ಬಸವ ಧರ್ಮದ ಗತ್ತು ಬೇರೆನೇ ಇತ್ತು…

ಇಂದು ಬೆಳಗ್ಗೆ ಟಿಫನ್ ಮಾಡ್ತಾ ಇರುವಾಗ ನಮ್ಮ ಮಾಮ ಕೇಳಿದ್ರು.

ಮಾಮ: ಏನ್ರಿ ವಿಶ್ವನಾಥ, ಕೆನ್ನೇರಿ ಸ್ವಾಮಿ ಏನೋ ಬಹಳ ಹಗುರವಾಗಿ ಮಾತಾಡಿದ್ರಂತೆ. ಏನದು?

ವಿಶ್ವನಾಥ: ಏನ್ ಹೇಳೋದ್ರಿ ಮಾಮ, ಇಂಥ ಸ್ವಾಮಿಗಳು ಒಬ್ಬರಲ್ಲ. ತುಂಬ ಜನ ಇದ್ದಾರೆ. ಒಬ್ಬ ಕೆನ್ನೇರಿ, ಒಬ್ಬ ಸದಾಶಿವಾನಂದ ಸ್ವಾಮಿ, ಮತ್ತೊಬ್ಬ ಯತ್ನಾಳ. ಮನಸ್ಸಿಗೆ ಬಂದಹಾಗೆ ಮಾತಾಡ್ತಾರೆ.

ಮಾಮ: ಅಲ್ಲಾ ವಿಶ್ವನಾಥ, ಇಷ್ಟ ದೊಡ್ಡ ಲಿಂಗಾಯತ ಒಗ್ಗೂಟ ಇದೆ, ದೊಡ್ಡ ದೊಡ್ಡ ಮಠದ ಸ್ವಾಮಿಗಳು ಇದ್ದಾರೆ. ಅಂದ್ಮೇಲೆ ಇಂಥ ಟೀಕೆ–ಟಿಪ್ಪಣಿ ಬರೋದಾ?

ವಿಶ್ವನಾಥ: ನಾವು ಒಗ್ಗಟ್ಟಿಲ್ಲಾ ಅಂದ್ರೆ, ಇಂಥ ಗುದ್ದಾಟ ಸಹಜ. ಇವತ್ತು ಈ ಸ್ವಾಮಿ ಹೇಳ್ತಾನೆ, ನಾಳೆ ಮತ್ತೊಬ್ಬ ಹೇಳ್ತಾನೆ.

ಮಾವ: ಅಂದ್ರೆ ಮತ್ತೆ ಏನ್ ಮಾಡ್ತೀರಿ?

ವಿಶ್ವನಾಥ: ನಾವು ಉತ್ತರ ಕೊಡ್ತಾ ಇರ್ತೀವಿ ಮಾಮ. ನಮ್ಮಂಥವರು ಇರೋವರೆಗೂ ಕೊಡ್ತೀವಿ. ನಾವಿಲ್ಲ ಅಂದ್ರೆ ನಮ್ಮ ಮಕ್ಕಳು ಕೊಡ್ತಾರೆ, ಅವರ ಮಕ್ಕಳು ಮುಂದಕ್ಕೆ ಕೊಡ್ತಾರೆ.

ಮಾಮ: ಮಕ್ಕಳೇನು ಉತ್ತರ ಕೊಡ್ತಾರೆ ರಿ? ಎಲ್ಲಾ ಬಸವಪರ ಸಂಘಟನೆಗಳಲ್ಲಿ ಬರೀ ಬಿಳಿ ಕೂದಲವರು, ತಲೆಗೋಳಿ ಜನರೇ ತುಂಬಿರ್ತಾರೆ. ರಾಷ್ಟ್ರೀಯ ಬಸವದಳದಲಗಲ್ಲಿ ಅಲ್ಲಿ ಇಲ್ಲಿ ಕೆಲ ಹುಡುಗರು ಕಾಣಿಸ್ತಾರೆ ಅಷ್ಟೇ. ಅದನ್ನ ಬಿಟ್ಟರೆ ಯಾವ ಸಂಘಟನೆಯಲ್ಲಿ ಯುವಕರು ಇದ್ದಾರೆ ಹೇಳ್ರಿ?

ವಿಶ್ವನಾಥ: ಅದು ನಿಜ ಮಾತು ಮಾಮ. ಚೆನ್ನಾಗಿರೋ ಸಂಘಟನೆಗಳನ್ನು ಒಡೆದವರು ಯಾರು? ನಮ್ಮ ಲಿಂಗಾಯತ ಕಾವಿಧಾರಿಗಳೇ ತಾನೆ.

ಮಾಮ: ಸಂಘಟನೆ ಒಡೆದ್ರೆ ಏನಾಯಿತು? ಯಾರಾದರೂ ಪರಿಹಾರ ಕೊಡಬೇಕಲ್ಲ?

ವಿಶ್ವನಾಥ: ಅದೇ ಕಷ್ಟ ಮಾಮ. ಲಿಂಗಾಯತ ಕಾವಿಧಾರಿಗಳಿಗೆ ಚೆನ್ನಾಗಿರೋ ಸಂಘಟನೆ ನೋಡೋಕೆ ಕೂಡ ಆಗಲ್ಲ. ಮತ್ತೆ ಕೆನ್ನೇರಿ ಸ್ವಾಮಿ, ಸದಾಶಿವಾನಂದ ಸ್ವಾಮಿಜಿ, ಯತ್ನಾಳ ಹಂಥವರು ಟಿಕೆಗಳಾಗದಂತೆ ತಡೆಹಿಡಿಯುದಕ್ಕೆ ಇವರಿಂದ ಹೇಗೆ ಸಾಧ್ಯ ? ಇದೆ ಟಿಕೆಗಳು ಅಥವಾ ಇಂಥ ಟಿಕೆಗಳು ಬೇರೆ ಧರ್ಮದವರ ಮೆಲೆ ಆಗೊದಿಲ್ಲಾ ಯಾಕೆಂದರೆ ಅಲ್ಲಿ ಧರ್ಮಕ್ಕೆ ಟಿಕೆ ಬಂದಾಗ ಎಲ್ಲರು ಒಗ್ಗಟಾಗಿರುತ್ತಾರೆ. ಇಲ್ಲಿ ಒಂದು ಸಂಘಟನೆ ಒಡೆದರೆ ಖುಷಿ ಪಡುವವರು ಇದ್ದಾರೆ, ಇದೆ ಲಿಂಗಾಯತ ಒಗ್ಗುಟ ಸಂಘ ಎಂದಾದರು ಬಸವ ಧರ್ಮ ಪೀಠದ ಗೊಂದಲ ಪರಿಹರಿಸಲಿಕ್ಕೆ ಯಾವುದೆ ಪ್ರಯತ್ನ ನಡೆಸಿಲ್ಲಾ, ಇವರಿಗೆ ಲಿಂಗಾಯತ ಪದದ ಅರ್ಥನೆ ಗೊತ್ತಿಲ್ಲಾ ಅನಿಸುತ್ತದೆ. ಉತ್ತರ ಕರ್ನಾಟಕದ ಪ್ರಖ್ಯಾತ ಮಠದ ಪಿಠಾಧಿಕಾರಿಯು ಗೊಂದಲ ಬಗೆಹರಿಸಲಿ ಎಂಬ ಯಾವ ಹೆಳಿಕೆಯು ಇಲ್ಲಾ, ಮಾತಾಜಿ ಇದ್ದಾಗ ಅವರ ಪ್ರಗತಿಯನ್ನು ಸಹಿಸದ ಇವರು, ಇಂಥಹ ಟಿಕೆಗಳನ್ನು ಅಗದಂತೆ ತಡೆಹಿಡಿಯುವ ಶಕ್ತಿ ಕಳೆದು ಕೊಂಡಿದ್ದಾರೆ.

ಒಂದು ಬಲಿಷ್ಠ ಸಂಘಟನೆಯನ್ನು ಒಡೆಯೋದು ತುಂಬ ಸುಲಭ ಮಾಮ, ಆದ್ರೆ ಸಂಘಟನೆ ಕಟ್ಟೋದು ತುಂಬ ಕಷ್ಟ.

ಮಾಮ : ನಿಜ, ಮಾತಾಜಿ ಇದ್ದಾಗ ಬಸವ ಧರ್ಮದ ಗತ್ತು ಬೆರೆನೆ ಆಗಿತ್ತು.

ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

ಕಾಮೆಂಟ್‌ಗಳು

  1. ಪೂಜ್ಯ ಮಾತಾಜಿಯವರು ಇದ್ದಾಗ ರಾ..ಬ.ದಳದ ಗತ್ತು ಗಮ್ಮತ್ತು ಬೇರೆಯೇ ಇತ್ತು...
    ಆ ಮಹಾತಾಯಿ ಸಂಘಟನೆ ಮಾಡುತಿದ್ದರು.‌ ಒಡೆಯುತ್ತಿರಲಿಲ್ಲ.
    ಆದರೆ ಇಂದು ಕೆಲವರು ತಮ್ಮ ಸ್ವಾರ್ಥಕ್ಕಾಗಿ ಇಡೀ ಸಮಾಜದ ಹಿತವನ್ನೇ ಹದಗೆಡಿಸುತಿದ್ದಾರೆ. ಬರೀ ಸಣ್ಣ ಮನಸ್ಸು.
    ಪೀಠ ಮುಚ್ಚಿಡುವುದು, ಪೂಜ್ಯರನ್ನು ಹೊರಹಾಕುವುದು,
    ಕೇಸ್ ಹಾಕುವುದು, ಹೊಡೆಸುವುದು,
    ಗಲೀಜಾಗಿ ಬೈಯುವಂತೆ ಮಾಡುವುದು, ಎದುರು ಬಂದಾಗ ಒಂದು ರೀತಿ, ಹಿಂದೆ ಮತ್ತೊಂದು ರೀತಿ ಮಾತಾಡುವುದು...
    ಎಲ್ಲಕ್ಕಿಂತ ಹೆಚ್ಚಾಗಿ ಸಂಘಟಕರನ್ನು, ಪ್ರತಿಭಾವಂತರನ್ನು ತುಳಿಯುವ ಆ ಕೆಟ್ಟ ಮನಸ್ಥಿತಿ ಇದೆಯಲ್ಲಾ... ನಿಜಕ್ಕೂ ಅಪಾಯಕಾರಿ.
    ಒಂದು ಮಾತ್ರ ಸತ್ಯ... ಈ ಜಗತ್ತಿನಲ್ಲಿ ಪ್ರಯತ್ನಶೀಲರಿಗೆ, ಪ್ರಾಮಾಣಿಕರಿಗೆ, ನಿರ್ಮಲ ಮನಸಿನವರಿಗೆ, ಸಂಘಟಕರಿಗೆ ಬೆಲೆ ಇದೆಯೇ ಹೊರತು, ಸ್ವಾರ್ಥಿಗಳಿಗೆ, ಕೆಟ್ಟ ಮನಸ್ಸಿನವರಿಗೆ ಇಲ್ಲ.

    ಪ್ರತ್ಯುತ್ತರಅಳಿಸಿ
  2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  3. ಇಬ್ಬರು ವ್ಯಕ್ತಿಗಳ ನಡುವಿನ ಸಂಭಾಷಣೆ ಮೂಲಕ ಲಿಂಗಾಯತ ಧರ್ಮದ ಒಳಗಿನ ಕಹಿಸತ್ಯವನ್ನು ಬಿಚ್ಚಿಟ್ಟಿದ್ದೀರಿ.. 🙏

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ