Part 1 : ಲಿಂಗದೇವಾ ಮತ್ತು ಕೂಡಲ ಸಂಗಮದೇವಾ ಒಂದು ಅಧ್ಯಯನ

 *ಲಿಂಗದೇವಾ ಮತ್ತು ಕೂಡಲ ಸಂಗಮದೇವಾ ಒಂದು ಅಧ್ಯಯನ; ಭಾಗ-೧*

-ಶರಣ ಸಚ್ಚಿದಾನಂದ ಪ್ರಭು ಚಟ್ನಳ್ಳಿ

*ಲಿಂಗದೇವ ಪದವನ್ನು ವಚನಾಂಕಿತವಾಗಿ ಅಳವಡಿಸಿ, 25 ವರ್ಷಗಳೇ ಕಳೆದುಹೋಗಿವೆ. ಒಂದು ತಲೆಮಾರಿನ ಜನಾಂಗ ಲಿಂಗದೇವ ವಚನಾಂಕಿತವನ್ನು ಒಪ್ಪಿಕೊಂಡು ಅಪ್ಪಿಕೊಂಡು ತಮ್ಮ ಹೃನ್ಮನಗಳಲ್ಲಿ ಸ್ಥಾಪಿಸಿಕೊಂಡಿದ್ದಾರೆ. ಇದನ್ನು ಯಾರಿಂದಲೂ ಅಳಿಸಿಹಾಕಲು ಸಾಧ್ಯವಿಲ್ಲ. ಏಕೆಂದರೆ ಮುಂಬರುವ ಎಲ್ಲಾ ಜನಾಂಗ ಲಿಂಗದೇವ ವಚನಾಂಕಿತವನ್ನೇ ಅಳವಡಿಕೊಳ್ಳುತ್ತದೆ.*

 ಲಿಂ. ಪೂಜ್ಯ ಶ್ರೀ ಮಾತಾಜಿಯವರು ಬಸವ ವಚನ ದೀಪ್ತಿ ಪುಸ್ತಕ ಪ್ರಕಟ ಮಾಡಿದಾಗ, ಅನೇಕರು ಲಿಂಗದೇವ ಎಂದು ತಮ್ಮ ಗುರು ಲಿಂಗಾನಂದರ ಹೆಸರಿನಿಂದ ವಚನಾಂಕಿತ ಬರೆದಿದ್ದಾರೆ ಎಂದು ಹುಯಿಲೆಬ್ಬಿಸಿದರು. ಯಾರೊಬ್ಬರೂ ಮಾತಾಜಿಯವರು ಸಂಪಾದಿಸಿದ ಬಸವ ವಚನ ದೀಪ್ತಿ ಪುಸ್ತಕದ ಮುನ್ನುಡಿ ಓದದೆ ಪ್ರತಿಭಟನೆ ಮಾಡಿ, ಕರ್ನಾಟಕ ಸರಕಾರದಿಂದ ಪುಸ್ತಕ ಮುಟ್ಟುಗೋಲಾಗುವಂತೆ ಮಾಡಿದರು. ಕರ್ನಾಟಕ ಉಚ್ಛ ನ್ಯಾಯಲಯ ಮತ್ತು ಭಾರತದ ಸರ್ವೋಚ್ಛ ನ್ಯಾಯಲಯಗಳು ಕರ್ನಾಟ ಸರಕಾರದ ಮುಟ್ಟುಗೋಲನ್ನು ಎತ್ತಿಹಿಡಿಯುವಂತೆ ಮಾಡಿದರು. ಆದರೆ ಧಾರ್ಮಿಕ ಹಾಗು ಆಧ್ಯಾತ್ಮಿಕ ವಿಚಾರಗಳು ಲೋಕ ಲೌಕಿಕದ ಕಾನೂನಿನ ಕಟ್ಟಳೆಗಳಿಗೆ ಒಳಪಡುವುದಿಲ್ಲ. 

*ಉದಾಹರಣೆಗೆ ಹೇಳುವುದಾದರೆ ಲಿಂಗಾಯತ ಧರ್ಮದ ಅನುಯಾಯಿಗಳು ತಮ್ಮ ಇಹಲೋಕದ ಕರ್ತವ್ಯಗಳನ್ನು ಮುಗಿಸಿದಮೇಲೆ,  ಇಷ್ಟಲಿಂಗ ಯೋಗ ಸಾಧನೆ ಮಾಡಿ ಇಚ್ಛಾಮರಣಿಗಳಾಗಲಿಕ್ಕೆ ಅವಕಾಶವಿದೆ. ಗುರು ಬಸವಣ್ಣನವರು, ಗುರು ಬಸವಣ್ಣನವರ ಧರ್ಮಪತ್ನಿ ಪರಮ ದಾಸೋಹಿ ನೀಲಗಂಗಮ್ಮನವರು, ಗುರು ಅಲ್ಲಮ ಪ್ರಭುದೇವರು, ಗುರು ಸಿದ್ಧರಾಮೇಶ್ವರರು, ಗುರು ಅಕ್ಕಮಹಾದೇವಿ ತಾಯಿಯವರು, ಶರಣೆ ಲಿಂಗಮ್ಮನವರು, ಷಣ್ಮುಖ ಶಿವಯೋಗಿಗಳು ಮತ್ತು ಲಿಂಗಾಯತ ಧರ್ಮ ಪರಂಪರೆಯ ಅನೇಕ ಗುರುಗಳು ಶರಣರು ಇಚ್ಛಾಮರಣಿಗಳಾಗಿ ತಮ್ಮ ದೇಹವನ್ನು ತ್ಯಜಿಸಿ ಲಿಂಗದೇವನೊಡನೆ ಬೆರೆತ್ತಿದ್ದಾರೆ.*

ಇಂದೂ ಕೂಡ ಯಾರು ಬೇಕಾದರೂ ಈ ಸಾಧನೆ ಮಾಡಬಹುದು. ಆದರೆ ಕಾನೂನಿನ ದೃಷ್ಠಿಯಲ್ಲಿ ಇದು ಆತ್ಮ ಹತ್ಯೆ ಎನಿಸಿಕೊಂಡು ಅಪಾರಾಧವಾಗಲೂಬಹುದು. ಲಿಂಗಾಯತ ಧರ್ಮದ ಸಂವಿಧಾನದ ದೃಷ್ಟಿಯಲ್ಲಿ, ಲಿಂಗಾಯತ ಧರ್ಮದ ಕಾನೂನಿನ ದೃಷ್ಟಿಯಲ್ಲಿ ಇದು ಅಪರಾಧವಲ್ಲ. ಇದು ಒಬ್ಬ ವ್ಯಕ್ತಿಗೆ ಲಭ್ಯವಾಗುವ ಆತ್ಯಂತಿಕ ಸಿದ್ಧಿ, ಪರಮ ಪದವಿ ಮತ್ತು  ಜೀವನದ ಪರಮೋಚ್ಛ ಸಾಧನೆ.

*ಅದೇ ರೀತಿ ‘ಲಿಂಗದೇವ’ ಎನ್ನುವ ಪದವನ್ನು ವಚನಾಂಕಿತವಾಗಿ ಅಳವಡಿಸಿರುವುದು ಲೋಕ ಲೌಕಿಕದ ಕಾನೂನಿನ ದೃಷ್ಟಿಯಲ್ಲಿ ಒಪ್ಪಿತವಾಗದಿದ್ದರೂ ಲಿಂಗಾಯತ ಧರ್ಮದ ಕಾನೂನಿನ ದೃಷ್ಟಿಯಲ್ಲಿ, ಲಿಂಗಾಯತ ಧರ್ಮದ ಸಂವಿಧಾನದ ದೃಷ್ಟಿಯಲ್ಲಿ ಇದು ಒಪ್ಪಿತವಾಗವ ವಿಚಾರವಾಗಿದೆ. ಈ ರೀತಿ ಕಾನೂನಿನ ಕಟ್ಟಳಗೆ ಒಳಪಡಲಾರದ ಧಾರ್ಮಿಕ ವಿಚಾರಗಳು ಅನ್ಯ ಪ್ರವಾದಿ ಧರ್ಮಗಳಲ್ಲಿಯೂ ಕಾಣುತ್ತೇವೆ.*

ಆದ್ದರಿಂದ ಲಿಂಗದೇವ ಎನ್ನುವುದು ಪೂಜ್ಯ ಶ್ರೀ ಮಹಾಜಗದ್ಗುರು ಮಾತೆ ಮಹಾದೇವಿಯವರ ಕಲ್ಪನೆಯಲ್ಲ. ಇದು ಶರಣರ ವಚನಗಳಲ್ಲಿಯೇ ಅಭಿವ್ಯಕ್ತವಾದ ಲಿಂಗಾಯತ ಧರ್ಮದ ಪರಿಭಾಷೆಯಲ್ಲಿ ದೇವರ ಹೆಸರು . ಶರಣರು ತಮ್ಮ ವಚನಗಳಲ್ಲಿ ಲಿಂಗದೇವ ಎಂದು ದೇವರಿಗೆ ಕರೆದಿದ್ದಾರೆ. ದೇವರ ಕುರುಹಾದ ತಮ್ಮ ಇಷ್ಟಲಿಂಗಕ್ಕೆ ಕರೆದಿದ್ದಾರೆ. ಆದ್ದರಿಂದ ಗುರು ಬಸವಣ್ಣನವರ ವಚನಗಳನ್ನು ಹೇಳುವಾಗ ಬರೆಯುವಾಗ ವಚನಾಂಕಿತವಾಗಿ ಲಿಂಗದೇವಾ ಬರೆಯಬಹುದು ಹೇಳಬಹುದು. ಇದನ್ನು ಕೆಲವೇ ದಿನಗಳಲ್ಲಿ ದಾಖಲೆ ಸಮೇತವಾಗಿ ಗ್ರಂಥ ಪ್ರಕಟಿಸುವವನಿದ್ದೇನೆ.

*ಶರಣು ಶರಣಾರ್ಥಿಗಳು*

(ಭಾಗ -೨ ರಲ್ಲಿ ಮುಂದುವರೆಯುತ್ತದೆ....)

Part 2 ಒದಲು ಇಲ್ಲಿ ಕ್ಲಿಕ್ ಮಾಡಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…