ಪೂಜ್ಯ ಮಾತೆಮಹಾದೇವಿಯವರ ಅನುಪಸ್ಥಿತಿಯಲ್ಲಿ ಲಿಂಗಾಯತ ಧರ್ಮ ಹೋರಾಟದ ನಾಯಕತ್ವದ ಕೊರತೆ
ಪೂಜ್ಯ ಮಾತೆಮಹಾದೇವಿಯವರ ಅನುಪಸ್ಥಿತಿಯಲ್ಲಿ ಲಿಂಗಾಯತ ಧರ್ಮ ಹೋರಾಟದ ನಾಯಕತ್ವದ ಕೊರತೆ 📌 2018 ರಲ್ಲಿ ಜಸ್ಟಿಸ್ ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ಅಂದಿನ ಸಿದ್ದರಾಮಯ್ಯ ಸರ್ಕಾರವು ಲಿಂಗಾಯತ ಪ್ರತ್ಯೇಕ ಧರ್ಮ ಮತ್ತು ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಅನುಮೋದನೆ ನೀಡಿತ್ತು. ಹಾಗೂ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿತ್ತು ಆದರೆ ಇಲ್ಲಿಯ ತನಕವು ಕೂಡ ಕೇಂದ್ರ ಸರ್ಕಾರವು ಈ ಪ್ರಸ್ತಾವನೆಯನ್ನು ಅನುಮೋದನೆ ಮಾಡಿಲ್ಲ. ಕರ್ನಾಟಕದಲ್ಲಿ ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ಆಗಲಿದೆ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಎರಡು ಕಡೆ ಒಂದೇ ಪಕ್ಷ ಅಧಿಕಾರದಲ್ಲಿದೆ. ಇಂಥ ಸಮಯದಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ Rally ಗಳನ್ನು ಮಾಡಿ ಸರ್ಕಾರದ ಮೇಲೆ ಒತ್ತಡ ತರುವಂತಹ ಕೆಲಸ ಏಕೆ ಆಗುತ್ತಿಲ್ಲ? ಪೂಜ್ಯ ಲಿಂಗೈಕ್ಯ ಮಾತೆಮಹಾದೇವಿಯವರ ಅನುಪಸ್ಥಿತಿಯಲ್ಲಿ ಲಿಂಗಾಯತ ಧರ್ಮ ಹೋರಾಟದ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆಯೆ? ಪೂಜ್ಯ ಲಿಂಗೈಕ್ಯ ಮಾತೆಮಹಾದೇವಿಯವರಿಗೆ ಇದ್ದಂತಹ ಛಲ ಮತ್ತು ಕಳಕಳಿ ಇಂದಿನ ಮಠಾಧೀಶರಲ್ಲಿ, ಪೀಠಾಧಿಪತಿ ಗಳಲ್ಲಿ ಇಲ್ಲದಾಗಿದೆಯೆ? ಶಿಕ್ಷಣ ಸಂಸ್ಥೆಗಳ ಮೂಲಕ ಕೋಟಿ ಕೋಟಿ ಆದಾಯ ಮಾಡಿಕೊಳ್ಳುತ್ತಿರುವ ಲಿಂಗಾಯತ ಮಠಗಳಿಗೆ ತಮ್ಮದೇ ಧರ್ಮದ ಹೋರಾಟಕ್ಕಾಗಿ ಸ್ವಲ್ಪ ಹಣವನ್ನು ವಿನಿಯೋಗಿಸಿ ಹೋರಾಟ ನಡೆಸಲು ಏಕೆ ಮುಂದಾಗುತ್ತಿಲ್ಲ? ಪೂಜ್ಯ ಮಾತಾಜಿವರು ಲಿಂಗ...