ಡಾ|| ಸಂಗಮೇಶ ಸೌದತ್ತೀಮಠ ಅವರಿಗೆ ಕಿವಿ ಮಾತು

 ಡಾ|| ಸಂಗಮೇಶ ಸೌದತ್ತೀಮಠ ಅವರಿಗೆ ಕಿವಿ ಮಾತು



ಕನ್ನಡದಲ್ಲಿರುವ ವಚನ ಸಾಹಿತ್ಯದ ಆಳವನ್ನು ಇನ್ನೂ ತಿಳಿದುಕೊಳ್ಳಲು ಸಾಧ್ಯವಾಗದವರು ನೀವು ಬಸವಾದಿ ಶರಣರ ಪರಂಪರೆಯ ಧರ್ಮದ ಕುರಿತು ಮಾತನಾಡಲು ಅನರ್ಹರು.

ದಯಮಾಡಿ ಏನೂ ಹೇಳದಿದ್ದರೂ ಪರವಾಗಿಲ್ಲ, ಸುಳ್ಳನ್ನು ಹೇಳಿ ನಿಮ್ಮನ್ನು ನೀವು ವಂಚಿಸಿಕೊಳ್ಳಬೇಡಿ.

ಲಿಂಗಾಯತರಿಗೂ ಅನ್ಯಧರ್ಮಿಯರಿಗೂ ಇರುವ ಒಂದು ವ್ಯತ್ಯಾಸ ಹೇಳಲು ಬಯಸುತ್ತೇನೆ. ನಿಮ್ಮ ಮನೆಯ ಹೊರಗೆ ಯಾರಾದರೂ ಬಂದು "ನಿಮ್ಮ ಅಜ್ಜಾ ಏನು ಮಾಡ್ತಾಯಿದ್ದಾರೆ ?" ಎಂದು ಕೇಳಿದರೆ ನಿಮ್ಮ ಮೊಮ್ಮಗನು ನನ್ನ ಅಜ್ಜ *ಲಿಂಗ ಪೂಜೆ ಮಾಡ್ಕೊಳ್ಳುತಿದ್ದಾರೆ ಎಂತಾನೇ ವಿನಃ ಮಾಡ್ತಾಯಿದಾರೆ* ಎನ್ನೋದಿಲ್ಲ.

ಇಡೀ ವಿಶ್ವದಲ್ಲಿಯೇ ಗುರು ಬಸವಣ್ಣ ನವರ ಕೊಡುಗೆ ಏನೆಂದರೆ ತನ್ನತಾನರಿದು ತಾನೇ ಪೂಜಗೈವುದು. ಇದು ಲಿಂಗಾಯತ ಧರ್ಮದ ಸಂಸ್ಕೃತಿ. ಇಂಥಾ ಸಂಸ್ಕೃತಿಯ ನೀವು ಹೇಳುತ್ತಿರುವ ಜಾತಿವಾದಿಗಳ ಮನೆಯಲ್ಲಿ ಕಾಣಲಾಗದು!

ಈ ಸಂದರ್ಭದಲ್ಲಿ  ಅಲ್ಲಮಪ್ರಭು ದೇವರ ಒಂದು ವಚನ ನೆನಪಾಗುತ್ತಿದೆ.

"ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ,

ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ,

ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ !

ತೊಟ್ಟಿಲು ಮುರಿದು ನೇಣು ಹರಿದು, ಜೋಗುಳ ನಿಂದಲ್ಲದೆ,

ಗುಹೇಶ್ವರನೆಂಬ ಲಿಂಗವ ಕಾಣಬಾರದು."


ಅಜ್ಞಾನವನ್ನು ನಿರ್ಮೂಲನೆ ಮಾಡಬೇಕಾದರೆ ಏನು ಮಾಡಬೇಕೆಂಬುದನ್ನು ಪ್ರಪ್ರಥಮ ಶೂನ್ಯ ಪೀಠಾಧಿಪತಿ ಅಲ್ಲಮಪ್ರಭುಗಳು ಹೇಳಿದನ್ನು ಪಾಲನೆ ಮಾಡಿ, ಒಂದು ವೇಳೆ ವಚನ ಅರ್ಥ ವಾಗದಿದ್ದರೆ ಲಿಂಗಾಯತ ಧರ್ಮಕ್ಕಾಗಿ ಹೋರಾಡುವ ಸಾಮಾನ್ಯ ಹುಡುಗನನ್ನು ಕರಿಯಿಸಿಕೊಂಡು ಕೇಳಿ ಸರಿಯಾಗಿ ತಿಳಿಸುತ್ತಾನೆ ಅದುಬಿಟ್ಟು ಲಿಂಗಾಯತ ಧರ್ಮದ ಬಗ್ಗೆ, ಗುರು ಬಸವಣ್ಣ ನವರ ಬಗ್ಗೆ, ಬಸವಾದಿ ಶರಣರ ಬಗ್ಗೆ, ವಚನ ಸಾಹಿತ್ಯದ ಬಗ್ಗೆ ಚ್ಯುತಿ ಬರೋಹಾಗೆ ಮಾತಾಡಬೇಡಿ.


ಭಕ್ತಿಯ ಅನಂತ ಶರಣು ಶರಣಾರ್ಥಿಗಳು.


*- ಮಡಪತಿ.ವಿ.ವಿ -*



ಕಾಮೆಂಟ್‌ಗಳು

  1. *ಇತಿಹಾಸದ ಅಧ್ಯಯನವಿಲ್ಲದ ಜಾತಿವಾದಿ ಸಂಗಮೇಶ ಸೌದತ್ತಿಮಠ ಎಂಬ ಅಜ್ಞಾನಿಯ ಮೂಲಕ ಬಸವಾದಿ ಶರಣರ ಬಗ್ಗೆ ಸುಳ್ಳು ಹೇಳಲು ಪುಷ್ಟಿ ನೀಡುವ ಕೋಮುವಾದಿ ಕ.ಸಾ.ಪ ಅಧ್ಯಕ್ಷರು ನಿಲುವುನ್ನು ಹಾಗೂ ಸಂಗಮೇಶ ಸವದತ್ತಿ ಮಠ ಈತನ ಹೇಳಿಕೆಯನ್ನು ನಾವೆಲ್ಲರೂ ಸಮಾಜ ಬಾಂಧವರು ಉಗ್ರವಾಗಿ ಖಂಡಿ‌ಸುತ್ತೆವೆ....*


    *ಇದಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಮತ್ತು ವಚನ ಸಾಹಿತ್ಯಕ್ಕೆ ಅಗೌರವ ತರುವಂತಹ ಕೋಮುವಾದಿ ಅಸಮರ್ಥ ಅಧ್ಯಕ್ಷರನ್ನು ತಕ್ಷಣ ಬರಕಾಸ್ತ ಮಾಡಲು ಘನ ಸರ್ಕಾರವನ್ನು ಈ ಮೂಲಕ ಒತ್ತಾಯಿಸುತ್ತೆವೆ.*

    - ಕಲ್ಲಯ್ಯ ಮುದುಕಯ್ಯ ಹಿರೇಮಠ -

    ಪ್ರತ್ಯುತ್ತರಅಳಿಸಿ
  2. *ಡಾ. ಸಂಗಮೇಶ ಸೌದತ್ತಿಯವರ ಹೇಳಿಕೆಗೆ ಪಂಡಿತಾರಾಧ್ಯ ಶ್ರೀಗಳ ಆಕ್ಷೇಪ ಸಾಣೇಹಳ್ಳಿ, ಜನವರಿ 10.*

    ಡಾ. ಸಂಗಮೇಶ ಸೌದತ್ತಿಯವರು ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ `ಬಸವಣ್ಣನವರು ಹೊಸ ಧರ್ಮವನ್ನು ಹುಟ್ಟಿಹಾಕಲಿಲ್ಲ’ ಎನ್ನುವ ಅಪ್ಪಟ ಸುಳ್ಳು ಹೇಳಿರುವುದು ವಿಷಾದನೀಯ. ವೈದಿಕ ಪರಂಪರೆಯ ಮನಸ್ಸುಗಳು ಇದನ್ನಲ್ಲದೆ ಇನ್ನೇನನ್ನು ತಾನೆ ಹೇಳಲು ಸಾಧ್ಯ ? ಬಸವಣ್ಣನವರು ಅನುಭವ ಮಂಟಪದ ಸಂಸ್ಥಾಪಕರು. ಲಿಂಗ ತಾರತಮ್ಯವನ್ನು ಅಲ್ಲಗಳೆದು ಸ್ತ್ರೀ ಸಮಾನತೆ ಎತ್ತಿಹಿಡಿದವರು. ಇವನಾರವ, ಇವನಾರವ ಎನ್ನದೆ, ಇವ ನಮ್ಮವ ಇವ ನಮ್ಮವ ಎನ್ನುವ ಜಾತ್ಯತೀತ ಮನೋಭಾವನೆ ಬೆಳೆಸಿದವರು. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದು ದೇಹವನ್ನೇ ದೇವಾಲಯ ಮಾಡಿಕೊಂಡವರು. ಇಷ್ಟಲಿಂಗ ಜನಕರು. ವೈದಿಕ ಪರಂಪರೆಯ ವಿರೋಧಿಗಳು. ಗುಡಿ ಸಂಸ್ಕೃತಿಯನ್ನು ಗುಡಿಸಿಹಾಕಿದವರು. ಲಿಂಗಾಯತ ಧರ್ಮದ ಸಂಶೋಧಕರು. ಇದೆಲ್ಲ ಹೊಸಧರ್ಮದ ಹುಟ್ಟಿಗೆ ಕಾರಣ ಎನ್ನುವುದನ್ನು ಸಂಶೋಧಕರು ಅಲ್ಲಗಳೆಯಲು ಸಾಧ್ಯವೇ? ಆದರೂ ವೈದಿಕ ಪರಂಪರೆಯ ಮನಸ್ಸುಗಳಿಗೆ ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅವರು ಆಗಾಗ ಬಸವಣ್ಣನವರ ಹಾಗೂ ಲಿಂಗಾಯತ ಧರ್ಮದ ಮೇಲೆ ಗದಾಪ್ರಹಾರ ಮಾಡುತ್ತಲೇ ಇರುತ್ತಾರೆ. ಅವರಿಗೆ ಪ್ರಗತಿಪರ ಚಿಂತನೆಗಳು ಬೇಕಾಗಿಲ್ಲ. ಅಪ್ಪ ಹಾಕಿದ ಆಲದಮರ ಎಂದು ಅದಕ್ಕೇ ಜೋತುಬೀಳುವ ಹುನ್ನಾರ ನಡೆಸುತ್ತಾರೆ. ಹಾಗಂತ ಬಸವಣ್ಣನವರು ಇಷ್ಟಲಿಂಗ ಜನಕರು, ಲಿಂಗಾಯತ ಧರ್ಮದ ಸಂಸ್ಥಾಪಕರು ಎನ್ನುವ ಸತ್ಯ ಎಂದಿಗೂ ಸುಳ್ಳಾಗುವುದಿಲ್ಲ.

    *- ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು*

    #ಸಾಣೇಹಳ್ಳಿ #ಮತ್ತೆಕಲ್ಯಾಣ #ಶಿವಸಂಚಾರ

    ಪ್ರತ್ಯುತ್ತರಅಳಿಸಿ
  3. *ಇತಿಹಾಸದ ಅಧ್ಯಯನವಿಲ್ಲದ ಜಾತಿವಾದಿ ಸಂಗಮೇಶ ಸೌದತ್ತಿಮಠ ಎಂಬ ಅಜ್ಞಾನಿಯ ಮೂಲಕ ಬಸವಾದಿ ಶರಣರ ಬಗ್ಗೆ ಸುಳ್ಳು ಹೇಳಲು ಪುಷ್ಟಿ ನೀಡುವ ಕೋಮುವಾದಿ ಕ.ಸಾ.ಪ ಅಧ್ಯಕ್ಷರು ನಿಲುವುನ್ನು ಹಾಗೂ ಸಂಗಮೇಶ ಸವದತ್ತಿ ಮಠ ಇವರ ಹೇಳಿಕೆಯನ್ನು ಲಿಂಗಾಯತ ಧರ್ಮ ಅಧ್ಯಯನ ಕೇಂದ್ರದ ಪದಾಧಿಕಾರಿಗಳು ಸರ್ವಾನುಮತದಿಂದ ಉಗ್ರವಾಗಿ ಖಂಡಿ‌ಸುತ್ತದೆ ಇದಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಮತ್ತು ವಚನ ಸಾಹಿತ್ಯಕ್ಕೆ ಅಗೌರವ ತರುವಂತಹ ಕೋಮುವಾದಿ ಅಸಮರ್ಥ ಅಧ್ಯಕ್ಷರನ್ನು ತಕ್ಷಣ ಬರಕಾಸ್ತ ಮಾಡಲು ಘನ ಸರ್ಕಾರವನ್ನು ಈ ಮೂಲಕ ಒತ್ತಾಯಿಸುತ್ತದೆ.*

    - ಬೆಂಗಳೂರು ಲಿಂಗಾಯತ ಧರ್ಮ ಅಧ್ಯಯನ ಕೇಂದ್ರದ ಎಲ್ಲಾ ಪದಾಧಿಕಾರಿಗಳು , ಬಸವಾಭಿಮಾನಿಗಳು ಹಾಗೂ ಸಮಸ್ತ ಲಿಂಗಾಯತ ಸಮುದಾಯ. -

    ಪ್ರತ್ಯುತ್ತರಅಳಿಸಿ
  4. ಇತಿಹಾಸ ಗಂಧವೇ ಅಧ್ಯಯನ ಮಾಡಿದೆ, ಜಾತಿವಾದಿ ಸಂಗಮೇಶ ಸೌದತ್ತಿಮಠ ಎಂಬ ಅಜ್ಞಾನಿಯನ್ನು ಇಂತಹವರಿಗೆ ಪುಷ್ಠಿ ನೀಡುವ ಸಾಹಿತ್ಯ ಅಧ್ಯಕ್ಷರ ನಿಲುವುವನ್ನು ರಾಯಚೂರು ಬಸವ ಕೇಂದ್ರ ಸರ್ವಾನುಮತದಿಂದ ಖಂಡಿಸಿತ್ತಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತಿಗೆ, ವಚನ ಸಾಹಿತ್ಯಕ್ಕೆ ಅಗೌರವ ತರುವಂತಹ ಅಸಮರ್ಥ ಅಧ್ಯಕ್ಷರನ್ನು ತಕ್ಷಣ ತಗೆದುಹಾಕಲು ಘನ ಸರ್ಕಾರವನ್ನು ಈ ಮೂಲಕ ವಿನಂತಿಸಲಾಗಿದೆ.

    *- ರಾಯಚೂರು ಬಸವ ಕೇಂದ್ರದ/ ಸಮಸ್ತ ಪದಾಧಿಕಾರಿಗಳು, ಕಾರ್ಯಕಾರಿ ಮಂಡಳಿ ಸದಸ್ಯರು ಹಾಗೂ ಸಮಗ್ರ ಲಿಂಗಾಯತ ಸಮುದಾಯ.*

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓಂ ಪದ ವನ್ನು ಬಳಸದವರು ಲಿಂಗಾಯತರಲ್ಲಾ

ಬಸವ ಧರ್ಮದ ಗತ್ತು ಬೇರೆನೇ ಇತ್ತು…