ಶರಣರೇ ಯಾವುದು ಕೆಳಮಟ್ಟದ್ದು ???
ಶರಣರೇ ಯಾವುದು ಕೆಳಮಟ್ಟದ್ದು???
ಲಿಂಗೈಕ್ಯ ಮಾತಾಜಿ ಎಷ್ಟೊ ವರ್ಷಗಳ ಕಾಲ ತಮ್ಮ ತ್ಯಾಗ ತಪಸ್ಸು ಹೋರಾಟ ಮಾಡಿ ಕಟ್ಟಿದಂತ ಬಸವಧರ್ಮ ಪೀಠವನ್ನು ಯಾರ ಕೈಗೆ ನಂಬಿಕೆ ಇಟ್ಟು ಹೋದರೋ ಅಂತವರೆ ಇವಾಗ ಆ ಮಹಾತಾಯಿಯನ್ನು *ಅಪರಾಧಿ* ಸ್ಥಾನದಲ್ಲಿ ನಿಲ್ಲಿಸಿ ಸಮಾಜದಲ್ಲಿ ಅವಮಾನ ಮಾಡಿಸಿ *ಗುರುದ್ರೋಹ* ಮಾಡಿ ತಾನು ಮೆರೆಯುತ್ತಿರುವುದು ತೀರಾ ಕೆಳಮಟ್ಟದ್ದು...
ಪೂಜ್ಯ ಮಾತಾಜಿಯವರು ಬಿತ್ತಿದ್ದ ಗಟ್ಟಿ ಕಾಳುಗಳು ನಿಷ್ಠಾವಂತ ಶರಣರಿಗೆ ಲಿಂಗದೇವ ವಚನಾಂಕಿತ ಬಳಸುವುದಾದರೆ ಬಸವ ಧರ್ಮ ಪೀಠದ ಕಾರ್ಯಕ್ರಮಕ್ಕೆ ಬರಬಾರದು ಎಂದು ಹೇಳಿದ್ದು ತೀರಾ ಕೆಳಮಟ್ಟದ್ದು...
ಪೂಜ್ಯ ಮಾತಾಜಿಯವರು ಯಾವ ಸಂಶೋಧನೆಗಾಗಿ ಇಡೀ ಜಗತ್ತನ್ನೇ ಎದುರು ಹಾಕಿಕೊಂಡಿದ್ದರೋ ಅದನ್ನು ಅವರು ಬರೆದಂತಹ *ಪುಸ್ತಕಗಳಿಂದ* ತೆಗೆದು ಪೂಜ್ಯ ಮಾತಾಜಿಯವರ ಸಂಶೋಧನೆಯನ್ನು ಇತಿಹಾಸದಿಂದ ಅಳಿಸಿ ಹಾಕುವ ಪ್ರಯತ್ನ ಮಾಡುತ್ತಿರುವುದು ತೀರಾ ಕೆಳಮಟ್ಟದ್ದು...
ಬಸವ ಧರ್ಮ ಪೀಠದ ವತಿಯಿಂದ ಆಗುತ್ತಿರುವ ಕಾರ್ಯಕ್ರಮಗಳಲ್ಲಿ ಗೇಟ್ ಮುಚ್ಚಿ ರಾಷ್ಟ್ರೀಯ ಬಸವದಳಕ್ಕೆ ಸಂಬಂಧವೇ ಇಲ್ಲದ ಹೊರಗಿನ ಅಸಂಸ್ಕಾರವಂತ ಬಾಡಿಗೆ ಜನರನ್ನು ಹಾಗೂ ಪೊಲೀಸರನ್ನು ಕರೆಸಿ ಕಾರ್ಯಕ್ರಮ ಮಾಡುತ್ತಿರುವುದು ತೀರಾ ಕೆಳಮಟ್ಟದ್ದು...
ಜ್ಯೋತಿಯನ್ನು ತೆಗೆದುಕೊಂಡು ಗಣಮೆಳಕ್ಕೆ ಬಂದಿದ್ದ ಜಂಗಮ ಮೂರ್ತಿಗಳನ್ನು ಹಾಗೂ ಶರಣರನ್ನು *ಆತಂಕವಾದಿಗಳ* ತರಹ ವರ್ತನೆ ಮಾಡಿದ್ದು ತೀರಾ ಕೆಳಮಟ್ಟದ್ದು...
ಪೂಜ್ಯ ಲಿಂಗೈಕ್ಯ ಮಾತಾಜಿಯವರನ್ನು ಬರೀ ಬಾಯಲ್ಲಿ ಹಾಡಿ ಹೊಗಳಿ ವರ್ಣನೆ ಮಾಡುತ್ತಾ, ಭಕ್ತರನ್ನು ಮರಳು ಮಾಡುತ್ತ ಅವರ ಆತ್ಮದಂತಿರುವ *ಸಂಶೋಧನೆ* ಮತ್ತು *ಸಾಹಿತ್ಯದ* ಕೊಲೆ ಮಾಡುತ್ತಿರುವುದು ತೀರಾ ಕೆಳಮಟ್ಟದ್ದು...
ಪದವಿಗಾಗಿ, ಅಧಿಕಾರಕ್ಕಾಗಿ, ಲಾಭಕ್ಕಾಗಿ ಹೀಗೆ ಅನೇಕ ಆಮಿಷಗಳಿಗಾಗಿ ಸ್ವಾರ್ಥಕ್ಕಾಗಿ ಇಂತಹ *ಗುರು ದ್ರೋಹದ* ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ತೀರಾ ಕೆಳಮಟ್ಟದ್ದು...
12ನೇ ಶತಮಾನದ ಬಸವಾದಿ ಶರಣರ ಸಂಕಲ್ಪದಂತೆ ಬಂದು ಲಿಂಗಾಯತ ಧರ್ಮದ ಪುನರುತ್ಥಾನಗೊಳಿಸಿ ಹೋದ ಗುರು ಬಸವತಂದೆಯ ಮಾನಸ ಪುತ್ರಿ *ಬಸವಾತ್ಮಜೆ* ಪೂಜ್ಯ ಲಿಂಗೈಕ್ಯ ಮಾತೆಮಹಾದೇವಿಯವರ *ಸಂಕಲ್ಪಗಳಿಗೆ* ವಿರುದ್ಧವಾಗಿ ನಡೆಯುತ್ತಿರುವುದು ತೀರಾ ಕೆಳಮಟ್ಟದ್ದು...
~ಸಿದ್ಧವೀರ ಸಂಗಮದ

ಬಹಳ ಅದ್ಭುತವಾದ ವಿಚಾರ ಶರಣರೆ.
ಪ್ರತ್ಯುತ್ತರಅಳಿಸಿ