ತಮಗೊಂದು ಕಥೆ ಹೇಳ್ತಿನಿ ಕೇಳಿ
ತಮಗೊಂದು ಕಥೆ ಹೇಳ್ತಿನಿ ಕೇಳಿ.... ಒಂದುರಲ್ಲಿ ಒಬ್ಬ ಶಿಲ್ಪಕಾರ ಮೂರು ಕತ್ತೆಗಳನ್ನು ಸಲವಿದ್ದ.. ಆತ ಮೂರ್ತಿ ಕೆತ್ತನೆ ಮಾಡಿ.. ಪಟ್ಟಣಕ್ಕೆ ಒಯಿದು ಮಾರಾಟ ಮಾಡಿ ಬಂದ ದುಡ್ಡಲ್ಲಿ... ತನ್ನ ಉಪಜೀವನ ನಡೆಸುತ್ತಿದ್ದಾ.....ಒಂದು ದಿನ... ಮೂರು ಮೂರ್ತಿಗಳನ್ನ ಮಾಡಿದ...
1) ವಿಶ್ವ ಗುರು ಬಸವಣ್ಣನವರದು....
2) ಪ್ರವಚನ ಪಿತಾಮಹ ಲಿಂಗಾನಂದ ಅಪ್ಪಾಜಿಯವರದು...
3) ಮಹಿಳಾ ಜಗತಗುರು ಲಿಂಗೈಕ್ಯ ಮಾತೆ ಮಾಹಾದೇವಿ ತಾಯಿಯವರದು....
ಮೂರು ಕತ್ತೆಗಳ ಮೇಲೆ ಹೋರಿಕೊಂಡು... ಮಾರಾಟಕ್ಕೆ ಪಟ್ಟಣಕ್ಕೆ ನಡೆದ.
....ಮಧ್ಯದಲ್ಲಿ ಹತ್ತುವ ಕೆಲವು ಹಳ್ಳಿಗಳಲ್ಲಿ.... ಪೂಜೆ. ಸನ್ಮಾನ.. ನಡೆಯಿತು... ಕತ್ತೆಗೊಂದು ಮಾಲೆ ... ಮೇಲೆ ಹೋರಿಸಿದ ಮೂರ್ತಿಗಳಿಗೆ ಒಂದು ಮಾಲೆ ... ಮಾಡುತ್ತಾ ಭಕ್ತರು ಕತ್ತೆಗೆ ನೈವಾದ್ಯ ಕೂಡುವದು... ತೆಂಗು ಕಾಯಿ ಕರ್ಪುರ... ಮಾಡುತ್ತಲೇ ಹೋದರು,,,,, ಕತ್ತೆಗೊಂದು... ಮದ ಏರಿತು... ನನಗೆ ಎಷ್ಟು ಸನ್ಮಾನ... ನನಗೆ ಎಷ್ಟು ತಿಂಡಿ ತಿನಿಸು.. ಈ ವೂರಲ್ಲಿ ಅಂತ ತನ್ನನ್ನೇ ತಾನು ಗರ್ವಿ ಆಯಿತು....
ನನ್ನ ಮಾಲೀಕ ಇಲ್ಲಿವರೆಗೂ ನನಗೆ ಯಾವತ್ತು ಎರಡು ಅಗರಬತ್ತಿ ಹಚ್ಚಿಲ್ಲ... ಸಿಹಿ ತಿಂಡಿ ತಿನಿಸುಗಳನ್ನ ಕೊಟ್ಟಿಲ್ಲ,,, ಆದರೆ ನನಗೆ ಇ ಊರಲ್ಲಿ ಎಷ್ಟು ಸನ್ಮಾನ ಎಷ್ಟು ಸನ್ಮಾನ,,, ಅಂತ ಗರ್ವದಿಂದ ತುರಾಡಿತು,,,,,ಮಾಲೀಕ ಮೂರ್ತಿಗಳನ್ನು ಮಾರಾಟ ಮಾಡಿ....ಮತ್ತೆ ಮಾಲೀಕ ಕತ್ತೆಗಳನ್ನು ತನ್ನ ಮನೆಗೆ ಕರೆದು ಕೊಂಡು ಬಂದು ಕಾಲಿಗೆ ಹಗ್ಗವನ್ನು ಕಟ್ಟಿ ಮತ್ತೆ ತಿಪ್ಪೆಯಲ್ಲಿ ಮೈಯಲ್ಲೂ ಬಿಟ್ಟಿದ್ದ,,,,,, ಅವಾಗ ಮೂರು ಕತ್ತೆಗಳು.... ಯೋಚಿಸಿದವು... ನಮಗೆ ನೆರೆ ಗ್ರಾಮದಲ್ಲಿ ಎಷ್ಟು ಸನ್ಮಾನ ಸತ್ಕಾರ ಇದ್ದವು ಆದರೆ ಇಲ್ಲಿ ನಮಗೆ ತಿಪ್ಪೆಯೇ ಗತಿ... ಯೋಚಿಸಿ ನಾವಿಲ್ಲಿ ಇರಬಾರದು,,,, ನಾವು ನೆರೆ ಗ್ರಾಮಕ್ಕೆ ಹೋಗಿ ವಾಸಿಸೋಣ ಅಲ್ಲಿ ನಮಗೆ ಜನ.... ಆಹಾರ.. ಸನ್ಮಾನ ಮಾಡುತ್ತಾರೆಂದು ಯೋಚಿಸಿ... ತನ್ನ ಕಾಲಿಗೆ ಕಟ್ಟಿದ ಕಂಡ ಕಡೆದುಕೊಂಡು... ನೆರೆ ಗ್ರಾಮಕ್ಕೆ ಹೊರಟವು...... ಅಲ್ಲಿ ಕೆಲವು ಪುಂಡರಿ ಹುಡುಗರು ಕತ್ತೆ ಬಂತು ಕತ್ತೆ ಅಂತ ಲತ್ತೆ ಹಾಕಿ ಒದೆ ಕಟ್ಟಿಗೆ ಏಟು ಹಾಕಲು ಪ್ರಾರಂಭಿಸಿದರು,,,ಅವಾಗ ಆ ಮೂರು ಕತ್ತೆಗಳು ಅನ್ಕೊಂಡವು.... ನಾವು ಮೊದಲು ಬಂದಿರುವದು,,,, ನಮಗೆ ಸನ್ಮಾನ ಆಗಿರುವದು ನಮಗಲ್ಲ... ನಮ್ಮ ಮೇಲೆ ಕುಳಿತ... ವಿಶ್ವ ಗುರು ಬಸವಣ್ಣನವರನ್ನ . ಪ್ರವಚನ ಪಿತಾಮಹರನ್ನ . ಮಹಿಳಾ ಜಗತಗುರುಗಳನ್ನ..ಅವರಿಂದಲೇ ನಮಗೆ ಸನ್ಮಾನ ಸಿಕ್ಕಿದ್ದು... ಅವರಿಂದಲೇ... ನಮಗೆ ಸತ್ಕಾರ ಸಿಕ್ಕಿದ್ದು,,,,ಅಂತ ತಿಳಿದು,,ಮತ್ತೆ ಬಂದ ಹಾದಿಗೆ ತಿರುಗಿ ಮತ್ತೆ ಶಿಲ್ಪಕಾರನ ಮನೆ ಸೇರಿದ್ದವು,,,,, ಕತ್ತೆಗಳು ಅರಿತವು ...ಅರಿವೇ ಗುರು... ಹೊರತು.. ಸನ್ಮಾನಿಸುವರು ಡೋಂಗಿಗಳು ಅಂತ ಅರಿತವು.......ನಮಗೆ ಬೆಲೆ ಸಿಕ್ಕಿದ್ದು ನಮ್ಮ ಮೇಲೆ ಹೋರಿಸಿದ ಮಾಹಾತ್ಮರನ್ನ ಅಂತ ತಿಳಿದುಕೊಂಡಿದ್ದವು ಅರ್ಥಮಾಡ್ಕೊಳ್ಳುವರು ಅರ್ಥ ಮಾಡ್ಕೊಳ್ಳಿ ಅಪಾರ್ಥ ಮಾಡ್ಕೊಳ್ಳುವರು ಅಪಾರ್ಥ ಮಾಡ್ಕೊಳ್ಳಿ,,,,,
ಶುಭ ದಿನ....
ರಚನೆ :::ಬಸವರಾಜ್ ಎಸ್ ಒಂಟೆ,,,


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ