ನಮ್ಮ ಶಿಶ್ಯರು ನನ್ನ ನಂತರ ಮುಂದುವರೆಸುತ್ತಾರೆ...

ನಾನು ಹೊದರೆನಂತೆ, ನಮ್ಮ ಶಿಶ್ಯರುಗಳು ಅನೇಕರು ಇದ್ದಾರೆ, ಪೂಜ್ಯ ಅಪ್ಪಾಜಿಯವರ ಸಂಕಲ್ಪವನ್ನು ಹೇಗೆ ನಾವು ಒಂದೊಂದಾಗಿ ಪೂರ್ತಿ ಮಾಡುತ್ತಿದ್ದೆಯೋ ಹಾಗೆ ನಮ್ಮ ಶಿಶ್ಯರು ನನ್ನ ನಂತರ ಮುಂದುವರೆಸುತ್ತಾರೆ...

- ಲಿಂ ಮಾತಾಜಿ.


ಇಚ್ಛಾ  ಪತ್ರ


ನಮ್ಮ ಗುರುಬಸವಣ್ಣನವರ 108 ಅಡಿ ಎತ್ತರದ ಭವ್ಯ ಮೂರ್ತಿ ಎಂದು ಗರ್ವದಿಂದ ಹೆಳುತ್ತೆವೆ.....ಇದರ ಹಿಂದಿನ ಸಂಕಲ್ಪ ಹಾಗು ಆ ಸಂಕಲ್ಪಕ್ಕೆ ಎದುರಾದ ಅನೆಕ‌ ತೊಂದರೆಗಳಲ್ಲಿ ಒಂದನ್ನು ಇಲ್ಲಿ ಲಿಂ ಮಾತಾಜಿಯವರು ಉಲ್ಲೆಖ ಮಾಡಿದ್ದಾರೆ...


ಅಂದು ಮಾತಾಜಿಯವರು ತಮ್ಮ ದೃಡ ಸಂಕಲ್ಪದಿಂದ ಇಟ್ಟ ಹೆಜ್ಜೆ ಹಿಂದಕ್ಕೆ ತೆಗೆದುಕೊಂಡಿದ್ದರೆ.. ! ಗುರು ಬಸವಣ್ಣನವರ ಕಾರ್ಯಸ್ಥಳ ವಾಗಿದ್ದ ಬಸವಕಲ್ಯಾಣ ಈ ಎತ್ತರದ ಖ್ಯಾತಿ ಪಡೆಯುತ್ತಿರಲಿಲ್ಲಾ.


ಕೆಲವು ಮಹತ್ವಪೂರ್ಣ Pointsಗಳನ್ನು ಗಮನಿಸಿ.


Point 1. 

ತಮ್ಮ ದೃಢ ಸಂಕಲ್ಪದಿಂದ *ಗುರು ಬಸವಣ್ಣನವರ ಕಾರ್ಯಸ್ಥಳ ವಾಗಿದ್ದ ಬಸವಕಲ್ಯಾಣ* ವನ್ನು ಸಮಾಜದಲ್ಲಿ ಗುರುತಿಸಿ, ಜಾಗ್ರತಿಯನ್ನು ಮುಡಿಸಿದ್ದಾರೆ.


Point 2.

ಅಂದು (ಗುರು ಬಸವಣ್ಣನವರ ಪುತ್ತಳಿ ನಿರ್ಮಾಣಕಿಂತ ಮೊದಲು) ಬಸವಕಲ್ಯಾಣದ ಜನರು  ಮನೆ ಮೆನೆಗೆ ಲಾರಿ (Lorry) ಯನ್ನು ಹೊಂದಿದ್ದಕ್ಕೆ famous ಆಗಿತ್ತು , ಇದನ್ನು ಬದಲಾಯಿಸಿ ಒಂದು Tourist ಸ್ಥಳವಾಗಿ ಪರಿವರ್ತಿಸಿದವರು ಲಿಂ ಮಾತಾಜಿಯವರು.


Point 3: 

ಅಂದು ಮಾತಾಜಿಯವರು  ಇಟ್ಟ ಹೆಜ್ಜೆ ಹಿಂತೆಯದೆ ಗುರು ಬಸವಣ್ಣನವರ ಭವ್ಯ ಮೂರ್ತಿ ನಿರ್ಮಾಣಮಾಡಿ ಇಡಿ ದೆಶವನ್ನು ಕಲ್ಯಾಣದ ಕಡೆಗೆ ನೊಡುವಂತೆ ಮಾಡಿದರು ಹಾಗು *ಇಂದು ಸರಕಾರದಿಂದ ಕೊಟಿಗಟ್ಟಲೆ ಹಣ ವೆಚ್ಚಮಾಡಿ ಅನುಭವ ಮಂಟಪ ನಿರ್ಮಾಣ ಮಾಡಲು ಒಂದು ಕಾರಣ ಲಿಂ ಮಾತಾಜಿಯವರು*.


Point 4

ಅಂದು ಸರ್ಕಾರದ *ಪೊಲಿಸರ ಸರ್ಪಗಾವಲಿನಲ್ಲಿ* ಪ್ರಥಮ ಕಲ್ಯಾಣ ಪರ್ವ ಎಶಶ್ವಿಯಾಗಿ ನಡೆಸಿದರು ಇದು ಒಂದು ಐತಿಹಾಸಿಕ ದಾಖಲೆಯಂದು ಕರೆದರು ತಪ್ಪಾಗಲಾರದು.


Point 5

*ಕರ್ನಾಟಕದ* ಶಾಲಾ ಮಕ್ಕಳ *ಶೈಕ್ಷಣಿಕ ಪ್ರವಾಸದ* ಸ್ಥಳಗಳ ಪಟ್ಟಿಯಲ್ಲಿ ಇಂದು ಬಸವಕಲ್ಯಾಣದ ಬ್ರಹತ್ತ್ ಗುರು ಬಸವಣ್ಣನವರ ಮೂರ್ತಿಯನ್ನು ಹೊಂದಿದ್ದ ಬಸವಕಲ್ಯಾಣ ಒಂದು ಸ್ಥಳವಾಗಿದ್ದೆ.


Point 6

ಲಿಂ ಮಾತಾಜಿಯವರಿಗೆ *ತತ್ವಕಿಂತಲು ತಮ್ಮ ಹೊಗಳಿಕೆ ಎಂದು ಮುಖ್ಯವಾಗಿರಲಿಲ್ಲಾ* ಹಾಗಾಗಿಯೆ ಅವರು ಲಿಂಗಾಯತ ಧರ್ಮಗುರು ಬಸವಣ್ಣನವರು, ಧರ್ಮ ಕ್ಷೇತ್ರ ಕೊಡಲಸಂಗಮ, *ಶರಣ ಭೂಮಿ ಬಸವಕಲ್ಯಾಣ*, ಲಿಂಗಾಯತರು ಎಕದೇವೊಪಾಸಕರು ಎಂದು ಹೆಳಿ ಹೆಳಿ ಜನರಲ್ಲಿ ಹಾಗು ಲಿಂಗಾಯತರಲ್ಲಿ ಜಾಗ್ರತಿಯನ್ನು ಮೂಡಿಸಿದರು, ಇದರ Result ಇಂದು ನಿವು ಸಮಾಜದಲ್ಲಿ ನೊಡಬಹುದು.


ಇನ್ನು ಹಲವಾರು pointsಗಳನ್ನು ಹೆಳಬಹುದು, ಅವರ ಜಿವನವೆ ಒಂದು ಸಾಧನೆಗಳ ಸರಪಳಿ ಹಾಗು ಪ್ರತಿ ಸಾಧನೆಯಲ್ಲಿ ಹಲವಾರು ತೊಂದರೆಗಳನ್ನು ಎದರುಸಿದ್ದಾರೆ, ತಮ್ಮ ಸಧಾನೆಗಳ ಪಟ್ಟಿಯಲ್ಲಿ ಪ್ರತಿಯೊಂದು ದಾಖಲೆಯಾಗಿವೆ.


*ಲಿಂಗಾಯತರಾದವರು ತಿಳಿದು ಕೊಳ್ಳಬೆಕಾದ ಮಹತ್ವದ ವಿಷಯ*


ಲಿಂ ಮಾತಾಜಿಯವರು ತಮ್ಮ ಬದುಕಿನೊದ್ದಕ್ಕು ತತ್ವಕ್ಕಾಗಿ ಹೆಜ್ಜೆಯನ್ನು ಇಟ್ಟಿ ಮುಂದೆ ಸಾಗಿದ್ದಾರೆ ಲಿಂಗಾಯತರನ್ನು ಜಾಗ್ರತರನ್ನಾಗಿ ಮಾಡಿದ್ದಾರೆ ಹಾಗು ಇಟ್ಟ ಹೆಜ್ಜೆ ಯಾವುದೆ ಕಾರಣಕ್ಕು ಹಿಂದಕ್ಕೆ ತೆಗೆದುಕೊಂಡವರಲ್ಲಾ.


1%

ಅಪ್ಪಾಜಿ ಹಾಗು ಲಿಂ ಮಾತಾಜಿಯವರು ಎದುರಿಸಿದ ತೊಂದರೆಯ 1% ಭಾಗದ ತೊಂದರೆಯು ಬೆರೆಯಾರು ಎದುರಿಸಿಲ್ಲಾ.


ಹೆಳುವ ಉದ್ದೆಶವೆನೆಂದರೆ ಇಂದು ನಿಮ್ಮ ಸುತ್ತಮುತ್ತ ನಿವು ಕೆಳುತ್ತಿರುವ ಶಬ್ದಗಳಲ್ಲಿ ಒಂದು ಶಬ್ದಗಳು *ದುರುದ್ದೇಶ ಹೊಂದಿದ ಜನರಿಗೆ/ಶರಣರು ಪ್ರವೆಶವಿಲ್ಲಾ* ಹಾಗು *ಕಾರ್ಯವನ್ನು ಕೆಡಿಸುವ ಉದ್ದೇಶ ಇಟ್ಟಿಕೊಂಡಿದ್ದಾರೆ* ಇಂಥಹ ಮಾತುಗಳನ್ನು ಕೆಳಿ, ಮೆಲೆ ನಮೊದಿಸಿದಂಥಹ Points ಗಳನ್ನು ಗಮನಕ್ಕೆ ತೆಗೆದು ಕೊಂಡರೆ *ನಗು ಬರುತ್ತೆ* ಇದು ಅನುಭವಿಗಳಿಂದ ಇಂಥಹ ಮಾತು ಬರಲು ಸಾಧ್ಯವಿಲ್ಲ, ಒಂದುವೆಳೆ ಅಂಥಹ ಉದ್ದೆಶಹೊಂದಿ ಕಾರ್ಯಕ್ರಮಕ್ಕೆ ಆಗಮಿಸಿದರೆ, ತೊಂದರೆ ಕೊಟ್ಟರೆ ಬಕ್ತರು ಸುಮ್ಮನಿರುವರೆ ??? ಅಕ್ಷಪಣೆ ಮಾಡೆ ಮಾಡುತ್ತಾರೆ ಆ ಶಕ್ತಿ ಲಿಂ ಮಾತಾಜಿಯವರು ಶರಣರಲ್ಲಿ *ಗಣಚಾರ* ಎಂದೊ ಅಳವಡಿಸಿದ್ದಾರೆ.


ಶರಣರಲ್ಲಿ ಕಳಕಳಿಯ ಮನವಿ ಎಂಥಹ ಪ್ರಸಂಗ ಒದಗಿಬಂದರು *ಅಪ್ಪಾಜಿ ಹಾಗು ಮಾತಾಜಿಯವರ ನಿರ್ಮಿಸಿದಂಥಹ ಕಾರ್ಯಾಕ್ರಮಗಳು ಸೊರ್ಯ ಚಂದ್ರ ಇರುವವರೆಗೆ ನೆಡೆಸಿಕೊಂಡು ಹೊಗಬೆಕು ಎಂದು ಕಳಕಳಿಯ ಮನವಿ* 🙏🏼


ಶರಣರೆ ಗಮನಿಸಿ 

ಲಿಂ ಮಾತಾಜಿ ಹಾಗು ಅಪ್ಪಾಜಿಯರ ತಿಳಿಸಿಕೊಟ್ಟ ತತ್ವಗಳನ್ನು ನಾಶ ಮಾಡುವ ಉದ್ದೆಶ ಹೊಂದಿರುವ ಪದಾಧಿಕಾರಿಗಳನ್ನು/ಜನರನ್ನು ಅವರ ನಡುವಳಿಕೆಯಿಂದಲೆ  ಅವರನ್ನು ಗುರುತಿಸಿ, ಪ್ರಶ್ನಿಸದೆ ಬಿಡಬೆಡಿ.🙏🏼


✍🏼 ವಿಕೋ

ಕಾಮೆಂಟ್‌ಗಳು

  1. ಕೆಲವು ದಿನಗಳ ಹಿಂದೆ ನಾನು ಮನೆಯಲ್ಲಿದ್ದ ಹಳೆಯ ಕಲ್ಯಾಣ ಕಿರಣಗಳನ್ನು ಒಂದು ಕಡೆ ಜೋಡಿಸುತ್ತ ಕೂತಿದ್ದೆ. ಆವಾಗ ಮುಖ ಪುಟ ಹರಿದುಹೋಗಿದ್ದ ಒಂದು ಕಲ್ಯಾಣ ಕಿರಣ ನನ್ನ ಗಮನ ಸೆಳೆಯಿತು. ಅದನ್ನು ತೆಗೆದು ನೋಡಿದಾಗ ಅದು 2002 ಜೂನ ತಿಂಗಳದ್ದು. ಪೂಜ್ಯ ಲಿಂಗೈಕ್ಯ ಮಾತೆ ಮಹಾದೇವಿಯವರು ಮೊದಲನೆಯ ಕಲ್ಯಾಣ ಪರ್ವದ ಸಮಯದಲ್ಲಿ ಆದ ಅನುಭವಗಳನ್ನು ಲೇಖನಗಳ ಮೂಲಕ ಅದರಲ್ಲಿ ಹೇಳಿಕೊಂಡಿದ್ದಾರೆ. ನಾನು ಕೂಡ ಆ ಕಲ್ಯಾಣಪರ್ವದಲ್ಲಿ ಭಾಗವಹಿಸಿ ಪೋಲಿಸ್ ದೌರ್ಜನ್ಯವನ್ನು ನನ್ನ ಕಣ್ಣಾರೆ ನೋಡಿದ್ದೇ. ಅದರಲ್ಲಿ ಪೂಜ್ಯ ಮಾತಾಜಿಯವರು ಬರೆದ *ಇಚ್ಛಾಪತ್ರ* ಓದಿ ಅದನ್ನು ವಾಟ್ಸಾಪ್ ಗ್ರೂಪ್ ಗಳಲ್ಲಿ ಹಾಕಿದ್ದೆ.

    ಇದನ್ನು ಓದಿ ಓರ್ವ (ಅಪರಿಚಿತ) ಶರಣೆಯೊಬ್ಬರು ನನ್ನ ಮೊಬೈಲ್ ಗೆ ಕರೆ ಮಾಡಿದ್ರು. ಅವರು ಆಡಿದ ಮಾತುಗಳು ಈ ರೀತಿ ...
    (ಅಣ್ಣವ್ರೆ, ಮಾತಾಜಿಯವರ ಈ ಇಚ್ಛಾಪತ್ರ ಓದಿ ಬಹಳ ಮನಸ್ಸಿಗೆ ನೋವಾಯ್ತು. ಆ ತಾಯಿಯ ಹೃದಯದಲ್ಲಿ ಇಷ್ಟೊಂದು ಕಷ್ಟ ನೋವುಗಳನ್ನು ಇಟ್ಟುಕೊಂಡಿದ್ದರು ಕೂಡ ಭಕ್ತರೆದುರು ಎಷ್ಟು ಸಮಾಧಾನಿಯಾಗಿ, ಹಸನ್ಮುಖಿಯಾಗಿ ಇರುತ್ತಿದ್ರು. "ನನ್ನ ನಂತರ ನನ್ನ ಶಿಷ್ಯರು ಮುಂದುವರಿಸಿಕೊಂಡು ಹೋಗುತ್ತಾರೆ" ಎಂದು ಮಾತಾಜಿ ಹೇಳಿರುವುದನ್ನು ನೋಡಿದ್ರೆ, ನಮ್ಮ ಈಗಿನ ಪೀಠಾಧ್ಯಕ್ಷರು, ಜಂಗಮಮೂರ್ತಿಗಳು ಏಕೆ ಇದನ್ನು ಅರ್ಥಮಾಡಿಕೊಳ್ಳುತ್ತಿಲ್ಲ? ಏಕೆ ಮಾತಾಜಿಯವರ ಸಂಕಲ್ಪಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ? ಒಂದು ತಾಯಿ ತನ್ನ ಮಕ್ಕಳ ಮೇಲೆ ಎಷ್ಟು ನಂಬಿಕೆ ಇಡುತ್ತಾಳೆಯೋ, ಅಷ್ಟೇ ನಂಬಿಕೆಯನ್ನು ಮಾತಾಜಿಯವರು ತಾವು ಬೆಳೆಸಿದ ಜಂಗಮ ಮೂರ್ತಿಗಳು ಹಾಗೂ ಶರಣರ ಮೇಲೆ ಇಟ್ಟಿದ್ದರು. ಆದರೆ ಅವರ ನಂಬಿಕೆಯನ್ನು ಉಳಿಸುವ ಕೆಲಸ ನಾವು ಮಾಡುತ್ತಿಲ್ಲ. ಬಸವಧರ್ಮ ಪೀಠದಲ್ಲಿ ಇತ್ತೀಚಿಗೆ ನಡೆಯುತ್ತಿರುವುದನ್ನು ನೋಡಿ ನನ್ನಂತೆ ಅನೇಕ ಶರಣರು ದುಃಖದಲ್ಲಿ ಇದ್ದಿವಿ, ಏನು ಮಾಡಬೇಕು ಅಂತ ಗೊತ್ತಾಗ್ತಾ ಇಲ್ಲ.

    ಏನೇ ಆಗಲಿ ಪೂಜ್ಯ ಮಾತಾಜಿಯವರು ಹಾಕಿಕೊಟ್ಟ ಕಾರ್ಯಗಳು ಎಂದೂ ಕೂಡ ನಿಲ್ಲಬಾರದು ಮತ್ತು ಅವರ ಹಾಕಿಕೊಟ್ಟ ಮಾರ್ಗದಲ್ಲಿಯೇ ನಾವೆಲ್ಲ ನಡೆಯಬೇಕು)

    ಆ ಶರಣೆಯರ ಈ ಮಾತುಗಳನ್ನು ಕೇಳಿ ನನಗೆ ಅನಿಸಿತು ಲಿಂಗೈಕ್ಯ ಪೂಜ್ಯ ಮಾತಾಜಿಯವರ ಸಂಕಲ್ಪವನ್ನು ಮುಂದುವರಿಸಿಕೊಂಡು ಹೋಗಲು ಸಾವಿರಾರು ಶರಣರು ಸಿದ್ಧರಿದ್ದಾರೆ ಎಂಬುದು....

    🙏🙏🙏
    - ಸಿದ್ಧವೀರ ಸಂಗಮದ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…