ಇಚ್ಛಾ ಪತ್ರ

 ಇಚ್ಛಾ ಪತ್ರ


ಕೆಲವು ದಿನಗಳ ಹಿಂದೆ ನಾನು ಮನೆಯಲ್ಲಿದ್ದ ಹಳೆಯ ಕಲ್ಯಾಣ ಕಿರಣಗಳನ್ನು ಒಂದು ಕಡೆ ಜೋಡಿಸುತ್ತ ಕೂತಿದ್ದೆ. ಆವಾಗ ಮುಖ ಪುಟ ಹರಿದುಹೋಗಿದ್ದ  ಒಂದು ಕಲ್ಯಾಣ ಕಿರಣ ನನ್ನ ಗಮನ ಸೆಳೆಯಿತು. ಅದನ್ನು ತೆಗೆದು ನೋಡಿದಾಗ ಅದು 2002 ಜೂನ ತಿಂಗಳದ್ದು. ಪೂಜ್ಯ ಲಿಂಗೈಕ್ಯ ಮಾತೆ ಮಹಾದೇವಿಯವರು ಮೊದಲನೆಯ ಕಲ್ಯಾಣ ಪರ್ವದ ಸಮಯದಲ್ಲಿ ಆದ ಅನುಭವಗಳನ್ನು ಲೇಖನಗಳ ಮೂಲಕ ಅದರಲ್ಲಿ ಹೇಳಿಕೊಂಡಿದ್ದಾರೆ. ನಾನು ಕೂಡ ಆ ಕಲ್ಯಾಣಪರ್ವದಲ್ಲಿ ಭಾಗವಹಿಸಿ ಪೋಲಿಸ್ ದೌರ್ಜನ್ಯವನ್ನು ನನ್ನ ಕಣ್ಣಾರೆ ನೋಡಿದ್ದೇ. ಅದರಲ್ಲಿ ಪೂಜ್ಯ ಮಾತಾಜಿಯವರು ಬರೆದ *ಇಚ್ಛಾಪತ್ರ* ಓದಿ ಅದನ್ನು ವಾಟ್ಸಾಪ್ ಗ್ರೂಪ್ ಗಳಲ್ಲಿ ಹಾಕಿದ್ದೆ.  


ಇದನ್ನು ಓದಿ ಓರ್ವ (ಅಪರಿಚಿತ) ಶರಣೆಯೊಬ್ಬರು ನನ್ನ ಮೊಬೈಲ್ ಗೆ ಕರೆ ಮಾಡಿದ್ರು. ಅವರು ಆಡಿದ ಮಾತುಗಳು ಈ ರೀತಿ ... 

(ಅಣ್ಣವ್ರೆ, ಮಾತಾಜಿಯವರ ಈ ಇಚ್ಛಾಪತ್ರ ಓದಿ ಬಹಳ ಮನಸ್ಸಿಗೆ ನೋವಾಯ್ತು. ಆ ತಾಯಿಯ ಹೃದಯದಲ್ಲಿ ಇಷ್ಟೊಂದು ಕಷ್ಟ ನೋವುಗಳನ್ನು ಇಟ್ಟುಕೊಂಡಿದ್ದರು ಕೂಡ ಭಕ್ತರೆದುರು ಎಷ್ಟು ಸಮಾಧಾನಿಯಾಗಿ, ಹಸನ್ಮುಖಿಯಾಗಿ ಇರುತ್ತಿದ್ರು. "ನನ್ನ ನಂತರ ನನ್ನ ಶಿಷ್ಯರು ಮುಂದುವರಿಸಿಕೊಂಡು ಹೋಗುತ್ತಾರೆ" ಎಂದು ಮಾತಾಜಿ ಹೇಳಿರುವುದನ್ನು ನೋಡಿದ್ರೆ, ನಮ್ಮ ಈಗಿನ ಪೀಠಾಧ್ಯಕ್ಷರು, ಜಂಗಮಮೂರ್ತಿಗಳು ಏಕೆ ಇದನ್ನು ಅರ್ಥಮಾಡಿಕೊಳ್ಳುತ್ತಿಲ್ಲ?  ಏಕೆ ಮಾತಾಜಿಯವರ ಸಂಕಲ್ಪಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ?  ಒಂದು ತಾಯಿ ತನ್ನ ಮಕ್ಕಳ ಮೇಲೆ ಎಷ್ಟು ನಂಬಿಕೆ ಇಡುತ್ತಾಳೆಯೋ, ಅಷ್ಟೇ ನಂಬಿಕೆಯನ್ನು ಮಾತಾಜಿಯವರು ತಾವು ಬೆಳೆಸಿದ ಜಂಗಮ ಮೂರ್ತಿಗಳು ಹಾಗೂ ಶರಣರ ಮೇಲೆ ಇಟ್ಟಿದ್ದರು. ಆದರೆ ಅವರ ನಂಬಿಕೆಯನ್ನು ಉಳಿಸುವ ಕೆಲಸ ನಾವು ಮಾಡುತ್ತಿಲ್ಲ. ಬಸವಧರ್ಮ ಪೀಠದಲ್ಲಿ ಇತ್ತೀಚಿಗೆ ನಡೆಯುತ್ತಿರುವುದನ್ನು ನೋಡಿ ನನ್ನಂತೆ ಅನೇಕ ಶರಣರು  ದುಃಖದಲ್ಲಿ ಇದ್ದಿವಿ, ಏನು ಮಾಡಬೇಕು ಅಂತ ಗೊತ್ತಾಗ್ತಾ ಇಲ್ಲ. 


ಏನೇ ಆಗಲಿ ಪೂಜ್ಯ ಮಾತಾಜಿಯವರು ಹಾಕಿಕೊಟ್ಟ ಕಾರ್ಯಗಳು ಎಂದೂ ಕೂಡ ನಿಲ್ಲಬಾರದು ಮತ್ತು ಅವರ ಹಾಕಿಕೊಟ್ಟ ಮಾರ್ಗದಲ್ಲಿಯೇ ನಾವೆಲ್ಲ ನಡೆಯಬೇಕು)


ಆ ಶರಣೆಯರ ಈ ಮಾತುಗಳನ್ನು ಕೇಳಿ ನನಗೆ ಅನಿಸಿತು ಲಿಂಗೈಕ್ಯ ಪೂಜ್ಯ ಮಾತಾಜಿಯವರ ಸಂಕಲ್ಪವನ್ನು ಮುಂದುವರಿಸಿಕೊಂಡು ಹೋಗಲು ಸಾವಿರಾರು ಶರಣರು ಸಿದ್ಧರಿದ್ದಾರೆ ಎಂಬುದು....


🙏🙏🙏

- ಸಿದ್ಧವೀರ ಸಂಗಮದ








ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…