Part 3 : ಲಿಂಗದೇವಾ ಮತ್ತು ಕೂಡಲ ಸಂಗಮದೇವಾ ಒಂದು ಅಧ್ಯಯನ

ಲಿಂಗದೇವಾ ಮತ್ತು ಕೂಡಲ ಸಂಗಮದೇವಾ ಒಂದು ಅಧ್ಯಯನ; ಭಾಗ-3

-ಶರಣ ಸಚ್ಚಿದಾನಂದ ಪ್ರಭು  ಚಟ್ನಳ್ಳಿ.



ಗುರು ಅಲ್ಲಮಪ್ರಭುದೇವರೊಡಗೂಡಿ ಗುರು ಸಿದ್ಧರಾಮೇಶ್ವರರು ಅನುಭಾವ ಮಂಟಪಕ್ಕೆ ಬಂದಾಗ ಅವರ ಎಲ್ಲಾ ದ್ವಂದ್ವಗಳು ಅನುಮಾನಗಳು ಪರಿಹಾರವಾಗಿ ಕಪಿಲಸಿದ್ಧಮಲಿಕಾರ್ಜುನಿನಿಗೂ ಒಬ್ಬ ದೇವನಿದ್ದಾನೆ ಎಂದು ಅರಿತು ತಮ್ಮ ವಚನಾಂಕಿತವನ್ನು ‘ಕಪಿಲಸಿದ್ಧಮಲ್ಲಿಕಾರ್ಜುನ ದೇವರ ದೇವ’ ಎಂದು ಬದಲಾಯಿಸಿ ಕೊಂಡರು. ಅವರು ‘ಕಪಿಲಸಿದ್ಧಮಲ್ಲಿಕಾರ್ಜುನ’ ವಚನಾಂಕಿತದೊಂದಿಗೆ ಬರೆದ ಕೊನೆಯ ಮತ್ತು ಅವರು ಶಿವ ಭಕ್ತಿಯಿಂದ ಲಿಂಗದೇವನ ಭಕ್ತಿಗೆ ಪರಿವರ್ತನೆಯ ಘಟ್ಟದ್ದಲಿ ಬರೆದ ವಚನವಿದು: 

ಎಲ್ಲಾ ಪ್ರಮಥರು ಲಿಂಗವ ಧರಿಸುತ್ತಿರಲು,

ನಾನೇನು ಒಲ್ಲೆನೆಂಬುದು ಕರ್ಮದ ಬಲೆಯೋ ಮಾಯದ ಬಲೆಯೋ?

ಎಲೆ ಕಪಿಲಸಿದ್ಧಮಲ್ಲಿನಾಥಯ್ಯ, ನಾ ಧರಿಸಿಕೊಂಬುವೆ ಲಿಂಗವ,

ನೀ ಕರೆಸಿಕೊಂಬವನಾಗು ಮತ್ತೋರ್ವನ ನಿನ್ನ ಪೂಜೆಗೆ,

ನಾ ನಿನ್ನವನಲ್ಲೆಲೆ ದೇವಾ.

ಈ ವಚನದ ನಂತರ ಬರೆದ ಎಲ್ಲಾ ವಚನಗಳಿಗೆ ಅವರು ‘ಕಪಿಲಸಿದ್ಧಮಲ್ಲಿಕಾರ್ಜುನ ದೇವರ ದೇವ’ ಎನ್ನುವ ವಚನಾಂಕಿತವನ್ನೇ ಬಳಸಿದ್ದಾರೆ. ಅವರು ಬರೆದ ಸ್ತೋತ್ರ ತ್ರಿವಿಧಿಯ ವಚನಗಳಿಗೆ ‘ಯೋಗಿನಾಥ’ ಎನ್ನುವ ಇನ್ನೊಂದು ವಚನಾಂಕಿತವನ್ನು ಬಳಸಿದ್ದಾರೆ. ಹೀಗೆ  ಗುರು ಸಿದ್ಧರಾಮೇಶ್ವರರು ಮೂರು ವಚನಾಂಕಿತಗಳನ್ನು ಬಳಸಿದ್ದಾರೆ. ವಚನಗಳ ಪ್ರತಿ ಮಾಡುವಾಗ ದೇವರ ದೇವ ಪದ ತಪ್ಪಿ ಹೋಗಿ ಈಗ ಪ್ರಕಟವಾಗಿರುವ ಗುರು ಸಿದ್ಧರಾಮೇಶ್ವರರ ವಚನಗಳಲ್ಲಿ ‘ಕಪಿಲಸಿದ್ಧಮಲ್ಲಿಕಾರ್ಜುನದೇವರ ದೇವ’ ಎನ್ನುವ ವಚನಾಂಕಿತ ಮೂವತ್ತರಿಂದ ಐವತ್ತು ವಚನಗಳಿಗೆ ಸೀಮಿತವಾಗಿದೆ.

ಮುಂದಿನ ದಿನಗಳಲ್ಲಿ ಅವರ ವಚನಗಳನ್ನು ಸಂಶೋಧಿಸಿ ಪರಿಷ್ಕರಿಸಿ 

ಹೀಗೆ ಗುರು ಅಕ್ಕಮಹಾದೇವಿಯವರು ಮತ್ತು ಗುರು ಸಿದ್ಧರಾಮೇಶ್ವರರು ಎರಡು ಮತ್ತು ಮೂರು ವಚನಾಂಕಿತಗಳನ್ನು ಬಳಸಿ ತಾವು ಶಿವ ಭಕ್ತಿಯಿಂದ ಲಿಂಗದೇವನ ಭಕ್ತಿಗೆ ಪರಿವರ್ತನೆ ಹೊಂದಿರುವುದನ್ನು ಸಾಹಿತ್ಯಿಕವಾಗಿಯೇ ತೋರಿಸಿಕೊಟ್ಟಿದ್ದಾರೆ.

ಗುರು ಬಸವಣ್ಣನವರು ಬರೆದಿರುವ ವಚನಗಳು/ವಚನದ ಸಾಲುಗಳು ೧,೯೬,೦೦೦. ಆದರೆ ಲಭ್ಯವಾಗಿರುವ ವಚನಗಳು ಹೆಚ್ಚುಕಡಿಮೆ ೧೪೫೦. ಹೀಗಾಗಿ ಅವರು ಬಳಸಿದ ಎರಡು ವಚನಾಂಕಿತಗಳ ಬಗ್ಗೆ ಸ್ಪಷ್ಟವಾಗಿ ಸಾಹಿತ್ಯದಲ್ಲಿ ಲಭ್ಯವಾಗಿಲ್ಲ. ಅಥವಾ ವಚನ ಪ್ರತಿಕಾರರಿಂದಲೂ ಲಿಂಗದೇವ  ಪದದ ಮಹತ್ವ ಗುರುತಿಸಲಾಗದೆ ಕೂಡಲಸಂಗಮದೇವ  ವಚನಾಂಕಿತಕ್ಕೆ ಪ್ರಾಶಸ್ತ್ಯ ಕೊಟ್ಟು ಪ್ರತಿಮಾಡಿರುವ ಸಾಧ್ಯತೆಗಳೇ ಹೆಚ್ಚು. ಏಕೆಂದರೆ ಅವರ ವಚನಗಳಲ್ಲಿ ಅವರು ಪ್ರೌಢರಾದಂತೆ ವಿಚಾರ ಬದಲಾವಣೆ ಕಾಣುತ್ತೇವೆ. ಈ ಕಾರಣಕ್ಕಾಗಿಯೇ ಗುರು ಬಸವಣ್ಣನವರ ವಚನಗಳಲ್ಲಿಯೂ ಎರಡು ವಚನಾಂಕಿತಗಳು ಬೇಕೆ ಬೇಕು. ಈ ವಿಚಾರವನ್ನು ನಾನು ಸವಿವರವಾಗಿ ‘ಹರನೆಡೆಯಿಂದ ಪರಮನೆಡೆಗೆ’ ಕೃತಿಯಲ್ಲಿ ಬರೆದಿದ್ದೇನೆ ದಯವಿಟ್ಟು ಈ ಕೃತಿಯನ್ನೂ ತಾವು ಓದಬೇಕಾಗಿ ವಿನಂತಿಸಿಕೊಳ್ಳುತ್ತೇನೆ. 

ಲಿಂಗದೇವಾ ವಚನಾಂಕಿತ ಪೂಜ್ಯ ಶ್ರೀ ಮಾತೆ ಮಹಾದೇವಿಯವರು ಅಳವಡಿಸಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಅನೇಕರು ಇದುವರೆಗೂ ತಿರಸ್ಕರಿಸಿದ್ದಾರೆ. ಇವರ ದ್ವೇಷದ ಕಿಚ್ಚು ಮಾತಾಜಿಯವರು ಲಿಂಗೈಕ್ಯರಾದಮೇಲೂ ಆರಲಿಲ್ಲ. ಈ ಕಿಚ್ಚು ಮೊದಲು ವಿರೋಧಿಗಳ ಹೃದಯಲ್ಲಿ ಹುಟ್ಟಿ ಇದೀಗ ಮಾತಾಜಿಯವರ ಒಡನಾಡಿಗಳಾಗಿದ್ದ ಅನೇಕರಿಗೂ ವ್ಯಾಪಿಸಿದ್ದು ವಿಪರ್ಯಾಸವೇ ಸರಿ!! ಲಿಂಗದೇವ ವಚನಾಂಕಿತ ಅಳವಡಿಸಿರುವ ವಚನಾಂಕಿತವಾದರೂ ಯಾವುದೇ ರೀತಿಯಲ್ಲಿ ಗುರು ಬಸವಣ್ಣನವರ ವಚನಗಳಿಗೆ ತತ್ವಗಳಿಗೆ ಚ್ಯುತಿ ತರಲಾರದು. ಬದಲಾಗಿ ಗುರು ಅಕ್ಕಮಹಾದೇವಿ ಹಾಗು ಗುರು ಸಿದ್ಧರಾಮೇಶ್ವರರ ಜೀವನಂದಂತೆ ಗುರು ಬಸವಣ್ಣನವರ ಜೀವನದ ಎರಡು ಘಟ್ಟಗಳನ್ನು ಸ್ಪಷ್ಟವಾಗಿ ತೋರುತ್ತದೆ. ಲಿಂದೇವ ವಚನಾಂಕಿವನ್ನು ಎರಡನೇ ವಚನಾಂಕಿತವಾಗಿ ಒಪ್ಪಬೇಕು. ಇಲ್ಲವಾದರೆ ಎರಡನೇ ವಚನಾಂಕಿತವನ್ನು ಸಂಶೋದಿಸಬೇಕು. ಗುರು ಬಸವಣ್ಣನವರ ನಿಜ ತತ್ವವನ್ನು ಅವರ ಮನೋಗತ, ಹೃದಯಂಗತ ಭಾವವನ್ನು ಅರಿತುಕೊಳ್ಳಲು 

                       

ಕಾಮೆಂಟ್‌ಗಳು

  1. ಹೌದು ಶರಣ ಬಂಧುವೇ..
    ಲಿಂಗದೇವಾ... ಏಕ ದೇವೋಪಾಸನಾ ಹಾಗೂ ಲಿಂಗಾಯತ ಧರ್ಭದ ಏಕ ದೇವ ಹೆಸರಾದ ಲಿಂಗದೇವ ಪದವ ನಾವು ನಿಜ ಲಿಂಗಾಯತರು ನಮ್ಮ ಲಿಂಗಾಯತ ಧರ್ಮ ಬಸವ ಧರ್ಮ ಮಹಾ ಪೀಠದ ಸಕಲ ಅನುಯಾಯಿಗಳು ವಚನ ಸಾಸಹಿತ್ಯ ಪಠಿಸುವಾಗ ಆಯಾ ಎಲ್ಲಾ ವಚನಗಳ ವಚನಾಂಕಿತ ಜೊತೆಯಲ್ಲಿ
    ಕಪಿಲ ಸಿದ್ಧ ಮಲ್ಲಿಕಾರ್ಜುನ ದೇವರ ದೇವ.. ಲಿಂಗದೇವಾ..,
    ಕೂಡಲ ಸಂಗಮ ದೇವರ ದೇವ..,, ಲಿಂಗದೇವಾ..,
    ಚೆನ್ನ ಮಲ್ಲಿಕಾರ್ಜುನ ದೇವರ ದೇವ...,ಲಿಂಗದೇವಾ..,
    ಗುಹೇಶ್ವರ ದೇವರ ದೇವ ಲಿಂಗದೇವಾ...
    ಹೀಗೆ ಸಕಲ ಶರಢರ ಸರ್ವ ವಚನಗಳ ವಚನಾಂಕಿತಗಳ ಜೊತೆ ಲಿಂಗದೇವಾ...
    ಹೇಳುವುದು ಅತ್ಯಂತ ಬಹು ಸೂಕ್ತ ಯುಕ್ತವು ಹೌದು. ಈ ಮಹೋನ್ನತ ಧೇಯ ನಿರ್ಧಾರವು ನಮ್ಮೇಲ್ಲರ ಆರಾಧ್ಯದ ಲಿಂಗಾಯತ ಧ,ಅಮದ ಅನರ್ಘ್ಯ ರತ್ನ ಪರಮ ಪೂಜ್ಯ ಮಹಾ ಮಾತಾಜಿ ಅವರದಾಗಿತ್ತು ಎಂಬುವುದನ್ನ ನಾವು ರಾಷ್ಟ್ರೀಯ ಬಸವ ದಹಗಳ ಅನುಯಾಯಿಗಳು ತಪ್ಪದೇ ಪರಿಪಾಲಿಸಿಕೊಂಡು ಬರುವ ಮೂಲಕ, ನಮ್ಮ ಮಹಾ ಮಾತಾಜಿಯವರ ಸಂಕಲ್ಪದ ಸಾಕಾರಗೊಳಿಸಬೇಕಿದೆ.

    ಮಹಾ ಮಾತಾಜಿಯವರುಗಳತವನಿಧಿ ತಾವಾಗಿದ್ದು, ತಮ್ಮಯ ಲೇಖನಗಳು ನಮಗೆ ಮಹಾ ಮಾತಾಜಿಯವರ ಲೇಖನ ಮಾಲೆಗಳ ಸಾಕಾರ ಸ್ವೀಕಾರದ ಪ್ರತಿರೂಪವೇ ಎಂದು ನಾ.. ತಮ್ಮನ್ನ ಆರಾಧಿಸುವೆನು.
    ತಮಗೆ ನನ್ನ ಅಭಿಮಾನ ಪೂರಕ ಶರಣು ಶರಣಾರ್ಥಿಗಳು ಸರ್.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…