ಇಚಲಕರಂಜಿಯಲ್ಲಿ ನಡೆದ ಗಣಮೇಳದಲ್ಲಿ ಬಸವಕುಮಾರಸ್ವಾಮಿಗಳು (ವಿಡಿಯೋದಲ್ಲಿ) ಆಡಿದ ಮಾತುಗಳಿಗೆ ಉತ್ತರ

Date : 2nd April 2022

ಇಚಲಕರಂಜಿಯಲ್ಲಿ ನಡೆದ ಗಣಮೇಳದಲ್ಲಿ  ಬಸವಕುಮಾರಸ್ವಾಮಿಗಳು (ವಿಡಿಯೋದಲ್ಲಿ) ಆಡಿದ ಮಾತುಗಳಿಗೆ ಉತ್ತರ

Video ವಿಡಿಯೊ ನೊಡಲು ಕ್ಲಿಕ್‌ ಮಾಡಿ 👇


 👉 ("ಇವರೆಲ್ಲಾ ಮಾತಾಜಿ ಅವರನ್ನು ಅವಮಾನ ಮಾಡಿದ್ದಾರೆ")

 ಲಿಂಗೈಕ್ಯ ಮಾತಾಜಿಯವರನ್ನು ಅವಮಾನ ಮಾಡಿದವರು ಯಾರು? ಪೂಜ್ಯ ಮಾತಾಜಿ ಲಿಂಗೈಕ್ಯ ಆದ ಮೂರು ವರ್ಷಗಳ ನಂತರ ಅವರು ಮಾಡಿದ್ದ ವಚನಾಂಕಿತ ತಪ್ಪನ್ನು  ನಾವು ಸರಿಪಡಿಸುತ್ತಿದ್ದೇವೆ ಎಂದು ಸಮಾಜದ ದ್ರಷ್ಟಿಯಲ್ಲಿ ಲಿಂಗೈಕ್ಯ ಮಾತಾಜಿಯವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವಮಾನ ಮಾಡಿದವರು ಯಾರು???

👉  ("ಇವರೆಲ್ಲ ಹೈಕೋರ್ಟ ಮತ್ತು ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ನಡೆದಿದ್ದಾರೆ")

ಮೊದಲು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತೀರ್ಪು ಏನು ನೀಡಿದೆ ಎಂಬ ಅರಿವು ಕೂಡ ನಿಮಗೆ ಇದೆಯೇ? ಇದ್ದಿದ್ದರೆ ತಾವು ಈ ರೀತಿ ಮಾತನಾಡುತ್ತಿರಲಿಲ್ಲ. 

ಮೊದಲು ಕೋರ್ಟ್ ತೀರ್ಪು ಏನಿದೆ ಎಂಬುದು ಸ್ವಲ್ಪ ತಿಳಿದುಕೊಳ್ಳಿ. ಪೂಜ್ಯ ಮಾತೆಮಹಾದೇವಿಯವರು ಬರೆದಿದ್ದ ಬಸವ ವಚನ ದೀಪ್ತಿ ಎಂಬ ಒಂದು ಪುಸ್ತಕವನ್ನು ಮಾತ್ರ ಶಾಂತಿ ಕಾಪಾಡುವ ಕಾರಣ ಕೊಟ್ಟು ಮುಟ್ಟುಗೋಲು ಹಾಕಲಾಗಿತ್ತು. ಆದರೆ ಮಾತಾಜಿಯವರ ಶ್ರೇಷ್ಠ ಸಂಶೋಧನೆ ಲಿಂಗದೇವ ವಚನಾಂಕಿತವನ್ನು ಯಾವುದೇ ಕೋರ್ಟ್ ನಿಷೇಧ ಮಾಡಿಲ್ಲ ಎಂಬುದು ಸತ್ಯ. 

ಹೈಕೋರ್ಟು ತೀರ್ಪು ಬಂದಿತ್ತು 2003ರಲ್ಲಿ. ಆ ತೀರ್ಪಿನ ನಂತರವೂ ಕೂಡ ಲಿಂಗೈಕ್ಯ ಮಾತಾಜಿಯವರು ತಮ್ಮ ಸಾಹಿತ್ಯದಲ್ಲಿ ಹಾಗೂ ಪ್ರವಚನದಲ್ಲಿ  ತಮ್ಮ ಸಂಶೋಧನೆಯನ್ನು ಮುಂದುವರಿಸಿಕೊಂಡು ಬಂದರು. ಹಾಗಾದರೆ ನಿಮ್ಮ ದೃಷ್ಟಿಯಲ್ಲಿ ನಿಮ್ಮ ಗುರುಗಳಾದ ಲಿಂಗೈಕ್ಯ ಮಾತಾಜಿಯವರು ಕೂಡ ಹೈಕೋರ್ಟ್ ತೀರ್ಪಿನ ವಿರುದ್ಧ ನಡೆದಿದ್ದಾರೆಯೇ?

ಸುಪ್ರೀಂಕೋರ್ಟ್ ತೀರ್ಪು ಬಂದಿತ್ತು sept 2017ರಲ್ಲಿ. ಆದರೆ ಪೂಜ್ಯ ಮಾತಾಜಿಯವರು ಲಿಂಗೈಕ್ಯವಾಗಿದ್ದು ಮಾರ್ಚ್ 2019ರಲ್ಲಿ. ಅಂದರೆ ಸುಪ್ರೀಂಕೋರ್ಟ್ ತೀರ್ಪಿನ ನಂತರವೂ ಕೂಡ 1 ವರ್ಷ 6 ತಿಂಗಳುಗಳ ಕಾಲ ಕೂಡ ಪೂಜ್ಯ ಮಾತೆಮಹಾದೇವಿಯವರು ತಮ್ಮ ಸಂಶೋಧನೆಯನ್ನು ಕೈಬಿಡಲಿಲ್ಲ. ಪುಸ್ತಕಗಳಲ್ಲಿ, ಪ್ರವಚನಗಳಲ್ಲಿ ಮತ್ತು ಪ್ರಾರ್ಥನೆಯಲ್ಲಿ ಮುಂದುವರಿಸಿಕೊಂಡು ಬಂದರು. ಹಾಗಾದರೆ ನಿಮ್ಮ ದೃಷ್ಟಿಯಲ್ಲಿ ನಿಮ್ಮ ಗುರುಗಳಾದ ಪೂಜ್ಯ ಲಿಂಗೈಕ್ಯ ಮಾತೆಮಹಾದೇವಿಯವರು ಕೂಡ ತೀರ್ಪಿನ ವಿರುದ್ಧ ನಡೆದಿದ್ದಾರೆಯೇ?

ಈ ರೀತಿಯ ತರ್ಕವಿಲ್ಲದ ಮಾತುಗಳನ್ನು ಆಡಿ ಭಕ್ತರನ್ನು ಮತ್ತು ಸಮಾಜವನ್ನು ದಾರಿ ತಪ್ಪಿಸುತ್ತಿರುವುದ ಹಿಂದೆ ತಮ್ಮ ಉದ್ದೇಶ ಏನಿದೆ ಎಂಬುದನ್ನು ತಿಳಿಸಿ. ಬಸವಧರ್ಮ ಪೀಠವು ಇದು ಯಾರೊಬ್ಬರ ಕೆಲವು ವ್ಯಕ್ತಿಗಳ ವೈಯಕ್ತಿಕ ಆಸ್ತಿಯಲ್ಲ. ಪೂಜ್ಯ ಲಿಂಗೈಕ್ಯ ಮಾತಾಜಿಯವರ ಆಶಯದಂತೆ ಎಲ್ಲಾ ಜಂಗಮಮೂರ್ತಿಗಳನ್ನು ಹಾಗೂ ಶರಣರನ್ನು  ಬಸವಧರ್ಮ ಪೀಠದಲ್ಲಿ ಒಳಮಾಡಿಕೊಂಡು ಮುಂದೆ ಸಾಗಬೇಕು. 



🙏🙏🙏

~ ಸಿದ್ಧವೀರ ಸಂಗಮದ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…