಅನ್ಯದೈವ* ವನ್ನೂ ಪೂಜಿಸಬಾರದು ಎಂದು ಬಸವಾದಿ ಶರಣರು ತಮ್ಮ ವಚನಗಳಲ್ಲಿ ಪ್ರತಿಪಾದಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಈ ರೀತಿ ಹೇಳಿ ದಾರಿ ತಪ್ಪಿಸ್ತಾ ಇದ್ದಾರೆ "ಬಸವಣ್ಣನವರ ವಚನಾಂಕಿತ ಕೂಡಲಸಂಗಮದೇವ ಇದೆ. ಅವರು ಅರ್ಚಕರಾಗಿದ್ದರು. ಬಸವಣ್ಣನವರು ಕೂಡಲಸಂಗಮದ ದೇವಸ್ಥಾನದಲ್ಲಿರುವ ಸಂಗಮೇಶ್ವರ (ಶಿವಲಿಂಗದ) ಹೆಸರಿನ ಮೇಲೆಯೇ ತಮ್ಮ ಎಲ್ಲ ವಚನಗಳು ಬರೆದಿದ್ದಾರೆ" ಎಂದು ವಾದಿಸುತ್ತಿದ್ದಾರೆ. ಈ ರೀತಿ ವೈದಿಕರು ಲಿಂಗಾಯತ ಧರ್ಮದ ಬುಡಕ್ಕೆ ದಾಳಿ ಮಾಡ್ತಾ ಇದ್ದಾರೆ.
ಈ ರೀತಿಯ ದಾಳಿಗಳಿಗೆ ಪ್ರತ್ಯುತ್ತರ ಕೊಡಲು ಪೂಜ್ಯ ಲಿಂಗೈಕ್ಯ ಮಾತೆಮಹಾದೇವಿ ಅವರು 30 ವರ್ಷಗಳ ಹಿಂದೆಯೇ ಒಂದು ಬಲಿಷ್ಟವಾದ *ಅಸ್ತ್ರ* ವನ್ನು ಕೊಟ್ಟು ಹೋಗಿದ್ದಾರೆ. ಅದು ಯಾವುದೆಂದರೆ *ಲಿಂಗದೇವ.* "ಲಿಂಗಾಯತ ಧರ್ಮದಲ್ಲಿ ದೇವರ ಹೆಸರು ಲಿಂಗದೇವ" ಎಂಬ ಸತ್ಯವನ್ನು ತಮ್ಮ ಸಂಶೋಧನೆಯ ಮೂಲಕ ವಚನ ಸಾಹಿತ್ಯ ಒಳಗಿಂದಲೇ ಇದನ್ನು ತೆಗೆದು ಕೊಟ್ಟಿದ್ದಾರೆ.
ಆದರೆ ನಾವು ಬಸವ ತತ್ವ ಪ್ರಚಾರಕರು ಹಾಗೂ ಲಿಂಗಾಯತ ಮಠಾಧೀಶರು ಎಷ್ಟರಮಟ್ಟಿಗೆ ಈ ಅಸ್ತ್ರವನ್ನು ಬಳಸ್ತಾ ಇದ್ದೇವೆ ಎಂದು *ಅವಲೋಕನ* ಮಾಡಿಕೊಳ್ಳಬೇಕು. ಇಂಥ ಬಲಿಷ್ಠವಾದ ಅಸ್ತ್ರವನ್ನು ಮನೆಯಲ್ಲಿ ಇಟ್ಟುಕೊಂಡು *ಯುದ್ಧ* ಕ್ಕೆ ಹೋದಂತೆ ಆಗಿದೆ ನಮ್ಮ ಲಿಂಗಾಯತ ಮಠಾಧೀಶರ ಪರಿಸ್ಥಿತಿ. ಲಿಂಗಾಯತ ಧರ್ಮದಲ್ಲಿ ದೇವರಿಗೆ ಯಾವ ಹೆಸರಿನಿಂದ ಕರೆಯುತ್ತಾರೆ ಎಂದು ಕೇಳಿದ್ರೆ ನಮ್ಮ ಮಠಾಧೀಶರು ಕಾಮನ್ *ಉತ್ತರ* ಕೊಡುವ ಸ್ಥಿತಿಯಲ್ಲಿ ಇಲ್ಲ.
"ಬಸವಣ್ಣನವರು ತಮ್ಮ ಎಲ್ಲಾ ವಚನಗಳನ್ನು ಸಂಗಮೇಶ್ವರ (ದೇವತಾ ಶಿವನ) ಮೇಲೆ ಬರೆದಿದ್ದಾರೆ" ಎಂದು ಹೇಳುತ್ತ ವೈದಿಕರು ಲಿಂಗಾಯತರನ್ನು ದಾರಿ ತಪ್ಪಿಸುತ್ತಾರೆ, ಎಂಬುದು ಮಾತಾಜಿ ಅವರಿಗೆ ಗೊತ್ತಿತ್ತು. ಅದಕ್ಕಾಗಿ ಗುರು ಬಸವಣ್ಣನವರು ತಮ್ಮ ಬಾಲ್ಯದಲ್ಲಿ ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವನ ಬಗ್ಗೆ ಬರೆದ ವಚನಗಳಿಗೆ ಕೂಡಲಸಂಗಮದೇವಾ ವಚನಾಂಕಿತ ಹಾಗೆ ಇಟ್ಟು, ಗುರು ಬಸವಣ್ಣನವರಿಗೆ ಪರಮಾತ್ಮನ ಸಾಕ್ಷಾತ್ಕಾರ ಆದನಂತರ ಬರೆದ ವಚನಗಳಿಗೆ ಲಿಂಗದೇವ ವಚನಾಂಕಿತವನ್ನು ಅಳವಡಿಸಿದರು. (ಹೆಚ್ಚಿನ ಮಾಹಿತಿಗಾಗಿ ಲಿಂಗದೇವನ ಲೀಲಾವಿಷೇಶ ಕೃತಿಯನ್ನು ಓದಬಹುದು).
30 ವರ್ಷಗಳ ಹಿಂದೆ ಈ ಎಲ್ಲಾ ಲಿಂಗಾಯತ ಮಠಾಧೀಶರು ಪೂಜ್ಯ ಮಾತಾಜಿ ಅವರನ್ನು ವಿರೋಧಿಸಿದರು, ಟೀಕಿಸಿದರು, ನಿಂದನೆ ಮಾಡಿದರು. *ಶ್ರೇಷ್ಠ ದಾರ್ಶನಿಕ* ರಾಗಿದ್ದ (mystic) ಪೂಜ್ಯ ಮಾತೆಮಹಾದೇವಿಯವರು ಗುರು ಬಸವಣ್ಣನವರ ಪ್ರೇರಣೆಯಿಂದ ಮಾಡಿದ ಈ *ಸಂಶೋಧನೆ* ಯನ್ನು ಮುಕ್ತ ಮನಸ್ಸಿನಿಂದ ಅರ್ಥ ಮಾಡಿಕೊಳ್ಳುವ ಪ್ರಯತ್ನ ನಮ್ಮ ಮಠಾಧೀಶರು ಮಾಡಲಿಲ್ಲ. ಇಂದು ಕೂಡ ಮಾಡುತ್ತಿಲ್ಲ. ಆದರೆ ಮುಂದಿನ ಜನಾಂಗ ಖಂಡಿತ ಮಾಡುತ್ತೆ.. ಲಿಂಗಾಯತ ಧರ್ಮವು ಈ ಶೈವ ಹಾಗೂ ವೈದಿಕ ಛಾಯೆಯಿಂದ ಹೊರಗೆ ಬಂದು ಜಾಗತಿಕ ಧರ್ಮಗಳ ಸಾಲಿನಲ್ಲಿ ಖಂಡಿತ ನಿಲ್ಲುತ್ತದೆ.
"ನಾನು ಲಿಂಗಾಯತ. ಗುರು ಬಸವಣ್ಣನವರೆ ನಮ್ಮ ಗಣಪತಿ
ಹಾಗೂ ಲಿಂಗದೇವನೆ ನಮ್ಮ ದೇವರು"
ಸಾಣೆಹಳ್ಳಿ ಶ್ರೀಗಳು ಕೊಟ್ಟಿರುವ ಹೇಳಿಕೆಗೆ, ಸ್ಪಷ್ಟತೆ ಅವರಿಂದಲೆ ಕೆಳಲು ಈ ವಿಡಿಯೋವನ್ನು ವೀಕ್ಷಿಸಿ.
🙏
ಶರಣು ಶರಣಾರ್ಥಿ
- ಸಿದ್ಧವೀರ ಸಂಗಮದ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ