ರಾ.ಬ.ದಳವನ್ನು ನಿರ್ಲಕ್ಷಿಸಬೇಡಿ ಎಂದು ಅನುಕಂಪ ತೋರಿಸುವ ಸ್ಥಿತಿ ಏಕೆ ಬಂತು ??
✍️ *ಪ್ರೊಫೆಸರ್ ವೀರಭದ್ರಯ್ಯ* (ಅಧ್ಯಕ್ಷರು ಜಾ.ಲಿ.ಮ. ಬೆಂಗಳೂರು ಘಟಕ) ಇವರು *ಬಸವ ಮೀಡಿಯಾ* ದಲ್ಲಿ "ಲಿಂಗಾಯತ ಧರ್ಮ ಅಭಿಯಾನಕ್ಕೆ ರಾಷ್ಟ್ರೀಯ ಬಸವದಳದ ಬೆಂಬಲ ಅವಶ್ಯವಿದೆ" ಲೇಖನವನ್ನು ಬರೆದಿದ್ದಾರೆ.
ಜಾ.ಲಿ.ಮ. ಮತ್ತು ಕೆಲವು ಮಠಾಧೀಶರ ನೇತೃತ್ವದಲ್ಲಿ ಲಿಂಗಾಯತ ಧರ್ಮ ಅಭಿಯಾನ ಪ್ರಾರಂಭ ಮಾಡುವ ಸಲುವಾಗಿ ನೇಮಿಸಿದ ಸಮಿತಿಯಲ್ಲಿ ರಾಷ್ಟ್ರೀಯ ಬಸವ ದಳದವರನ್ನು ತೆಗೆದುಕೊಳ್ಳದೆ ಇರುವುದು
ಆಶ್ಚರ್ಯವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ರಾ.ಬ.ದಳವು ಕರ್ನಾಟಕದಲ್ಲಿಯೇ *ದೊಡ್ಡ* ಮತ್ತು *ಬಲಿಷ್ಠ ಸಂಘಟನೆ* ಆಗಿದೆ ಎಂಬ ಸತ್ಯವನ್ನು ಬರೆದಿದ್ದಾರೆ. ಈ ಸಂಘಟನೆಯ ಬೆಂಬಲ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಒಬ್ಬ ಜಾಲಿಮ ಜಿಲ್ಲಾಧ್ಯಕ್ಷ ಆದ ವ್ಯಕ್ತಿಯೋರ್ವರು ಈ ರೀತಿ ರಾ.ಬ.ದಳವನ್ನು ನಿರ್ಲಕ್ಷಿಸಬೇಡಿ ಎಂದು ಅನುಕಂಪ ತೋರಿಸುವ ಸ್ಥಿತಿ ಏಕೆ ಬಂತು ಎಂಬುದರ ಬಗ್ಗೆ ವಿಚಾರ ಮಾಡಬೇಕು.
ಪ್ರೊಫೆಸರ್ ವೀರಭದ್ರಯ್ಯನವರೇ ರಾಷ್ಟ್ರೀಯ ಬಸವದಳದ ಬಗ್ಗೆ ಅಷ್ಟೊಂದು ಮೆಚ್ಚುಗೆಯ ಮಾತುಗಳನ್ನು ಆಡಿರುವ ತಾವು "ಲಿಂಗಾಯತ ಧರ್ಮ ಅಭಿಯಾನಕ್ಕೇ ರಾಷ್ಟ್ರೀಯ ಬಸವ ದಳ ಸಂಘಟನೆಯ ಬೆಂಬಲದ ಅವಶ್ಯಕತೆ ಇದೆ" ಎಂದು ಹೇಳುವ ಬದಲು "ಅತಿ ದೊಡ್ಡ ಸಂಘಟನೆಯಾಗಿರುವ ರಾಷ್ಟ್ರೀಯ ಬಸವ ದಳದ ಮುಂದಾಳತ್ವದಲ್ಲಿಯೆ ಲಿಂಗಾಯತ ಧರ್ಮ ಅಭಿಯಾನ ಮಾಡಬೇಕು ಅದಕ್ಕೆ ನಾವು (ಉಳಿದ ಸಂಘಟನೆಗಳು) ಬೆಂಬಲ ಕೊಡಬೇಕು" ಎಂದು ತಾವು ಹೇಳಬಹುದಿತ್ತಲ್ಲವೆ!!
ಇದು ಹೇಗಿದೆ ಅಂದರೆ ಕಾಡಿನಲ್ಲಿರುವ ಕೆಲವು ಚಿಕ್ಕ ಚಿಕ್ಕ ಪ್ರಾಣಿಗಳು ಸೇರಿಕೊಂಡು ಕಾಡನ್ನು ಉಳಿಸುವ ಬಗ್ಗೆ ಒಂದು ಸಭೆ ಮಾಡಿ ಈ ಕಾಡಿನಲ್ಲಿ ಬಲಿಷ್ಠ ಪ್ರಾಣಿ ಆಗಿರುವ ಆನೆಯ 🐘 ಬೆಂಬಲ ಕೂಡ ನಾವು ಪಡೆದುಕೊಳ್ಳಬೇಕು ಎಂದು ಸಲಹೆ ಕೊಟ್ಟಂತೆ.
50 ವರ್ಷಗಳ ಇತಿಹಾಸವಿರುವ, ಅನೇಕ ಲಿಂಗಾಯತ ರ್ಯಾಲಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಅತಿ ದೊಡ್ಡ ಮತ್ತು ಬಲಿಷ್ಠ ಸಂಘಟನೆಯಾಗಿದ್ದ ರಾಷ್ಟ್ರೀಯ ಬಸವ ದಳಕ್ಕೆ ತಾನೇ ಲೀಡರ್ ಆಗಿ ಲಿಂಗಾಯತ ಧರ್ಮ ಹೋರಾಟವನ್ನು ಮುಂದುವರೆಸಿಕೊಂಡು ಹೋಗುವ ಸಾಮರ್ಥ್ಯ ಇದ್ದರೂ ಕೂಡ, ಮತ್ತೊಬ್ಬರ ಹಿಂದೆ ನಿಂತು ಬೆಂಬಲ ಕೊಡುವ ಸ್ಥಿತಿ ಏಕೆ ಬಂತು ಎಂಬುದನ್ನು ಬಸವ ಧರ್ಮ ಪೀಠದವರು ಮತ್ತು ರಾಷ್ಟ್ರೀಯ ಬಸವದಳದ ಪದಾಧಿಕಾರಿಗಳು, ಕಾರ್ಯಕರ್ತರು *ಆತ್ಮವಲೋಕನ* ಮಾಡಿಕೊಳ್ಳಬೇಕು.
ಪೂಜ್ಯ ಮಾತೆಮಹಾದೇವಿ ಅವರಂತಹ *ಪ್ರಬಲ ನಾಯಕತ್ವದ* ಕೊರತೆ ಇವಾಗ ಎದ್ದು ಕಾಣುತ್ತಿರಬಹುದು,
ಆದರೆ ಮಾತಾಜಿ ಅವರು ಕಾರ್ಯಕರ್ತರಲ್ಲಿ ಶಕ್ತಿಯನ್ನು ತುಂಬಿ ಹೋಗಿರುವುದರಿಂದ ಇನ್ನೂ ಕೂಡ ಲಿಂಗಾಯತ ಧರ್ಮ ಹೋರಾಟವನ್ನು *ಗುರಿ* ಮುಟ್ಟಿಸುವ ನಿಜವಾದ *ಸಾಮರ್ಥ್ಯ* ರಾಷ್ಟ್ರೀಯ ಬಸವ ದಳ ಸಂಘಟನೆಯಲ್ಲಿ ಇದೆ.
ಏಕೆಂದರೆ ಪರಮಪೂಜ್ಯ ಮಾತಾಜಿಯವರ *ಸಂಕಲ್ಪ ಶಕ್ತಿ* ರಾ.ಬ.ದಳದ ಕಾರ್ಯಕರ್ತರ ಜೊತೆಗೆ ಇದೆ.
ಆದರೆ ರಾಷ್ಟ್ರೀಯ ಬಸವ ದಳದವರು ಆಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಒಗ್ಗಟ್ಟು ಪ್ರದರ್ಶಿಸುವ ಅವಶ್ಯಕತೆ ಇದೆ. ಮತ್ತೊಬ್ಬರ ಮೇಲೆ ಅವಲಂಬಿತ ಆಗುವ ಬದಲು ತಮ್ಮ ಶಕ್ತಿಯನ್ನು ಅರಿತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಅವಶ್ಯಕತೆ ಇದೆ.
🙏🙏🙏
ಶರಣು ಶರಣಾರ್ಥಿ
~ ಸಿದ್ಧವೀರ ಸಂಗಮದ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ