ಪೋಸ್ಟ್‌ಗಳು

ಮಾರ್ಚ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಯತ್ನಾಳ್ ಉಚ್ಛಾಟನೆ: ರಾಷ್ಟ್ರೀಯ ಬಸವದಳದ ನಿಷ್ಠಾವಂತ ಶರಣರ ಹೋರಾಟಕ್ಕೆ ಸಿಕ್ಕ ಪ್ರತಿಫಲ

ಇಮೇಜ್
ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಭಾರತೀಯ ಜನತಾ ಪಕ್ಷವು 06 ವರ್ಷಗಳ ಕಾಲ ಉಚ್ಛಾಟನೆ ಮಾಡಿದ್ದು ಸ್ವಾಗತಾರ್ಹ.  ಮೂರು ತಿಂಗಳುಗಳ ಹಿಂದೆ ಶಾಸಕ ಯತ್ನಾಳ, ಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿ ಮಾತುಗಳನ್ನ ಆಡಿ ಸಾರ್ವಜನಿಕವಾಗಿ ವಿಶ್ವಗುರು ಬಸವಣ್ಣನವರ ಅಪಹಾಸ್ಯ ಮಾಡಿದ್ದರು. ಈ ರೀತಿ ಮಾಡಿ ಕರ್ನಾಟಕ ಸಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಅಪಚಾರ ಮಾಡಿದ್ದರು. ಹಾಗೂ ಕ್ಷಮೆಯನ್ನು ಕೇಳುವುದಕ್ಕೂ ಕೂಡ ನಿರಾಕರಿಸಿದ್ದರು. ಅವಾಗ  ಬೀದರ, ಬೆಳಗಾವಿ ಹಾಗೂ ಗಂಗಾವತಿಯಲ್ಲಿ  ರಾಷ್ಟ್ರೀಯ ಬಸವದಳದ ನಿಷ್ಠಾವಂತ ಶರಣರು, ಪೂಜ್ಯ ಮಾತೆ ಮಹಾದೇವಿಯವರ ಅನುಯಾಯಿಗಳು ಉಳಿದ ಬಸವಪರ ಸಂಘಟನೆಗಳ ಸಹಕಾರ ಪಡೆದು ರಸ್ತೆಗೆ ಇಳಿದು ಯತ್ನಾಳ್ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನೆ ಮಾಡಿದ್ದರು. ಯತ್ನಾಳರನ್ನು ಪಕ್ಷದಿಂದ ಹಾಗೂ ಶಾಸಕ ಸ್ಥಾನದಿಂದ ಉಚ್ಚಾಟನೆ ಮಾಡಬೇಕೆಂದು ಆಗ್ರಹ ಮಾಡಿ, ಆಯಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಇವಾಗ ಭಾರತೀಯ ಜನತಾ ಪಕ್ಷವು  ಯತ್ನಾಳರನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವ ಕ್ರಮವೂ ರಾಷ್ಟ್ರೀಯ ಬಸವದಳದ ನಿಷ್ಠಾವಂತ ಶರಣರು ಮಾಡಿದ ಹೋರಾಟಕ್ಕೆ ಸಿಕ್ಕ ಪ್ರತಿಫಲ. ಡಿಸೆಂಬರ್ ನಲ್ಲಿ ನಡೆದ ಹೋರಾಟದ ಛಾಯಾಚಿತ್ರಗಳು. - ರಾಷ್ಟ್ರೀಯ ಬಸವ ದಳ 

2025ರ ಲಿಂಗಾನಂದ ಶ್ರೀ ಪ್ರಶಸ್ತಿ ಶರಣ ಅಶೋಕ ನಾವಿ ಯವರಿಗೆ ನಿಡಲಾಗಿದೆ

ಇಮೇಜ್
ಮಾರ್ಚ 22 ಮತ್ತು 23ರಂದು ಬೀದರನಲ್ಲಿ ಹಮ್ಮಿಕೊಳ್ಳಲಾದ ಮಹಾ ದಂಡನಾಯಕರ ಸ್ಮರಣೋತ್ಸವ  ಕಾರ್ಯಕ್ರಮದಲ್ಲಿ ಲಿಂಗಾನಂದ ಶ್ರೀ ಪ್ರಶಸ್ತಿ ಶರಣ ಅಶೋಕ ನಾವಿ, ಬೆಳಗಾವಿ. ಅವರಿಗೆ ನಿಡಲಾಗಿದೆ. ಶರಣ ಅಶೋಕ ನಾವಿ ಅವರು ಶರಣ ಕಲ್ಲಪ್ಪ ನಾವಿ ಮತ್ತು ಶರಣೆ ನೀಲಗಂಗಾ ಇವರ ಚಿತ್ಗರ್ಭದಲ್ಲಿ ದಿನಾಂಕ 16/3/1959 ರಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ  ಖವಟಕೊಪ್ಪ ಗ್ರಾಮದಲ್ಲಿ ಜನಿಸಿದ್ದಾರೆ. ಇವರು ತಮ್ಮ ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿ, ಪ್ರೌಢ ಶಿಕ್ಷಣವನ್ನು ಶಂಕ್ರಟ್ಟಿಯಲ್ಲಿ ಮುಗಿಸಿ ಕಾಲೇಜು ಶಿಕ್ಷಣವನ್ನು ಅಥಣಿಯ ಶ್ರೀ ಶಿವಯೋಗಿ ಮುರುಗೇಂದ್ರ ಸ್ವಾಮೀಜಿ ಮಹಾವಿದ್ಯಾಲಯದಲ್ಲಿ ಮುಗಿಸಿರುತ್ತಾರೆ. ಇವರು ಬಿ.ಕಾಂ, ಬಿ.ಎ ಪದವೀಧರರಾಗಿದ್ದು, ಕೃಷಿ ಕಾಯಕ ಮಾಡುತ್ತ ಅದರ ಜೊತೆಗೆ ಧಾರ್ಮಿಕ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ.  ಪರಮಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಜೊತೆ 1989 ರಿಂದ 1995 ವರೆಗೆ ಒಡನಾಟ ಹೊಂದಿದ್ದು ಮತ್ತು ಪೂಜ್ಯ ಮಾತೆಮಹಾದೇವಿ ತಾಯಿಯವರ ಅವರ ಹಸ್ತದಿಂದ ಇಷ್ಟಲಿಂಗ ದೀಕ್ಷೆಯನ್ನೂ 1992 ರಲ್ಲಿ ಪಡೆದಿರುತ್ತಾರೆ. 1989ರಿಂದ 2019ರವರೆಗೆ ಪೂಜ್ಯ ಮಾತಾಜಿಯವರ ಮಾರ್ಗದರ್ಶನದಲ್ಲಿ ನಡೆದು ಬಸವ ತತ್ವ ಪ್ರಸಾರಕೆ ಸೇವೆ ಸಲ್ಲಿಸಿರುತ್ತಾರೆ. 2002 ರಲ್ಲಿ ನಡೆದ ಮೊದಲ ಕಲ್ಯಾಣ ಪರ್ವ ಕಾರ್ಯಕ್ರಮದಲ್ಲಿ ಕೂಡ ಭಾಗಿಯಾಗಿರುತ್ತಾರೆ.  ಇಲ್ಲಿಯವರೆಗೂ ಪ್ರತಿಯೊಂದು ಶರಣ ಮೇಳ ಮತ್ತು ಕಲ್ಯಾಣಪರ್ವ ಹಾಗೂ ಬ...

ವೀಣಾ ಬನ್ನಂಜೆ ವಿವಾದಾತ್ಮಕ ಹೆಳಿಕೆ, ಸತ್ಯಕ್ಕೆ ದೂರವಾದ ಮಾತು

ಇಮೇಜ್
  ವೀಣಾ ಬನ್ನಂಜೆ ವಿವಾದಾತ್ಮಕ ಹೆಳಿಕೆ, ಸತ್ಯಕ್ಕೆ ದೂರವಾದ ಮಾತು ಮತ್ತು ಉದ್ದೆಶ ಪರ್ವಕವಾಗಿ ಲಿಂಗಾಯತರಲ್ಲಿ ಗೊಂದಲ ಹುಟ್ಟಿಸುವ ಕುತಂತ್ರದ ಕೈವಾಡವಿರಬಹುದು. ವಿಣಾ ಅಕ್ಕ,  ಸತ್ಯವನ್ನು ಮುಚ್ಚಿಟ್ಟು, "ಒಂದು ಇತಿಹಾಸದ ಘಟನೆಗೆ ಕಾರಣ ರಾಜಕಿಯ"... ಎಂದು ನಿವು ಹಿಳಿರುವುದು, ಗೊತ್ತಿದ್ದು ಗೊತ್ತಿದ್ದು  ಉದ್ದೇಶಪೂರ್ವಕವಾಗಿ  ಸುಳ್ಳು ಹೆಳಿದ್ದಿರಾ. - ಪೂಜ್ಯ ಬಸವಾನಂದ ಸ್ವಾಮೀಜಿಯವರು ಲಿಂಗಾಯತರ ತಂಟೆಗೆ ಬಂದರೆ ಹುಷಾರ ! -  ಪೂಜ್ಯ ಚನ್ನಬಸವಾನಂದ ಸ್ವಾಮಿಜಿಯವರ ಎಚ್ಚರಿಕೆ ಗುರು ಬಸವಣ್ಣನವರು , ಸಮಾಜದ ಅತಿ‌‌ ಕೆಳವರ್ಗದ ಜನರನ್ನು ಎತ್ತು ಹಿಡಿದವರು  -  ಅಗ್ನಿ ಶ್ರೀಧರ ಶರಣರ ಕುರಿತು ತಪ್ಪು ಮಾಹಿತಿ ಬೇಡ . ಪೂಜ್ಯ ಡಾ. ಸಿದ್ಧರಾಮ ಬೆಲ್ದಾಳ ಶರಣರು ಎಸ ಎಮ್ ಜಾಮದಾರ ಅವರಿಂದ ಸ್ಪಷ್ಟ ಉತ್ತರ, ಸಂಪೂರ್ಣ ವಿಡಿಯೋವನ್ನು ವೀಕ್ಷಿಸಿ. 

ಮಾರ್ಚ 22 ಮತ್ತು 23ರ ಮಾಹಾ ದಂಡನಾಯಕರ ಸ್ಮರಣೋತ್ಸವ ಕಾರ್ಯಕ್ರಮದ : ಪತ್ರಿಕಾ ವರದಿಗಳು

ಇಮೇಜ್
  2025

ಮಾರ್ಚ 22 ಮತ್ತು 23ರ ಮಾಹಾ ದಂಡನಾಯಕರ ಸ್ಮರಣೋತ್ಸವ ಕಾರ್ಯಕ್ರಮದ ಪ್ರಮುಖ ಭಾವಚಿತ್ರಗಳು

ಇಮೇಜ್
22nd and 23rd March 2025   🙏