ವಿಶ್ವದ ಯಾವುದೇ ಧರ್ಮಕ್ಕಿಂತ ಲಿಂಗಾಯತ ಧರ್ಮ ವಿಶಿಷ್ಟವಾದುದು
ಲಿಂಗಾಯತ ಧರ್ಮ
ವಿಶ್ವದ ಯಾವುದೇ ಧರ್ಮಕ್ಕಿಂತ ಲಿಂಗಾಯತ ಧರ್ಮ ವಿಶಿಷ್ಟವಾದುದು
ಈ ಧರ್ಮದಲ್ಲಿ ಜಾತಿ ಭೇಧ ಇಲ್ಲ ವರ್ಗಭೇಧ ಇಲ್ಲ ವರ್ಣಭೇದ ಇಲ್ಲ
ಕಾಯಕದಲ್ಲಿ ಭೇದ ಇಲ್ಲ ಸರ್ವರೂ ಸಮಾನಾರು ಎಂಬ ತತ್ವದ ಆಧಾರದಲ್ಲಿ ಪ್ರಯೋಗಗೊಂಡು ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದ ಧರ್ಮ ಲಿಂಗಾಯತ ಧರ್ಮ
ಈ ಧರ್ಮದಲ್ಲಿ ಎಲ್ಲರೂ ಗುರುವಾಗುವ ಎಲ್ಲರೂ ಲಿಂಗವಾಗುವ ಎಲ್ಲರೂ ಜಂಗಮವಾಗುವ ವಿಶಿಷ್ಟ ಶಕ್ತಿ ಲಿಂಗಾಯತ ಧರ್ಮಕ್ಕಿದೆ
ಜ್ಯೋತಿ ಮುಟ್ಟಿದ ದೀಪ ಮತ್ತೆ ಸಹಸ್ರಾರು ದೀಪಗಳನ್ನು ಬೆಳಗುವ ಶಕ್ತಿ ಪಡೆಯುವಂತೆ ಪ್ರತಿಯೊಬ್ಬರೂ ಗುರು ಆಗಬಹುದು
ವ್ಯಕ್ತಿಯ ಬೆಳವಣಿಗೆಗೆ ಒಂದು ಹಂತದವರೆಗೂ ಬೇರೆ ಗುರು ಅವಶ್ಯಕತೆ ಇದ್ದರೂ ನಂತರ ಅರಿವೇ ಗುರುವಾಗಿ ಸ್ವಯಂ ಜ್ಯೋತಿಯಾಗಿ ಬೆಳಕನ್ನು ನೀಡುವ ದೀಪವಾಗುವ ಅವಕಾಶ ಲಿಂಗಾಯತ ಧರ್ಮದಲ್ಲಿ ಇದೆ
ಲಿಂಗಾಯತ ಧರ್ಮದಲ್ಲಿ ಪ್ರತಿಯೊಬ್ಬರೂ ದೇಹವ ದಂಡಿಸಿ ಕಾಯಕ ಮಾಡಲೇಬೇಕು
ಗುರುವಾದಡೂ ಕಾಯಕದಿಂದಲೇ ಜೀವನ್ಮುಕ್ತಿ
ಲಿಂಗ ವಾದಡೂ ಕಾಯಕದಿಂದಲೇ ಜೀವನ್ಮುಕ್ತಿ
ಜಂಗಮವಾದಡೂ ಕಾಯಕದಿಂದಲೇ ಜೀವನ್ಮುಕ್ತಿ
ಕಾಯಕವೇ ಪೂಜೆ ಎಂದು ಸಾರಿದ ಏಕೈಕ ಧರ್ಮ ಲಿಂಗಾಯತ ಧರ್ಮ
ಸ್ತ್ರೀ ಪುರುಷ ಭೇಧ ವಿಲ್ಲ ಒಳಗೆ ಸುಳಿವ ಆತ್ಮ ಹೆಣ್ಣು ಅಲ್ಲ ಗಂಡೂ ಅಲ್ಲ ಎಂದು ಸ್ತ್ರೀ ಪುರುಷ ಸಮಾನರು ಎಂದು ಸಾರಿದ್ದು ಲಿಂಗಾಯತ ಧರ್ಮ
ಭಕ್ತ ಮತ್ತು ಭಗವಂತನ ಮಧ್ಯೆ ಯಾವುದೇ ಅಡೆತಡೆ ಇಲ್ಲದಂತೆ ನೇರವಾಗಿ ಪ್ರತಿಯೊಬ್ಬ ಭಕ್ತನೂ ಭಗವಂತನ ಜೊತೆಗೆ ಮುಕ್ತ ಸಂಭಂಧ ಕಲ್ಪಸಿಕೊಟ್ಟ ಧರ್ಮ ಲಿಂಗಾಯತ ಧರ್ಮ
ಪ್ರತಿಯೊಬ್ಬರ ಹುಟ್ಟು ಹೇಗಾದರೂ ಇರಲಿ ಹುಟ್ಟು ಮುಖ್ಯ ಅಲ್ಲವೇ ಅಲ್ಲ
ನಾವು ಬದುಕುವ ರೀತಿ ಮುಖ್ಯ ನಮ್ಮ ಶ್ರೇಷ್ಠ ಬದುಕೇ ನಮ್ಮ ಶ್ರೇಷ್ಠ ವ್ಯಕ್ತಿತ್ವ ಎಂಬುದನ್ನು ಸಾರಿದ ಧರ್ಮ ಲಿಂಗಾಯತ ಧರ್ಮ
ಶೋಷಣೆ ಮುಕ್ತ ಸಮಾಜವನ್ನು ಸೃಷ್ಟಿಸಿ
ಸಮಾನತೆಯನ್ನು ಸಾರಿದ ವಿಶ್ವ ಧರ್ಮವಾದ ಲಿಂಗಾಯತ ಧರ್ಮ ಬಸವಣ್ಣನವರ ಅನುಯಾಯಿಗಳು ಲಿಂಗಾಯತ ಧರ್ಮದ ಆಶಯಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗುವ ಪರಿಯಿಂದ ಇವತ್ತು ಲಿಂಗಾಯತ ಧರ್ಮ ಮೂಲೆಗುಂಪಾಗಿರುವುದು ನಮ್ಮೆಲ್ಲರ ದೌರ್ಭಾಗ್ಯ
ಆತ್ಮೀಯ ಶರಣ ಬಂಧುಗಳೇ ನಾವಾದರೂ ಬದಲಾಗೋಣ ಶರಣರ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಲಿಂಗಾಯತ ಧರ್ಮವನ್ನು ವಿಶ್ವಧರ್ಮವನ್ನಾಗಿಸೋಣ
ಸತ್ಯವಚನವ ನುಡಿಯಬಲ್ಲರೆ ಶರಣನೆಂಬೆನು.ಸದಾಚಾರದಲ್ಲಿ ನಡೆಯಬಲ್ಲರೆ ಶರಣನೆಂಬೆನು.ವೃತ್ತಿಜ್ಞಾನವಳಿದು ಚಿತ್ತದ ಕೊನೆಯ ಮೊನೆಯಲ್ಲಿನಿತ್ಯಲಿಂಗದ ನೆನಹು ತುಂಬಿ ಸುಳಿಯಬಲ್ಲರೆಅಚ್ಚ ಶರಣನೆಂಬೆನಯ್ಯ ಅಖಂಡೇಶ್ವರಾ.
-
ಷಣ್ಮುಖಸ್ವಾಮಿ
ಶರಣು ಶರಣಾರ್ಥಿ
ವಿಶ್ವೇಶ್ವರಯ್ಯ ಬಸವಬಳ್ಳಿ
9945439171
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ