ಬಸವ ಮಂಟಪಗಳ ಮೇಲೆ ಜಾ.ಲಿ.ಮ.ದವರ ಕಣ್ಣು ಏಕೆ ?
ಬಸವ ಮಂಟಪಗಳ ಮೇಲೆ ಜಾ.ಲಿ.ಮ.ದವರ ಕಣ್ಣು ಏಕೆ?
ಕೆಲವು ದಿನಗಳ ಹಿಂದೆ *ಬೆಂಗಳೂರಿನ* ಬಸವ ಮಂಟಪದಲ್ಲಿ ಓರ್ವ ಶರಣರು ಪ್ರವಚನ ಮಾಡುತ್ತಾ, " ವಚನ ಸಂಪುಟಗಳಲ್ಲಿ ಇರುವ ವಚನಗಳ *ಸಾರಾಂಶ* ನಮಗೆ ಸಿಗಬೇಕು ಅಂದ್ರೆ ಪರಮ ಪೂಜ್ಯ ಮಾತೆಮಹಾದೇವಿಯವರ ಸಾಹಿತ್ಯದಿಂದ ಅದು ಸಾಧ್ಯ ಆಗುತ್ತೆ. ಬಸವ ವಚನಾಮೃತ ಗ್ರಂಥವನ್ನು ಓದಿದ್ರೆ ಗುರು ಬಸವಣ್ಣನವರ *ತತ್ವ ಸಿದ್ಧಾಂತಗಳು* ಅರ್ಥ ಆಗುತ್ತವೆ.
ಬಸವ ತತ್ವ ಮತ್ತು ಲಿಂಗಾಯತ ಧರ್ಮವನ್ನು *ಸರಳವಾಗಿ* ಅಷ್ಟೇ *ಸ್ಪಷ್ಟವಾಗಿ* ಅರ್ಥ ಮಾಡಿಕೊಳ್ಳಬೇಕೆಂದರೆ ಮಾತಾಜಿ ಸಾಹಿತ್ಯವನ್ನು ಓದಬೇಕು."
ಈ ರೀತಿ ತಮ್ಮ ಪ್ರವಚನದಲ್ಲಿ ಈ ಮೇಲಿನ ಮಾತುಗಳನ್ನು ಅವರು ಹೇಳ್ತಾ ಇರುವಾಗ, ಜಾಗತಿಕ ಲಿಂಗಾಯತ ಮಹಾಸಭಾ ಸಂಘಟನೆಗೆ ಸಂಬಂಧಪಟ್ಟ ಓರ್ವ ವ್ಯಕ್ತಿ ಎದ್ದುನಿಂತು ಅವರ ಮಾತನ್ನು ಮಧ್ಯದಲ್ಲಿ ತಡೆದು, "ಮಾತಾಜಿ ಸಾಹಿತ್ಯವನ್ನೇ ಏಕೆ ಓದಬೇಕು? ವಚನಗಳಿಗೆ ಮಾತಾಜಿ ಅವರು ಬರೆದಿರುವ ಅರ್ಥವನ್ನೇ ಏಕೆ ಓದಬೇಕು?" ಎಂದು ಪ್ರಶ್ನೆ ಮಾಡಿದರಂತೆ.
ವಚನಗಳು ಹೇಗೆಂದರೆ, *ದವಸ ಧಾನ್ಯಗಳು* ಇದ್ದ ಹಾಗೆ. ಅವುಗಳನ್ನು ನೇರವಾಗಿ ತಿನ್ನಲಿಕ್ಕೆ ಬರುವುದಿಲ್ಲ. ಅದನ್ನು ತೊಳೆದು, ಕಸ ಕಡ್ಡಿಗಳನ್ನು ಬೇರ್ಪಡಿಸಿ, ಅಡುಗೆ ಮಾಡಿ ನಂತರ ಊಟ ಮಾಡಬೇಕಾಗುತ್ತದೆ.
ಪೂಜ್ಯ ಮಾತೆಮಹಾದೇವಿಯವರು ಶ್ರೇಷ್ಠ *ಸಾಹಿತಿಗಳು, ತತ್ವಜ್ಞಾನಿಗಳು, ಅನುಭಾವಿಗಳು, ದಾರ್ಶನಿಕರು ಹಾಗೂ ಸಂಶೋಧಕರು* ಆಗಿರುವುದರಿಂದ ವಚನಗಳಲ್ಲಿರುವ *ತತ್ವಜ್ಞಾನ* ವನ್ನು ಹಾಗೂ *ಸಿದ್ಧಾಂತ* ಗಳನ್ನು ತಮ್ಮ ಸಾಹಿತ್ಯದ ಮೂಲಕ ಕೊಟ್ಟು ಹೋಗಿದ್ದಾರೆ.
ಇಲ್ಲದಿದ್ದರೆ ಅನೇಕ *ಕುರುಡರು* ಒಂದು ದೊಡ್ಡ ಆನೆಯನ್ನು ಕೆಲವು ಭಾಗಗಳಲ್ಲಿ ಮಾತ್ರ ಕೈಯಿಂದ ಮುಟ್ಟಿ ತಮಗೆ ಬೇಕಾದ ಹಾಗೆ ಆನೆಯನ್ನು ಭಾವಿಸಿಕೊಳ್ಳುವಂತೆ ಆಗುತ್ತದೆ.
ಅದೇ ರೀತಿ *ವಚನ ಸಾಹಿತ್ಯ* ಎಂಬ ಬೃಹತ್ ಆನೆಯನ್ನು ಜ್ಞಾನದ, ಅರಿವಿನ, ಅನುಭಾವದ ಕಣ್ಣು ಇರುವಂತ ಪೂಜ್ಯ ಮಾತಾಜಿ ಅವರಂತಹ ದಾರ್ಶನಿಕರು ಹೇಳಿದಾಗ ನಮಗೆ ವಚನಗಳ ನಿಜವಾದ *ಸ್ವರೂಪ* ಗೊತ್ತಾಗುತ್ತದೆ.
ಪೂಜ್ಯ ಮಾತಾಜಿ ಅವರು ಕಟ್ಟಿದ ಬಸವ ಮಂಟಪದಲ್ಲಿ ಬಂದು ಶರಣರು ಮಾತಾಡುವಾಗ, ಸಾರ್ವಜನಿಕವಾಗಿ ಎಲ್ಲರ ಎದುರು, ಮಾತಾಜಿಯವರ ಸಾಹಿತ್ಯವನ್ನೇ ಓದಬೇಕು ಅಂತ ಏಕೆ ಹೇಳುತ್ತಿರಿ ಎಂದು ಪ್ರಶ್ನೆ ಮಾಡುವಂತಹ ಆ (ಮಂದಮತಿ) ವ್ಯಕ್ತಿಯ ಧೈರ್ಯವನ್ನ ಮೆಚ್ಚಿಕೊಳ್ಳಬೇಕೋ?
ಅಥವಾ ಈ ರೀತಿಯ ವ್ಯಕ್ತಿಗಳಿಗೆ ಸಲುಗೆ ಕೊಟ್ಟಿರುವ ನಮ್ಮ ರಾಷ್ಟ್ರೀಯ ಬಸವದಳದ ಕೆಲವು ಪದಾಧಿಕಾರಿಗಳ ಮತ್ತು ಕೆಲವು ಕಾವಿಧಾರಿಗಳ ನಿರಾಭಿಮಾನಕ್ಕೆ ನಾಚಿಕೆ ಪಡಬೇಕೋ?
ಇಂದು ಬೇರೆ ಸಂಘಟನೆಯವರು ನಮ್ಮ ಸಂಸ್ಥೆ ಒಳಗಡೆ ಬಂದು ಮಾತಾಜಿಯವರ ಸಾಹಿತ್ಯವನ್ನು ಪ್ರಶ್ನೆ ಮಾಡ್ತಾ ಇದ್ದಾರೆ. ಮುಂದೆ ಬಸವ ಮಂಟಪಗಳಲ್ಲಿ ಪೂಜ್ಯ ಲಿಂಗಾನಂದ ಅಪ್ಪಾಜಿ ಮತ್ತು ಪೂಜ್ಯ ಮಾತಾಜಿ ಅವರ ಫೋಟೋಗಳನ್ನು ಕೂಡ ತೆಗೆಯುವಂತೆ ಜೋರು ಮಾಡಬಹುದು.
ಬೇರೆ ಸಂಘಟನೆಯವರಿಗೆ ಹೇಳಬಯಸುವುದೇನೆಂದರೆ ನಿಮ್ಮಲ್ಲಿ ಶಕ್ತಿ *ಸಾಮರ್ಥ್ಯ* ಇದ್ದರೆ ಸ್ವಂತ ಬಲದ ಮೇಲೆ ಸಂಘಟನೆಯನ್ನು ಕಟ್ಟಿಕೊಳ್ಳಿ, ಹೊಸದಾಗಿ ಬಸವ ಮಂಟಪಗಳನ್ನು ಕಟ್ಟಿಕೊಳ್ಳಿ, ಅದನ್ನು ಬಿಟ್ಟು ರಾಷ್ಟ್ರೀಯ ಬಸವದಳವನ್ನು ಒಡೆದು ಬೆಳೆಯಬೇಡಿ, ಬಸವ ಮಂಟಪಗಳ ಮೇಲೆ ಕಣ್ಣು ಹಾಕಿ ನಿಮಗೆ ಇಷ್ಟ ಇರದ ಆಚರಣೆಗಳನ್ನು ಬದಲಾಯಿಸಲು ಪ್ರಯತ್ನಿಸಬೇಡಿ.
ಮಾತಾಜಿಯವರ ಅನುಯಾಯಿಗಳಾದವರು (ಬ.ದ.ಪೀಠದವರು) ನಿಮಗೆ ನಿಜವಾದ ನಿಮ್ಮ ಗುರುಗಳ ಬಗ್ಗೆ *ಅಭಿಮಾನ* ಇದ್ದರೆ, ಅವರ *ಋಣ* ನಿಮ್ಮ ಮೇಲೆ ಇದ್ದರೆ ಕೇವಲ ಅವರ ಫೋಟೋವನ್ನು ಇಟ್ಟು ಪೂಜೆ ಮಾಡಿ ಹಾಡಿ ಹೊಗಳುವುದಕ್ಕಿಂತ ಅವರ *ಸಾಹಿತ್ಯ* ವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು, ಬೆಳೆಸಿಕೊಂಡು ಹೋಗಿ. ಇದು ಮುಂದಿನ ಪೀಳಿಗೆಗೆ ಶ್ರೇಷ್ಠ ಕೊಡುಗೆ ಆಗಲಿದೆ.
🙏🙏🙏
ಶರಣು ಶರಣಾರ್ಥಿ
~ ಸಿದ್ದವೀರ ಸಂಗಮದ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ