14th March 2022 : ಕೂಡಲಸಂಗಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಳಕಲ್ ನ ಗುರು ಮಹಾಂತ ಸ್ವಾಮೀಜಿಯವರು ತಮ್ಮ ಭಾಷಣದಲ್ಲಿ ಆಡಿದ ಕೆಲವು ಮಾತುಗಳಿಗೆ ಉತ್ತರ
📌ಕೂಡಲಸಂಗಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಳಕಲ್ ನ ಗುರು ಮಹಾಂತ ಸ್ವಾಮೀಜಿಯವರು ತಮ್ಮ ಭಾಷಣದಲ್ಲಿ ಆಡಿದ ಕೆಲವು ಮಾತುಗಳಿಗೆ ಉತ್ತರ...
👉ಕೂಡಲಸಂಗಮದೇವ ವಚನಾಂಕಿತ ಬದಲಾವಣೆ ಮಾಡಿದ ನಂತರ ಸಂಘಟನೆ ಬಹಳ ದುರ್ಬಲ ಆಗಿತ್ತು
*ಉತ್ತರ:* ಸ್ವಾಮೀಜಿಯವರೆ ಪೂಜ್ಯ ಲಿಂಗೈಕ್ಯಮಾತಾಜಿಯವರು 4 ರಾಜ್ಯಗಳಲ್ಲಿ ಸಾವಿರಾರು RBD ಶಾಖೆಗಳನ್ನು ತೆರೆದದ್ದು ಲಿಂಗದೇವ ವಚನಾಂಕಿತ ಮಾಡಿದ ಮೇಲೆಯೇ.. ಚೆನ್ನೈ ನಿಂದ ದೇಹಲಿವರೆಗೆ ಅನೇಕ ಬಸವಧರ್ಮ ಸಮ್ಮೇಳನಗಳನ್ನು ಮಾಡಿ ತೋರಿಸಿದ್ದು ಲಿಂಗದೇವ ವಚನಾಂಕಿತ ಮಾಡಿದ ಮೇಲೆಯೇ.. ಮಾತಾಜಿಯವರು ಲಿಂಗಾಯತ ಧರ್ಮ ಮಾನ್ಯತೆಗಾಗಿ ಬೀದರನಿಂದ ದೆಹಲಿವರೆಗೆ ಅನೇಕ ಯಶಸ್ವಿ ರ್ಯಾಲಿ Rally ಗಳನ್ನು ಮಾಡಿ ತೋರಿಸಿದ್ದು ಲಿಂಗದೇವ ವಚನಾಂಕಿತ ಮಾಡಿದ ಮೇಲೆಯೇ..
👉ಮಾತಾಜಿಯವರೆ ತಮ್ಮ ನಿರ್ಧಾರವನ್ನು ಬದಲಾವಣೆ ಮಾಡಿದ್ರು, ಗಂಗಾಮಾತಾಜಿ ಅವರು ಕೇವಲ ಅದನ್ನು ಚಾಲನೆಗೆ ತಂದಿದ್ದಾರೆ
*ಉತ್ತರ:* ಸ್ವಾಮೀಜಿಯವರೆ, ಮಾತಾಜಿಯವರು ಸುಪ್ರೀಂ ಕೋರ್ಟ್ ತೀರ್ಪಿನ ನಂತರವು ಕೂಡ ತಮ್ಮ ಕೊನೆಯ ಉಸಿರಿನ ತನಕ ತಾವು ಬರೆದ ಸಾಹಿತ್ಯದಲ್ಲಿ, ಪ್ರಾರ್ಥನೆಯಲ್ಲಿ, ಪ್ರವಚನಗಳಲ್ಲಿ ಎಲ್ಲ ಕಡೆಯೂ ಕೂಡ ಲಿಂಗದೇವ ವಚನಾಂಕಿತವನ್ನೇ ಬಳಸಿದ್ದಾರೆ. ಇದಕ್ಕೆ ಅನೇಕ ದಾಖಲೆಗಳಿವೆ.
👉 ಮಾತಾಜಿಯವರು ಬಸವರಾಜ್ ಧನ್ನೂರ್ ರವಗೆ ಸಂಘಟನೆ ಮಾಡಲಿಕ್ಕಾಗಿ ಕೂಡಲಸಂಗಮದೇವ ಬಳಸಲು ಅನುಮತಿ ಕೊಟ್ಟಿದ್ದರು
*ಉತ್ತರ:* ಮಾತಾಜಿಯವರು ಕೇವಲ ಇವರಿಗೆ ಒಬ್ಬರಿಗೆ ಅಷ್ಟೇ ಅಲ್ಲ, ಅನೇಕ ಜನರಿಗೆ ಈ ರೀತಿಯ ಅನುಮತಿ ಕೊಟ್ಟಿದ್ದರು ಆದರೆ ಅದು ಕೇವಲ ವೈಯಕ್ತಿಕ ಅನುಮತಿ ಮಾತ್ರ. ಆದರೆ ಬಸವ ಧರ್ಮ ಪೀಠದಿಂದಲೇ ಬಿಟ್ಟುಬಿಡಲು ಹೇಳಿರಲಿಲ್ಲ. ತಾವು ಬರೆದಿರುವ ಪುಸ್ತಕಗಳಿಂದ ತೆಗೆದು ಹಾಕಲು ಹೇಳಿರಲಿಲ್ಲ.
ಪೂಜ್ಯ ಮಾತಾಜಿಯವರು ಇಟ್ಟ ಹೆಜ್ಜೆಯನ್ನು ಎಂದು ಹಿಂತೆಗೆದುಕೊಂಡವರಲ್ಲ. ಅಂತಹ ದಿಟ್ಟ, ಧೀಮಂತ ನಿಲವು ಮಾತಾಜಿಯವರದ್ದು. ಈ ಸತ್ಯವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು.
🙏🙏🙏
(~ಸಿದ್ಧವೀರ ಸಂಗಮದ)
ಇಳಕಲನ ಗುರು ಮಹಾಂತ ಸ್ವಾಮೀಜಿಯವರು ತಮ್ಮ ಮಠದ ಗದ್ದಗೆಯ ಮೇಲಿರುವ ಎತ್ತಿನ ಮೂರ್ತಿಗಳನ್ನು ತೆಗೆದು ಆಮೇಲೆ ಲಿಂಗದೇವ ವಿಚಾರ ಮಾತಾಡಬೇಕು.
ಪ್ರತ್ಯುತ್ತರಅಳಿಸಿಎನೆ ಉತ್ತರ ಆದರು ಬಸವಣ್ಣ ಮತ್ತು ಬಸವವಾದಿ ಶರಣರ ಅವರೆ ಬರೆದ ವಚನಾಂಕಿತ ಅದೆ ನಮಗೆ ಫೈನಲ, ಯಾರೆ ಸಂಶೋಧನಾ ಮಾಡೀದರು ಅವರು ಬರೆದು ಅವರ ಹೆಸರಲ್ಲಿ ವಚನಾಂಕಿತ ಮಾಡಿಕೊಳ್ಳಿ ಅಷ್ಟೇ
ಪ್ರತ್ಯುತ್ತರಅಳಿಸಿ