ಮಾತಾಜಿ ನಮ್ಮನ್ನು ಕ್ಷಮಿಸಿ

🙏🏼ಮಾತಾಜಿ ನಮ್ಮನ್ನು ಕ್ಷಮಿಸಿ 🙏🏼



ನಿಮ್ಮ ಅನರ್ಘ್ಯ ರತ್ನದ ಕೊಡಗೆಯನ್ನು ಕಳೆದು ಕೊಂಡೆವು, ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ🙏🏼

ನಿಮ್ಮ ಬೆವರಿನಿಂದ ಕಟ್ಟಿದ ಸಂಸ್ಥೆಯು ಒಡೆದು ಹನ್ನೊಂದಾಯಿತು , ಕಾಪಾಡಿಕೊಳ್ಳಲು ನಮಗೆ ಆಗಲಿಲ್ಲಾ, ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ.🙏🏼

ಅಂದು, *ಧನವಂತರ ಮನೆಯಿಂದ ಬಂದು* ಬಸವ ಧರ್ಮದ ಸಿರಿತನವನ್ನು ಲಿಂಗಾಯತರಿಗೆ ತಿಳಿಸಿಕೊಟ್ಟಿರಿ, ಇಂದು ನಿಮ್ಮ ಸಂಸ್ಥೆಯ ಅಡಿಯಲಿದ್ದವರು *ತಮ್ಮ ಬಂಧು ಬಾಂಧವರನ್ನು ಸಿರಿವಂತರನ್ನಾಗಿ ಮಾಡುತ್ತಿದ್ದಾರೆ *, ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ 🙏🏼

ನಿಮ್ಮ ಗುರುವಿನ ಋಣ ತೀರಿಸಲು, ಗುರುವಿಗೊಂದು ಪೀಠವನ್ನು ನಿರ್ಮಿಸಿದಿರಿ, ನಿಮ್ಮವರು ನಿಮಗೆ ಗುರು ದ್ರೋಹವನ್ನು ಮಾಡಿದರು, ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ.🙏🏼

ತಾವು ತಮ್ಮ ವಚನಗಳನ್ನು ಬರೆಯುವುದನ್ನು ನಿಲ್ಲಿಸಿ, ಶರಣರ ವಚನಗಳನ್ನು ಮನೆ ಮನಗಳಲ್ಲಿ ಬಿತ್ತಿದ್ದಿರಿ, ನಿಮ್ಮ ಸಾಹಿತ್ಯದ ಕೊಲೆ ನಿಮ್ಮವರಿಂದಲೆ ಆಗುತ್ತಿದೆ, ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ 🙏🏼

*ಶರಣರನ್ನು ಕೂಡಿಸಲು*, ಶರಣಮೇಳ, ಕಲ್ಯಾಣ ಪರ್ವ, ಗಣ ಮೇಳ, ಶರಣೋತ್ಸವ ಹಾಗು ಲಿಂಗಾಯತ  ರ್ಯಾಲಿಗಳನ್ನು ನಡೆಸಿದಿರಿ, ಇಂದು ಇವೆ ಕಾರ್ಯಕ್ರಮಗಳನ್ನು *ಶರಣರನ್ನು ಒಡೆಯಲು* ಉಪಯೋಗಿಸುತಿದ್ದಾರೆ, ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ 🙏🏼

ಜನರನ್ನು ಶರಣರನ್ನಾಗಿ ಮಾಡಲು, *ಬಸವ ಧರ್ಮ ಸಂಸ್ಕಾರ* ಎಂಬ ಕೃತಿಯನ್ನು ನೀಡಿದ್ದಿರಿ, ಇಂದು ನಿಮ್ಮ *ಜಂಗಮರಿಂದಲೇ ಈ ಕೃತಿಯ ಪ್ರತಿಜ್ಞೆಯ ಉಲ್ಲಂಘನೆ ನಡೆಯುತಿದೆ *, ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ.🙏🏼

ಬಸವದಳದ ವ್ಯಕ್ತಿ ದೇಶಕೊಂದು ಶಕ್ತಿ ಎಂಬ ತತ್ವವನ್ನು ಶರಣರ ಮನದಾಳದಲಿ ಬಿತ್ತಿದ್ದಿರಿ, ಇಂದಿನ ಒಬ್ಬ ಪದಾಧಿಕಾರಿಯಲೂ ಒಗ್ಗುಡಿಸುವ ಶಕ್ತಿಯಿಲ್ಲಾ, ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ 🙏🏼

ಗುರುವಿಗೊಂದು ಗೌರವ ನೀಡಲು, ಕಲ್ಯಾಣದಲ್ಲಿ, ಬೆಂಗಳೂರಿನಲ್ಲಿ ಹಾಗು ಕೂಡಲ‌ಸಂಗಮದಲ್ಲಿ *ಅಪ್ಪಾಜಿಯವರ ಪ್ರತಿಮೆಯನ್ನು ಮಾಡಿಸಿದ್ದಿರಿ*, ನೀವು ಲಿಂಗೈಕ್ಯರಾಗಿ *ಮೂರು ವರ್ಷವಾದರು, ನಿಮ್ಮ ಪ್ರತಿಮೆಯನ್ನು ಮಾಡಿಸಲಾಗಲಿಲ್ಲಾ*, ಮಾತಾಜಿ ನಮ್ಮನ್ನು ಕ್ಷಮಿಸಿ ಬಿಡಿ 🙏🏼


✍🏼ವಿಕೋ




ಕಾಮೆಂಟ್‌ಗಳು

  1. ಭಾವನಾತ್ಮಕ ಲೇಖನ👏🙏🙏🙏

    ಬರೆಯಲು ಗೊತ್ತಿರದ, ಕೇವಲ ಸೇವೆ ಮಾಡಲು ಗೊತ್ತಿದ್ದ ನಮ್ಮ ರಾ ಬ ದಳದ ಕಾರ್ಯಕರ್ತರಿಗೆ ಬರೆಯುವಂತೆ ಮಾಡಿದ್ದು ಇಂದಿನ ಬೆಳವಣಿಗೆಗಳು.. ಇಂದಿನ ಜವಾಬ್ದಾರಿ ಸ್ಥಾನದಲ್ಲಿರುವವರ ತಪ್ಪು ನಿರ್ಧಾರಗಳು....

    ನಾನು ಕೂಡ ಪೂಜ್ಯ ಮಾತಾಜಿಯವರು ಇರುವ ತನಕ ಒಂದು ಲೇಖನವನ್ನು ಕೂಡ ಬರೆದವನಲ್ಲ... ನನಗೆ ಬರೆಯುವುದು ಗೊತ್ತೇ ಇರಲಿಲ್ಲ... ಆದರೆ ಮಾತಾಜಿ ಲಿಂಗೈಕ್ಯ ವಾದ ನಂತರ ಬದಲಾದ ಪರಿಸ್ಥಿತಿಗಳು ನನ್ನನ್ನು ಬರೆಯುವಂತೆ ಮಾಡಿದವು..

    "ತಪ್ಪು ಮಾಡುವುದು ಸಹಜ, ತಿದ್ದಿ ನಡೆಯುವವನು ಮನುಜ", ಎಂಬ ನಾಣ್ನುಡಿಯಂತೆ ನಮ್ಮ ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು ಸಂಘಟನೆ ಹಿತದ್ರಷ್ಟಿಯಿಂದ ಇಂದಿನ ಅನಿವಾರ್ಯವಾಗಿದೆ...🙏

    ಪ್ರತ್ಯುತ್ತರಅಳಿಸಿ
  2. ಓದಿ‌ ಮನಸ್ಸಿಗೆ ತುಂಬಾ ತುಂಬಾ ನೋವಾಯಿತು. ಇವರ ಗುರುದ್ರೋಹದ ಮನೋಭಾವನೆ ಗೊತ್ತಿದ್ದೇ ಏನೋ ಮಾತಾಜಿಯವರು ತಮ್ಮ ಗದ್ದುಗೆಯನ್ನು ಲಿಂಗೈಕ್ಯರಾಗುವ ೧೫ ವರ್ಷಗಳ ಹಿಂದೆಯೇ ನಿರ್ಮಿಸಿ ಕೊಂಡಿದ್ದರು. ಇವರ ಗುರುದ್ರೋಹದ ಬಗ್ಗೆ ಅರಿವಿದ್ದೇ ಮಾತಾಜಿಯವರು ತಮ್ಮ ಗದ್ದುಗೆಯ ಮೇಲಿನ ಮೂರ್ತಿಯನ್ನು ತಾವು ಲಿಂಗೈಕ್ಯರಾಗುವುದಕ್ಕೂ ಮೊದಲೇ ನಿರ್ಮಿಸಿಕೊಂಡಿದ್ದರು ಎಂದು ಈವಾಗ ನನಗೆ ಅರಿವಾಗುತ್ತಿದೆ.

    ಪ್ರತ್ಯುತ್ತರಅಳಿಸಿ
  3. ಬಸವಣ್ಣನವರ ಕಾಲಕ್ಕೂ ಕೋಂಡಿ ಮಂಚಣ್ಣ ಇದ್ದರು ಮಾತಾಜಿ ಕಾಲಕ್ಕೂ ಕೋಂಡಿ ಮಂಚಣ್ಣ ಇದ್ದರು ಮಾತಾಜಿ ಜೀವನದುದ್ದಕ್ಕೂ ಬಸವಣ್ಣನವರ ಪ್ರಚಾರ ಮಾಡಿ ಲಿಂಗದೇವ ವಚನಾಂಕಿತ ನಂಬುವ ಲಕ್ಷಾಂತರ ಶಿಷ್ಯರನ್ನು ತಯಾರು ಮಾಡಿ ಹೋಗಿದ್ದಾರೆ ಶರಣುಶರಣಾರ್ಥಿ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…