2025ರ ಲಿಂಗಾನಂದ ಶ್ರೀ ಪ್ರಶಸ್ತಿ ಶರಣ ಅಶೋಕ ನಾವಿ ಯವರಿಗೆ ನಿಡಲಾಗಿದೆ
ಮಾರ್ಚ 22 ಮತ್ತು 23ರಂದು ಬೀದರನಲ್ಲಿ ಹಮ್ಮಿಕೊಳ್ಳಲಾದ ಮಹಾ ದಂಡನಾಯಕರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಲಿಂಗಾನಂದ ಶ್ರೀ ಪ್ರಶಸ್ತಿ ಶರಣ ಅಶೋಕ ನಾವಿ, ಬೆಳಗಾವಿ. ಅವರಿಗೆ ನಿಡಲಾಗಿದೆ.
ಶರಣ ಅಶೋಕ ನಾವಿ ಅವರು ಶರಣ ಕಲ್ಲಪ್ಪ ನಾವಿ ಮತ್ತು ಶರಣೆ ನೀಲಗಂಗಾ ಇವರ ಚಿತ್ಗರ್ಭದಲ್ಲಿ ದಿನಾಂಕ 16/3/1959 ರಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖವಟಕೊಪ್ಪ ಗ್ರಾಮದಲ್ಲಿ ಜನಿಸಿದ್ದಾರೆ. ಇವರು ತಮ್ಮ ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿ, ಪ್ರೌಢ ಶಿಕ್ಷಣವನ್ನು ಶಂಕ್ರಟ್ಟಿಯಲ್ಲಿ ಮುಗಿಸಿ ಕಾಲೇಜು ಶಿಕ್ಷಣವನ್ನು ಅಥಣಿಯ ಶ್ರೀ ಶಿವಯೋಗಿ ಮುರುಗೇಂದ್ರ ಸ್ವಾಮೀಜಿ ಮಹಾವಿದ್ಯಾಲಯದಲ್ಲಿ ಮುಗಿಸಿರುತ್ತಾರೆ. ಇವರು ಬಿ.ಕಾಂ, ಬಿ.ಎ ಪದವೀಧರರಾಗಿದ್ದು, ಕೃಷಿ ಕಾಯಕ ಮಾಡುತ್ತ ಅದರ ಜೊತೆಗೆ ಧಾರ್ಮಿಕ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ.
ಪರಮಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಜೊತೆ 1989 ರಿಂದ 1995 ವರೆಗೆ ಒಡನಾಟ ಹೊಂದಿದ್ದು ಮತ್ತು ಪೂಜ್ಯ ಮಾತೆಮಹಾದೇವಿ ತಾಯಿಯವರ ಅವರ ಹಸ್ತದಿಂದ ಇಷ್ಟಲಿಂಗ ದೀಕ್ಷೆಯನ್ನೂ 1992 ರಲ್ಲಿ ಪಡೆದಿರುತ್ತಾರೆ. 1989ರಿಂದ 2019ರವರೆಗೆ ಪೂಜ್ಯ ಮಾತಾಜಿಯವರ ಮಾರ್ಗದರ್ಶನದಲ್ಲಿ ನಡೆದು ಬಸವ ತತ್ವ ಪ್ರಸಾರಕೆ ಸೇವೆ ಸಲ್ಲಿಸಿರುತ್ತಾರೆ. 2002 ರಲ್ಲಿ ನಡೆದ ಮೊದಲ ಕಲ್ಯಾಣ ಪರ್ವ ಕಾರ್ಯಕ್ರಮದಲ್ಲಿ ಕೂಡ ಭಾಗಿಯಾಗಿರುತ್ತಾರೆ. ಇಲ್ಲಿಯವರೆಗೂ ಪ್ರತಿಯೊಂದು ಶರಣ ಮೇಳ ಮತ್ತು ಕಲ್ಯಾಣಪರ್ವ ಹಾಗೂ ಬಸವಧರ್ಮ ಪೀಠದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಪೂಜ್ಯ ಗಂಗಾ ಮಾತಾಜಿ ಅವರಿಂದ 12.01.2020 ರಲ್ಲಿ ಕ್ರಿಯಾಮೂರ್ತಿ ದೀಕ್ಷೆ ಪಡೆದುಕೊಂಡಿದ್ದಾರೆ.
ಇವರು ತಮ್ಮೂರಿನಲ್ಲಿ ಹಾಗೂ ಸುತ್ತಮುತ್ತ ಊರುಗಳಲ್ಲಿ ಕಲ್ಯಾಣ ಮಹೋತ್ಸವ, ನಾಮಕರಣ, ಸೀಮಂತ, ಜವಳು, ಹುಟ್ಟುಹಬ್ಬ, ಇಷ್ಟಲಿಂಗ ದೀಕ್ಷೆ, ನಿಶ್ಚಿತಾರ್ಥ ಹೀಗೆ ಮುಂತಾದ ಕಾರ್ಯಕ್ರಮಗಳನ್ನು ಮಾಡಿಸುತ್ತ ಬಂದಿದ್ದಾರೆ. ತನ್ನ ಹುಟ್ಟೂರಿನಲ್ಲಿ ರಾಷ್ಟ್ರೀಯ ಬಸವದಳದ ಸದಸ್ಯನಾಗಿ ನೂತನವಾಗಿ ವಿಶ್ವಗುರು ಬಸವ ಮಂಟಪ ನಿರ್ಮಾಣ ಕಾರ್ಯದಲ್ಲಿ ಹಾಗೂ ಗುರುಬಸವ ಮಹಾಮನೇ ಮತ್ತು ಮಹಾಮಠ ನಿರ್ಮಾಣದಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ.
2013ರಲ್ಲಿ ಅಮೃತಶೀಲ ಗುರುಬಸವ ಮೂರ್ತಿಯನ್ನು ಲೋಕಾರ್ಪಣೆ ಮಾಡಲಾಯಿತು ಮತ್ತು ಬಸವ ಮಂಟಪದಲ್ಲಿ ಪ್ರತಿ ವಾರ ಸಾಮೂಹಿಕ ಪ್ರಾರ್ಥನೆ, ವಾರ್ಷಿಕ ಬಸವ ಜಯಂತಿ ಅಕ್ಕಮಹಾದೇವಿ ಜಯಂತಿ ಮತ್ತು ಪೂಜ್ಯ ಲಿಂಗಾನಂದ ಅಪ್ಪಾಜಿ ಹಾಗೂ ಪೂಜ್ಯ ಮಾತಾಜಿಯವರ ಹುಟ್ಟುಹಬ್ಬ ಹಾಗೂ ಅನೇಕ ಶರಣರ ಜಯಂತಿ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ.
ಲಿಂಗಾಯತ ಧರ್ಮ ಮಾನ್ಯತೆ ಹೋರಾಟದ ರ್ಯಾಲಿಗಳಲ್ಲಿ ಕೂಡ ತಪ್ಪದೇ ಭಾಗಿಯಾಗಿದ್ದಾರೆ.
ಈ ರೀತಿ ಬಸವ ಧರ್ಮಪೀಠದ ನಿಷ್ಠಾವಂತ ಶರಣಾಗಿ ಪೂಜ್ಯರ ಒಡನಾಟದಲ್ಲಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತ ಗುರುಬಸವಣ್ಣನವರ ಮತ್ತು ಲಿಂಗದೇವನ ಕೃಪೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ