ಇತಿಹಾಸದ ಪುನರಾವರ್ತನೆ
*ಇತಿಹಾಸದ ಪುನರಾವರ್ತನೆ*
ದುರ್ಬಲರಾದ ಅರಸರು ಬ್ರಿಟೀಷರನ್ನು ಓಲೈಸುತ್ತ ಅವರ ಬೂಟುಗಳನ್ನು ಒರಸುತ್ತ ಅವರನ್ನು ಓಲೈಸುತ್ತ ನಡೆವ ಹೆಣ ನುಡಿವ ಹೆಣವಾಗಿ ಹೆಣಮೂಳರಂತೆ ಬದುಕುತ್ತಿದ್ದರು.
ಬಸವ ಧರ್ಮದಲ್ಲಿ ಈ ಇತಿಹಾಸ ಪುನರಾವರ್ತನೆಯಾಗಿದೆ. ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿಯವರು ಮತ್ತು ಮಾತೆ ಮಹಾದೇವಿಯವರು ವೀರ ಸನ್ಯಾಸಿಗಳಾಗಿ ಬಸವ ಧರ್ಮದ ಅಂತರಂಗದ ಶತ್ರುಗಳೊಡನೆ ಮತ್ತು ಹಿತ ಶತ್ರುಗಳೊಡನೆ ವೀರಾವೇಶದಿಂದ ಹೋರಾಡಿ ಬಸವ ಧರ್ಮವನ್ನು ರಕ್ಷಿಸಿದರು. ಬಸವ ಧರ್ಮದ ವನ್ನು ಶತ್ರುಗಳಿಂದ ಕಾಪಾಡಿದರು. ಪೂಜ್ಯ ಮಾತೆ ಮಹಾದೇವಿಯವರು ಹೋರಾಡುತ್ತಲೇ ವೀರ ಮರಣವನ್ನಪ್ಪಿ ಹುತಾತ್ಮರಾದರು.
ಇವರಿಬ್ಬರ ನಂತರ ಬಂದವರು ದುರ್ಬಲರಾಗಿ ಹಿತಶತ್ರುಗಳನ್ನು ಓಲೈಸುತ್ತ ಅವರಿಗೆ ಕಪ್ಪಕಾಣಿಕೆಗಳನ್ನು ಸಲ್ಲಿಸುತ್ತ ಧರ್ಮಾಭಿಮಾನ ಪೀಠಾಭಿಮಾನ ಬಿಟ್ಟು ಧರ್ಮದ ಅಂತರಂಗದ ಶತ್ರುಗಳ ಹಂಗಿನಲ್ಲಿ ಬದುಕುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಭಕ್ತ ಪ್ರಜೆಗಳೇ ಈ ಧರ್ಮವನ್ನು ಕಾಪಾಡುವ ಅನಿವಾರ್ಯತೆ ಇದೆ.ತತ್ವ ನಿಷ್ಠೆಯೊಂದಿಗೆ ರಾಜಿ ಮಾಡಿಕೊಳ್ಳದೇ ವೀರಗಣಾಚಾರಿ ಮಡಿವಾಳ ಮಾಚಿ ತಂದೆಯಂತೆ, ಚಿನ್ಮಯಜ್ಞಾನಿ ಚೆನ್ನಬಸವಣ್ಣನವರಂತೆ, ವೀರಮಾತೆ ಅಕ್ಕನಾಗಲಾಂಬಿಕೆಯವರಂತೆ ನಾವೆಲ್ಲಾ ಹೋರಾಡೋಣ.
-ಸಚ್ಚಿದಾನಂದ ಪ್ರಭು ಚಟ್ನಳ್ಳಿ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ