ಪೋಸ್ಟ್‌ಗಳು

ಜನವರಿ, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಡಾ|| ಸಂಗಮೇಶ ಸೌದತ್ತೀಮಠ ಅವರಿಗೆ ಕಿವಿ ಮಾತು

ಇಮೇಜ್
 ಡಾ|| ಸಂಗಮೇಶ ಸೌದತ್ತೀಮಠ ಅವರಿಗೆ ಕಿವಿ ಮಾತು ಕನ್ನಡದಲ್ಲಿರುವ ವಚನ ಸಾಹಿತ್ಯದ ಆಳವನ್ನು ಇನ್ನೂ ತಿಳಿದುಕೊಳ್ಳಲು ಸಾಧ್ಯವಾಗದವರು ನೀವು ಬಸವಾದಿ ಶರಣರ ಪರಂಪರೆಯ ಧರ್ಮದ ಕುರಿತು ಮಾತನಾಡಲು ಅನರ್ಹರು. ದಯಮಾಡಿ ಏನೂ ಹೇಳದಿದ್ದರೂ ಪರವಾಗಿಲ್ಲ, ಸುಳ್ಳನ್ನು ಹೇಳಿ ನಿಮ್ಮನ್ನು ನೀವು ವಂಚಿಸಿಕೊಳ್ಳಬೇಡಿ. ಲಿಂಗಾಯತರಿಗೂ ಅನ್ಯಧರ್ಮಿಯರಿಗೂ ಇರುವ ಒಂದು ವ್ಯತ್ಯಾಸ ಹೇಳಲು ಬಯಸುತ್ತೇನೆ. ನಿಮ್ಮ ಮನೆಯ ಹೊರಗೆ ಯಾರಾದರೂ ಬಂದು " ನಿಮ್ಮ ಅಜ್ಜಾ ಏನು ಮಾಡ್ತಾಯಿದ್ದಾರೆ ? " ಎಂದು ಕೇಳಿದರೆ ನಿಮ್ಮ ಮೊಮ್ಮಗನು ನನ್ನ ಅಜ್ಜ * ಲಿಂಗ ಪೂಜೆ ಮಾಡ್ಕೊಳ್ಳುತಿದ್ದಾರೆ ಎಂತಾನೇ ವಿನಃ ಮಾಡ್ತಾಯಿದಾರೆ * ಎನ್ನೋದಿಲ್ಲ. ಇಡೀ ವಿಶ್ವದಲ್ಲಿಯೇ ಗುರು ಬಸವಣ್ಣ ನವರ ಕೊಡುಗೆ ಏನೆಂದರೆ ತನ್ನತಾನರಿದು ತಾನೇ ಪೂಜಗೈವುದು. ಇದು ಲಿಂಗಾಯತ ಧರ್ಮದ ಸಂಸ್ಕೃತಿ. ಇಂಥಾ ಸಂಸ್ಕೃತಿಯ ನೀವು ಹೇಳುತ್ತಿರುವ ಜಾತಿವಾದಿಗಳ ಮನೆಯಲ್ಲಿ ಕಾಣಲಾಗದು! ಈ ಸಂದರ್ಭದಲ್ಲಿ  ಅಲ್ಲಮಪ್ರಭು ದೇವರ ಒಂದು ವಚನ ನೆನಪಾಗುತ್ತಿದೆ. " ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ, ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ, ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ ! ತೊಟ್ಟಿಲು ಮುರಿದು ನೇಣು ಹರಿದು, ಜೋಗುಳ ನಿಂದಲ್ಲದೆ, ಗುಹೇಶ್ವರನೆಂಬ ಲಿಂಗವ ಕಾಣಬಾರದು." ಅಜ್ಞಾನವನ್ನು ನಿರ್ಮೂಲನೆ ಮಾಡಬೇಕಾದರೆ ಏನು ಮಾಡಬೇಕೆಂಬುದನ್ನು ಪ್ರಪ್ರಥಮ ಶೂನ್ಯ ಪೀ...

ಲಿಂಗದೇವ ವಚನಾಂಕಿತವನ್ನು ಶಾಸ್ತ್ರೀಯವಾಗಿ ಪ್ರತಿಪಾದಿಸಲು ಐದು ಗ್ರಂಥಗಳು ಲಭ್ಯವಿವೆ.

ಇಮೇಜ್
 ಲಿಂಗದೇವ ವಚನಾಂಕಿತವನ್ನು ಶಾಸ್ತ್ರೀಯವಾಗಿ ಪ್ರತಿಪಾದಿಸಲು ಐದು ಗ್ರಂಥಗಳು ಲಭ್ಯವಿವೆ. ೧೯೮೦-೯೦ರ ದಶಕಗಳಲ್ಲಿ ಆಗ ತಾನೆ ಲಿಂಗಾಯತ ಧರ್ಮ ಮತ್ತು ಇತರ ಧರ್ಮಗಳು ನೈಜ ರೀತಿಯಲ್ಲಿ ಪ್ರಸಾರವಾಗುತ್ತಿದ್ದ ಕಾಲವದು. ಧರ್ಮದ ವಿಚಾರದಲ್ಲಿ ಜನರ ಮನಸ್ಸುಗಳು ಅಂದು ತುಂಬಾ ಸೆನ್ಸಿಟಿವ್ ಆಗಿದ್ದವು. ಉದಾಹರಣೆಗೆ ಹೇಳುವುದಾದರೆ, 1992 ರಲ್ಲಿ ಬಾಬರಿ ಮಸೀದಿ ಧ್ವಂಸವಾದಾಗ ಸಾಕಷ್ಟು ಕೋಲಾಹಲ, ಆಸ್ತಿಪಾಸ್ತಿಗೆ ಹಾನಿ ಮತ್ತು ಜೀವಕ್ಕೆ ಹಾನಿಗಳಾಗಿದ್ದನ್ನು ನೋಡಬಹುದು. ಆದರೆ 2019ರಲ್ಲಿ ಬಾಬರಿ ಮಸೀದಿಯ ತೀರ್ಮಾನ ಸುಪ್ರೀಂ ಕೋರ್ಟಿನಿಂದ ಬಂದಾಗ ಯಾವುದೇ ಪ್ರಚೋದನೆ ಕಾರ್ಯಗಳಲ್ಲಿ ಹಿಂಸಾತ್ಮಕ ಕಾರ್ಯಗಳಲ್ಲಿ ಯಾರೂ ತೊಡಗಿಸಿಕೊಳ್ಳಲಿಲ್ಲ.  ಇದರ ಅರ್ಥ ಕಳೆದ 30 ವರ್ಷಗಳಲ್ಲಿ ಜನ ಪ್ರೌಢರಾಗಿದ್ದಾರೆ ಧರ್ಮ ತತ್ವವನ್ನ ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ದೇವರು‌ ಕೇವಲ ಮಸೀದಿ ಮಂದಿರಗಳಿಗೆ ಸೀಮಿತವಾಗಿಲ್ಲ ಅವನು ಸರ್ವವ್ಯಾಪಿ ಎನ್ನುವುದನ್ನ ಅರಿತಿದ್ದಾರೆ.  ಅದೇ ರೀತಿ 1996ರಲ್ಲಿ ಪೂಜ್ಯ ಶ್ರೀ ಮಾತೆ ಮಹಾದೇವಿಯವರು 'ಲಿಂಗದೇವ' ವಚನಾಂಕಿತ ಅಳವಡಿಸಿದಾಗ, ಕೆಲವೊಂದು ಸಂಪ್ರದಾಯವಾದಿಗಳು ಧರ್ಮದ ವಿಚಾರದಲ್ಲಿ ತುಂಬಾ ಸೆನ್ಸಿಟಿವ್ ಆಗಿರುವಂತಹ ವ್ಯಕ್ತಿಗಳು, ಮಾತೆ ಮಹಾದೇವಿಯವರ ಪ್ರತಿಭೆ ಅವರ ಧರ್ಮ ಪ್ರಚಾರದ ಬಗ್ಗೆ ದ್ವೇಷವನ್ನು ಹೊಂದಿರುವಂತಹವರು ಅಂದಿನ ಕಾಲದಲ್ಲಿ ಗಲಾಟೆ ದೊಂಬಿ ಮಾಡಿ ಸರಕಾರದ ಮೇಲೆ ಒತ್ತಡ ತಂದು, 'ಬಸವ ವಚನ ದೀಪ್ತಿ' ಗ...