ಲಿಂಗಾಯತರೆನಿಸಿಕೊಂಡ ಕೆಲವರು ಇತ್ತೀಚೆಗೆ ಪ್ರಯಾಗರಾಜದ ನೀರಿನಲ್ಲಿ ಮುಳುಗೆದ್ದ ಪೋಟೊಗಳು ವಿಡೀಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿವೆ.
ರಾಷ್ಟ್ರೀಯ ಬಸವದಳಗಳ ಜೊತೆ ಗುರುತಿಸಿಕೊಂಡು ಲಿಂಗಾಯತರೆನಿಸಿಕೊಂಡ ಕೆಲವರು ಇತ್ತೀಚೆಗೆ ಪ್ರಯಾಗರಾಜದ ನೀರಿನಲ್ಲಿ ಮುಳುಗೆದ್ದ ಪೋಟೊಗಳು ವಿಡೀಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿವೆ.
ಇಂಥವರಿಗೆ
ಗುರು ಬಸವಣ್ಣನವರು ಅರ್ಥವಾಗುವ ಭಾಷೆಯಲ್ಲಿಯೇ ತಿಳಿ ಹೇಳುತ್ತಾರೆ
*ಕೂಸುಳ್ಳ ಸೂಳೆ ಧನದಾಸೆಗೊತ್ತೆಯ ಕೊಂಡಡೆ*
*ಕೂಸಿಂಗಲ್ಲ, ಬೊಜಗಂಗಲ್ಲ.*
*ಕೂಸನೊಮ್ಮೆ ಸಂತವಿಡುವಳು, ಬೊಜಗನನೊಮ್ಮೆ ನೆರೆವಳು.*
*ಧನದಾಸೆ ಬಿಡದು ಲಿಂಗದೇವಾ.*
ಈ ಮೇಲಿನ ವಚನದ ತೋರು ಅರ್ಥ ಅತ್ಯಂತ ಸ್ಪಷ್ಟವಾಗಿದೆ ಅದಕ್ಕೆ ವಿವರಣೆ ಬೇಕಿಲ್ಲ ಎನಿಸುತ್ತದೆ.
ಇದರ ಒಳ ಅರ್ಥ ಹೀಗಿದೆ:
*ಕೂಸುಳ್ಳ ಸೂಳೆ:* ಇಷ್ಟಲಿಂಗವೆಂಬ ಕೂಸುಳ್ಳ ಅಳಿಮನದ ಭಕ್ತ *ಧನದಾಸೆಗೆ*-ಪ್ರಯಾಗರಾಜದ ನೀರಿನಲ್ಲಿ ಮುಳುಗಿದರೆ ಪುಣ್ಯ ಬರುತ್ತದೆ ಎನ್ನುವ ಆಸೆಗೆ)
*ಒತ್ತೆಯ ಕೊಂಡರೆ : ಆ ನೀರಿನಲ್ಲಿ ಮುಳುಗಿದರೆ, ಅನ್ಯದೈವ ಪೂಜೆ ಭಜನೆ ದೇವಾಲಯಗಳ ಸುತ್ತುವಿಕೆ ಇಂಥ ಆಚರಣೆ ಮಾಡಿದರೆ,
*ಕೂಸಿಂಗಲ್ಲ ಬೊಜಗಂಗಲ್ಲ:* ಇಷ್ಟಲಿಂಗಕ್ಕೂ ಸಂಪೂರ್ಣ ಭಕ್ತಿ ಅರ್ಪಣೆ ಆಗುವುದಿಲ್ಲ, ನೀರಿನಲ್ಲಿ ಮುಳುಗೆದ್ದಿರುವುದಕ್ಕೂ ಸಂಪೂರ್ಣ ತ್ರಪ್ತಿಸಿಗುವುದಿಲ್ಲ. ಸ್ಥಾವರಗಳಿಗೆರಗಲಿಕ್ಕೆ ಸುತ್ತಾಡಿ ಅಥವಾ ಮನೆಯಲ್ಲೇ ಅನ್ಯ ಪೂಜೆ ಭಜನೆಗಳನ್ನು ಮಾಡಿದರೆ ಅಲ್ಲಿಯೂ ಅಳಿಮನದ ಭಕ್ತನಿಗೆ ತೃಪ್ತಿ ಸಿಗುವುದಿಲ್ಲ ಏಕೆಂದರೆ ಇಂಥದನ್ನು ಕಂಡಾಗ ಗುರು ಬಸವಣ್ಣನವರು ಬೈಯುತ್ತಾರೆ.
*ಕೂಸನೊಮ್ಮೆ ಸಂತೈಸುವಳು ಬೊಜಗನನೊಮ್ಮೆ ನೆರೆವಳು:*
ಇಷ್ಟಲಿಂಗ ಪೂಜೆಯೂ ಮಾಡುವುದು ನೀರನ್ನು ಹುಡುಕಿಕೊಂಡು ಹೋಗಿ ಮುಳುಗೆದ್ದು ಅನ್ಯ ದೈವದ ಆರಾಧನೆಯ ಮಾಡುವುದು.
*ಧನದಾಸೆ ಬಿಡದು ಲಿಂಗದೇವಾ:* ಮತ್ತೆಯೂ ಇಂಥವರಿಗೆ ನೀರಿನಲ್ಲಿ ಮುಳುಗುವ ಆಸೆ,
ಅನ್ಯದೈವದ ಆರಾಧನೆ ಮಾಡಿ ಅದರ ಸುಖವನ್ನೂ ಅನುಭವಿಸಬೇಕೆನ್ನುವ ಆಸೆ ಬಿಡದು ಲಿಂಗದೇವಾ. ಇಂಥವರು ಸೂಳೆಗಾರಿಕೆ ಮಾಡುವವರಿಗೆ ಸಮ ಎಂದು ಗುರು ಬಸವಣ್ಣನವರು ಹೇಳಿದ್ದಾರೆ.
೧೨ನೇ ಶತಮಾನದ ನಂತರದ ದಿನಗಳಲ್ಲಿ. ವೀರಶೈವರು ಬಹು ಸಂಖ್ಯೆಯಲ್ಲಿ ಲಿಂಗಾಯತ ಧರ್ಮಕ್ಕೆ ಪರಿವರ್ತನೆ ಹೊಂದಿದರು. ಪರಿವರ್ತನೆ ಹೊಂದಿದ ಮೇಲೂ ತಮ್ಮ ಮುನ್ನಿನ ವೀರಶೈವ ಆಚರಣೆಗಳಾದ, ಬಹುದೇವೋತೋಪಾಸನೆ, ಜಾತೀಯತೆ, ಮೂಢನಂಬಿಕೆ, ಹೆಣ್ಣುಮಕ್ಕಳ ಶೂದ್ರರೆನ್ನುವ ನಂಬಿಕೆ, ನೀರನ್ನು ಕಂಡಲ್ಲಿ ಮುಳುಗುವಿಜೆ, ನೀರನ್ನು ಹುಡುಕಿಕೊಂಡು ಹೋಗಿ ಮುಳುಗುವಿಕೆ. ಇಂಥ ಅನೇಕ ಆಚರಣೆಗಳನ್ನು ಬಿಡದೆ ಲಿಂಗಾಯತ ಧರ್ಮದಲ್ಲಿ ಆಚರಿಸಿಕೊಂಡು ಬಂದರು. ಲಿಂಗಾಯತ ಧರ್ಮ ಕಲಬೆರೆಕೆ ಆಗಿರುವುದೇ ಈ ರೀತಿಯಾಗಿ.
ಶೈವ ಮತ್ತು ವೈದಿಕ ಮನಸ್ಥಿತಿಯಿಂದ ಹೊರಬರಲಾಗದೇ, ಈ ಕಡೆ ಲಿಂಗಾಯತ ಧರ್ಮ ಸಂಘಟನೆಗಳ ಮುಖ್ಯಸ್ಥರಾಗಿ, ಲಿಂಗಾಯತ ಧರ್ಮಕ್ಕೆ ಅಪಚಾರ ಮಾಡುತ್ತಿರುವವರು ಗುರು ಬಸವಣ್ಣನವರ ದ್ರಷ್ಟಿಯಲ್ಲಿ ಸೂಳೆಗಾರಿಕೆ ಮಾಡುವವರಿಗೆ ಸಮ.
ಗುರು ಬಸವಣ್ಣನವರು ಇಂಥವರಿಗೆ ತಕ್ಕ ಶಿಕ್ಷೆ ವಿಧಿಸಲಿ. ಇಂಥ ತಲೆಯಿಲ್ಲದ ಅಟ್ಟಗೆ ಪಟ್ಟ ಕಟ್ಟುವ ಭ್ರಷ್ಟರಿಗೂ ತಕ್ಕ ಶಿಕ್ಷೆಯಾಗಲೆನ್ನುವುದೇ ನಮ್ಮ ಪ್ರಾರ್ಥನೆ
- ಸಚ್ಚಿದಾನಂದ ಪ್ರಭು ಚಟ್ನಳ್ಳಿ.
.jpeg)

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ