ಕಲ್ಯಾಣದ ಪ್ರಧಾನ ಮಂತ್ರಿ ಗುರು ಬಸವಣ್ಣನವರ ಯುದ್ಧ ವಿರೋಧ ನೀತಿ.
ಯುದ್ಧವೆಂದರೆ ಅದೊಂದು ಭಯಾನಕ ಸನ್ನಿವೇಶ. ಅಂಥ ಸನ್ನಿವೇಶವನ್ನು ಯುದ್ಧವಾದ ನಂತರವೇ ಅನುಭವಕ್ಕೆ ತಂದುಕೊಳ್ಳಬೇಕಾಗಿಲ್ಲ, ಯುದ್ಧದ ಸನ್ನಿವೇಶ ಕಲ್ಪಿಸಿಕೊಂಡರೂ ಎಂಥವರಿಗಾದರೂ ಅದರ ಪರಿಣಾಮದ ಬಗ್ಗೆ ಅರಿವಾಗುತ್ತದೆ. ಯುದ್ಧದಿಂದ ಅನೇಕ ಸಾವು ನೋವುಗಳುಂಟಾಗುತ್ತವೆ. ಯುದ್ಧದ ಪರಿಣಾಮದಿಂದ ಅನೇಕ ಜನ ಮಹಿಳೆಯರು ವಿಧವೆಯರಾಗುತ್ತಾರೆ, ಅನೇಕ ಮಕ್ಕಳು ಅನಾಥರಾಗುತ್ತಾರೆ. ಅನೇಕ ಜನ ಅಮಾಯಕರೂ ಸಾಯುತ್ತಾರೆ ಮತ್ತು ಅನೇಕರು ಗಾಯಗೊಳ್ಳುತ್ತಾರೆ. ಯುದ್ಧದಿಂದಾಗಿ ಭೌಗೋಳಿಕ ಪ್ರದೇಶವೂ ತನ್ನ ನೈಸರ್ಗಿಕತೆಯನ್ನು ಕಳೆದುಕೊಂಡ ಹಾಳಾಗುತ್ತದೆ. ಒಟ್ಟಾರೆ ಯುದ್ಧದ ಪರಿಣಾಮಗಳು ಅತ್ಯಂತ ಕರುಣಾಜನಕ, ಹೃದಯವಿದ್ರಾವಕ, ಮನಕಲಕುವಂತಾಗಿರುತ್ತವೆ. ಈ ಹಿಂದೆ ಜಗತ್ತು ಅನೇಕ ಯುದ್ಧಗಳನ್ನು ಕಂಡಿದೆ, ಎರಡು ಮಹಾಯುದ್ಧಗಳನ್ನೂ ಕಂಡಿದೆ. ಎರಡನೇ ಮಹಾಯುದ್ಧದಲ್ಲಿ ಜಪಾನಿನ ಹಿರೋಶಿಮಾ ಮತ್ತು ನಾಗಸಾಕಿ ಎನ್ನುವ ಪಟ್ಟಣಗಳ ಮೇಲೆ ಅಣುಬಾಂಬ್ ಗಳನ್ನು ಹಾಕಲಾಯಿತು. ಇದರ ಪರಿಣಾಮದಿಂದ ಇಂದಿಗೂ ಆ ಎರಡೂ ಪಟ್ಟಣಗಳ ಭೌಗೋಳಿಕ ಪರಿಸರ ಶಾಶ್ವತವಾಗಿ ಊನವಾಯಿತು. ಅಣುಬಾಂಬಿನ ಪರಿಣಾಮವಾಗಿ ಇಂದಿಗೂ ಆ ಪಟ್ಟಣಗಳಲ್ಲಿ ಅತಿ ಹೆಚ್ಚಿನ ಅಂಗವಿಕಲ ಮಕ್ಕಳು ಜನಿಸುತ್ತಿವೆ. ಅಲ್ಲಿನ ಪರಿಸರದ ಮೇಲೆ ಯುದ್ಧ ಶಾಶ್ವತವಾದ ಗಾಢ ಪರಿಣಾಮವನ್ನು ಬೀರಿದೆ. ಇಂದು ಸಹ ಜಗತ್ತು ಯುದ್ಧ ಭೀತಿಯಿಂದ ನಲುಗುತ್ತಿದೆ. ಅಮೇರಿಕಾ ಮತ್ತು ಇರಾನ್ ಗಳ ಯುದ್ಧ ಬಹು ದೊಡ್ಡ ಭೀತಿಯನ್ನು ಸೃಷ್ಟಿಸಿದೆ. ಅನೇಕ ಉ...