ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ
ಯಾರು ? ಓಂ ಪದವನ್ನು ಬಳಸಬೆಡಿ ಅಂತ ಹೆಳಿದರೊ ಗೊತ್ತಿಲ್ಲಾ, ಆದರೆ ಅವರ ಶಿಷ್ಯಂದಿರು ಆಮಂತ್ರಣ ಪತ್ರಿಕೆಯಲ್ಲಿ ಓಂ ಪದ ವನ್ನು ಬಿಟ್ಟು, ಶ್ರೀ ಗುರು ಬಸವಲಿಂಗಾಯ ನಮಃ ವನ್ನು ಬಳಸುತ್ತಾರೆ, ಇದರಿಂದ ಅಂಥಹ ಕಾವಿಧಾರಿಗಳು ಯಾರಿರಬಹುದೆಂದು ಗುರುತಿಸಬಹುದು. ಆದಿ ಶರಣರು ತಮ್ಮ ವಚನಗಳಲ್ಲಿ "ಪ್ರಣವ" , "ಓಂ" ಪದಗಳನ್ನು ಬಹಳಕಡೆ Positiveಯಾಗಿ ಬಳಸಿದ್ದಾರೆ. ಸ್ವತಂತ್ರ ಧರ್ಮವಾದ ಜೈನ ಹಾಗು ಸಿಖ್ ಗಳಲ್ಲಿ ಓಂ ಪದದ ಬಳಕೆ ಇದೆ, ಈ ದೃಷ್ಟಿಕೋನ ದಿಂದ ನೊಡಿದರೆ, ಲಿಂಗಾಯತ ಸ್ವತಂತ್ರ ಧರ್ಮವಾಗದಂತೆ ತಡೆ ಹಿಡಿಯುವ ನಿಟ್ಟಿನಲ್ಲಿ ಓಂ ಪದ ಬಳಕೆಯನ್ನು ಬಿಡಲು ತಮ್ಮ ಭಕ್ತರನ್ನು ಮನವಲಿಸಿದ್ದಾರೆ, ಅನಿಸುತ್ತದೆ. ನಿಮ್ಮ ವಿಚಾರವೆನು ? ಓಂಕಾರವೇ ನಾದಮಯ. ಓಂಕಾರವೇ ಮಂತ್ರಮಯ. ಓಂಕಾರವೇ ಪರಿಪೂರ್ಣವಾಗಿ ಸರ್ವವ್ಯಾಪಕತ್ವವನ್ನುಳ್ಳುದು ನೋಡಾ. ಪ್ರಣವವೇ ಪರಮಾತ್ಮ ಸ್ವರೂಪವಾಗಿ ಪರಮೇಶ್ವರನ ಗೌಪ್ಯಮುಖ ನೋಡಾ. ಪ್ರಣವವೆ ಶಿವಶರಣರ ಹೃದಯಾದ್ಥಿಪತಿ ಇದು ಕಾರಣ, ಹೃದಯಕಮಲ ಮಧ್ಯದಲ್ಲಿ ಪ್ರಣವವನುಚ್ಚರಿಸುತ್ತ ಪರಶಿವಧ್ಯಾನದಲ್ಲಿ ತರಹರವಾಗಿ ಪ್ರಣವಸ್ವರೂಪನಾಗಿದ್ದೆನಯ್ಯ. ಪಂಚಾಕ್ಷರವೆ ಪಂಚಬ್ರಹ್ಮಮಯವಾಗಿ ಆ ಪಂಚಾಕ್ಷರಿಮಂತ್ರವೆ ಶರೀರವಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. - ತೋಂಟದ ಸಿದ್ಧಲಿಂಗ ಶಿವಯೋಗಿಗಳು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ