ಪೂಜ್ಯ ಶ್ರೀ ಗುರು ಹೇಮರೆಡ್ಡಿ ಮಲ್ಲಮ್ಮನವರು


ನಮ್ಮ ಭಾರತದ 🇮🇳 ನೆಲದಲ್ಲಿ _ವ್ಯವಸಾಯ ಮತ್ತು ಹೈನುಗಾರಿಕೆಯಲ್ಲಿ_ ಮಹಿಳೆಯರ ಕೊಡುಗೆ ಬಹುಮುಖ್ಯವಾದುದು ಅದೇ ರೀತಿ ಆಧ್ಯಾತ್ಮಿಕ ಕ್ಷೇತ್ರದಲ್ಲಿಯೂ ಮಹಿಳೆಯರ ಕೊಡುಗೆ ಅಪಾರ.

ಬಾಲ್ಯದಿಂದಲೂ ನಿತ್ಯ ಬೆಳಿಗ್ಗೆ _ಇಷ್ಟಲಿಂಗ ಯೋಗವನ್ನು ಮಾಡುತ್ತಾ ತನು-ಮನ-ಭಾವದಲ್ಲಿ  ಗುರು ಬಸವಣ್ಣನವರ ಸ್ಮರಿಸುವ ಪೂಜ್ಯ ಶ್ರೀ ಗುರು ಹೇಮರೆಡ್ಡಿ ಮಲ್ಲಮ್ಮನವರ

ಜಯಂತಿ ಶುಭಾಶಯಗಳು (10th May 2022)

ಮನೆತನದ ಪವಿತ್ರ ಕಾಯಕ  ವ್ಯವಸಾಯ ಮತ್ತು ಹೈನುಗಾರಿಕೆಯಲ್ಲಿ ನಿತ್ಯ ತಮ್ಮನ್ನು ತೊಡಗಿಸಿಕೊಂಡು, ತನಗಿಂತ ಕಿರಿಯರಿಲ್ಲ ಎಂಬ ಧರ್ಮಗುರುವಿನ ನೆಡೆಯಂತೆ ವಿನಯವೇ ಜೀವನದ ಉಸಿರಾಗಿಕೂಂಡು, ಬಾಳಿನಲ್ಲಿ _ಸತ್ಯ, ನಿಷ್ಠೆ, ಪ್ರಾಮಾಣಿಕತೆಯೇ ನಿತ್ಯ ನಿಯಮಗಳಾಗಿ_ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಗೈದ ಪೂಜ್ಯ ಶ್ರೀ ಗುರು ಹೇಮರೆಡ್ಡಿ ಮಲ್ಲಮ್ಮನವರು.

ಸಮುದ್ರದಲ್ಲಿ ನೆರೆ-ತೊರೆಗಳು ಇರುವ ಹಾಗೆ ಸಂಸಾರದಲ್ಲಿ ಬರುವ ಸುಖ-ದು:ಖಗಳ ಬಗ್ಗೆ ಸಮಾಧಾನವಾಗಿ ಲಿಂಗಚಿತ್ತದಿಂದ ಬಗೆಹರಿಸಿ ಸದಾ ಬಸವಾದಿ ಶರಣರಾದ ಗುಡ್ಡಾಪುರದ ದಾನಮ್ಮತಾಯಿ, ದಾಸೋಹ ಮೂರ್ತಿ ನೀಲಾಂಬಿಕಾತಾಯಿ, ವೀರಮಾತೆ ಅಕ್ಕನಾಗಲಾಂಬಿಕಾತಾಯಿ, ವೈರಾಗ್ಯನಿಧಿ ಅಕ್ಕಮಹಾದೇವಿ ತಾಯಿಯವರು ಜೀವನದ ಆದರ್ಶ ನೆನೆಸಿಕೊಂಡು ಸಮಾನತೆ, ಶಿಕ್ಷಣ, ದಾಸೋಹ, ಅನುಭವಗಳಿಂದ _ಧರ್ಮಗುರು ಬಸವಣ್ಣನವರ ವಚನಗಳನ್ನು_ ಪ್ರಚಾರ ಮಾಡಿದ ಮಹಾಯೋಗಿನಿ ಪೂಜ್ಯ ಶ್ರೀ ಹೇಮರೆಡ್ಡಿ ಮಲ್ಲಮ್ಮನವರು.

ಇವರ ಏಕದೇವೋಪಾಸನೆಯ (ಇಷ್ಟಲಿಂಗದಲ್ಲಿ) ಭಕ್ತಿ, ಲಿಂಗಾಂಗಯೋಗ, ಅನುಭವ ಮತ್ತು ಚಿಂತನೆಗಳಿಂದ ಸುತ್ತ ಮುತ್ತಲಿನ ಹಳ್ಳಿಗಳಿಂದ ಜನರು ಇವರಿಂದ ಪ್ರಭಾವಿತರಾಗಿ ಇವರಿಂದ ಇಷ್ಟಲಿಂಗ ದೀಕ್ಷೆಯನ್ನು ಹಾಗೂ ಲಿಂಗಾಂಗಯೋಗದ ತರಬೇತಿ, ಮಾರ್ಗದರ್ಶನ ಮತ್ತು ವಚನ ಸಾಹಿತ್ಯವನ್ನು ಪಡೆದುಕೊಂಡು  ಹೋಗಲು ಭಕ್ತಿ ಸಂಭ್ರಮದಿಂದ ಬರುತ್ತಿದ್ದರು. 

ಹೇಮರೆಡ್ಡಿ ಮಲ್ಲಮ್ಮತಾಯಿಯ ದಿವ್ಯ ಕೃಪೆ, ಕರುಣೆಯಿಂದ ಮೈದುನನ ಜೀವನದಲ್ಲಿ ಬದಲಾವಣೆ ಆಗಿ  ಮೈದುನ ವೇಮನ ಮಹಾಯೋಗಿಯಾಗಿ ಲಿಂಗಾಂಗಯೋಗ ಸಿದ್ಧಿ ಪಡೆದುಕೊಂಡು ಹಲವಾರು ವಚನಗಳನ್ನು ರಚಿಸಿದ್ದಾರೆ.

ಶ್ರೀ ಗುರು ಹೇಮರೆಡ್ಡಿ ಮಲ್ಲಮ್ಮನವರು ಜೀವನದ ಸಂದೇಶ

  • ನಿತ್ಯ ಇಷ್ಟಲಿಂಗ ಪೂಜೆ (ಲಿಂಗಾಂಗಯೋಗ) ಮಾಡುವುದು_
  • ಧರ್ಮಗುರು ಬಸವಣ್ಣನವರ ವಚನಗಳನ್ನು ಓದುವುದು_
  • ಕಾಯಕ-ದಾಸೋಹ ತತ್ವ ಪಾಲಿಸುವುದು_
  • ಎಷ್ಟೇ ಕಷ್ಟ ಬಂದರೂ ಸಮಾಧಾನ ಚಿತ್ತದಿಂದ ಬಗೆಹರಿಸಿ ಶರಣು ಜೀವನದಲ್ಲಿ ಸಾಗುವುದು_.
  • ಸಂಸಾರದಲ್ಲಿ ಇದ್ದು ಪಾರಮಾರ್ಥಿಕ ಪಥವಿಡಿದು ಬಸವಾದಿ ಶರಣರಂತೆ ಸಾಗಬಹುದು_
  • ನಿತ್ಯ ಅನುಭವ ಮಾಡುವುದು_
  • ಧೃತಿಗೆಡದೆ ಧೈರ್ಯದಿಂದ  ಬದುಕು ಎದುರಿಸಬೇಕು_
  • ಪುರುಷನಿರಲಿ ಮಹಿಳೆಯರಿರಲಿ ಭಕ್ತಿಯೆಂಬ ಸಾಧನೆ ಭಕ್ತಸ್ಥಲದಿಂದ ಐಕ್ಯಸ್ಥಲದವರೆಗೆ ಸಾಗಿಸುತ್ತದೆ_.

14ನೇ ಶತಮಾನದ ಅಂತ್ಯ -15 ನೇ ಶತಮಾನದ ಆದಿಯಲ್ಲಿ ನಮ್ಮ ನಾಡಿನಲ್ಲಿ ಜನಿಸಿ ಮಾರ್ಗದರ್ಶನ ಮಾಡಿದ್ದಾರೆ. 

ಶ್ರೀ ಗುರು ಹೇಮರೆಡ್ಡಿ ಮಲ್ಲಮ್ಮನವರ ಬಗ್ಗೆ ಶರಣ. ಶಿಶುನಾಳ ಶರೀಫರು  ಹೆಣೆದಿರುವ ವಿಶಿಷ್ಟ ಗೀತೆಯೆಂದರೆ-

*ಹೇಮರೆಡ್ಡಿ ಮಲ್ಲಮ್ಮ ರೆಡ್ಡಿಕುಲಧರ್ಮ ಉದ್ಧಾರ ಮಾಡಿದೆಯಮ್ಮಾ || ಪ ||*..........

ಅದೆ ರೀತಿ ಜನಪದರು ದಾಖಲಿಸಿದ್ದಾರೆ .


ಮನುಕುಲದ ಇತಿಹಾಸದಲ್ಲೇ ಇಡೀ ಸ್ತ್ರೀ ಕುಲಕ್ಕೆ ಮಾದರಿಯಾಗಿರುವಂತೆ ವ್ಯಕ್ತಿತ್ವವನ್ನು ರೂಪಿಸಿಕೊಂಡು ಕೌಟುಂಬಿಕ ಸಂಕಷ್ಟಗಳನ್ನು ಮೆಟ್ಟಿ ನಿಂತು ಸಾಮಾಜಿಕ ಚಿಂತನೆಯಲ್ಲಿ ಬದುಕಿನ ಆದರ್ಶ ಮೌಲ್ಯಗಳನ್ನು ರೂಢಿಸಿಕೊಂಡು ಲಿಂಗಾಯತ ಧರ್ಮದ ಧಾರ್ಮಿಕ ಸಾಧನೆಗೈದ ಮಹಾಶರಣೆ ಹೇಮರೆಡ್ಡಿ ಮಲ್ಲಮ್ಮನವರು ನಮ್ಮ -ನಿಮ್ಮೆಲ್ಲರಿಗೂ ಆದರ್ಶ ಇವರ ಆಶೀರ್ವಾದ ಸದಾ ಇರಲಿ ಎಂದು ಪ್ರಾರ್ಥಿಸುತ್ತ.

ಪೂಜ್ಯ ಶ್ರೀ ಗುರು ಹೇಮರೆಡ್ಡಿ ಮಲ್ಲಮ್ಮನವರ

ಜಯಂತಿ ಶುಭಾಶಯಗಳು (10th May 2022)

✒️

(ಪೂಜ್ಯ ಶ್ರೀ ಮಹಾಜಗದ್ಗುರು  ಮಾತೆಮಹಾದೇವಿತಾಯಿಯವರ ಪ್ರವಚನದ ಸಂಗ್ರಹ)

ಸಂಗ್ರಹ

ಶ್ರೀಶೈಲ ಮಲ್ಲಪ್ಪ ತುಂಗಳದ, ಅಮೀನಗಡ (ಹುಬ್ಬಳ್ಳಿ)

+91 92428 57468












ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…