ಶರಣ ಸಚ್ಚಿದಾನಂದನವರ ಮೇಲೆ ಹಲ್ಲೆ ಮಾಡುವುದೆಂದರೆ ಬಸವಾತ್ಮಜೆ ಮೇಲೆ ಹಲ್ಲೆ ಮಾಡಿದಂತೆ...



*ಶರಣ ಸಚ್ಚಿದಾನಂದನವರ ಮೇಲೆ ಹಲ್ಲೆ ಮಾಡುವುದೆಂದರೆ ಬಸವಾತ್ಮಜೆ ಮೇಲೆ ಹಲ್ಲೆ ಮಾಡಿದಂತೆ...*
ಶರಣ ಸಚ್ಚಿದಾನಂದ

ಹಲ್ಲೆ ನಡೆಯುವಾಗ ತೆದೆದ video clips




ವ್ಯಕ್ತಿಯನ್ನು ಕೊಲ್ಲಬಹುದೇ ಹೊರತು; ವ್ಯಕ್ತಿಯ ಸಂಶೋಧನೆಯನ್ನಲ್ಲ. ಎನ್ನುವ ಚಿಂತಕರ ಮಾತಿನಂತೆ  ಸಚ್ಚಿದಾನಂದ ಅವರ ಮೇಲೆ ಹಲ್ಲೆ ಮಾಡುವುದೆಂದರೆ, ಅವರೊಳಗಿನ ವಚನ ಸಾಹಿತ್ಯದ ಸಂಶೋಧನಾ ಮಹಾಜ್ಞಾನಕ್ಕೆ ಅಪಮಾನ ಮಾಡಿದಂತೆ, ಹಲ್ಲೆ ಮಾಡಿದಂತೆ ಹಲ್ಲೆಗೆ ಮುಂದಾದ ದುಷ್ಟಶಕ್ತಿಗಳ ನಡೆಯನ್ನು ವಿಚಾರವಾದಿಗಳಾದ ನಾವು ಉಗ್ರವಾಗಿ ಖಂಡಿಸುತ್ತೇವೆ.

ಅವರು ಬರೆಯುವ ಒಂದೊಂದು ಲೇಖನವೂ ಮೌಲ್ಯಗಳಿಂದ ಕೂಡಿವೆ. ವಚನ ಸಾಹಿತ್ಯದ ಸತ್ಯ ಸಂಶೋಧನೆಗಳೇ ಆಗಿವೆ. ನಮ್ಮೊಳಗಿನ ತಪ್ಪನ್ನು ತಿದ್ದಿಕೊಳ್ಳಲು ವಚನ ಸಾಹಿತ್ಯ ದಿವ್ಯ ಮಾರ್ಗದರ್ಶಿಯಾಗಿವೆ. ಮಾಡಿದ ತಪ್ಪನ್ನು ವಚನ ಸಾಹಿತ್ಯದ ಸಂವಿಧಾನದ ಆಶಯದಂತೆ ತಿದ್ದಿಕೊಂಡು ಮುನ್ನೆಡೆಯಬೇಕೇ ವಿನಾ, ಸಚ್ಚಿದಾನಂದ ಅವರ ಮೇಲೆ ಹಲ್ಲೆ ಮಾಡಿರುವುದು ಅಕ್ಷಮ್ಯ ಅಪರಾಧ. 

ಗೂಬೆ ಸೂರ್ಯನನ್ನು ನಿಂದಿಸಿದಂತೆ, ಕಾಗೆ ಚಂದ್ರಮನನ್ನು ನಿಂದಿಸಿದಂತೆ, ವಚನ ಸಾಹಿತ್ಯ ಅಧ್ಯಯನವಿರಲಾರದ ಅಂದ ಅಭಿಮಾನಿಗಳು ಸಚ್ಚಿದಾನಂದವರು ಬರೆದ ಸಂಸೋಧಿತ ವಿಚಾರಗಳನ್ನು ನಿಂದಿಸುವುದಲ್ಲದೆ ದೈಹಿಕ ಹಲ್ಲೆಗೆ ಮುಂದಾಗಿರುವುದು ಅವರ  ಬೌದ್ಧಿಕ ದಿವಾಳಿತನವು ಎತ್ತಿ ತೋರಿಸುತ್ತದೆ. 

ಬಸವಾತ್ಮಜೆಯ ಎಲ್ಲಾ ಆಶಯಗಳನ್ನು ಗಾಳಿಗೆ ತೂರಿ, ಅವರೆಲ್ಲ ಆಶಯಗಳ ವಿರುದ್ಧವಾಗಿ ಆಡಳಿತ ನಡೆಸುತ್ತಾ ದುರಹಂಕಾರ ಮೆರೆಯುತ್ತಿರುವುದು ಸರಿಯಲ್ಲ. ಕೊಡಲಿ ಕಾವು ತನ್ನ ಜಾತಿಯನ್ನೇ ನುಂಗಿದ ಹಾಗೆ, ನೀವು ಯಾರ ಮೇಲೆ ಹಲ್ಲೆ ಮಾಡುತ್ತಿರುವಿರಿ ಎಂಬ ಕನಿಷ್ಟ ಜ್ಞಾನವೂ ಇಲ್ಲವಾದರೆ ಹೇಗೆ?. ಬಸವಾತ್ಮಜೆ ಅವರು ಹಾಕಿಕೊಟ್ಟ ಸುಗಮ ದಾರಿಯನ್ನು ದುರ್ಗಮ ಮಾಡಿಕೊಂಡು ಭಕ್ತರ ಭಾವನೆಗಳಿಗೆ, ಜೀವನ ಪಣಕ್ಕಿಟ್ಟು ದುಡಿದ ಜಂಗಮರಿಗೆ  ಅಪಾರ ಹಾನಿಯುಂಟು ಮಾಡುವ ನೀಚ ಪ್ರವೃತ್ತಿ ಸಲ್ಲದು.

*ಶರಣ ಸಚ್ಚಿದಾನಂದನವರ ಮೇಲೆ ಹಲ್ಲೆ ಮಾಡುವುದೆಂದರೆ ಬಸವಾತ್ಮಜೆ ಮೇಲೆ ಹಲ್ಲೆ ಮಾಡಿದಂತೆ...* ಅದಕ್ಕೆ ತಕ್ಕ ಪರಿಣಾಮ ಅನುಭವಿಸುವರು. ಬಸವಾತ್ಮಜೆಯ ಆತ್ಮ ಎಲ್ಲವನೂ ನೋಡುತ್ತಿದೆ ಎಂಬುದು ಗಮನದಲ್ಲಿರಲಿ. ಬಸವಾತ್ಮಜೆಯ ನಿಷ್ಟೆಯ ಬಳಗ ಎದ್ದು ಕುಳಿತರೆ ತರಗೆಲೆಯಂತೆ ಹಾರುವ ಸಂದರ್ಭ ಬಂದೊದುಗುವುದು. 

ನಿಮ್ಮ ದುರಾಡಳಿತದವನ್ನು ಹೇಗಾದರೂ ಮಾಡಿಕೊಳ್ಳಿ ಆದರೆ ಜ್ಞಾನದ ಮೇಲೆ ಆಗುವ ಹಲ್ಲೆ ಸಹಿಸಲಾಗದು.... ಸಚ್ಚಿದಾನಂದ ಅವರ ಜೊತೆ ನಾವಿದ್ದೇವೆ... ನೀವು ನಿಮ್ಮ ಸತ್ಯವಾದ ನಡೆ-ನುಡಿ-ಬರಹ ಹೀಗೆ ಮುಂದುವರೆಯಲಿ..

*ಸಚ್ಚಿದಾನಂದ ಅವರ ಅಮರತ್ವದ ವಿಚಾರಗಳಿಗೆ ಜಯಜಯಕಾರ*

*"ವ್ಯಕ್ತಿಯನ್ನು ಕೊಲ್ಲಬಹುದೇ ವಿನಾ; ಸತ್ಯವನ್ನಲ್ಲ."*

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಕಲ್ಯಾಣ ಮಹಾಮನೆ; ಮಹಾಮಠ ಬಸವಕಲ್ಯಾಣ.

ಕಾಮೆಂಟ್‌ಗಳು

  1. 🙏🏻🙏🏻😰😰 ಅಣ್ಣಾವರೆ ಬೆಳಿಗ್ಗೆ ಬಸವಶ್ರೀ ಅಕ್ಕಾವರ ಬಾಯಿಂದ ಕೇಳಿದಾಗ ಹೊಟ್ಟೆಯಲ್ಲಿ ಅಗಾಧವಾದ ಸಂಕಟ ತಳಮಳ ಆಗಿತ್ತು.ವಿಶ್ವನಾಥ ಕೋರೆ ಅಣ್ಣ ಹಾಕಿದ ಲಿಂಕ್ ನಲ್ಲಿ ಕೂಡ ನೋಡಿ ಮತ್ತು ಈಗ ನಿಮ್ಮಿಂದ ಕೇಳಿದ ಮೇಲೆ ಅಪಾರವಾದ ನೋವು ದುಃಖ ಒತ್ತರಿಸಿ ಬಂತು.ಪಾಪಿಗಳು ಇನ್ನು ಎಷ್ಟು ಕುಕರ್ಮವ ಎಸಗಿ ಗುರು ಬಸವಣ್ಣನವರ ಅವಕೃಪೆಗೆ ಪಾತ್ರರಾಗಿ ನವೆನವೆದು ಹೋಗಲಿ.ಕೊಂಡಿಗಳ ಸಂತತಿಗೆ ಸಧ್ಯಕ್ಕೆ ಕೈ ಮೇಲಾಗಿರಬಹುದು. ಆದರೆ ಅದು ಅವರ ಅಳಿವಿಗೆ ಮುನ್ನುಡಿ 😰😰😰

    ಪ್ರತ್ಯುತ್ತರಅಳಿಸಿ
  2. ಸಚ್ಚಿದಾನಂದ ಅಣ್ಣಾವ್ರ ಮೇಲೆ ಹಲ್ಲೆ ಮಾಡಿದ್ದನ್ನು ಕೇಳಿ ಬಹಳ ನೋವಾಯಿತು. ದೈಹಿಕವಾಗಿ ಹಲ್ಲೆ ಮಾಡುವ ಸಂಸ್ಕೃತಿಯನ್ನು ಲಿಂ. ಪೂಜ್ಯ ಮಾತಾಜಿಯವರು ಎಂದೂ ಪೋಷಿಸಿಲ್ಲ. ಹಲ್ಲೆ ಮಾಡುವ ಸಂಸ್ಕೃತಿ ಈಗ ನೋಡಿ ಬಹಳ ಆಶ್ಚರ್ಯವಾಗುತ್ತಿದೆ.

    ಇಲ್ಲಿಗೆ ಸಾಕು....ನಮಗೆ ಯಾರ ಹಂಗೂ ಬೇಡ....ಇನ್ನು ಮುಂದೆ ಸ್ವತಂತ್ರವಾಗಿ ನಿಲ್ಲೋಣ, ಸಂಘಟಿತರಾಗಿ ನಮ್ಮ ಕೈಲಾದಷ್ಟು ಧರ್ಮ ಪ್ರಚಾರ ಮಾಡೋಣ.

    ಈ ಜಗಳಗಳಿಂದ ನಮ್ಮೆಲ್ಲರ ನೆಮ್ಮದಿ ಹಾಳಾಗುತ್ತದೆ. ಅವರಿಗೆ ಮನವರಿಕೆ ಆಗುವವರೆಗೆ ನಾವು ದೂರ ಇರುವುದೆ ಒಳಿತು. ಯಾರನ್ನೂ ವಿರೋಧಿಸುವುದು ಬೇಡ. ನಮ್ಮ ಪಾಡಿಗೆ ನಾವು, ನಮಗೆ ಸಂತೋಷ ಕೊಡುವ ಹಾಗೆ ಬಸವತತ್ವದಲ್ಲಿ ನಡೆಯೋಣ.

    Kiran Belladh

    ಪ್ರತ್ಯುತ್ತರಅಳಿಸಿ
  3. ಇವರು ದನಗಳು ಇದ್ದಾರೆ .ಇವರಿಗೆ ಬಂದ ಪರಿಸ್ಥಿತಿ ನಮಗೆ ಬರಬಹುದು ಈಗಲೇ ನಾವು ಹೋರಾಡ ಬೇಕು .ಇಲ್ಲ ಅಂದರೆ ತಮ್ಮ ಕುತಂತ್ರದಿಂದ ಒಬ್ಬರು ಆದಮೇಲೆ ಮತ್ತೊಬ್ಬರ ಸರಿದಿ ಬರುತ್ತದೆ. ಶರಣು ಶರಣಾರ್ಥಿ

    Satish Belagavi

    ಪ್ರತ್ಯುತ್ತರಅಳಿಸಿ
  4. ಏನಣ್ಣ ಇದು ಅನ್ಯಾಯ🤭😞 ಇವರದೆಲ್ಲಾ ಮಿತಿಮೀರಿ ಹೋಗ್ತಾ ಇದೆ .
    ಇತ್ತೀಚಿಗೆ ಬಂದು, ರಾಷ್ಟ್ರೀಯ ಬಸವದಳಕ್ಕೆ ಮೂರ್ನಾಲ್ಕು ವರ್ಷದಲ್ಲಿ ಇಷ್ಟೊಂದು ದಬ್ಬಾಳಿಕೆ ಮಾಡಿ ನಮ್ ಶರಣರ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಅಂತ ಅಂದ್ರೆ ಬಹಳ ಅನ್ಯಾಯ ಅಣ್ಣಾ ಇದು.
    ಸತ್ಯ ಹೇಳಿದ್ರೆ, ಸಹಿಸದವರು ಹೀಗೆಲ್ಲಾ ಅನಾಚಾರ ಮಾಡ್ತಾರೆ

    ಸಂಧ್ಯಾ ಗ

    ಪ್ರತ್ಯುತ್ತರಅಳಿಸಿ
  5. Samay samay ki baat hai .etne nishtawant Sharan sachidand Chatnali ji unke upar ess Tarah hamla karna galat hai ..baade loog choote logon pe haat nahi uthate. A bade logon koo shobha nahi deta . Bahot dukh ki baat hai 🙏🙏😔😔.sachidand Chatnali ji gyani hai pahelwan nahi🙏🙏

    ಪ್ರತ್ಯುತ್ತರಅಳಿಸಿ
  6. 👏👏👏ಪೂಜ್ಯ ಶ್ರೀ ಮಾಹಾಜದ್ಗುರು ಅಪ್ಪಾಜಿ ಮಾತಾಜಿಯವರ ಕಷ್ಟಪಟ್ಟು ಕಟ್ಟಿದರು ಬಸವ ತತ್ವದ ಪೀಠ ಮುಂದಿನ ದಿನಗಳಲ್ಲಿ ಅವನತಿಗೆ ಹೋಗೀ ನಿಲ್ಲಲಿದೆ ನನ್ನ ಪ್ರೀತಿಯ ಸೋಹದರನ ಮೆಲೆ ಹಲ್ಲೆ ಮಾಡಿಲರುವದು ನೋವಿನ ಸಂಗತಿ ಇಂತಹ ಗಲಬೇಗೆ ಅವಕಾಶವನ್ನು ಮಾಡಿಕೊಟ್ಟವರಿಗೆ ದಿಕ್ಕಾರ ದಿಕ್ಕಾರ ವೀರಲಿ

    Shodhraju

    ಪ್ರತ್ಯುತ್ತರಅಳಿಸಿ
  7. ಹೇಡಿಗಳಂತೆ ಒಬ್ಬ ವ್ಯಕ್ತಿಯ ಮೆಲೆ ಹಲ್ಲೆ ಮಾಡೊದು ಧರ್ಮಪೀಠಕ್ಕೆ ಅಪಮಾನ ಸತ್ಯ ಧರ್ಮಕ್ಕೆ ಎಂದು ಸೋಲಿಲ್ಲ ಇಡಿ ಲಿಂಗದೇವನ ಶಕ್ತಿ ನಿಮ್ಮೊಂದಿಗಿದೆ ಅಣ್ಣ

    ಜಗು ಗುಲಬರ್ಗಾ

    ಪ್ರತ್ಯುತ್ತರಅಳಿಸಿ
  8. ತುಂಬಾ ನೋವಿನ ಸಂಗತಿ ಶರಣ ಸಚ್ಚಿದಾನಂದ ಅವರ ಮೇಲಿನ ಹಲ್ಲೆ ಒಬ್ಬ ನಿಷ್ಠಾವಂತ ಬಸವ ತತ್ವದ ಪಾಲಕರ ಮೇಲೆ ಮಾಡಿದ ಹಲ್ಲೆ ಇದು ಅಕ್ಷಮ್ಯ ಅಪರಾಧ ಬಸವ ಪಥಿಕರ ಮೇಲೆ ಧರ್ಮ ನಿಷ್ಠರ ಮೇಲೆ ಲಿಂಗದೇವ ನಿಷ್ಠರ ಮೇಲೆ ಮಾಡಿದ ಅಲ್ಲೇ ಇದು ಅವರಿಗೆ ತಕ್ಕುದ ಮಾಡುವ ಲಿಂಗದೇವ ನಿಮ್ಮೊಂದಿಗೆ ನಾವಿದ್ದೇವೆ ಸಮಸ್ತ ಲಿಂಗದೇವ ನಿಷ್ಠರ ಶರಣರ ಶರಣರ ಗಣವಿದೆ ಶರಣಾಗತ ರಕ್ಷಕ ಲಿಂಗದೇವನಿದ್ದಾನೆ ಗುರು ಬಸವಣ್ಣನವರ ಶ್ರೀ ರಕ್ಷೆ ಇದೆ ತಾವು ಧೈರ್ಯವಾಗಿರಿ ಆ ಪಾಪಿಗಳಿಗೆ ಏನು ಮಾಡಲು ಸಾಧ್ಯವಿಲ್ಲ.

    ಜಗನ್ನಾಥ ಭೊ

    ಪ್ರತ್ಯುತ್ತರಅಳಿಸಿ
  9. ವಿನಾಶಕಾಲೇ ವಿಪರೀತ ಬುದ್ದಿ ಅವರ ಅವನತಿ ಸಮೀಪ ಬಂದಿದೆ ಅದಕ್ಕಾಗಿ ಕೇಟ್ಟ ಕೆಲಸ ಮಾಡುತ್ತಿದ್ದಾರೆ🙏

    Lalita J

    ಪ್ರತ್ಯುತ್ತರಅಳಿಸಿ
  10. ನಿಮ್ಮ. ಮೆಶೇಜ ನೋಡಿ ಮನಸ್ಸಿಗೆ ತುಂಬಾ ಬೇಜಾರವಾಗಿ ಬಸವ ಧಮ೯ಪೀಠ ಎತ್ತ. ಸಾಗಿದೆ ಅಂತಾ ಆತ್ಮನೊಯಿತಾ ಇದೆ ಶರಣ ಸಚ್ಛಿದಾನಂದ ಚಟ್ನಳ್ಳಿರವರ ಮೇಲೆ‌‌ಹಲ್ಲೆ ಮಾಡಿದ್ದು ಅಕ್ಷಮ್ಮೆ ಅಫರಾಧ ಸಚ್ಛಿದಾನಂದ ಶರಣರು ತುಂಬಾ ಒಳ್ಳೆಯವರು ಎಲ್ಲ ಶರಣರು ಕೂಡಿ ಒಂದು ಪರಿಹಾರಕಂಡುಕೊಳ್ಳಬೇಕು ಹಾಗೂ ಹಲ್ಲೇ ಮಾಡಿದವರಿಗೆ ಒಳ್ಳೆ ಬುದ್ಧಿ ಕರುಣಿಸಲಿ ಮೊದಲಿನ ಹಾಗೆಎಲ್ಲ ಶರಣರೂಒಂದಾಗಿ ಯಾವ‌ ತೊಂದರೆಗಳು ಬರದಂತೆ ನಮ್ಮ. ಬಸವ ಧಮ೯ಪೀಠ. ಮುನನ್ನಡೆಸಲಿ ಎಂದು ಸ್ರಷ್ಟಿ ಕತ೯ಪರಮಾತ್ಮ ಲಿಂಗದೇವರಲ್ಲಿ ಮತ್ತು ವಿಶ್ವಗುರುಬಸವಣ್ಣನವರಲ್ಲಿ ನನ್ನ. ಕಳಕಳಿಯ ಪ್ರಾಥ೯ನೆ ಶರಣುಶರಣಾಥಿ೯ಗಳು🙏🙏🙏

    ಮಲ್ಲಿಕಾರ್ಜುನ ಗುಲಬರ್ಗಾ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…