ಲಿಂಗಾಯತರೆನಿಸಿಕೊಂಡ ಕೆಲವರು ಇತ್ತೀಚೆಗೆ ಪ್ರಯಾಗರಾಜದ ನೀರಿನಲ್ಲಿ ಮುಳುಗೆದ್ದ ಪೋಟೊಗಳು ವಿಡೀಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿವೆ.
ರಾಷ್ಟ್ರೀಯ ಬಸವದಳಗಳ ಜೊತೆ ಗುರುತಿಸಿಕೊಂಡು ಲಿಂಗಾಯತರೆನಿಸಿಕೊಂಡ ಕೆಲವರು ಇತ್ತೀಚೆಗೆ ಪ್ರಯಾಗರಾಜದ ನೀರಿನಲ್ಲಿ ಮುಳುಗೆದ್ದ ಪೋಟೊಗಳು ವಿಡೀಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿವೆ. ಇಂಥವರಿಗೆ ಗುರು ಬಸವಣ್ಣನವರು ಅರ್ಥವಾಗುವ ಭಾಷೆಯಲ್ಲಿಯೇ ತಿಳಿ ಹೇಳುತ್ತಾರೆ * ಕೂಸುಳ್ಳ ಸೂಳೆ ಧನದಾಸೆಗೊತ್ತೆಯ ಕೊಂಡಡೆ* *ಕೂಸಿಂಗಲ್ಲ, ಬೊಜಗಂಗಲ್ಲ.* *ಕೂಸನೊಮ್ಮೆ ಸಂತವಿಡುವಳು, ಬೊಜಗನನೊಮ್ಮೆ ನೆರೆವಳು.* *ಧನದಾಸೆ ಬಿಡದು ಲಿಂಗದೇವಾ.* ಈ ಮೇಲಿನ ವಚನದ ತೋರು ಅರ್ಥ ಅತ್ಯಂತ ಸ್ಪಷ್ಟವಾಗಿದೆ ಅದಕ್ಕೆ ವಿವರಣೆ ಬೇಕಿಲ್ಲ ಎನಿಸುತ್ತದೆ. ಇದರ ಒಳ ಅರ್ಥ ಹೀಗಿದೆ: * ಕೂಸುಳ್ಳ ಸೂಳೆ:* ಇಷ್ಟಲಿಂಗವೆಂಬ ಕೂಸುಳ್ಳ ಅಳಿಮನದ ಭಕ್ತ *ಧನದಾಸೆಗೆ*-ಪ್ರಯಾಗರಾಜದ ನೀರಿನಲ್ಲಿ ಮುಳುಗಿದರೆ ಪುಣ್ಯ ಬರುತ್ತದೆ ಎನ್ನುವ ಆಸೆಗೆ) *ಒತ್ತೆಯ ಕೊಂಡರೆ : ಆ ನೀರಿನಲ್ಲಿ ಮುಳುಗಿದರೆ, ಅನ್ಯದೈವ ಪೂಜೆ ಭಜನೆ ದೇವಾಲಯಗಳ ಸುತ್ತುವಿಕೆ ಇಂಥ ಆಚರಣೆ ಮಾಡಿದರೆ, *ಕೂಸಿಂಗಲ್ಲ ಬೊಜಗಂಗಲ್ಲ:* ಇಷ್ಟಲಿಂಗಕ್ಕೂ ಸಂಪೂರ್ಣ ಭಕ್ತಿ ಅರ್ಪಣೆ ಆಗುವುದಿಲ್ಲ, ನೀರಿನಲ್ಲಿ ಮುಳುಗೆದ್ದಿರುವುದಕ್ಕೂ ಸಂಪೂರ್ಣ ತ್ರಪ್ತಿಸಿಗುವುದಿಲ್ಲ. ಸ್ಥಾವರಗಳಿಗೆರಗಲಿಕ್ಕೆ ಸುತ್ತಾಡಿ ಅಥವಾ ಮನೆಯಲ್ಲೇ ಅನ್ಯ ಪೂಜೆ ಭಜನೆಗಳನ್ನು ಮಾಡಿದರೆ ಅಲ್ಲಿಯೂ ಅಳಿಮನದ ಭಕ್ತನಿಗೆ ತೃಪ್ತಿ ಸಿಗುವುದಿಲ್ಲ ಏಕೆಂದರೆ ಇಂಥದನ್ನು ಕಂಡಾಗ ಗುರ...