ಸುಪ್ರೀಂ ಕೋರ್ಟ್ ತೀರ್ಪು

 

ಸುಪ್ರೀಂ ಕೋರ್ಟ್ ತೀರ್ಪು



👉 *ಸುಪ್ರೀಂ ಕೋರ್ಟ್ ತೀರ್ಪು* ಇದು ಪೂಜ್ಯ ಚನ್ನಬಸವಾನಂದ ಸ್ವಾಮೀಜಿಗಳಿಗೆ ಮಾತ್ರ ಸಿಕ್ಕ ಜಯ ಅಲ್ಲ,  ಇದು ಪರಮಪೂಜ್ಯ ಮಾತೆಮಹಾದೇವಿ ತಾಯಿಯವರ *ಆದೇಶಕ್ಕೆ* ಸಿಕ್ಕ ಜಯ.. 

ಏಕೆಂದರೆ ಪೂಜ್ಯ ಮಾತಾಜಿಯವರು ಲಿಂಗೈಕ್ಯ ಆಗುವ ಮುಂಚೆ ತಮ್ಮ ಕೊನೆಯ ಶರಣ ಮೇಳದಲ್ಲಿ "ಯಾವ ಕಾವಿಧಾರಿಗಳನ್ನು ಕೂಡ ಸಂಸ್ಥೆಯಿಂದ ಹೊರಗೆ ಹಾಕಬೇಡಿ, ಏನೇ ಭಿನ್ನಅಭಿಪ್ರಾಯಗಳು ಬಂದರೂ ಕೂಡ ಎಲ್ಲರೂ *ಹೊಂದಿಕೊಂಡು* ಹೋಗಬೇಕು,"  ಎಂದು ಆದೇಶ ಮಾಡಿ ಹೋಗಿದ್ದರು. 

ಆದರೆ ಅವರ ಲಿಂಗೈಕ್ಯದ ನಂತರ ಈಗಿನ ಪೀಠಾಧ್ಯಕ್ಷರು ಕೆಲವು *ಸ್ವಾರ್ಥ ಶಕ್ತಿಗಳ ಕೈಗೊಂಬೆಯಾಗಿ*  ಕೆಲವು ಕಾವಿಧಾರಿಗಳನ್ನು ಹಾಗೂ ಕೆಲವು ಶರಣರನ್ನ ಸಂಸ್ಥೆಯಿಂದ ಹೊರಗೆ ಹಾಕಿ ತಮ್ಮ ಗುರುಗಳ *ಆದೇಶದ ಉಲ್ಲಂಘನೆ* ಮಾಡಿದರು.

 "ಸ್ವಾಮೀಜಿಯವರು ಲಿಂಗದೇವ ವಚನಾಂಕಿತ ವನ್ನು ಬಳಸಿ ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆ ಮಾಡಿದ್ದಾರೆ ಅದಕ್ಕಾಗಿ ನಾವು ಅವರನ್ನು ಉಚ್ಚಾಟನೆ ಮಾಡಿದ್ದೇವೆ" ಎಂದು ಪೀಠಾಧ್ಯಕ್ಷರು ಹಾಗು ಹಿಂದಿನ ಮಾಜಿ ರಾಷ್ಟ್ರೀಯ ಅಧ್ಯಕ್ಷರು ಸೇರಿ *ಪತ್ರಿಕೆ ಹೇಳಿಕೆ* ಯನ್ನು ಕೊಟ್ಟಿದ್ದರು. ಸಮಾಜವು ಕೂಡ ಇದನ್ನೇ ನಿಜ ಎಂದು ನಂಬಿಕೊಂಡಿತ್ತು. 

ಒಂದು ವೇಳೆ ಸ್ವಾಮೀಜಿ ಅವರು ಆವಾಗ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆ ಮಾಡಿದ್ದರೆ ಇವಾಗ ಸುಪ್ರೀಂಕೋರ್ಟ್ ಅವರಿಗೆ ಶಿಕ್ಷೆ ಕೊಡಬೇಕಿತ್ತು, ಅಥವಾ ಮಾತೆಗಂಗಾದೇವಿ ಅವರ ನಿರ್ಧಾರ ಸರಿ ಎಂದು ಹೇಳಬೇಕಿತ್ತು..      

           ಅದನ್ನು ಬಿಟ್ಟು ಸ್ವಾಮೀಜಿಯವರಿಗೆ ಸಂಸ್ಥೆ ಒಳಗಡೆ ತೆಗೆದುಕೊಳ್ಳಿ, ಅವರಿಗೆ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಏಕೆ ತೀರ್ಪು ಕೊಟ್ಟಿದೆ? ಯೋಚಿಸಿ ನೋಡಿ.

ಬಸವ ಭಕ್ತರು ಇವಾಗ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು, ಪೂಜ್ಯ ಮಾತಾಜಿ ಅವರ ಲಿಂಗದೇವ ಸಂಶೋಧನೆಯನ್ನು *ನೆಪ* ಮಾಡಿ, ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು *ಸುಳ್ಳನ್ನು* ಹಬ್ಬಿಸಿ, ತಮಗೆ ಬೇಡವಾದವರನ್ನು ಸಂಸ್ಥೆಯ ಹೊರಗಡೆ ಹಾಕುವ ಹುನ್ನಾರ ಮಾಡಲಾಯಿತು.

ಬಸವಧರ್ಮ ಪೀಠದ ಭಕ್ತರ ಪವಿತ್ರ ಹಣವನ್ನು ಕೋರ್ಟಿಗೆ, ವಕೀಲರಿಗೆ, ಪೊಲೀಸರಿಗೆ ವ್ಯರ್ಥ ಮಾಡಲಾಯಿತು. 

ಇನ್ನೊಂದು ಆಶ್ಚರ್ಯದ ಸಂಗತಿ ಎಂದರೆ, ಯಾವ ವ್ಯಕ್ತಿಯು ಪೀಠಾಧ್ಯಕ್ಷರ ಹಿಂದೆ ನಿಂತು ಸ್ವಾಮೀಜಿ ಅವರನ್ನು ಉಚ್ಚಾಟನೆ ಮಾಡುವಂತೆ ಕಾರಣರಾಗಿದ್ದರೋ ಅದೇ ವ್ಯಕ್ತಿ ಈಗಾಗಲೇ ಸಂಸ್ಥೆಯಿಂದ ಹೊರಗಡೆ ಹೋಗುವಂತೆ ಆಗಿದೆ ಹಾಗೂ ಸ್ವಾಮೀಜಿಯವರು ಸಂಸ್ಥೆಯ ಒಳಗಡೆ ಬರುವಂತೆ ಆಗಿದೆ.. 

ಇದು ಪೂಜ್ಯ ಮಾತೆಮಹಾದೇವಿ ತಾಯಿಯವರ *ಸಂಕಲ್ಪ* ದಲ್ಲಿರುವ ಶಕ್ತಿ... 

ಇನ್ನು ಮುಂದೆ ಆದರೂ ಪೀಠಾಧ್ಯಕ್ಷರು ತಮ್ಮ *ಗುರುಗಳ ಆದೇಶದಂತೆ* ನಡೆಯಲಿ ಎಂದು ಆಶಿಸೋಣ..

 🙏🙏🙏


ಶರಣು ಶರಣಾರ್ಥಿ

(~ ಸಿದ್ದವೀರ ಸಂಗಮದ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…