ಬಸವ ಮಂಟಪಗಳ ಮೇಲೆ ಜಾ.ಲಿ.ಮ.ದವರ ಕಣ್ಣು ಏಕೆ ?
ಬಸವ ಮಂಟಪಗಳ ಮೇಲೆ ಜಾ.ಲಿ.ಮ.ದವರ ಕಣ್ಣು ಏ ಕೆ? ಕೆಲವು ದಿನಗಳ ಹಿಂದೆ *ಬೆಂಗಳೂರಿನ* ಬಸವ ಮಂಟಪದಲ್ಲಿ ಓರ್ವ ಶರಣರು ಪ್ರವಚನ ಮಾಡುತ್ತಾ, " ವಚನ ಸಂಪುಟಗಳಲ್ಲಿ ಇರುವ ವಚನಗಳ *ಸಾರಾಂಶ* ನಮಗೆ ಸಿಗಬೇಕು ಅಂದ್ರೆ ಪರಮ ಪೂಜ್ಯ ಮಾತೆಮಹಾದೇವಿಯವರ ಸಾಹಿತ್ಯದಿಂದ ಅದು ಸಾಧ್ಯ ಆಗುತ್ತೆ. ಬಸವ ವಚನಾಮೃತ ಗ್ರಂಥವನ್ನು ಓದಿದ್ರೆ ಗುರು ಬಸವಣ್ಣನವರ *ತತ್ವ ಸಿದ್ಧಾಂತಗಳು* ಅರ್ಥ ಆಗುತ್ತವೆ. ಬಸವ ತತ್ವ ಮತ್ತು ಲಿಂಗಾಯತ ಧರ್ಮವನ್ನು *ಸರಳವಾಗಿ* ಅಷ್ಟೇ *ಸ್ಪಷ್ಟವಾಗಿ* ಅರ್ಥ ಮಾಡಿಕೊಳ್ಳಬೇಕೆಂದರೆ ಮಾತಾಜಿ ಸಾಹಿತ್ಯವನ್ನು ಓದಬೇಕು." ಈ ರೀತಿ ತಮ್ಮ ಪ್ರವಚನದಲ್ಲಿ ಈ ಮೇಲಿನ ಮಾತುಗಳನ್ನು ಅವರು ಹೇಳ್ತಾ ಇರುವಾಗ, ಜಾಗತಿಕ ಲಿಂಗಾಯತ ಮಹಾಸಭಾ ಸಂಘಟನೆಗೆ ಸಂಬಂಧಪಟ್ಟ ಓರ್ವ ವ್ಯಕ್ತಿ ಎದ್ದುನಿಂತು ಅವರ ಮಾತನ್ನು ಮಧ್ಯದಲ್ಲಿ ತಡೆದು, "ಮಾತಾಜಿ ಸಾಹಿತ್ಯವನ್ನೇ ಏಕೆ ಓದಬೇಕು? ವಚನಗಳಿಗೆ ಮಾತಾಜಿ ಅವರು ಬರೆದಿರುವ ಅರ್ಥವನ್ನೇ ಏಕೆ ಓದಬೇಕು?" ಎಂದು ಪ್ರಶ್ನೆ ಮಾಡಿದರಂತೆ. ವಚನಗಳು ಹೇಗೆಂದರೆ, *ದವಸ ಧಾನ್ಯಗಳು* ಇದ್ದ ಹಾಗೆ. ಅವುಗಳನ್ನು ನೇರವಾಗಿ ತಿನ್ನಲಿಕ್ಕೆ ಬರುವುದಿಲ್ಲ. ಅದನ್ನು ತೊಳೆದು, ಕಸ ಕಡ್ಡಿಗಳನ್ನು ಬೇರ್ಪಡಿಸಿ, ಅಡುಗೆ ಮಾಡಿ ನಂತರ ಊಟ ಮಾಡಬೇಕಾಗುತ್ತದೆ. ಪೂಜ್ಯ ಮಾತೆಮಹಾದೇವಿಯವರು ಶ್ರೇಷ್ಠ *ಸಾಹಿತಿಗಳು, ತತ್ವಜ್ಞಾನಿಗಳು, ಅನುಭಾವಿಗಳು, ದಾರ್ಶನಿಕರು ಹಾಗೂ ಸ...