ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ
ಯಾರು ? ಓಂ ಪದವನ್ನು ಬಳಸಬೆಡಿ ಅಂತ ಹೆಳಿದರೊ ಗೊತ್ತಿಲ್ಲಾ, ಆದರೆ ಅವರ ಶಿಷ್ಯಂದಿರು ಆಮಂತ್ರಣ ಪತ್ರಿಕೆಯಲ್ಲಿ ಓಂ ಪದ ವನ್ನು ಬಿಟ್ಟು, ಶ್ರೀ ಗುರು ಬಸವಲಿಂಗಾಯ ನಮಃ ವನ್ನು ಬಳಸುತ್ತಾರೆ, ಇದರಿಂದ ಅಂಥಹ ಕಾವಿಧಾರಿಗಳು ಯಾರಿರಬಹುದೆಂದು ಗುರುತಿಸಬಹುದು. ಆದಿ ಶರಣರು ತಮ್ಮ ವಚನಗಳಲ್ಲಿ "ಪ್ರಣವ" , "ಓಂ" ಪದಗಳನ್ನು ಬಹಳಕಡೆ Positiveಯಾಗಿ ಬಳಸಿದ್ದಾರೆ.
ಸ್ವತಂತ್ರ ಧರ್ಮವಾದ ಜೈನ ಹಾಗು ಸಿಖ್ ಗಳಲ್ಲಿ ಓಂ ಪದದ ಬಳಕೆ ಇದೆ, ಈ ದೃಷ್ಟಿಕೋನ ದಿಂದ ನೊಡಿದರೆ, ಲಿಂಗಾಯತ ಸ್ವತಂತ್ರ ಧರ್ಮವಾಗದಂತೆ ತಡೆ ಹಿಡಿಯುವ ನಿಟ್ಟಿನಲ್ಲಿ ಓಂ ಪದ ಬಳಕೆಯನ್ನು ಬಿಡಲು ತಮ್ಮ ಭಕ್ತರನ್ನು ಮನವಲಿಸಿದ್ದಾರೆ, ಅನಿಸುತ್ತದೆ. ನಿಮ್ಮ ವಿಚಾರವೆನು ?
ಓಂಕಾರವೇ ನಾದಮಯ. ಓಂಕಾರವೇ ಮಂತ್ರಮಯ.
ಓಂಕಾರವೇ ಪರಿಪೂರ್ಣವಾಗಿ ಸರ್ವವ್ಯಾಪಕತ್ವವನ್ನುಳ್ಳುದು ನೋಡಾ.
ಪ್ರಣವವೇ ಪರಮಾತ್ಮ ಸ್ವರೂಪವಾಗಿ
ಪರಮೇಶ್ವರನ ಗೌಪ್ಯಮುಖ ನೋಡಾ.
ಪ್ರಣವವೆ ಶಿವಶರಣರ ಹೃದಯಾದ್ಥಿಪತಿ
ಇದು ಕಾರಣ,
ಹೃದಯಕಮಲ ಮಧ್ಯದಲ್ಲಿ ಪ್ರಣವವನುಚ್ಚರಿಸುತ್ತ
ಪರಶಿವಧ್ಯಾನದಲ್ಲಿ ತರಹರವಾಗಿ ಪ್ರಣವಸ್ವರೂಪನಾಗಿದ್ದೆನಯ್ಯ.
ಪಂಚಾಕ್ಷರವೆ ಪಂಚಬ್ರಹ್ಮಮಯವಾಗಿ
ಆ ಪಂಚಾಕ್ಷರಿಮಂತ್ರವೆ ಶರೀರವಾಗಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
- ತೋಂಟದ ಸಿದ್ಧಲಿಂಗ ಶಿವಯೋಗಿಗಳು


ಬಸವ ಮತ್ತು ಓಂ ಎರಡೂ ಕೂಡ ಪ್ರಣವ ತ್ರಯಗಳು
ಪ್ರತ್ಯುತ್ತರಅಳಿಸಿಓಂ ಕಾರವನ್ನು ಬಳಸಿದರೆ ನಾವು ಹಿಂದೂ ಧರ್ಮದ ಭಾಗ ಆಗುತ್ತೇವೆ ಎಂಬ ಭ್ರಮೆ ಕೆಲವರಿಗೆ ಆವರಿಸಿದೆ. ಕೆಲವರು ಷಟಸ್ಥಲ ಧ್ವಜದ ಬಣ್ಣವನ್ನು ಕೂಡ ಕಾವಿಯಿಂದ ಬಳಿಗೆ ಬದಲಾಯಿಸಿದ್ದಾರೆ. ಮುಂದೆ ಲಿಂಗಾಯತ ಮಠಾಧೀಶರು ಕಾವಿ ಬಟ್ಟೆಯ ಬದಲು ಬಳಿ ಬಟ್ಟೆಯನ್ನು ಧರಿಸಬೇಕು ಎಂದು ಘೋಷಣೆ ಮಾಡಬಹುದು. ಲಿಂಗಾಯತ ಇದು ಭಾರತೀಯ ಸಂಸ್ಕೃತಿಯಲ್ಲಿ ಹುಟ್ಟಿರುವ ಧರ್ಮ. ಆದ್ದರಿಂದ ಓಂಕಾರ ಮತ್ತು ಕಾವಿ ಬಟ್ಟೆಗೆ ಇಲ್ಲಿ ಅವಕಾಶ ಇದೆ. ಆದರೆ ನಾವು ವೈದಿಕ ಧರ್ಮದ ಭಾಗವಲ್ಲ.
ಪ್ರತ್ಯುತ್ತರಅಳಿಸಿಓಂ ಅಂದರೆ ಕೈಲಾಸ ಪರ್ವತದ ಶಿವ. ಜಾಗತಿಕ ಲಿಂಗಾಯತ ರು ಓಂ ಅಂದರೆ ಶಿವನ ಹೆಸರು ತೆಗೆದು ಕೊಂಡಂಗೆ ಆಗುತ್ತದೆ ಎಂದು ಶ್ರೀ ಗುರು ಬಸವ ಲಿಂಗಾಯನಮಹ ಅನ್ನುತ್ತಾರೆ ಶ್ರೀ ಎಂದರೆ ಲಕ್ಷ್ಮಿ ಬ್ರಾಹ್ಮಣ ರು ಓಂ ಎಂದರೆ ಶಿವ ಶ್ರೀ ಎಂದರೆ ಲಕ್ಷ್ಮಿ ಅನ್ನೂತ್ತಾರೆ
ಪ್ರತ್ಯುತ್ತರಅಳಿಸಿ