ಸುಪ್ರೀಂಕೋರ್ಟ್ ತೀರ್ಪು✍️ ಹಾಗೂ ಮಾತಾಜಿ ಹೇಳಿಕೆ🎤 ಬಗ್ಗೆ ಕೆಲವು ಸತ್ಯಾಂಶಗಳು

 *👉ಸುಪ್ರೀಂಕೋರ್ಟ್ ತೀರ್ಪು✍️ ಹಾಗೂ ಮಾತಾಜಿ ಹೇಳಿಕೆ🎤 ಬಗ್ಗೆ ಕೆಲವು ಸತ್ಯಾಂಶಗಳು*

1.

ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದ್ದು ಹೀಗಿದೆ,  *ಪುಸ್ತಕದ ಮೇಲಿನ ನಿಷೇಧ ವಾಪಸ್ಸು ತೆಗೆದುಕೊಂಡರೆ ರಾಜ್ಯದಲ್ಲಿ ಶಾಂತಿ ಕದಡಬಹುದು, ಹಿಂಸೆಗೆ ಕಾರಣವಾಗಬಹುದು ಎಂದು ರಾಜ್ಯ ಸರ್ಕಾರವು  ವರದಿ ಕೊಟ್ಟಿದೆ, ಆ ಒಂದು ವರದಿಯನ್ನು ನಂಬಿ ನಾವು ಪುಸ್ತಕ ಮೇಲಿನ ನಿಷೇಧ ವಾಪಸ್ಸು ಪಡೆಯುತ್ತಿಲ್ಲ, ಆದರೆ 

*"ಅಂಕಿತನಾಮ ಬದಲಿಸಿರುವ ಚಿಕ್ಕ ಬದಲಾವಣೆಯೂ ಬಸವಣ್ಣನವರ ಅನುಯಾಯಿಗಳ ಭಾವನೆಗೆ ಧಕ್ಕೆ ತರಲಾರದು, ಇದು ವಿವಾದವೇ ಅಲ್ಲ, ಪುಸ್ತಕವು ನಿಮಗೆ ಇಷ್ಟವಾದರೆ ಓದಿ, ಇಲ್ಲವಾದ್ರೆ ಓದಬೆಡಿ, ಅನ್ಯರ ಅಭಿಪ್ರಾಯಗಳತ್ತ ಸಹಿಷ್ಣುತೆ ಬೆಳೆಸಿಕೊಳ್ಳಬೇಕು, ವಿರೋಧ ಮಾಡುವವರ ಧಾರ್ಮಿಕ ಅತಿರೇಕತನ ನಿಲ್ಲಬೇಕು, ಧರ್ಮ ರಾಜಕಾರಣದಲ್ಲಿ ಆಸಕ್ತಿ ಇರುವವರು ಮಾತ್ರ ಇಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ"* ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಲಿಂಗದೇವ ವಚನಾಂಕಿತ ತಪ್ಪು ಅಥವಾ ಬಳಸಬಾರದು ಎಂದು ಎಲ್ಲಿಯೂ ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿಲ್ಲ. 

ನಾವು ಈ ಕೇಸ್ ನಲ್ಲಿ *ತರ್ಕಬದ್ಧ ಆದೇಶ ಕೊಡುತ್ತಿಲ್ಲ* ಎಂದು ಕೂಡ ಸುಪ್ರೀಂ ಕೋರ್ಟ್ ತನ್ನ ಅಸಹಾಯಕತೆಯನ್ನು ಒಪ್ಪಿಕೊಂಡಿದೆ.


2. 

"ಸುಪ್ರಿಂಕೋರ್ಟಿಗೆ ನಮ್ಮ ಸಂಶೋಧನೆ ಅರ್ಥವಾಗಿಲ್ಲ, ಆದರೆ ಕೋರ್ಟಿಗೆ ಗೌರವ ಸೂಚಿಸುವ ಸಲುವಾಗಿ ನಾನು ಬಸವ ವಚನ ದೀಪ್ತಿ ಪುಸ್ತಕದ *ಮರುಮುದ್ರಣ* (Reprint) ಮಾಡುವುದಿಲ್ಲ" ಎಂದು ಮಾತಾಜಿ ಹೇಳಿದ್ದಾರೆ ಆದರೆ ಲಿಂಗದೇವ ವಚನಾಂಕಿತವನ್ನು ಹಿಂತೆಗೆದುಕೊಳ್ಳುತ್ತೇನೆ ಅಥವಾ ಮುಂದೆ ಬಳಸುವುದಿಲ್ಲ  ಎಂದು  ಎಲ್ಲಿಯೂ ಹೇಳಿಯೇ ಇಲ್ಲ.


3.  

ಕಲಬುರ್ಗಿ Rally (Sept.2017) ಮತ್ತು  ಬಸವಕಲ್ಯಾಣ Rally (Oct.2017) ಆದ ನಂತರ ರಾಷ್ಟ್ರರಾಜಧಾನಿ *ನವದೆಹಲಿಯಲ್ಲಿ* Rally (Dec.2017) ನಡೆಯಿತು. ತಾಲ್ ಕಟೋರಾ ಸ್ಟೇಡಿಯಂ ನಲ್ಲಿ ನಡೆದ ಆ ಕಾರ್ಯಕ್ರಮದಲ್ಲಿ ಎಲ್ಲ ಮಠಾಧೀಶರ ಉಪಸ್ಥಿತಿಯಲ್ಲಿ ಪೂಜ್ಯ ಮಾತೆಮಹಾದೇವಿಯವರು *ಸಾಮೂಹಿಕ ಪ್ರಾರ್ಥನೆಯಲ್ಲಿ* ಲಿಂಗದೇವ ವಚನಾಂಕಿತವನ್ನೇ ಬಳಸಿದ್ದಾರೆ.


4. 

ಕಲಬುರ್ಗಿ Rally (Sept.2017) ಮತ್ತು  ಬಸವಕಲ್ಯಾಣ Rally (Oct.2017)  ಆದನಂತರ ಬಸವಕಲ್ಯಾಣದಲ್ಲಿ ನಡೆದ *ಕಲ್ಯಾಣ ಪರ್ವದಲ್ಲಿ* (oct2017) ಮತ್ತು ಕೂಡಲಸಂಗಮದಲ್ಲಿ ನಡೆದ *ಶರಣ ಮೇಳದಲ್ಲಿ* (Jan2018) ಕೂಡ ಪೂಜ್ಯ ಮಾತೆಮಹಾದೇವಿಯವರು ಲಿಂಗದೇವ ವಚನಾಂಕಿತವನ್ನೇ ಬಳಸಿದ್ದಾರೆ.

5..

ಕಲಬುರ್ಗಿ Rally ಮತ್ತು  ಬಸವಕಲ್ಯಾಣ Rally ಆದನಂತರ ಪ್ರಕಟಿಸಿದ *ಕಲ್ಯಾಣ ಕಿರಣ* ಮಾಸಿಕಗಳಲ್ಲಿ ಲಿಂಗದೇವ ವಚನಾಂಕಿತವನ್ನೇ ಪೂಜ್ಯ ಮಾತೆಮಹಾದೇವಿಯವರು ಬಳಸಿದ್ದಾರೆ.

ಹೀಗೆ ತಮ್ಮ ಕೊನೆಯ ಉಸಿರು ಇರುವ ತನಕವು ಲಿಂಗದೇವ ವಚನಾಂಕಿತ ವನ್ನು ಮಾತಾಜಿ ಬಳಸಿದ್ದಾರೆ. 23 ವರ್ಷಗಳ ಕಾಲ  (ಕೊನೆಯ ದಿನಗಳಲ್ಲೂ ಕೂಡ) ಎಷ್ಟೋ ಜನ ಒತ್ತಡ ತಂದರೂ ಅವರು ಹಿಂಪಡೆಯಲಿಲ್ಲ. ಏಕೆಂದರೆ ಮಹಾತ್ಮರು *ಲೋಕದ ಇಚ್ಛೆಯಂತೆ ನುಡಿಯುವುದಿಲ್ಲ, ಲೋಕದ ಇಚ್ಛೆಯಂತೆ ನಡೆಯವುದಿಲ್ಲ*.

~ ಸಿದ್ಧವೀರ ಸಂಗಮದ

    ಬೀದರ

ಕಾಮೆಂಟ್‌ಗಳು

  1. ಪರಮಪೂಜ್ಯ ಜಗದ್ಗುರು ಡಾಕ್ಟರ್ ಮಾತೇಮಾಹಾದೇವಿ ಮಾತಾಜಿಯವರ ಸಾಧನೆ ಬಹಳ ಚೆನ್ನಾಗಿ ಬರೆದಿದ್ದಾರೆ ಓದಿ ನನಗೆ ಬಹಳ ಆನಂದ ವಾಯಿತು

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…