ಯಾವುದು ಅನಧಿಕೃತ?
ಯಾವುದು ಅನಧಿಕೃತ???
ದಿನಾಂಕ 13 April 2022
ಶ್ರೇಷ್ಠ ದಾರ್ಶನಿಕ ಸಾಹಿತಿ ಪೂಜ್ಯ ಮಾತೆಮಹಾದೇವಿಯವರು ಲಿಂಗೈಕ್ಯರಾದ ಮೇಲೆ ಅವರ ಶ್ರೇಷ್ಠ ಸಂಶೋಧನೆಯನ್ನು ಮತ್ತೊಬ್ಬರು ಹಿಂತೆಗೆದುಕೊಳ್ಳುವುದು ಅನಧಿಕೃತ..
ಪೂಜ್ಯ ಮಾತಾಜಿಯವರು ತಾವು ಬರೆದಿರುವ ಸಾಹಿತ್ಯವನ್ನು ಯಾರು ಕೂಡ ಬದಲಾವಣೆ ಮಾಡಬಾರದು ಎಂದು ಆದೇಶಿಸಿ ಹೋದರು ಕೂಡ ಅವರು ಲಿಂಗೈಕ್ಯ ಆದಮೇಲೆ ಬದಲಾವಣೆ ಮಾಡುತ್ತಿರುವುದು ಅನಧಿಕೃತ...
ತಮ್ಮ ತಪ್ಪು ನಿರ್ಧಾರಗಳನ್ನು ಪ್ರಶ್ನೆ ಮಾಡದೆ ಮೌನವಾಗಿ ಇರುವವರನ್ನು ಇರಿಸಿಕೊಂಡು ಪ್ರಶ್ನೆ ಮಾಡುವವರನ್ನು ಬಸವಧರ್ಮ ಪೀಠದಿಂದ ಉಚ್ಚಾಟಿಸುವುದು ಅನಧಿಕೃತ..
ಸರ್ವಾಧಿಕಾರಿಯಂತೆ ವರ್ತಿಸುತ್ತಾ ಬಸವ ಮಂಟಪಗಳಲ್ಲಿ ಲಿಂಗದೇವ ಬಳಸಬಾರದು ಎಂದು ಸುತ್ತೋಲೆ ಹೊರಡಿಸುವುದು ಅನಧಿಕೃತ..
ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾ ತತ್ವನಿಷ್ಠ ಲಿಂಗದೇವನ ಶರಣರನ್ನು ದೂರಮಾಡಿ ಡಾಂಬಿಕ ಭಕ್ತರನ್ನು ಸೇರಿಸಿಕೊಂಡು ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಅನಧಿಕೃತ..
ನಾನು ಹಾಕಿದ ಗೆರೆ ದಾಟುವುದಿಲ್ಲ ಎಂದು ನಿಮ್ಮ ಮೇಲೆ ನಂಬಿಕೆ ಇಟ್ಟು ಪೀಠದ ಮೇಲೆ ಕೂರಿಸಿದ ನಿಮ್ಮ ಗುರುಗಳಾದ ಪೂಜ್ಯ ಲಿಂಗೈಕ್ಯ ಮಾತೆಮಹಾದೇವಿಯವರ ಸಂಕಲ್ಪಗಳಿಗೆ ವಿರುದ್ಧವಾಗಿ ನಡೆಯುತ್ತಿರುವುದು ಅನಧಿಕೃತ..
ಸಿದ್ಧವೀರ ಸಂಗಮದ


ನಿಮ್ಮಂಥ ಜಗದ್ಗುರು ಪೀಠದ ಲ್ಲಿ ಇದ್ದರೇನು ಶಿವ ಹೋದರೇನು ಅಕಟಕಟಾ ಶಿವ ನಿಮಗೆಂತು ಲಿಂಗದೇವ ಒಲಿವನಯ್ಯ ಅಕ್ಕಮಹಾದೇವಿ ಅನುಭಾವ ಪೀಠದ ಪೀಠಾಧೀಶೆಯಾದ ಪೀಠದಲ್ಲಿ ಕಾಯ೯ಕ್ರಮ ಮಾಡುತ್ತಿದ್ದರೆ ಇದು ಅನಧಿಕ್ರ ಎಂದು ಹೇಳಲಿಕ್ಕೆ ನಾಚಿಕೆ ಯಾಗಬೇಕು ಇದೆ ರೀತಿ ಎಷ್ಷು ದಿನ ಉಂಡ ಮನೆಗೆ ದ್ರೋಹ ಬಗೆಯುವದು ಬರಬರ ಕುತಂತ್ರ ಅರೆಯಾಯಿತು ಕಾಣಿರಣ್ಣಾ ಮೊದಲ ದಿನ ಲಿಂಗದೇವ ಹಿಂತೆಗೆತ ಮರುದಿನ ಉಚ್ಛಾಟನೆ ಮುರೆಂಬ ದಿನಕ್ಕೆ ಪೀಠವೆ ಬಂದ್ ತಮ್ಮ ಒಂದೊಂದು ಕರಾಳ ಸತ್ಯವನ್ನು ತಾವೇ ಅನಾವರಣ ಗೊಳಿಸುತ್ತಿದ್ದೀರಿ ಮಾತಾಜಿ ಒಂದೊಂದು ಪೈನೆ ಲೆಕ್ಕ ಇಟ್ಟ ಹಣವನ್ನು ಗುಂಡಾ ಗಳಿಗೆ ಸಾಕಿ ಸಲಹಿ ಮುಗ್ಧ ಜಂಗಮ ಮೂರ್ತಿ ಗಳ ಮೇಲೆ ಹಲ್ಲೆ ಮಾಡಿ ಭಯದ ವಾತಾವರಣ ನಿರ್ಮಾಣ ಪೀಠಾರೋಹಣ ತೆಗೆದು ಸಿಂಹಾಸನ ಮಾಡುವುದು ತಮ್ಮ ಘನ ಉದ್ದೇಶ ಏಕೆಂದರೆ ಮಾತಾಜಿ ಇಟ್ಟ ಹೆಸರು ಪೀಠ ಇದನ್ನು ತೆಗೆದು ಸಿಂಹಾಸನ ಅಂತ ಇಟ್ಟರೆ ನಿಮ್ಮ ಕೀರ್ತಿ ಮುಗಿಲಿನೆತ್ತರಕ್ಕೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ ನಾಡಿನ ಮಠಾಧೀಶರು ತಮ್ಮನ್ನು ಕರೆದು ಸತ್ಕಾರ ಮಾಡಿ ಗೌರವಿಸುವಲ್ಲಿ ಯಾವುದೇ ಸಂಶಯವಿಲ್ಲ ಹಾಗೂ ಜ್ಞಾನೇಶ್ವರಿ ಮಾತಾಜಿಯನ್ನು ತೆಗೆದು ಚಂದ್ರಮ ಅವರಿಗೆ ಪೀಠಕ್ಕೆ ಏರಿಸುವುದು ತಮ್ಮ ಅಂತರಾಳದ ಉದ್ದೇಶ ಇದೆ ಎಂದು ತಮ್ಮ ಭಕ್ತರು ಹಿಂಬಾಲಕರು ಮಾತಾಡಿಕ್ಕೊಳ್ಳುತ್ತಿದ್ದಾರೆ ಏಕೆಂದರೆ ಚಂದ್ರಮ್ಮ ನವರಲ್ಲಿ ಧೈರ್ಯ ಇದೆ ಅವರು ಸ್ಥಳೀಯ ರಾಗಿರುವದರಿಂದ ಸಹಾಯ ವಾಗುತ್ತದೆ ಎಂದು ಕಾರಣ ಹೇಳುತ್ತಿದ್ದಾರೆ ಅದು ತಮಗೆ ಗೊತ್ತು ಧಾರವಾಡ ಆಶ್ರಮ ದಲ್ಲಿ ನಡೆಯುವ ಕಯ೯ಕ್ರಮಕ್ಕೆ ನಾವು ಹೋಗುತ್ತೇವೆ ತಾವು ಹೇಳಿದ್ದು ಕೇಳಲಿಕ್ಕೆ ನಿಮ್ಮ ಗುಲಾಮ ರಲ್ಲ ನೀವು ಕೊಟ್ಟ ಹೇಳಿಕೆ ಹಿಂಪಡೆದು ತಾವು ಕೂಡ ಭಾಗಿಗಳಾಗಿ ಭಾಗ್ಯ ಶಾಲಿಯಾಗಿ ನಾನು ತಮ್ಮ ಪಾದಕ್ಕೆ ದೀಘ೯ದಂಡ ಪ್ರಣಾಮ ಸಲ್ಲಿಸುತ್ತೇನೆ ಇಲ್ಲ ಅಂದ್ರೆ ಸುಮ್ಮನೆ ಇರಿ ಇದೆ ನೀವು ಬಸವ ಧರ್ಮ ಪೀಠಕ್ಕೆ ಕೊಡುವ ಕಾಣಿಕೆ. ಜಯರಾಜ ಹತ್ತಿ
ಪ್ರತ್ಯುತ್ತರಅಳಿಸಿ*ದಿವ್ಯ ವೀಣೆ*
ಪ್ರತ್ಯುತ್ತರಅಳಿಸಿನಿನ್ನ (ಗುರು ಬಸವಣ್ಣನವರ)ಕೈಯೊಳಗೆ ಸಿಕ್ಕ ಲೆಕ್ಖಣಿಕೆಯೊಲು ನೀ ಬರೆಸಿದಂತೆ ನಾ ಬರೆಯುವೆನು ತಂದೆ.
ತವ ಹಸ್ತದೊಳಗೆ ದಿವ್ಯ ವೀಣೆಯು ಆಗಿ ನೀ ಮಿಡಿಸೆ ಗಾನವನು ನಾ ನುಡಿವೆ ತಂದೆ.
*-ಪೂಜ್ಯ ಶ್ರೀ ಮಾತೆ ಮಹಾದೇವಿ.*
*ಒದರುವ ತುತ್ತೂರಿ*
ಅವನ ಕೈಯೊಳಗೆ ಸಿಕ್ಕ ಗೊಂಬೆಯಂತೆ ಅವ ಕುಣಿಸಿದಂತೆ ವೀಡಿಯೋದಲ್ಲಿ ನಾ ಕುಣಿಯುವೆನು ತಂದೆ.
ಇವನ ಬಾಯೊಳಗೆ ಸಿಕ್ಕ ತುತ್ತೂರಿಯಂತೆ ಅವ ಒದರಿಸಿದಂತೆ ನಾ ಒದರುವೆನು ತಂದೆ.
-----------?
ನಮ್ಮ ನಡೆ ಧಾರವಾಡದ ಕಡೆ ಜೈ ಅಪ್ಪಾಜಿ ಜೈ ಮಾತಾಜಿ ಮಾತಾಜಿ ಇದ್ದರೆ ಶರಣರು ಬಂದರೆ ತುಂಬಾ ಸಂತೋಷಪಾಡುತಿದ್ದರು ಆದರೆ ಇಂದು ಅದೇ ಮಾತಾಜಿ ಪ್ರತಿ ರೂಪ ಶರಣರಿಗೆ ಬರಬೇಡಿ ಎನ್ನುವ ಸಂದೇಶ ಕೊಡುತ್ತಿದೆ ಗಮನಿಸಿ ಶರಣರೇ 🙏🙏🙏🙏🙏🙏
ಪ್ರತ್ಯುತ್ತರಅಳಿಸಿಬಸವ ಧರ್ಮಪೀಠ ಇವರ ವೈಯಕ್ತಿಕ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ.
ಪ್ರತ್ಯುತ್ತರಅಳಿಸಿಬಸವಣ್ಣನವರ ವಚನ ಅಂಕಿತನಾಮ ಕೂಡಲಸಂಗಮದೇವಾ ತೆಗದು ಲಿಂಗದೇವ ಮಾಡುವುದಕ್ಕೆ ತೆಗೆಯುವುದುಕ್ಕೆ ಯಾರು ಅಧಿಕಾರ ಕೊಟ್ಟದು ಮಾತೆ ಮಹಾದೇವಿಯವರಿಗೆ, ಅವರು ಸಂಶೋಧನೆ ಮಾಡೀದರೆ ಅವರು ವಚನ ಬರೆದು ಅದಕ್ಕೆ ಅಂಕಿತನಾಮ ಲಿಂಗದೇವ ಇಲ್ಲ ಅವರು ಮಾತೆ ಮಹಾದೇವಿ ಅಂತ ಆಡಬಹುದು ಇತ್ತು ಅದಕ್ಕೆ ಯಾರು ಬೇಡ ಅಂತ ಇರಲಿಲ್ಲ, ವಚನಗಳಲ್ಲಿ ಇದ್ದ ಲಿಂಗದೇವ ಶಬ್ದ ತೆಗದು ಬಸವಣ್ಣನವರ ವಚನ ಅಂಕಿತನಾಮ ಕೂಡಲಸಂಗಮದೇವಾ ತೆಗದು ಲಿಂಗದೇವ ಹಾಕೀದು ಸಂಶೋಧನೆ ಅನ್ನಲ ಅದಕ್ಕೆ english ನಲ್ಲಿ cut paste and move ಅಂತರೆ
ಪ್ರತ್ಯುತ್ತರಅಳಿಸಿಈಗ ನಾವೇನ್ ಶರಣೋತ್ಸವಕ್ಕ ಬರಬೇಕೋ ಬ್ಯಾಡೋ. ಒಂದೂ ತಿಳಿವಲ್ದು ಅಲ್ಲೋ ಮಾರಾಯಾ....! *ನಮ್ ತೆಲಿ ಕೆಟ್ ಬಿಟ್ಟೈತ್ ನೋಡ್ರಿಪಾ.*
ಪ್ರತ್ಯುತ್ತರಅಳಿಸಿಅಲ್ರೀ ಮಾತಾಜಿ *ಒಮ್ಮಿ ಬಾ ಅನ್ನಾಖತ್ತೀರಿ, ಒಮ್ ಬ್ಯಾಡಾ ಅನ್ನಕತ್ತೀರಿ.* ಏನ್ ತೆಲಿ ಗಿಲಿ ಕೆಟ್ಟೈತೋ ಹ್ಯಾಂಗೋ ಮಾರಾಯ್ರೆ ನಿಮ್ದು. ಮಾತಾಜಿಯವ್ರಾ ನಿಮ್ಗೂ ವಯಸ್ಸಾತು. ಸುಮ್ನ ರೆಸ್ಟ್ ಮಾಡ್ರಲಾ.
ನಿನ್ನಿ ನೋಡಿದ್ರ ಅನಿವಾರ್ಯ ಐತಿ *ಕ್ಯಾನ್ಸಲ್ ಮಾಡಿವಿ ಶರಣೋತ್ಸವಕ ಬರಬ್ಯಾಡ್ರಿ ಅಂದ್ರಿ.*
ಇಂದಾ ನೋಡಿದ್ರ ಇದ್ದಕ್ಕಿದ್ದಂಗೆ ಸಾಯಂಕಾಲ ಟೈಮಿಗಿ ದೆವ್ವ ಹಿಡದಾಂಗ *ಬರ್ರಿ ಅಂತೀರಿ.*
*ಬಸ್ ಗಳು, ಟ್ರೇನ್ ಗಳು ಏನ್ ನಮ್ಮಪ್ಪನ್ ಮನ್ಯಾಗ್ ತಯಾರ್ ಆಗ್ಯಾವೇನ್ರಿ.* ನೀವು ಬರ್ರಿ ಅಂದಾಗ ಭುರ್ ಅಂತ ತಗೊಂಡ್ ಬರಾಕ್ ಬಸ್ ಗಳು ನಮ್ ಮಾಮಾಂದ್ ಅದಾವೇನ್ರಿ ಮಾತಾಜಿ. *ಅಅಅ ನಿಮಾ ಒಯ್ದು ಅತ್ಲಾಗ*
ಹಂಗೆಲ್ಲಾ ಹಂಗ್ಲಿ ಮುಂಗ್ಲಿ *ಮಂಗ್ಯಾನಾಟಾ ಮಾಡಬ್ಯಾಡ್ರಿಪಾ ಮಾತಾಜಿ*
ಬಾ ಅಂದಾಗ್ ಬರಾಕಾ, ಬ್ಯಾಡ್ ಅಂದಾಗ ಬಿಡಾಕ್ ನಾವೇನ್ ನಿಮ್ಮನಿ ಆಳೇನ್ರಿ ಮಾತಾಜಿ?
ಲಿಂ.ಮಾತಾಜಿ ಮಸ್ತ್ ಆಸ್ತಿ ಹಣ ಮಾಡಿಟ್ಟು ಹೋಗ್ಯಾರು. ಮಸ್ತ್ ಮಜಾ ಮಾಡಖತ್ತೀರಿ ಮಾತಾಜಿ ನೀವು. ಆದ್ರ ನಾವು ದುಡಿದು ತಿನ್ನೋರ್ರೀ ಮಾತಾಜಿ. ನಮ್ದು ಒಂದೀಟಾ ಅರ್ಥ ಮಾಡಕೋಳ್ರಲ.
ಆದ್ರ ನೀವು ಹುಚ್ ಗಿಚ್ ಆಗಬ್ಯಾಡ್ರಿ. ಛೋಲೋ ಇರ್ರಲ. *ಮೊದಲು ನೀವು ಬರಬ್ಯಾಡ್ ಅಂತ್ ಹೇಳಿರಿ. ಅದ್ಕಾ ನಾವು ಬರಾಂಗಿಲ್ರಿ. ಇದು ಖರೆ ಮಾತು ನೋಡ್ರಿ. ಶರಣ್ರೀ ಮಾತಾಜಿಯವ್ರಾ.
ವಿಡಿಯೋ ಮಾಡೋದು, ಪತ್ರಿಕಾಗೋಷ್ಠಿ ಮಾಡೋದು ಇದೆಲ್ಲಾ ಇವರಿಗೆ ಹೊಸದು. ಮಕ್ಕಳು ವಿಡಿಯೋ ಮಾಡಿದಂಗೆ ಮಾಡ್ತಿದ್ದಾರೆ.
ಪ್ರತ್ಯುತ್ತರಅಳಿಸಿ